10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 2 ಹಕ್ಕಿ ಹಾರುತಿದೆ ನೋಡಿದಿರಾ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Hakki Harutide Nodidira |

karntakaeducations

ಪದ್ಯ - 2 : ಹಕ್ಕಿ ಹಾರುತಿದೆ ನೋಡಿದಿರಾ

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1) ಹಕ್ಕಿ ಯಾವ ವೇಗದಲ್ಲಿ ಹಾರುತಿದೆ ?

ಉತ್ತರ :  ಎವೆ ತೆರೆದಿಕ್ಕುವ ಹೊತ್ತಿನೊಳಗೆ ಅಂದರೆ ಕಣ್ಣುರೆಪ್ಪೆ ಮಿಟಿಕಿಸುವಷ್ಟು ಸಮಯದಲ್ಲಿ ಗಾವುದ ಗಾವುದ ದೂರ ಶರವೇಗದಲ್ಲಿ ಹಾರುತ್ತಿದೆ.

2) ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ ?

ಉತ್ತರ :  ಕರಿ, ಬಿಳಿ, ಕೆಂಪು, ಹೊನ್ನಿನ ಹೊಳೆಯುವ ಬಣ್ಣಗಳಿವೆ

3) ಹಕ್ಕಿಯ ಕಣ್ಣುಗಳು ಯಾವುವು ?

ಉತ್ತರ :  ಸೂರ್ಯ ಚಂದ್ರರು

4) ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ ?

ಉತ್ತರ :  ಸಾರ್ವಭೌಮರ ನೆತ್ತಿ

5) ಹಕ್ಕಿಯು ಯಾರನ್ನು ಹರಿಸಿದೆ ?

ಉತ್ತರ :  ಹೊಸಗಾಲದ ಹಸುಮಕ್ಕಳನ್ನು

6) ಹಕ್ಕಿಯು ಯಾವುದರ ಸಂಕೇತವಾಗಿದೆ ?

ಉತ್ತರ :  ಹಕ್ಕಿಯು ಕಾಲಪಕ್ಷಿಯ ಸಂಕೇತವಾಗಿದೆ

7) ಹಕ್ಕಿಯ ಚುಂಚುಗಳು ಎಲ್ಲಿಯವರೆಗೆ ಚಾಚಿವೆ ?

ಉತ್ತರ :  ದಿಗ್ಮಂಡಲ ಅಂಚಿನ ಆಚೆಯವರೆಗೆ

8) ಹಕ್ಕಿಯು ಎಲ್ಲಿಯ ನೀರನ್ನು ಹೀರಿದೆ ?

ಉತ್ತರ :  ತಿಂಗಳೂರಿನ ಅಂದರೆ ಚಂದ್ರಲೋಕದ ನೀರನ್ನು ಹೀರಿದೆ

9) ಹಕ್ಕಿಯು ಯಾವ ಮೇರೆಯನ್ನು ಮೀರಿ ಹಾರಿದೆ ?

ಉತ್ತರ :  ಹಕ್ಕಿಯು ಬೆಳ್ಳಿ ಹಳ್ಳಿ ಅಂದರೆ ಶುಕ್ರ ಗ್ರಹದ ಮೇರೆಯನ್ನು ಮೀರಿ ಹಾರಿದೆ.

10) ಕೊನೆಯಲ್ಲಿ ಕಾಲಪಕ್ಷಿಯು ಎಲ್ಲಿ ಹೋಗಿ ಮುಟ್ಟಿದೆ ?

ಉತ್ತರ :  ಮಂಗಳ ಗ್ರಹಕ್ಕೆ ಏರಿ ಹೋಗಿದೆ.

11) ಕಾಲಪಕ್ಷಿಗೆ ಭೂತಕಾಲದ ಗರಿಗಳು ಯಾವುವು ?

ಉತ್ತರ :  ಕರಿನೆರೆ ಬಣ್ಣದ ಪುಚ್ಚಗಳು

12) ಕಾಲಪಕ್ಷಿಗೆ ವರ್ತಮಾನಕಾಲದ ಗರಿಗಳು ಯಾವುವು ?

