Posts

Showing posts with the label Kannada Literature

ಕನ್ನಡದ ವರ್ಣ ಮಾಲೆಯಲ್ಲಿ ವಿಜ್ಞಾನ |Speciality of Kannada Spellings and its Scientific Reson|

Image
 ಕನ್ನಡದ ವರ್ಣ ಮಾಲೆಯಲ್ಲಿ ವಿಜ್ಞಾನ   ಕನ್ನಡದ  ವರ್ಣಮಾಲೆಯ ಪ್ರತಿಯೊಂದು ಅಕ್ಷರವು ತಾರ್ಕಿಕವಾಗಿದೆ ಮತ್ತು ನಿಖರವಾದ ಲೆಕ್ಕಾಚಾರಗಳೊಂದಿಗೆ ಅನುಕ್ರಮವಾಗಿ ಇರಿಸಲಾಗುತ್ತದೆ.  ಅಂತಹ ವೈಜ್ಞಾನಿಕ ದೃಷ್ಟಿಕೋನವು ಇತರ ವಿದೇಶಿ ಭಾಷೆಗಳ ವರ್ಣಮಾಲೆಯಲ್ಲಿ ಅಡಕವಾಗಿಲ್ಲ.   ಉದಾ.  ನೋಡಿ:   ಕಖಗಘಙ - ಈ ಐದು ಅಕ್ಷರದ ಗುಂಪನ್ನು ಕಾಂತವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ಗಂಟಲಿನಿಂದ ಶಬ್ದ ಹೊರಬರುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.   ಚಛಜಝಞ - ಈ ಐದು ಅಕ್ಷರದ ಗುಂಪನ್ನು ಅಂಗುಳ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಅಂಗುಳನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.  ಟಠಡಢಣ : ಈ ಐದು ಅಕ್ಷರಗಳ ಗುಂಪನ್ನು ಮುರ್ಧನ್ಯಾ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಮುರ್ಧನ್ಯವನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.   ತಥದಧನ - ಈ ಐದು ಅಕ್ಷರದ ಗುಂಪನ್ನು ದಂತವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಹಲ್ಲುಗಳನ್ನು ಮುಟ್ಟುತ್ತದೆ.  ಒಮ್ಮೆ ಪ್ರಯತ್ನಿಸಿ   ಪಫಬಭಮ - ಈ ಐದು ಅಕ್ಷರದ ಗುಂಪನ್ನು ಆಷ್ಟವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸಲು ಎರಡೂ ತುಟಿಗಳು ಭೇಟಿಯಾಗುತ್ತವೆ.  ಒಮ್ಮೆ ಪ್ರಯತ್ನಿಸಿ   ಬೆರೆ ಪಾಶ್ಚಿಮಾತ್ಯ ಭಾಷೆಗಳಲ್ಲಿ ಇರದೆ ಇರುವ ವಿಶೇಷತೆ ನಮ್ಮ ಕನ್ನಡ ಭಾಷೆಯಲ್ಲಿ ಅಡಕವಾಗಿರುವುದು

