ಭಾರತದಲ್ಲಿ ಬ್ರಿಟಿಷ ಆಳ್ವಿಕೆಯ ಪರಿಣಾಮಗಳು | ಅಧ್ಯಾಯ 3 | 10ನೇ ತರಗತಿ ಸಮಾಜ ವಿಜ್ಞಾನ | 10th Social Science New Text Book Chapter 3 |

SSLC Social Science New Text Book Question Ans Chapter 3
ಭಾರತದಲ್ಲಿ ಬ್ರಿಟಿಷ ಆಳ್ವಿಕೆಯ ಪರಿಣಾಮಗಳು

10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕರಣೆ ಹೊಂದಿರುವ ಪಠ್ಯಪುಸ್ತಕದಲ್ಲಿ ಅಭ್ಯಾಸ ಭಾಗದಲ್ಲಿಯ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಇಲ್ಲಿ ಅಧ್ಯಯನ ಮಾಡುವುದಕ್ಕಾಗಿ ಸಿದ್ದಪಡಿಸಲಾಗಿದೆ. ಇವುಗಳನ್ನು ಅಧ್ಯಯನಕ್ಕಾಗಿ ಮಾದರಿ ಉತ್ತರಗಳನ್ನಾಗಿ ತೆಗೆದುಕೊಂಡು ಅಭ್ಯಾಸ ಮಾಡಿಕೊಳ್ಳಬಹುದು.


ಅಧ್ಯಾಯ - 3 ಭಾರತದಲ್ಲಿ ಬ್ರಿಟಿಷ ಆಳ್ವಿಕೆಯ ಪರಿಣಾಮಗಳು

ಅಭ್ಯಾಸದ ಪ್ರಶ್ನೋತ್ತರಗಳು

I ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.

1. ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಲಯವನ್ನು ಸ್ಥಾಪಿಸಿದವನು ___

ಉತ್ತರ: ವಾರನ್ ಹೇಸ್ಟಿಂಗ್ಸ್

2. ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು_____

ಉತ್ತರ: ಲಾರ್ಡ್ ಕಾರ್ನ್ ವಾಲಿಸ್

3. ಖಾಯಂ ಜಮೀನ್ದಾರಿ ಪದ್ಧತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ___ರಲ್ಲಿ ಜಾರಿಗೆ ತರಲಾಯಿತು

ಉತ್ತರ: 1793

4. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ____

ಉತ್ತರ: ರೈತವಾರಿ

5. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ ____

ಉತ್ತರ: ವಾರನ್ ಹೇಸ್ಟಿಂಗ್

6. ರೆಗ್ಯುಲೇಟಿಂಗ್ ಕಾಯ್ದೆ ____ರಲ್ಲಿ ಜಾರಿಗೆ ಬಂದಿತು.

ಉತ್ತರ: 1773

ಭಾರತದಲ್ಲಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಷ್ಟು?

II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ

1. ಈಸ್ಟ್ ಇಂಡಿಯಾ ಕಂಪನಿ ಮೂಲಕ ದೇಶದಲ್ಲಿ ಬ್ರಿಟಿಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇಷಿಸಿರಿ.

ಉತ್ತರ: 1772ರಲ್ಲಿ ಗೌವರ್ನರ್ ಆಗಿ ಅಧಿಕಾರ ವಹಿಸಿಕೊಂಡ ವಾರನ್ ಹೇಸ್ಟಿಂಗ್ಸ್ ನು ಜಾರಿಗೆ ತಂದ ಯೋಜನೆಯ ಪ್ರಕಾರ ಪ್ರತಿ ಜಿಲ್ಲೆಯು ಎರಡು ಬಗೆಯ ನ್ಯಾಯಾಲಯಗಳನ್ನು ಹೊಂದಿರಬೇಕಿತ್ತು. ಅವುಗಳೆಂದರೆ :

1. ದಿವಾನಿ ಅದಾಲತ್ ಎಂಬ ನಾಗರೀಕ ನ್ಯಾಯಾಲಯಗಳು &

2.ಫೌಜುದಾರಿ ಅದಾಲತ್ ಎಂಬ ಅಪರಾಧ ನ್ಯಾಯಲಯಗಳು.

ಇಲ್ಲಿ ನಾಗರಿಕ ನ್ಯಾಯದಾನದ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂ ಶಾಸ್ತ್ರ ಗ್ರಂಥಗಳ ಪ್ರಕಾರ ಮತ್ತು ಮುಸ್ಲಿಮರಿಗೆ ಷರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು.

ಅಪರಾಧ ಪ್ರಕರಣಗಳಿಗೆ ಬಂದಾಗ ಎಲ್ಲರಿಗೂ ಇಸ್ಲಾಂ ಕಾನೂನುಗಳ ಅನುಸಾರ ವಿಚಾರಣೆ ನಡೆಸಲಾಗುತ್ತಿತ್ತು.

ಕ್ರಮೇಣ ಬ್ರಿಟಿಷ್ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರಲಾಯಿತು.

ಇಲ್ಲಿ ನಾಗರಿಕ ನ್ಯಾಯದಾನದ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂ ಶಾಸ್ತ್ರ ಗ್ರಂಥಗಳ ಪ್ರಕಾರ ಮತ್ತು ಮುಸ್ಲಿಮರಿಗೆ ಷರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು.

ಅಪರಾಧ ಪ್ರಕರಣಗಳಿಗೆ ಬಂದಾಗ ಎಲ್ಲರಿಗೂ ಇಸ್ಲಾಂ ಕಾನೂನುಗಳ ಅನುಸಾರ ವಿಚಾರಣೆ ನಡೆಸಲಾಗುತ್ತಿತ್ತು.

ಕ್ರಮೇಣ ಬ್ರಿಟಿಷ್ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರಲಾಯಿತು.

ನಾಗರಿಕ ನ್ಯಾಯಾಲಯಗಳು ಯೂರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸತುತ್ತಿದ್ದವು.

ಅಪರಾಧ ನ್ಯಾಯಾಲಯಗಳು ‘ಕಾಜಿಗಳ ಅಧೀನದಲ್ಲಿದ್ದರೂ ಯುರೋಪಿಯನ್ನರ ಮೇಲ್ವಿಚಾರಣೆಯಲ್ಲಿಯೇ ಕಾರ್ಯನಿರ್ವಹಿಸಬೇಕಾಗಿತ್ತು.


2. ಬ್ರಿಟಿಷರ ಕಾಲದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳಾವುವು?

ಉತ್ತರ: ಲಾರ್ಡ್ ಕಾರ್ನ್ವಾಲೀಸನು ಪ್ರಥಮತ: ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದನು.

ಇವನು ‘ಸೂಪರಿಡೆಂಟ್ ಆಫ್ ಪೋಲೀಸ್ (SP) ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದನು.

1793ರಲ್ಲಿ ಪ್ರತಿ ಜಿಲ್ಲೆಯನ್ನು ‘ಠಾಣೆಗಳನ್ನಾಗಿ ವಿಭಜಿಸಿ ಪ್ರತಿ ಠಾಣೆಯನ್ನು ‘ಕೊತ್ವಾಲರ ಅಧಿನದಲ್ಲೂ, ಹಳ್ಳಿಗಳು ‘ಚೌಕಿದಾರರ ಅಧೀನದಲ್ಲೂ ಇರುವಂತೆ ಮಾಡಿದನು.

ಕೊತ್ವಲರು ಹಳ್ಳಿಗಳ ಮಟ್ಟದಲ್ಲಿ ಕಳ್ಳತನ, ಅಪರಾಧಗಳು, ದರೋಡೆಗಳ ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತಿದ್ದರು.

1781ರಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ರನ್ನು ನೆಮಕ ಮಾಡುವ ಪದ್ದತಿ ಜಾರಿಗೊಂಡಿತು.

ಪೋಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ರ ಅಧೀನಕ್ಕೊಳಪಟ್ಟರು.

ಪೊಲೀಸ್ ವ್ಯವಸ್ಥೆಯು ನಿರಂತರ ಬದಲಾವಣೆಗೆ ಒಳಗಾಯಿತು.

1861ರಲ್ಲಿ ‘ಪೊಲೀಸ್ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

ಆದರೆ ಅಧಿಕಾರಿಗಳ ನೇಮಕಾತಿಯಲ್ಲಿ ಭಾರತೀಯರಿಗೆ ಅವಕಾಶವಿರಲಿಲ್ಲ.

1902ರ ಪೊಲೀಸ್ ಕಮಿಷನ್ ಕಾಯ್ದೆಯು ವಿದ್ಯಾರ್ಹತೆಯನ್ನು ಪಡೆದವರನ್ನು ಅಧಿಕಾರಿ ಹುದ್ದೆಗೆ ನೇಮಿಸುವ ಅವಕಾಶವನ್ನು ಕಲ್ಪಿಸಿತು. ಇಷ್ಟಾದರೂ ಭಾರತೀಯರ ಬಗೆಗೆ ಇದ್ದ ತಾರತಮ್ಯ ಕಡಿಮೆಯಾಗಲಿಲ್ಲ.


3. ಖಾಯಂ ಜಮೀನ್ದಾರಿ ಪದ್ಧತಿಯು ರೈತರನ್ನು ‘ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ, ಸಾಲದಲ್ಲೇ ಸಾಯುವಂತೆ ಮಾಡಿತು. ಹೇಗೆ? ವಿಮರ್ಶಿಸಿ.

ಉತ್ತರ: ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಲಾರ್ಡ್ ಕಾರ್ನ್ವಾಲೀಸನು 1793ರಲ್ಲಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಹೊಸ ಕಂದಾಯ ಪದ್ಧತಿಯನ್ನು ಜಾರಿಗೊಳಿಸದನು. ಇದನ್ನು ಖಾಯಂ ಜಮೀನ್ದಾರಿ ಪದ್ಧತಿ ಎಂದು ಕರೆಯಲಾಯಿತು.

ಈ ಪದ್ಧತಿಯಲ್ಲಿ ಜಮೀನ್ದಾರರು ಭೂ ಮಾಲೀಕನಾದನು.

ಈ ಹೊಸ ಯೋಜನೆಯ ಪ್ರಕಾರ ಜಮೀನ್ದಾರನು ಪ್ರತಿವರ್ಷವೂ ನಿರ್ದಿಷ್ಟ ದಿನಕ್ಕೆ ಮೊದಲೇ ಅವನು ಒಪ್ಪಿಕೊಂಡಿದ್ದ ಕಂದಾಯದ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಬೇಕಿತ್ತು.

ಭೂಮಾಲೀಕನಿಗೆ ಈ ಪದ್ದತಿಯಿಂದ ಹೆಚ್ಚಿನ ಲಾಭವಾಯಿತು.

ಏಕೆಂದರೆ ಸರಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತಕ್ಕಿಂತ ಹೆಚ್ಚಿಗೆ ವಸೂಲಿ ಮಾಡಿದ ಹಣವನ್ನು ಅವನೇ ಇಟ್ಟುಕೊಳ್ಳಬಹುದಾಗಿತ್ತು.

ಬರಗಾಲ (ಅನಾವೃಷ್ಟಿ) ಅಥವಾ ವಿಪರೀತ ಮಳೆ ಅತಿವೃಷ್ಟಿಯ ಕಾರಣದಿಂದ ಕಂದಾಯವನ್ನು ವಸೂಲಿ ಮಾಡಲು ಸಾಧ್ಯವಾಗದೆ ಸರಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತವನ್ನು ಸಲ್ಲಿಸಲಾಗದಿದ್ದರೆ, ಬ್ರಿಟಿಷ್ ಸರಕಾರವು ಭೂಮಿ ಒಡೆತನವನ್ನು ಅವನಿಂದ ಕಸಿದುಕೊಳ್ಳುತ್ತಿತ್ತು.

ಈ ಪದ್ದತಿಯಿಂದ ಬ್ರಿಟಿಷರಿಗೆ ಮತ್ತು ಜಮೀನ್ದಾರರಿಗೆ ಲಾಭವಾಯಿತೇ ವಿನ: ರೈತರಿಗಾಗಲಿಲ್ಲ.

ಬ್ರಿಟಿಷರು ತಮಗೆ ನೆರವಾಗುವ ಹೊಸ ಸಾಮಾಜಿಕ ವರ್ಗವಾದ ಜಮೀನ್ದಾರರನ್ನು ಸೃಷ್ಟಿ ಮಾಡಿದರು.

ರೈತರು, ರೈತ ಕೂಲಿಕಾರ್ಮಿಕರು ಜಮೀನ್ದಾರರ ಭೂಮಿಯಲ್ಲಿ ಕೆಲಸ ಮಾಡಲು ನಿರಂತರ ಅವಕಾಶಳೂ ಸಿಗದೆ ಬಹುಮುಖಿ ಶೋಷಣೆಗೆ ಒಳಗಾದರು ಅತಂತ್ರ ಸ್ಥಿತಿಯಲ್ಲೇ ಬದುಕನ್ನು ಕಳೆಯತೊಡಗಿದರು.