ಉತ್ತರ :  ಬಿಳಿಹೊಳೆ ಬಣ್ಣದ ಗರಿಗಳು

13) ಕಾಲಪಕ್ಷಿಗೆ ಭವಿಷ್ಯತ್‍ಕಾಲದ ರೆಕ್ಕೆಗಳು ಯಾವುವು ?

ಉತ್ತರ :  ಕೆಂಪಾದ ಹೊನ್ನಿನ ಬಣ್ಣದ ರೆಕ್ಕೆಗಳು

14) ಹಕ್ಕಿಯು ಎಂತಹ ಮಾಲೆಯನ್ನು ಸಿಕ್ಕಿಸಿಕೊಂಡಿದೆ ?

ಉತ್ತರ :  ಮಿನುಗುತ್ತಿರುವ ನಕ್ಷತ್ರಗಳ ಮಾಲೆಯನ್ನು.

15) ಹಕ್ಕಿಯು ಯಾರ ಅಹಂಕಾರವನ್ನು ಮೆಟ್ಟಿ ನಿಂತಿದೆ ?

ಉತ್ತರ :  ಮೆರೆಯುತ್ತಿದ್ದ ಸಾಮ್ರಾಟರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಮೆಟ್ಟಿ ನಿಂತಿದೆ.

16) ಕಾಲಹಕ್ಕಿಗೆ ಎಂತಹ ರೆಕ್ಕೆಗಳಿವೆ ?

ಉತ್ತರ :  ಸೂರ್ಯೋದಯದ ಹೊನ್ನನೆ ಬಣ್ಣದ ಮತ್ತು ಸೂರ್ಯಾಸ್ತದ ಕೆನ್ನನೆ ಬಣ್ಣದ ರೆಕ್ಕೆಗಳಿವೆ.

17) ಕಾಲಹಕ್ಕಿಯು ಯಾವುದಕ್ಕೆ ಹೊಂಚು ಹಾಕಿದೆ ?

ಉತ್ತರ :  ಜಗತ್ತಿನ ಮೂಲ ಹುಡುಕಲು ಮತ್ತು ರಹಸ್ಯವನ್ನು ಭೇದಿಸಲು ಕಾಲಹಕ್ಕಿಯು ಹೊಂಚು ಹಾಕಿದೆ.

18) ಹಕ್ಕಿ ಹಾರುತಿದೆ ನೋಡಿದಿರಾ - ಪದ್ಯದ ಆಕರ ಗ್ರಂಥ ಯಾವುದು ?

ಉತ್ತರ :  ಬೇಂದ್ರೆಯವರ ‘ಗರಿ’ ಕವನ ಸಂಕನ

19) ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು ?

ಉತ್ತರ :  ನಾಕುತಂತಿ (ಕವನ ಸಂಕಲನ)

20) ಹಕ್ಕಿ ಹಾರುತಿದೆ ನೋಡಿದಿರಾ - ಇದು ಯಾವ ಪ್ರಕಾರದ ಕವಿತೆಯಾಗಿದೆ ?

ಉತ್ತರ :  ಭಾವಗೀತೆ

21) ಕಾಲಪಕ್ಷಿಯು ಯಾವುದನ್ನು ತೇಲಿಸಿ ಮುಳುಗಿಸಿದೆ ?

ಉತ್ತರ :  ಅನೇಕ ಖಂಡಗಳನ್ನು ತೇಲಿಸಿ ಮುಳುಗಿಸಿದೆ.


*****

Karnataka Educations |10ನೇ ತರಗತಿ ಪ್ರಥಮ ಭಾಷೆ ಕನ್ನಡ |  ಪದ್ಯ - 2 ಹಕ್ಕಿ ಹಾರುತಿದೆ ನೋಡಿದಿರಾ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Hakki Harutide Nodidira |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon