ಪ್ರಬಂಧ ಬರೆಯಿರಿ : “ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು” | Varadakshine Samajika Pidugu | Prabhanda Bareyiri |
ಪ್ರಬಂಧ ಬರೆಯಿರಿ : “ ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ” 1. ಪೀಠಿಕೆ 2. ವಿಷಯ ನಿರೂಪಣೆ 3. ಉಪಸಂಹಾರ ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು : ಪೀಠಿಕೆ : ವಿವಾಹದ ಸಂದರ್ಭದಲ್ಲಿ ಅಥವಾ ಮುಂಚಿತವಾಗಿ ವಧುವಿನ ಕಡೆಯವರು ವರನಿಗೆ ನೀಡುವ ಹಣ , ಬಂಗಾರ , ವಸ್ತುಗಳು , ನಿವೇಶನ , ವಾಹನ , ಉದ್ಯೋಗ ಕೊಡಿಸುವ ಭರವಸೆ ಮುಂತಾದ ಉಡುಗೊರೆಗಳನ್ನು ವರದಕ್ಷಿಣೆ ಎನ್ನುವರು . ಈಗಿನ ಸಮಾಜದಲ್ಲಿ ಇದೊಂದು ಫ್ಯಾಶನ್ ಪಿಡುಗು ಎಂದೇ ಹೇಳಬಹುದು . ಇದೊಂದು ಸಾಮಾಜಿಕ ಪಿಡುಗಾಗಿದ್ದು , ಸಮಾಜದಲ್ಲಿ ಹೆಣ್ಣು ಹೆತ್ತ ಬಡವರು ತಮ್ಮ ಮಗಳ ಮದುವೆ ಮಾಡಲು ಕಣ್ಣೀರು ಸುರಿಸುವುದರೊಂದಿಗೆ ಯಮಪಾಶವಾಗಿದೆ . ವಿಷಯ ನಿರೂಪಣೆ : ಮಾನವನ ಭೋಗ ಲಾಲಸೆಗೆ ಎಷ್ಟಿದ್ದರೂ ಸಾಲದು . ಅದು ಮದುವೆಯಾಗುವಾಗ ವಧುವಿನ ಕಡೆಯವರನ್ನು ವರದಕ್ಷಿಣೆಗಾಗಿ ಪೀಡಿಸುವುದು ಸಾಮಾನ್ಯವಾಗಿ ಬಿಟ್ಟಿದೆ . ಪೋಷಕರು ಮಗಳು ಸುಖವಾಗಿರಲೆಂದು ವರದಕ್ಷಿನೆ ನೀಡುವುದು ಸಹ ಅಷ್ಟೆ ಸಾಮಾನ್ಯವಾಗಿದೆ . ಇದರಿಂದ ಹೆಣ್ಣು ಮಕ್ಕಳು ಹುಟ್ಟುವುದೇ ಬೇಡವೆಂಬ ಮನೋಭಾವ ಬಡವರಲ್ಲಿ ಮೂಡುವಂತೆ ಮಾಡಿದೆ . ಕಾನೂನಿನ ಪ್ರಕಾರ ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಅಪರಾದ . 1961 ರಲ್ಲಿಯೇ ವರದಕ್ಷಿಣೆ ವಿರೋಧಿ ಕಾನೂನನ್ನು ಜಾರಿಗೆ ತಂದಿದ್ದರೂ ಅದನ್ನು ಸರಿಯಾ...