NSP Scholorship FREQUENTLY ASKED QUESTIONS N.S.P. ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
N.S.P. ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಪದೇ ಪದೇ ಕೇಳಲಾಗುವ ಪ್ರಶ್ನೆ ಗಳು ಆನ್ ಲೈನ್ ಅರ್ಜಿ ಸಲ್ಲಿಸುವವ ರಿಗೆ ಸಹಾಯಕ ಪ್ರೀ- ಮ್ಯಾಟ್ರಿಕ್ , ಪೋಸ್ಟ್ ಮ್ಯಾಟ್ರಿಕ್ ಮತ್ತು ಮೆರಿಟ್ ಕಮ್ ಮೀನ್ಸ ಆಧಾರಿತ ಸ್ಕಾಲರ್ ಶಿಪ್ ಸ್ಕೀಮ್ ಗಳು ಪ್ರಶ್ನೆ 1. ಪ್ರಿ - ಮೆಟ್ರಿಕ್ , ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ - ಕಮ್ ಮೀನ್ಸ್ ಆಧಾರಿತ ವಿದ್ಯಾರ್ಥಿವೇತನ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ? ಉತ್ತರ : ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು . ಭಾರತದಲ್ಲಿ ಕಲಿಯುತ್ತಿರುವ ಮುಸ್ಲಿಂ , ಕ್ರಿಶ್ಚಿಯನ್ , ಸಿಖ್ , ಬೌದ್ಧ , ಜೈನ್ , ಪಾರ್ಸಿ (ಜೋ ರಾಸ್ಟ್ರಿಯನ್ )ರು ಮತ್ತು ಯೋಜನೆಯ ಮಾರ್ಗಸೂಚಿಗಳನ್ನು ಪೂರೈಸುವವರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಪ್ರಶ್ನೆ 2. ವಿದ್ಯಾರ್ಥಿವೇತನಕ್ಕಾಗಿ ನಾನು ಆನ್ ಲೈನ್ ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು? ಉತ್ತರ : ಪ್ರಿ - ಮೆಟ್ರಿಕ್ , ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ ಕಮ್ ಮೀನ್ಸ್ ಆಧಾರಿತ ವಿದ್ಯಾರ್ಥಿವೇತನ ಯೋಜನೆಗಳು ಆನ್ ಲೈನ್ ಯೋಜನೆಗಳು ಮತ್ತು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ( ಎನ್ ಎಸ್ ಪಿ ) ನಲ್ಲಿ ಈ ಯಾವುದೇ ಯೋಜನೆಗಳ ಅಡಿಯಲ್ಲಿ ಹೊಸ ಅಥವಾ ನವೀಕರಣ ವಿದ...