SSLC Old Question Paper Questions part 2 | 10th Exam Question Paper Questions With Ans | 10th Social Science
ಅಧ್ಯಾಯ -2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ 2015 ರಿಂದ 2022 ರವರೆಗೆ ವಾರ್ಷಿಕ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳು 1. ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದ ಗವರ್ನರ್ ಜನರಲ್ ( ಎಪ್ರಿಲ್ 2015, ಜೂನ 2018, ಜೂನ 2022) ಲಾರ್ಡ ವೆಲ್ಲಸ್ಲಿ 2. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದ ಗವರ್ನರ್ ಜನರಲ್ ( ಜೂನ 2019) ಲಾರ್ಡ ಡಾಲ್ಹೌಸಿ 3. ಸಾಲಬಾಯ್ ಒಪ್ಪಂದದೊಂದಿಗೆ ಮುಕ್ತಾಯವಾದ ಯುದ್ಧ ( ಸೆಪ್ಟೆಂಬರ್ 2020) ಮೊದಲನೇ ಆಂಗ್ಲೋ ಮರಾಠಾ ಯುದ್ಧ 4. 1798 ರ ನಂತರ ಹೈದರಾಬಾದ ಸಂಸ್ಥಾನವು ತನ್ನ ಪ್ರಾಂತ್ಯದಲ್ಲಿ ಬ್ರಿಟಿಷರ ಒಂದು ಸೈನಿಕ ತುಕ್ಕಡಿಯನ್ನು ಇರಿಸಿಕೊಳ್ಳಬೇಕಾಗಿತ್ತು . ಏಕೆ ? ( ಸೆಪ್ಟೆಂಬರ್ 2020) ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟಿದ್ದರಿಂದ 5. ಮೊದಲನೇ ಆಂಗ್ಲೋ ಮರಾಠಾ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ ( ಜುಲೈ 2021) ಸಾಲ್ಬಾಯ್ ಒಪ್ಪಂದ 6. ಬ್ರಿಟಿಷ್ ಮತ್ತು ಸಿಖ್ರ ನಡುವೆ ಸಹಿ ಹಾಕಲ್ಪಟ್ಟ ಒಪ್ಪಂದ ( ಸೆಪ್ಟೆಂಬರ್ 2021) ಲಾಹೋರ ಒಪ್ಪಂದ 7. ಮೊದಲನೇ ಆಂಗ್ಲೋ ಮರಾಠಾ ಯುದ್ಧದ ನಂತರ ಪೇಶ್ವೆಯಾದವನು ( ಜೂನ 2022) ಎರಡನೇ ಮಾಧವರಾಯ್ 8. ವೆಲ್ಲಸ್ಲಿ ಏಕೆ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಇಂಗ್ಲೆಂಡಿಗೆ ಮರಳಿದನು . ( ಜೂನ 2022) ಯುದ್ಧಪ್ರಿಯ ನೀತಿ ಉಳ...