ಹರಿಶ್ಚಂದ್ರ ಕಾವ್ಯ ಮತ್ತು ರಾಘವಾಂಕ Harischandra Raghavanka

Image
-: ಹರಿಶ್ಚಂದ್ರ ಕಾವ್ಯ:- -1- ಹರಿಶ್ಚಂದ್ರ ಕಾವ್ಯವನ್ನು ಬರೆದದ್ದರಿಂದ ರಾಘವಾಂಕ ತನ್ನ ಸೋದರ ಮಾವನೂ ಗುರುವೂ ಆದ ಹರಿಹರನಿಂದ ಹಲ್ಲು ಮುರಿಸಿಕೊಳ್ಳಬೇಕಾಯಿತು- ಎನ್ನುವುದು ಒಂದು ದಂತಕಥೆ. ಹರಿಶ್ಚಂದ್ರ ಕಾವ್ಯವನ್ನು ನೆನೆದಾಗೆಲ್ಲ ಈ ಕಥೆಯನ್ನು ಮರೆಯಲಾಗುತ್ತಿಲ್ಲ. ನಿಜವಾದ ಅರ್ಥದಲ್ಲಿ ಇದು ದಂತಕಥೆಯೆ! ಇಂಥ ದಂತಕಥೆಗಳು ಕನ್ನಡದ ಇನ್ನೂ ಹಲವು ಕವಿಗಳ ವಿಚಾರದಲ್ಲಿಯೂ ಪ್ರಚಲಿತವಾಗಿವೆ. ಅಷ್ಟೆ ಅಲ್ಲ, ಜಗತ್ತಿನ ಎಷ್ಟೋ ಕವಿಗಳ ವಿಚಾರದಲ್ಲಿಯೂ ಹುಟ್ಟಿಕೊಂಡು ಬಂದಿವೆ. ಇಂಥ ಕಥೆಗಳು ಸಾಹಿತ್ಯ ವಿಮರ್ಶಕರಿಗೆ, ಸಾಹಿತ್ಯ ಚರಿತ್ರೆಯನ್ನು ಬರೆಯುವವರಿಗೆ ಏನೇನೂ ಪ್ರಯೋಜನಕ್ಕೆ ಬಾರದವು ಎಂದವರೂ ಉಂಟು; ಇವುಗಳಲ್ಲಿ ಕೇವಲ ಕಲ್ಪನೆಯ ಮತ್ತು ಮನೋರಂಜನೆಯ ಅಂಶವು ವಿಶೇಷವಾಗಿದ್ದರೂ ಅಲ್ಪಸ್ವಲ್ಪ ಸತ್ಯಾಂಶಗಳೂ ಇರುವುದರಿಂದ ಇವುಗಳನ್ನು ಕಡೆಗಣಿಸುವಂತಿಲ್ಲ ಎಂದವರೂ ಉಂಟು. ಅದೇನೇ ಇರಲಿ;  ರಾಘವಾಂಕನ ವಿಚಾರದಲ್ಲಿ ಪ್ರಚಲಿತವಾಗಿರುವ ಈ ಒಂದು ದಂತಕಥೆಯನ್ನು, ಕೇವಲ ತಂದಕಥೆ ಎಂದು ನಾನು ತಳ್ಳಿಹಾಕಲಾರೆ. ಈ ಮಾತಿನ ಅರ್ಥ, ಈ ಕಥೆಯಲ್ಲಿನ ಘಟನೆ ವಾಸ್ತವವಾಗಿ ಅದರಲ್ಲಿ ನಿರೂಪಿತವಾಗಿರುವ ಹಾಗೆಯೇ ನಡೆಯಿತೆಂಬುದನ್ನು ಒಪ್ಪುತ್ತೇವೆ ಎಂದು ಅಲ್ಲ. ಅದು ಅಂದಿನ ಯುಗಧರ್ಮದಲ್ಲಿ ಇಬ್ಬರು ಭಿನ್ನ ದೃಷ್ಟಿಯ ಮಹತ್ವದ ಕವಿಗಳ ಮನೋಧರ್ಮ ಹಾಗೂ ಕಾವ್ಯ ಧೋರಣೆಗಳ ಸಂಘರ್ಷಕ್ಕೆ ಒಂದು ಸಂಕೇತವಾಗಿದೆ ಎಂದು ನಾವು ಭಾವಿಸುತ್ತೇವೆ. ಹರಿಶ್ಚಂದ್ರ ಕಾವ್ಯವನ್ನು ಓದಿದ ಯಾರಿಗಾದ

ಕನ್ನಡ ಸಾಹಿತ್ಯ ಸಮ್ಮೇಳನಗಳು, ಅವುಗಳು ನಡೆದ ವರ್ಷ, ಸ್ಥಳ ಮತ್ತು ಅವುಗಳ ಅಧ್ಯಕ್ಷರು Akhila Bharata Kannada Sahitya Sammelana

