10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 7 ವೀರಲವ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Veera Lava |

karntakaeducations

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 7 ವೀರಲವ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Veera Lava |
ಪದ್ಯ - 7 : ವೀರಲವ

1) ಜೈಮಿನಿ ಭಾರತವನ್ನು ಬರೆದ ಕವಿ ಯಾರು ?

ಉತ್ತರ :  ಲಕ್ಷ್ಮೀಶ

2) ಯಜ್ಞಾಶ್ವವನ್ನು ಕಟ್ಟಿದವರು ಯಾರು ?

ಉತ್ತರ :  ಲವ

3) ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು ?

ಉತ್ತರ :  ತನ್ನ ಉತ್ತರೀಯದಿಂದ

4) ಮುನಿಸುತರು ಹೆದರಲು ಕಾರಣವೇನು ?

ಉತ್ತರ :  ಲವನು ರಾಜರ ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ

5) ಯಜ್ಞದ ಕುದುರೆ ಯಾರ ಆಶ್ರಮ ಪ್ರವೇಶಿಸಿತು ?

ಉತ್ತರ :  ವಾಲ್ಮೀಕಿ ಆಶ್ರಮವನ್ನು ಪ್ರವೇಶಿಸಿತು

6) ವಾಲ್ಮೀಕಿಯ ವನವನ್ನು ಯಾರು ಕಾಯುತ್ತಿದ್ದರು ?

ಉತ್ತರ :  ವಾಲ್ಮೀಕಿಯ ವನವನ್ನು ಲವನು ಕಾಯುತ್ತಿದ್ದನು.

7) ಕುದುರೆಯನ್ನು ಕಟ್ಟಿದಾಗ ಮುನಿಸುತರು ಲವನಿಗೆ ಏನೆಂದು ಹೇಳಿದರು ?

ಉತ್ತರ :  ಅರಸುಗಳ ಕುದುರೆಯನ್ನು ಬಿಡದಿದ್ದರೆ ಅವರು ನಮ್ಮನ್ನು ಹೊಡೆಯುವರು.

8) ಯಜ್ಞಾಶ್ವದ ಬೆಂಗಾವಲಿಗೆ ಯಾರು ಬಂದಿದ್ದರು ?

ಉತ್ತರ :  ಶತ್ರುಘ್ನ.

9) ಯಜ್ಞಾಶ್ವದ ಹಣೆಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ?

ಉತ್ತರ :  ಭೂಮಂಡಲದಲ್ಲಿ ಕೌಶಲ್ಯೆಯ ಮಗನಾದ ರಾಮನೊಬ್ಬನೇ ವೀರನು. ಇದು ಅವನ ಯಜ್ಞದ ಕುದುರೆ. ತಡೆಯುವ ಸಾಮಥ್ರ್ಯವುಳ್ಳವರು ಯಾರೇ ಆದರೂ ತಡೆಯಲಿ ಎಂದು ಯಜ್ಞಾಶ್ವದ ಹಣೆಪಟ್ಟಿಯಲ್ಲಿ ಬರೆದಿತ್ತು.

10) ವಾಲ್ಮೀಕಿ ಮುನಿಗಳು ಎಲ್ಲಿಗೆ ಹೋಗಿದ್ದರು ?

ಉತ್ತರ :  ವರುಣನ ಲೋಕಕ್ಕೆ.

11) ರಾಮನ ತಂದೆ ತಾಯಿ ಯಾರು ?

ಉತ್ತರ :  ತಂದೆ ದಶರಥ, ತಾಯಿ ಕೌಶಲ್ಯೆ.

12) ಕುದುರೆ ಪದದ ಸಮಾನಾರ್ಥಕಗಳನ್ನು ಬರೆಯಿರಿ ?

ಉತ್ತರ :  ಹಯ, ಅಶ್ವ, ತುರಗ, ತುರಂಗ, ವಾಜಿ.

13) ಮುನಿಸುತರು ಕುದುರೆಯನ್ನು ಕಟ್ಟಬೇಡ ಎಂದು ಲವನಿಗೆ ಹೇಳಿದಾಗ ಲವನು ಏನು ಹೇಳಿದನು ?

ಉತ್ತರ :  ‚ಬ್ರಾಹ್ಮಣರ ಮಕ್ಕಳು ಇದಕ್ಕೆ ಹೆದರಿದರೆ, ಜಾನಕಿಯ ಮಗನು ಇದಕ್ಕೆ ಹೆದರುವನೇ ? ನೀವು ಹೋಗಿ ಎಂದನು.

14) ತನ್ನ ತಾಯಿಯ ಬಗ್ಗೆ ಜನರು ಏನೆಂದು ಆಡಿಕೊಳ್ಳುವರು ಎಂದು ಲವನು ಮುನಿಸುತರಿಗೆ ಹೇಳಿದನು ?

ಉತ್ತರ :  ಯಜ್ಞದ ಕುದುರೆಯನ್ನು ಕಟ್ಟದಿದ್ದರೆ ಜನರು ತನ್ನ ತಾಯಿ ಜಾನಕಿಯನ್ನು ಬಂಜೆ ಎನ್ನುವುದಿಲ್ಲವೇ.

15) ಯಜ್ಞದ ಕುದುರೆಯನ್ನು ಲವನು ಯಾವುದಕ್ಕೆ ಕಟ್ಟಿ ಹಾಕಿದನು ?

ಉತ್ತರ :  ಬಾಳೆ ಗಿಡಕ್ಕೆ (ಕದಳೀದ್ರುಮಕ್ಕೆ).

16) ಅಗಡು - ಪದದ ಅರ್ಥವೇನು ?

ಉತ್ತರ :  ಶೌರ್ಯ.

17) ‘ಅರಸುಗಳ ವಾಜಿಯಂ ಬಿಡು’ ಎಂದು ಹೇಳಿದವರಾರು ?

ಉತ್ತರ :  ಮುನಿಸುತರು ಲವನಿಗೆ.

18) ಲವನು ಯಾರು ?

ಉತ್ತರ :  ಲವನು ಶ್ರೀರಾಮ ಮತ್ತು ಸೀತೆಯರಲ್ಲಿ ಜನಿಸಿದ ಅವಳಿ ಮಕ್ಕಳಲ್ಲಿ ಚಿಕ್ಕವನು.

19) ಲವ ಕುಶರು ಜನಿಸಿದ ಸ್ಥಳ ಯಾವುದು ?

ಉತ್ತರ :  ವಾಲ್ಮೀಕಿಯ ಆಶ್ರಮ.

20) ಆದಿಕಾವ್ಯ ರಾಮಾಯಣ ಬರೆದವರು ಯಾರು ?

ಉತ್ತರ :  ವಾಲ್ಮೀಕಿ.

21) ಶ್ರೀರಾಮನು ಅಶ್ವಮೇಧ ಯಾಗ ಮಾಡಲು ಕಾರಣವೇನು ?

ಉತ್ತರ :  ರಾವಣನ ವಧೆಯಿಂದ ಬ್ರಹ್ಮಹತ್ಯಾದೋಷ ಬಂದಿರುವುದನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಅಶ್ವಮೇಧ ಯಾಗ ಮಾಡುತ್ತಾನೆ.

22) ಲಕ್ಷ್ಮೀಶ ಕವಿಗೆ ಇರುವ ಬಿರುದುಗಳು ಯಾವುವು ?

ಉತ್ತರ :  ಉಪಮಾಲೋಲ, ಕರ್ಣಾಟ ಕವಿ ಚೂತನವನ ಚೈತ್ರ.

23) ರಾಮನು ಮಾಡಿದ ಯಜ್ಞ ಯಾವುದು ?

ಉತ್ತರ :  ಅಶ್ವಮೇಧ ಯಾಗ.

24) ಲವಕುಶರು ಯಾರ ಆಶ್ರಮದಲ್ಲಿ ಬೆಳೆದರು ?

ಉತ್ತರ :  ವಾಲ್ಮೀಕಿ ಆಶ್ರಮದಲ್ಲಿ.

25) ಕವಿ ಲಕ್ಷ್ಮೀಶನ ಸ್ಥಳ ಯಾವುದು ?

ಉತ್ತರ :  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು.

26) ಕವಿ ಲಕ್ಷ್ಮೀಶನಿಗಿದ್ದ ಬಿರುದುಗಳು ಯಾವುವು ?

ಉತ್ತರ :  ಉಪಮಾಲೋಲ, ಕರ್ಣಾಟ ಕವಿ ಚೂತವನ ಚೈತ್ರ.

27) ‘ಅಬ್ಧಿಪ’ ಪದದ ಅರ್ಥವೇನು ?

ಉತ್ತರ :  ಅಬ್ಧಿ - ಸಮುದ್ರ, ಪ – ಒಡೆಯ ಅಂದರೆ ವರುಣ.

28) ಲವ ಮತ್ತು ಮುನಿಸುತರು ಆಶ್ರಮದಲ್ಲಿ ಹೇಗೆ ಕಾಲ ಕಳೆಯುತ್ತಿದ್ದರು ?

ಉತ್ತರ :  ಲವನು ತನ್ನ ಒಡನಾಡಿಗಳಾದ ಮುನಿಸುತರೊಂದಿಗೆ ಆಶ್ರಮದಲ್ಲಿ ಆಟವಾಡುತ್ತ ಕಾಲ ಕಳೆಯುತ್ತಿದ್ದನು.

29) ಯಜ್ಞಾಶ್ವವನ್ನು ಕಂಡು ಲವನು ಕೋಪಗೊಳ್ಳಲು ಕಾರಣವೇನು ?

ಉತ್ತರ :  ರಾಮನೊಬ್ಬನೇ ವೀರನು, ಸಾಮಥ್ರ್ಯವಿದ್ದವರು ಯಜ್ಞಾಶ್ವವನ್ನು ಕಟ್ಟಲಿ ಎಂಬ ಹಣೆ ಫಲಕ ನೋಡಿ.


*****
Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 7 ವೀರಲವ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Veera Lava |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon