Karnataka Government Employee Information and Rules
ಸರ್ಕಾರಿ ನೌಕರರಿಗೆ ಅವಶ್ಯಕವಾದ ಮಾಹಿತಿ ನೌಕರನ ಕೇಂದ್ರಸ್ಥಾನ KCSR ನಿಯಮ 513 ರ ಪ್ರಕಾರ ಕೇಂದ್ರ ಸ್ಥಾನ ಎಂದರೆ ತಾನು ಕರ್ತವ್ಯ ನಿರ್ವಹಿಸುವ ಕಾರ್ಯಸ್ಥಳದಿಂದ 8 ಕಿ . ಮೀ ದೂರವನ್ನು ಕೇಂದ್ರ ಸ್ಥಾನ ವೆಂದು ಕರೆಯುವರು . 8 ಕಿ . ಮೀ . ಮೀರಿ ಬೆಳೆಸಿದ ಪ್ರಯಾಣಕ್ಕೆ ಪ್ರಯಾಣ ಭತ್ಯೆ ಪಡೆಯಬಹುದು . ಪ್ರವಾಸದ ಕಾಲದಲ್ಲಿ ಕೇಂದ್ರಸ್ಥಾನ ದಿಂದ 8 ಕಿ . ಮೀ . ಒಳಗೆ ತಂಗುವುದನ್ನು ಕೇಂದ್ರಸ್ಥಾನದಲ್ಲಿ ತಂಗುವುದಾಗಿ ಭಾವಿಸಬೇಕು . ದಿನದ 24 ಗಂಟೆಯೂ ಸರ್ಕಾರಿ ನೌಕರ K C S R ನಿಯಮಾವಳಿಯ ನಿಯಮ 26( ಎ ) ಪ್ರಕಾರ ಸರ್ಕಾರಿ ನೌಕರನು ದಿನವಿಡಿ ಅಂದರೆ 24 ಗಂಟೆಯೂ ಆತನಿಗೆ ಸಂಬಳ ನೀಡುತ್ತಿರುವ ಸರ್ಕಾರದ ಕರ್ತವ್ಯಕ್ಕಾಗಿಯೇ ಇರಬೇಕಾಗುತ್ತದೆ . ಸರ್ಕಾರ ರಜಾ ದಿನದಂದು ಕರ್ತವ್ಯ ನಿರ್ವಹಿಸಲು ಆದೇಶಿಸಿದರೆ , ಅದನ್ನು ತಿರಸ್ಕರಿಸಲು ಬರುವುದಿಲ್ಲ . ಸಮೂಹ ವಿಮಾ ಯೋಜನೆ , ಉದಾಹರಣೆಗೆ ಒಬ್ಬ ವ್ಯಕ್ತಿಯು ಸಂಜೆ 5-30 ಕ್ಕೆ ವಯೋ ನಿವೃತ್ತಿ ಹೊಂದಿ , ಅದೇ ದಿನ ರಾತ್ರಿ 11-30 ಕ್ಕೆ ಮೃತಪಟ್ಟ ಎಂದು ಭಾವಿಸೋಣ , K C S R ನಿಯಮಾವಳಿಯ ನಿಯಮ 8 (14) ರ ಪ್ರಕಾರ ದಿನ ಎಂದರೆ ಮಧ್ಯರಾತ್ರಿಯಲ್ಲಿ ಆರಂಭಗೊಳ್ಳುತ್ತದೆ ಮತ್ತು ಕೊನೆಗೊಳ್ಳುತ್ತದೆ . ಏಕೆಂದರೆ , A ಎಂಬ ನೌಕರ ದಿನ...