Independence Day Speech In Kannada | ಸ್ವಾತಂತ್ರ್ಯ ದಿನಾಚರಣೆಯ ಭಾಷಣ
Independence Day Speech In Kannada ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು ಭಾರತ ಮಾತೆಯ ಚರಣ ಕಮಲಗಳಲ್ಲಿ ನಮಸ್ಕರಿಸುತ್ತಾ ಮೊದಲಿಗೆ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಳನ್ನು ಹೇಳುತ್ತೇನೆ. ವೇದಿಕೆಯ ಮೇಲೆ ಆಸಿನರಾಗಿರುವ ಅಧ್ಯಕ್ಷರೆ, ಅತಿತಿಗಳೆ, ಉರಿನ ಹಿರಿಯರೆ ನನ್ನ ನೆಚ್ಚಿನ ಶಿಕ್ಷಕರೆ ಹಾಗೂ ಎಲ್ಲಾ ಸಹಪಾಠಿಗಳೆ, ಇಂದು ನಮ್ಮ ರಾಷ್ಟ್ರ ಸ್ವಾತಂತ್ರ್ಯವನ್ನು ಸಂಪಾದನೆ ಮಾಡಿರುವ ದಿನ. ಈ ದಿನವನ್ನು ನಾವು ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ನನ್ನ ಎರಡು ಮಾತುಗಳನ್ನು ಆಡಲು ಬಯಸುತ್ತೇನೆ. 1947 ಆಗಸ್ಟ್ 15 ರಂದು ನಾವು ಸ್ವಾತಂತ್ರ್ಯವನ್ನು ಸಂಪಾದನೆ ಮಾಡಿಕೊಂಡಿದ್ದೇವೆ, ಇದಕ್ಕಿಂತಲೂ ಮುಂಚಿತವಾಗಿ ನಮ್ಮ ರಾಷ್ಟ್ರವು ಪರಕೀಯರ ಅಧಿನದಲ್ಲಿ ಇತ್ತು. ನಮ್ಮ ರಾಷ್ಟ್ರದ ಮಹಾನ ನಾಯಕರ ಹೋರಾಟ, ತ್ಯಾಗ, ಬಲಿದಾನದ ಪ್ರತಿಕವಾಗಿ ನಾವು ಸ್ವಾತಂತ್ರ್ಯವನ್ನು ಸಂಪಾದನೆ ಮಾಡಿಕೊಂಡು ಇಂದಿಗೆ 74 ( ) ವರ್ಷಗಳು ಕಳೆದು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಾ ಇದ್ದೇವೆ. ಭಗತ್ ಸಿಂಗ್, ಲಾಲ್ ಬಹದ್ದುರ ಶಾಸ್ತ್ರಿ, ಲೋಕಮಾನ್ಯ ಬಾಲ್ ಗಂಗಾದರ ತಿಲಕ, ಮಹಾತ್ಮಾ ಗಾಂಧಿಜಿ, ಸುಭಾಷ ಚಂದ್ರ ಭೋಸ್, ಚಂದ್ರಶೇಖರ ಆಜಾದ ಮುಂತಾದ ಹಲವಾರು ನಾಯಕರ ಹೋರಾಟದ ಪ್ರತಿಕ ಈ ಸ್ವಾತಂತ್ರ್ಯ ದಿನಾಚರಣೆಯಾಗಿದೆ. ಪ್ರಾಚೀನ ಕಾಲದಿಂದಲೂ ಭಾರತ ಮೇಲೆ ಹಲವಾರು ...