ಪದ್ಯ-2 ಹಕ್ಕಿ ಹಾರುತಿದೆ ನೋಡಿದಿರಾ? | 10ನೇ ತರಗತಿ ಪ್ರಥಮ ಭಾಷೆ ಕನ್ನಡ ಅಭ್ಯಾಸ ಪ್ರಶ್ನೋತ್ತರಗಳು | SSLC Kannada Question Ans |
ಪದ್ಯ-2 ಹಕ್ಕಿ ಹಾರುತಿದೆ ನೋಡಿದಿರಾ? | SSLC Kannada Notes | -ದ.ರಾ.ಬೇಂದ್ರೆ ಕೃತಿಕಾರರ ಪರಿಚಯ: ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕ್ರಿ.ಶ. 1896ರಲ್ಲಿ ಧಾರವಾಡ ಜಿಲ್ಲೆಯ ಸಾಧನಕೇರಿಯಲ್ಲಿ ಜನಿಸಿದರು. ಗರಿ, ಗಂಗಾವತರಣ, ನಾದಲೀಲೆ, ಮೇಘದೂತ, ಸಖೀಗೀತ, ಸೂರ್ಯಪಾನ, ನಗೆಯ ಹೊಗೆ, ಸಾಹಿತ್ಯವಿರಾಟ್ ಸ್ವರೂಪ ಮೊದಲಾದವು ಇವರು ಬರೆದ ಪ್ರಮುಖ ಕೃತಿಗಳು. ಇವರ ಅರಳು-ಮರಳು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಪ್ರಸ್ತುತ ಹಕ್ಕಿ ಹಾರುತಿದೆ ನೋಡಿದಿರಾ? ಪದ್ಯಭಾಗವನ್ನು ಇವರ ಗರಿ ಕವನ ಸಂಕಲನದಿಂದ ಆರಿಸಲಾಗಿದೆ. Video Lesson I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ? ಉ: ಹಕ್ಕಿಯು ಕಣ್ಣುರೆಪ್ಪೆ ಮುಚ್ಚಿ ತೆರೆಯುವ ವೇಗದಲ್ಲಿ ಹಾರುತ್ತಿದೆ. 2. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ? ಉ: ಹಕ್ಕಿಯ ಗರಿಯಲ್ಲಿ ಬಿಳಿ ಹೊಳೆ ಬಣ್ಣಗಳಿವೆ. 3. ಹಕ್ಕಿಯ ಕಣ್ಣುಗಳು ಯಾವುವು? ಉ: ಹಕ್ಕಿಯ ಕಣ್ಣುಗಳು ಸೂರ್ಯಚಂದ್ರರು. 4. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ? ಉ: ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ. 5. ಹಕ್ಕಿ ಯಾರನ್ನು ಹರಸಿದೆ? ಉ: ಹಕ್ಕಿಯು ಹೊಸಗಾಲದ ಹಸುಮಕ್ಕಳನ್ನು ಹರಸಿದೆ. 6. ಹಕ್ಕಿಯು ಯವುದರ ಸಂಕೇತವಾಗಿದೆ? ಉ: ಹಕ್ಕಿಯು ಕ...