ಗದ್ಯ - 2 ಲಂಡನ್ ನಗರ ನೋಟ್ಸ್ | Gadya 2 London Nagara | 10th Kannada Question Ans | 10ನೇ ತರಗತಿ ಕನ್ನಡ ಪ್ರಶ್ನೋತ್ತರಗಳು |
ಗದ್ಯಪಾಠ-2- ಲಂಡನ್ ನಗರ -ವಿ.ಕೃ.ಗೋಕಾಕ ಕೃತಿಕಾರರ ಪರಿಚಯ: ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ.ವಿನಾಯಕ ಕೃಷ್ಣ ಗೋಕಾಕರ ಕಾಲ ಕ್ರಿ.ಶ.1906. ಇವರು ಹಾವೇರಿ ಜಿಲ್ಲೆಯ ಸವಣೂರಿನವರು. ಇವರು ಸಮುದ್ರ ಗೀತೆಗಳು, ಪಯಣ, ಉಗಮ, ಇಜ್ಜೋಡು, ಸಮರಸವೇ ಜೀವನ, ಭಾರತ ಸಿಂಧು ರಶ್ಮಿ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ದ್ಯಾವಾ ಪೃಥಿವೀ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇದಲ್ಲದೇ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ ಮೊದಲಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಲಂಡನ್ ನಗರ ಗದ್ಯಭಾಗವನ್ನು ವಿ.ಕೃ.ಗೋಕಾಕರ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ. I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು? ಉ: ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರು ವೂಲವರ್ಥ. 2. ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು? ಉ: ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರು ಟ್ರಾಫಲ್ಗಾರ್ ಸ್ಕ್ವೇರ್. 3. ವೆಸ್ಟ್ ಮಿನಿಸ್ಟರ್ ಅಬೆ ಯಾರ ಸ್ಮಾರಕವಾಗಿದೆ? ಉ: ವೆಸ್ಟ್ ಮಿನಿಸ್ಟರ್ ಅಬೆ ಸಂತ, ಸಾರ್ವಭೌಮರ, ಕವಿಪುಂಗವರ ಸ್ಮಾರಕವಾಗಿದೆ. 4. ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರ...