SSLC Old Question Paper Questions part 1 | 10th Exam Question Paper Questions With Ans | 10th Social Science

ಭಾರತಕ್ಕೆ ಯೂರೋಪಿಯನ್ನರ ಆಗಮನ

2015 ರಿಂದ 2022 ರವರೆಗೆ ವಾರ್ಷಿಕ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳು

1. ಯುರೋಪಿನ ವ್ಯಾಪಾರದ ಮೇಲೆ ವ್ಯಾಪಾರದ ಏಕಸ್ವಾಮ್ಯವನ್ನು ಸಾಧಿಸಿದ ವರ್ತಕರು (ಜೂನ 2019)

ಇಟಲಿಯ ವರ್ತಕರು

2. 1453 ರಲ್ಲಿ ಕಾನಸ್ಟಾಂಟಿನೋಪಲ್ನ್ನು ವಶಪಡಿಸಿಕೊಂಡವರು (ಜೂನ 2020)

ಅಟೋಮಾನ ಟರ್ಕರು

3. ಕಾನಸ್ಟಾಂಟಿನೋಪಲ್ನ್ನು ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಪರಿಗಣಿಸಲಾಗಿತ್ತು ಏಕೆಂದರೆ (ಜುಲೈ 2021)

ಅದು ಅಂತರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಕೇಂದ್ರವಾಗಿತ್ತು

4. ಭಾರತ ಮತ್ತು ಯುರೋಪ ನಡುವೆ ಹೊಸ ಜಲಮಾರ್ಗ ಕಂಡುಹಿಡಿದವನು (ಎಪ್ರಿಲ್ 2022)

ವಾಸ್ಕೋಡಿಗಾಮಾ

5. 1764 ರಲ್ಲಿ ಬಂಗಾಳದಲ್ಲಿ ನಡೆದ ಕದನ (ಸೆಪ್ಟೆಂಬರ್ 2021)

ಬಕ್ಸಾರ ಕದನ

6. ಬ್ರಿಟಿಷರು ಭಾರತದಲ್ಲಿ ತಮ್ಮ ಹಿತಾಶಕ್ತಿಗಾಗಿ ರಾಜಕೀಯ ಪರಮಾದಿಕಾರವನ್ನು ಹೇಗೆ ಸ್ಥಾಪಿಸಿದರು? (ಜೂನ 2019)

ತಮ್ಮ ವಾಣಿಜ್ಯ ಹಿತಾಶಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ರಾಜಕೀಯ ಪರಮಾದಿಕಾರವನ್ನು ಸ್ತಾಪಿಸಿದರು.

7. ಬಂಗಾಳದಲ್ಲಿ ದ್ವಿಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು (ಜೂನ 2020)

ರಾಬರ್ಟ ಕ್ಲೈವ್

8. ರಾಬರ್ಟ ಕ್ಲೈವನ ದ್ವಿಮುಖ ಸರಕಾರವನ್ನು ವಿವರಿಸಿ (ಎಪ್ರಿಲ್ 2015) ದ್ವಿ ಸರಕಾರ ಪದ್ಧತಿಯನ್ನು ವಿವರಿಸಿ (ಎಪ್ರಿಲ್ 2017)

ರಾಬರ್ಟ ಕ್ಲೈವ ಜಾರಿಗೆ ತಂದನು

1765 ರಲ್ಲಿ ಜಾರಿಗೆ ತಂದನು

ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದ್ದರು

ನವಾಬನು ಆಡಳಿತ, ನ್ಯಾಯ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು

9. ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿಯಲು ಪ್ರೇರೇಪಿಸಿದ್ದು ಏನು? (ಎಪ್ರಿಲ 2015)

ಯುರೋಪಿಯನ್ನರು ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲಯ ಪ್ರೇರಣೆ ನೀಡಿದ ಅಂಶಗಳು ಯಾವವು? (ಜೂನ 2015) (ಸೆಪ್ಟೆಂಬರ್ 2020)