Image
- :ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು:- 85th Akhila bharata Kannada Sahitya sammelana Place Kalaburagi ಸಮ್ಮೇಳನದ ಸಂಖ್ಯೆ : ನಡೆದ ವರ್ಷ: ನಡೆದ ಸ್ಥಳ : ಅಧ್ಯಕರು ೧ ೧೯೧೫ ಬೆಂಗಳೂರು ಎಚ್ . ವಿ . ನಂಜುಂಡಯ್ಯ ೨ ೧೯೧೬ ಬೆಂಗಳೂರು ಎಚ್ . ವಿ . ನಂಜುಂಡಯ್ಯ ೩ ೧೯೧೭ ಮೈಸೂರುಎಚ್ . ವಿ . ನಂಜುಂಡಯ್ಯ ೪ ೧೯೧೮ ಧಾರವಾಡ ಆರ್ . ನರಸಿಂಹಾಚಾರ್ ೫ ೧೯೧೯ ಹಾಸನ ಕರ್ಪೂರ ಶ್ರೀನಿವಾಸರಾವ್ ೬ ೧೯೨೦ ಹೊಸಪೇಟೆ ರೊದ್ದ ಶ್ರೀನಿವಾಸರಾವ ೭ ೧೯೨೧ ಚಿಕ್ಕಮಗಳೂರು ಕೆ . ಪಿ . ಪುಟ್ಟಣ್ಣ ಶೆಟ್ಟಿ ೮ ೧೯೨೨ ದಾವಣಗೆರೆ ಎಂ . ವೆಂಕಟಕೃಷ್ಣಯ್ಯ ೯ 1 ೯೨೩ ಬಿಜಾಪುರ ಸಿದ್ಧಾಂತಿ ಶಿವಶಂಕರಶಾಸ್ತ್ರಿ ೧೦ ೧೯೨೪ ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ ೧೧ ೧೯೨೫ ಬೆಳಗಾವಿ ಬೆನಗಲ್ ರಾಮರಾವ್ ೧೨ ೧೯೨೬ ಬಳ್ಳಾರಿ ಫ . ಗು . ಹಳಕಟ್ಟಿ ೧೩ ೧೯೨೭ ಮಂಗಳೂರು ಆರ್ . ತಾತಾಚಾರ್ಯ ೧೪ ೧೯೨೮ ಕಲಬುರ್ಗಿಬಿ ಎಂ ಶ್ರೀ ೧೫ ೧೯೨೯ ಬೆಳಗಾವಿ ಮಾಸ್ತಿ ವೆಂಕಟೇಶಅಯ್ಯಂಗಾರ್ ೧೬ ೧೯೩೦ ಮೈಸೂರು ಆಲೂರು ವೆಂಕಟರಾಯರು ೧೭ ೧೯೩೧ ಕಾರವಾರ ಮುಳಿಯ ತಿಮ್ಮಪ್ಪಯ್ಯ ೧೮ ೧೯೩೨ ಮಡಿಕೇರಿಡಿ ವಿ ಜಿ ೧೯ ೧೯೩೩ ಹುಬ್ಬಳ್ಳಿ ವೈ . ನಾಗೇಶ ಶಾಸ್ತ್ರಿ ೨೦ ೧೯೩೪ ರಾಯಚೂರು ಪಂಜೆ ಮಂಗೇಶರಾಯರು ೨೧ ೧೯೩೫ ಮುಂಬಯಿ ಎನ್ . ಎಸ್ . ಸುಬ್ಬರಾವ್ ೨೨ ೧೯೩೭ ಜಮಖಂಡಿ ಬೆಳ್ಳಾವೆವೆಂಕಟನಾರಣಪ್ಪ ೨೩ ೧೯೩೮

Middle Adds

amezon