SSLC Social Science One Mark Questions 251 to 275 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-11 (251 to 275)
251. ಹಸಿವನ್ನು ವ್ಯಾಖ್ಯಾನಿಸಿ 
ಉ: ನಿಗಧಿತ ಆಹಾರ ಒಬ್ಬ ವ್ಯಕ್ತಿಗೆ ದೊರೆಯದೆ ಇರುವುದು 
252. ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
ಉ: 2006 
253. ಲಿಂಗ ತಾರತಮ್ಯ ಎಂದರೆ 
ಉ: ಸ್ತ್ರಿ-ಪುರುಷರ ನಡುವೆ ತಾರತಮ್ಯ ಮಾಡುವುದು 
254. ಬಾಲ್ಯ ವಿವಾಹ ಎಂದರೆ 
ಉ: 18 ವರ್ಷದೊಳಗಿನ ಹುಡುಗಿ 21 ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡುವ ಪದ್ದತಿ 
255. ಮಾತೃ ಸಂಸ್ಕøತಿಯ ಆಸ್ತಿಯ ಹಕ್ಕು ಹೊಂದಿರುವ ಸಮುದಾಯ ಯಾವುದು?
ಉ: ಕೇರಳದ ನಾಯರ್ 
256. ಸಾಮಾಜಿಕ ಚಳುವಳಿ ಎಂದರೆ 
ಉ: ಮಾನವ ಸಮಾಜದ ಚಲನೆ, ಬದಲಾವಣೆಗೆ ಸಂಬಂಧಿಸಿದಂತೆ ನಡೆಯುವ ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧ 
257. ಸಮೂಹ ವರ್ತನೆ ಎಂದರೆ ಏನು?
ಉ: ಜನರು ಆಕಸ್ಮಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ, ಭಾವನೆ ವರ್ತನೆಯಾಗಿದೆ 
258. ಸಮೂಹ ವರ್ತನೆಯ ಮಾದರಿಗಳು ಯಾವುವು? 
ಉ: ಜನಮಂದೆ, ದೊಂಬಿ 
259. ಜನಮುಂದೆ ಎಂದರೆ 
ಉ: ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿ ಸುತ್ತ ನೆರೆದಿರುವ ಜನರಾಶಿ 
260. ದೊಂಬಿ ಎಂದರೆ 
ಉ: ಹಿಂಸಾತ್ಮಕ – ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆ 
261. ಜನಮಂದೆಯು ಯಾವಾಗ ದೊಂಬಿಯಾಗಿ ಪರಿವರ್ತನೆ ಹೊಂದುತ್ತದೆ? 
ಉ: ಜನಮಂದೆಯ ವರ್ತನೆ ತೀರಾ ಹಿಂಸಾತ್ಮಕ – ವಿನಾಶಾತ್ಮಕವಾದಾಗ
262. ಪರಿಸರ ಚಳುವಳಿ ಎಂದರೆ 
ಉ: ಜೀವ ಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವುದು 
263. ಜಾರ್ಖಂಡ್ ಮುಕ್ತಿ ಮೋರ್ಚಾ ಪರಿಸರದ ಹೋರಾಟ ಆರಂಭಗೊಂಡ ವರ್ಷ 
ಉ: 1973 
264. ಚಿಪ್ಕೋ ಚಳುವಳಿ ಆರಂಭಗೊಂಡ ಸ್ಥಳ 
ಉ: ಉತ್ತರಪ್ರದೇಶ ರಾಜ್ಯದ ರೆನ್ನಿ (1974) 
265. ಅಪ್ಪಿಕೋ ಚಳುವಳಿ ಆರಂಭವಾದ ಸ್ಥಳ,ವರ್ಷ ಯಾವುದು? 
ಉ: ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ (1983) 
266. ನರ್ಮದಾ ಬಚಾವೋ ಆಂದೋಲನದ ನೇತಾರರು ಯಾರು?
ಉ: ಮೇಧಾ ಪಾಟ್ಕರ್ 
267. ಸರ್ದಾರ್ ಸರೋವರ ಆಣೆಕಟ್ಟು ಯಾವ ನದಿಗೆ ನಿರ್ಮಿಸಲಾಗಿದೆ 
ಉ: ನರ್ಮದಾ ನದಿ 
268. ಮೌನ ಕಣಿವೆ ಆಂದೋಲನದ ಮುಖ್ಯ ಉದ್ದೇಶವೇನು?
ಉ: ಜೀವ ಸಂಕುಲಗಳ ಸಂರಕ್ಷಣೆ 
269. ಕೈಗಾ ಅಣು ಸ್ಥಾವರ ವಿರೋಧಿ ಚಳವಳಿಯ ನೇತಾರರು ಯಾರು?
ಉ: ಡಾ|| ಶಿವರಾಮ ಕಾರಂತ 
270. ಕುಸುಮಾ ಸೊರಬರವರು ಈ ಚಳುವಳಿಗೆ ಸಂಬಂಧಿಸಿದ್ದಾರೆ 
ಉ: ಮಧ್ಯಪಾನ ನಿಷೇಧ ಚಳುವಳಿ 
271. ಕರ್ನಾಟಕ ರಾಜ್ಯ ರೈತ ಸಂಘ ಇವರ ನಾಯಕತ್ವದಲ್ಲಿ ಸ್ಥಾಪನೆಗೊಂಡಿತು 
ಉ: ಪ್ರೊ|| ಎಮ್.ಡಿ. ನಂಜುಂಡಸ್ವಾಮಿ 
272. ನರಗುಂದ ರೈತ ಬಂಡಾಯ ಈ ಮಾದರಿಯ ಚಳುವಳಿ 
ಉ: ರೈತ ಚಳುವಳಿ 
273. ಜಗತ್ತಿನ ಮೊದಲ ಕಾರ್ಮಿಕ ಸಂಘ ಸ್ಥಾಪನೆಯಾದ ಸ್ಥಳ ಯಾವುದು?
ಉ: ಲಂಡನ್ 
274. ಭಾರತೀಯ ಕಾರ್ಮಿಕ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು
ಉ: 1923 
275. ಆತ್ಮಗೌರವ ಚಳುವಳಿ ನೇತಾರರು ಯಾರು
ಉ: ಪೆರಿಯಾರ್ ರಾಮಸ್ವಾಮಿ 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon