ಭಾರತದಲ್ಲಿ ಬ್ರಿಟಿಷ ಆಳ್ವಿಕೆಯ ಪರಿಣಾಮಗಳು | ಅಧ್ಯಾಯ 3 | 10ನೇ ತರಗತಿ ಸಮಾಜ ವಿಜ್ಞಾನ | 10th Social Science New Text Book Chapter 3 |
SSLC Social Science New Text Book Question Ans Chapter 3 ಭಾರತದಲ್ಲಿ ಬ್ರಿಟಿಷ ಆಳ್ವಿಕೆಯ ಪರಿಣಾಮಗಳು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕರಣೆ ಹೊಂದಿರುವ ಪಠ್ಯಪುಸ್ತಕದಲ್ಲಿ ಅಭ್ಯಾಸ ಭಾಗದಲ್ಲಿಯ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಇಲ್ಲಿ ಅಧ್ಯಯನ ಮಾಡುವುದಕ್ಕಾಗಿ ಸಿದ್ದಪಡಿಸಲಾಗಿದೆ. ಇವುಗಳನ್ನು ಅಧ್ಯಯನಕ್ಕಾಗಿ ಮಾದರಿ ಉತ್ತರಗಳನ್ನಾಗಿ ತೆಗೆದುಕೊಂಡು ಅಭ್ಯಾಸ ಮಾಡಿಕೊಳ್ಳಬಹುದು. ಅಧ್ಯಾಯ - 3 ಭಾರತದಲ್ಲಿ ಬ್ರಿಟಿಷ ಆಳ್ವಿಕೆಯ ಪರಿಣಾಮಗಳು ಅಭ್ಯಾಸದ ಪ್ರಶ್ನೋತ್ತರಗಳು I ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ. 1. ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಲಯವನ್ನು ಸ್ಥಾಪಿಸಿದವನು ___ ಉತ್ತರ: ವಾರನ್ ಹೇಸ್ಟಿಂಗ್ಸ್ 2. ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು_____ ಉತ್ತರ: ಲಾರ್ಡ್ ಕಾರ್ನ್ ವಾಲಿಸ್ 3. ಖಾಯಂ ಜಮೀನ್ದಾರಿ ಪದ್ಧತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ___ರಲ್ಲಿ ಜಾರಿಗೆ ತರಲಾಯಿತು ಉತ್ತರ: 1793 4. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ____ ಉತ್ತರ: ರೈತವಾರಿ 5. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ ____ ಉತ್ತರ: ವಾರನ್ ಹೇಸ್ಟಿಂಗ್ 6. ರೆಗ್ಯುಲೇಟಿಂಗ್ ಕಾಯ್ದೆ ___...