ಭಾರತಕ್ಕೆ ಹೊಸ ಜಲಮಾಗ್ ಕಂಡುಹಿಡಿಯಲು ಯುರೋಪಿಯನ್ನರಿಗೆ ಸಹಾಯಕವಾದ ಅಂಶಗಳಾವವು? (ಎಪ್ರಿಲ್ 2018)

ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ ಹೇಳಿಕೆಯನ್ನು ಸಮರ್ಥಿಸಿ (ಜೂನ 2016)

:

1453 ರಲ್ಲಿ ಕಾನಸ್ಟಾಂಟಿನೋಪಲ್ನ್ನು ಟರ್ಕರು ವಶಪಡಿಸಿಕೊಂಡರು

ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು

ಟರ್ಕರು ವ್ಯಾಪಾರದ ಮೇಲೆ ತೀವ್ರತರದ ತೆರಿಗೆಯನ್ನು ವಿಧಿಸತೊಡಗಿದರು

ಪರಿಣಾಮವಾಗಿ ವರ್ತಕರಿಗೆ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.

ಸ್ಪೇನ್, ಪೋರ್ಚಗಲ್ ಮತ್ತು ಇತರೆ ದೇಶಗಳು ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಯತ್ನಿಸಿದರು

ವೈಜ್ಞಾನಿಕ ಆವಿಸ್ಕಾರಗಳಾದ ದಿಕ್ಸೂಚಿ ಆಸ್ಟರೋಲೋಬ ಕಂಡು ಹಿಡಿದರು

ರಾಜರುಗಳು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದರು.

 

10. ಪ್ಲಾಸಿ ಕದನದ ಪರಿಣಾಮಗಳಾವವು? (ಜೂನ 2015) (ಜೂನ 2017)

ಉತ್ತರ: ಕಾರಣಗಳು:- ದಸ್ತಕ್ಗಳ ದುರುಪಯೋಗ

ಅನುಮತಿ ಇಲ್ಲದೆ ಕೋಟೆಯ ದುರಸ್ಥಿ, ಕಪ್ಪುಕೋಣೆ ದುರಂತ

ಪರಿಣಾಮಗಳು:- ಯುದ್ಧವು ಭಾರತೀಯರಲ್ಲಿದ್ದ ಅನೈಕ್ಯತೆ, ಅಸಂಘಟನೆ ಮತ್ತು ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.

ಮೀರ್ ಜಾಫರ್ ಬಂಗಾಳದ ನವಾಬನಾದನು.

ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.

ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಪರಿಹಾರವಾಗಿ ಮೀರ್ ಜಾಫರನು ಕಂಪನಿಗೆ 17 ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನು.

11. ಬಕ್ಸಾರ ಕದನದ ಪರಿಣಾಮಗಳೇನು? (ಎಪ್ರಿಲ್ 2018)

ಬಕ್ಸಾರ ಕದನವು ಬ್ರಿಟಿಷರಿಗೆ ಅನೇಕ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡಿತು ಸ್ಪಷ್ಟೀಕರಿಸಿ (ಎಪ್ರಿಲ್ 2019)

ಬಕ್ಸಾರ ಕದನದ ಪರಿಣಾಮಗಳಾವವು? (ಎಪ್ರಿಲ್ 2022) (ಜೂನ 2022)

ಉತ್ತರ:

1. ಈಸ್ಟ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನದಿವಾನಿ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.

2. ಷಾ ಅಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೇಲ್ಲ ಬಿಟ್ಟುಕೊಡಬೇಕಾಯಿತು.

3. ‘ಔದ್ ನವಾಬನಾದ ಷುಜ್-ಉದ್-ದೌಲನು ಕಂಪನಿಗೆ ಯುದ್ಧ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.

4. ಮೀರ್ ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.

*****

Part 2 Click Here


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon