ದ್ವಿತೀಯ ಪಿ.ಯು.ಸಿ ಅಧ್ಯಾಯ-1 ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ I.ಒಂದು ಅಂಕದ ಪ್ರಶ್ನೆಗಳಿಗೆ ತಲಾ ಒಂದು ವಾಕ್ಯದಲ್ಲಿ ಉತ್ತರಿಸಿ:- 1.ಡೆಮೊಗ್ರಫಿ ಎಂಬ ಪದವು ಹೇಗೆ ಉತ್ಪತ್ತಿಯಾಗಿದೆ? ಉ: ಡೆಮೊಗ್ರಫಿ ಎಂಬ ಪದವು ಡೆಮೊಸ್ ಮತ್ತು ಗ್ರಾಫೆಸ್ ಎಂಬ ಎರಡು ಗ್ರೀಕ್ ಪದಗಳಿಂದ ಉತ್ಪತ್ತಿಯಾಗಿದೆ. 2.2011ರ ಜನಗಣತಿಯಲ್ಲಿ ದಾಖಲಾದ ಲಿಂಗಾನುಪಾತ ಪ್ರಮಾಣವನ್ನು ತಿಳಿಸಿ? ಉ: 1000 ಪುರುಷರಿಗೆ 940 ಸ್ತ್ರೀಯರು. 3.ಭಾರತ ಸರ್ಕಾರ ಕರ್ನಾಟಕದ ಯಾವ ಜಿಲ್ಲೆಯನ್ನು ಬೇಟಿ ಪಡಾವೋ, ಬೇಟಿ ಬಚಾವೋ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದೆ? ಉ: ಬಿಜಾಪುರ ಅಥವಾ ವಿಜಯಪುರ. 4.ಭಾರತದ ಜನಾಂಗೀಯ ಸಮೂಹಗಳಲ್ಲಿ ಒಂದನ್ನು ಹೆಸರಿಸಿ? ಉ: ನಿಗ್ರಿಟೊ, ಮಂಗೋಲಾಯ್ಡ್. 5.ಭಾರತಕ್ಕೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದವರು ಯಾರು? ಉ: ಕ್ರಿ.ಶ.50ರಲ್ಲಿ ಸಂತಥಾಮಸ್ ಮತ್ತು ಸಂತ ಬಾರ್ಥೊಲೊಮ್ಯು. 6.ಭಾರತದ ಪ್ರಾಚೀನ ಹೆಸರುಗಳಲ್ಲಿ ಒಂದನ್ನು ಹೆಸರಿಸಿ? ಉ: ಭರತವರ್ಷ/ಭರತಖಂಡ/ಜಂಬೂದ್ವೀಪ. 7.ಯಾವ ವರ್ಷವನ್ನು ಜನಸಂಖ್ಯಾಶಾಸ್ತ್ರೀಯ ವಿಭಜಕ ವರ್ಷ ಎಂದು ಕರೆಯುತ್ತೇವೆ? ಉ: 1921 8.ಲಿಂಗಾನುಪಾತ ಎಂದರೇನು? ಉ: 1000 ಪರುಷರಿಗೆ ಸರಾಸರಿ ಮಹಿಳೆಯರ ಪ್ರಮಾಣ. 9.ಭಾರತದ ಯಾವುದಾದರೂ ಒಂದು ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯವನ್ನು ಹೆಸರಿಸಿ? ಉ: ಮುಸ್ಲಿಂ/ಸಿಖ್/ಕ್ರೈಸ್ತ/ಜೈನ/ಬೌದ್ಧ. 10.ರಾಷ್ಟ್ರೀಯ ಭಾವೈಕ್ಯತೆಗೆ ಸವಾಲಾಗಿರುವ ಒಂದು ಅಂಶವನ್ನು ತಿಳಿಸಿ? ...
Ma
ReplyDeleteಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDelete