Posts

Showing posts with the label 8ನೇ ತರಗತಿ ಅಭ್ಯಾಸ ಪ್ರಶ್ನೆಗಳು-ಉತ್ತರಗಳು

8ನೇ ತರಗತಿ ಸಮಾಜ ವಿಜ್ಞಾನ ಇತಿಹಾಸ ಅಧ್ಯಾಯ-1 ಆಧಾರಗಳು | ಅಭ್ಯಾಸ ಪ್ರಶ್ನೋತ್ತರಗಳು

Image
8ನೇ ತರಗತಿ ಸಮಾಜ ವಿಜ್ಞಾನ ಇತಿಹಾಸ ಅಧ್ಯಾಯ-1 ಆಧಾರಗಳು | ಅಭ್ಯಾಸ ಪ್ರಶ್ನೋತ್ತರಗಳು I. ಕೆಳಗಿನ ಪ್ರಶ್ನೆಗಳಿಗೆ ಸಹಪಾಠಿಗಳೊಂದಿಗೆ ಚರ್ಚಿಸಿ ಉತ್ತರಿಸಿ . 1. ಇತಿಹಾಸಕಾರರು ಇತಿಹಾಸವನ್ನುಹೇಗೆ ರಚಿಸುತ್ತಾರೆ ? ಉತ್ತರ : ಇತಿಹಾಸಕಾರರು ಆಧಾರಗಳನ್ನು ಸಂಗ್ರಹಿಸಿ , ಅವುಗಳನ್ನು ವಿಮರ್ಶಿಸಿ , ವಿಶ್ಲೇಸಿ ಇತಿಹಾಸವನ್ನು ಬರೆಯುತ್ತಾರೆ . ಕೆಲವೊಮ್ಮೆ ನಿಖರ ಆಧಾರಗಳು ದೊರಕದಿದ್ದಾಗ ಲಭ್ಯವಿರುವ ಆಧಾರಗಳ ಮೇಲೆ ಊಹೆಗಳನ್ನೂ ಮಾಡಬೇಕಾಗುತ್ತದೆ . ಹೀಗಾಗಿ ಒಂದೇ ಘಟನೆಯನ್ನು ಬೇರೆ ಬೇರೆ ಇತಿಹಾಸಕಾರರು ಭಿನ್ನ ಭಿನ್ನ ದೃಷ್ಟಿಕೋನಗಳಲ್ಲಿ ಅರ್ಥೈಸುವುದುಂಟು . 2 . ಆಧಾರ ಎಂದರೇನು ? ಅವುಗಳಲ್ಲಿ ಎಷ್ಟು ವಿಧ ? ಉತ್ತರ : ಇತಿಹಾಸ ರಚನೆಗೆ ಬೇಕಾಗುವ ಮೂಲ ಸಾಮಾಗ್ರಿಗಳೇ ಆಧಾರ . ಈ ಆಧಾರಗಳನ್ನು ಮುಖ್ಯವಾಗಿ 2 ವಿಧಗಳಾಗಿ ವಿಂಗಡಿಸಬಹುದು . ಎ ) ಸಾಹಿತ್ಯ ಆಧಾರಗಳು     ಬಿ ) ಪುರಾತತ್ವ ಆಧಾರಗಳು ಎ ) ಸಾಹಿತ್ಯ ಆಧಾರಗಳು :- ಇದರಲ್ಲಿ 2 ವಿಧಗಳು 1. ಲಿಖಿತ ಸಾಹಿತ್ಯ    2. ಮೌಖಿಕ ಸಾಹಿತ್ಯ 3 . ಯಾವುದಾದರು ಎರಡು ದೇಶಿಯ ಸಾಹಿತ್ಯ ಕೃತಿಗಳನ್ನು ಹೆಸರಿಸಿ . ಉತ್ತರ : ದೇಶಿಯ ಸಾಹಿತ್ಯ ಕೃತಿಗಳು : ಕೌಟಿಲ್ಯನ “ ಅರ್ಥಶಾಸ್ತ್ರ ” ಹಾಲ ರಾಜನ “ ಗಾಥಾಸಪತ್ತಶತಿ ” ವಿಶಾಖದತ್ತನ “ ಮುದ್ರಾರಾಕ್ಷಸ ” ಕಲ್ಹಣನ “ ರಾಜತರಂಗಿಣಿ ”

Middle Adds

amezon