ಚಾರ್ಲ್ಸ್ ಮೆಟಕಾಫ್ ಹೇಳುವಂತೆ ಬ್ರಿಟಿಷ್ ಭೂಕಂದಾಯ ನೀತಿಗಳಿಂದ “ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು.”


4. ರೈತವಾರಿ ಪದ್ದತಿಯು ಒಳಗೊಂಡಿದ್ದ ಪ್ರಮುಖಾಂಶಗಳು ಯಾವುವು?

ಉತ್ತರ: ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಬಾರಮಹಲ್ ಪ್ರಾಂತ್ಯದ್ದಲ್ಲಿ 1792ರಲ್ಲಿ ಅಲೆಕ್ಸಾಂಡರ್ ರೀಡ್ ಎನ್ನುವವನು ಜಾರಿಗೊಳಿಸಿದನು.

ಈ ಪದ್ದತಿಯನ್ನು ಥಾಮಸ್ ಮನ್ರೂ ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ 1801ರ ನಂತರ ಜಾರಿಗೊಳಿಸಿದನು.

ಈ ಪದ್ದತಿಯ ಪ್ರಕಾರ ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕವನ್ನು ಕಲ್ಪಿಸಲಾಯಿತು.

ಭೂಮಿಯನ್ನು ಉಳುಮೆ ಮಾಡುತ್ತಿದ್ದವನನ್ನು ಅದರ ಮಾಲಿಕನೆಂದು ಸರಕಾರ ಮಾನ್ಯ ಮಾಡಿತು.

ಅವನೇ ನೇರವಾಗಿ ತಾನು ಕೃಷಿ ಭೂಮಿಯಲ್ಲಿ ಪಡೆದ ಉತ್ಪನ್ನದ ಶೇಕಡ 50ರಷ್ಟು ಭಾಗವನ್ನು ಕಂದಾಯದ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಯಿತು.

ಕಂದಾಯವನ್ನು 30 ವರ್ಷಗಳ ಅವಧಿಗೆ ಎಂದು ನಿರ್ಧರಿಸಲಾಯಿತು. ನಂತರ ಅದನ್ನು ಪರಾಮರ್ಶೆಗೂ ಒಳಪಡಿಸಬಹುದಾಗಿತ್ತು.

ಸಣ್ಣ ರೈತರಿಗೆ ತಮ್ಮ ಅಧೀನದಲ್ಲಿದ್ದ ಭೂಮಿ ಮೇಲಿನ ಹಕ್ಕನ್ನು ನೀಡಿತ್ತಾದರೂ, ಭೂಕಂದಾಯವನ್ನು ಈ ಪದ್ದತಿಯು ಹೆಚ್ಚಿನ ವಾರ್ಷಿಕ ಮೊತ್ತಕ್ಕೆ ನಿಗದಿಪಡಿಸಿದ್ದರಿಂದ ರೈತರು ಸಂಕಷ್ಟಗಳಿಗೆ ಒಳಗಾದರು.

ಕಂದಾಯ ವಸೂಲು ಮಾಡುವ ಅಧಿಕಾರಿಗಳು ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸುತ್ತಿದ್ದರು.

ಬೆಳೆಗಳು ಸರಿಯಾಗಿ ಫಸಲು ನೀಡದ ಸಂದರ್ಭದಲ್ಲಿ ರೈತರು ಹಣದ ಲೇವಾದೇವಿಗಾರರಿಂದ ಸಾಲ ತೆಗೆದುಕೊಂಡು, ಮರುಪಾವತಿಸಲಾಗದೆ ಅವರಿಗಿದ್ದ ಸಣ್ಣ ಪುಟ್ಟ ಜಮೀನನ್ನು ಮಾರಾಟ ಮಾಡುವಂತಾಯಿತು.

ರೈತರ ಒಳಿತಿಗಾಗಿ ರೈತವಾರಿ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದು ಬ್ರಿಟಿಷ್ ಸರ್ಕಾರ ಹೇಳಿದ್ದರೂ, ಗರಿಷ್ಠ ಪ್ರಮಾಣದ ರೈತರು ಸಾಲದ ಸುಳಿಗೆ ಸಿಲುಕಿದ್ದು ಈ ