SSLC Social Science MCQ Questions 376 to 400 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು |16 |
SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-16 (376 to 400) 376. ಅಮೆರಿಕಾದ ಟೆನಿಸ್ಸಿ ನದಿ ಕಣಿವೆ ಯೋಜನೆ ಮಾದರಿ ಅನುಸರಿಸಿ ನಿರ್ಮಿಸಲಾದ ನದಿ ಕಣಿವೆ ಯೋಜನೆ ಯಾವುದು? ಉ: ದಾಮೋದರ ನದಿ ಕಣಿವೆ ಯೋಜನೆ 377. ದಾಮೋದರ ನದಿಯನ್ನು ಬಂಗಾಳದ ದುಃಖಕಾರಿ ನದಿ ಎಂದು ಕರೆಯಲು ಕಾರಣ ಉ: ಪ್ರವಾಹದಿಂದ ಬೆಳೆ ಹಾಗೂ ಜನ ವಸತಿಗೆ ಹಾನಿ ಉಂಟು ಮಾಡುತ್ತದೆ 378. ಭಾಕ್ರಾನಂಗಲ್ ಆಣೆಕಟ್ಟು ಕಟ್ಟಿದ ನದಿ ಉ: ಸಟ್ಲೇಜ್ (ಹಿಮಾಚಲ ಪ್ರದೇಶ) 379. ಭಾರತದಲ್ಲಿ ನೇರ ಗುರುತ್ವವುಳ್ಳ ಆಣೆಕಟ್ಟು ಉ: ಭಾಕ್ರಾ-ನಂಗಲ್ 380. ಭಾಕ್ರಾ-ನಂಗಲ್ ಆಣೆಕಟ್ಟಿನ ಜಲಾಶಯದ ಹೆಸರು ಉ: ಗೋವಿಂದ ಸಾಗರ 381. ಒಡಿಸ್ಸಾದ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಉ: ಹಿರಾಕುಡ್ 382. ಭಾರತದಲ್ಲಿ ಉದ್ಧವಾದ ಆಣೆಕಟ್ಟು ಉ: ಹಿರಾಕುಡ್ 383. ತುಂಗಭದ್ರಾ ಆಣೆಕಟ್ಟು ಕಟ್ಟಿದ ಸ್ಥಳ ಉ: ಮಲ್ಲಾಪುರ 384. ತುಂಗಭದ್ರಾ ಆಣೆಕಟ್ಟಿನ ಜಲಾಶಯದ ಹೆಸರು ಉ: ಪಂಪಸಾಗರ 385. ಉತ್ತರ ಕರ್ನಾಟಕದ ಅತಿದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಉ: ಕೃಷ್ಣ ಮೇಲ್ದಂಡೆ ಯೋಜನೆ 386. ಭಾರತ ಮತ್ತು ನೇಪಾಳ ದೇಶಗಳ ಸಂಯುಕ್ತ ನದಿ ಯೋಜನೆ ಉ: ಕೋಸಿ 387. ಕೋಸಿ ನದಿಗೆ ಆಣೆಕಟ್ಟು ಕಟ್ಟಿದ ಸ್ಥಳ ಉ: ಹನುಮಾನ್ ನಗರ (ನೇಪಾಳ) 38...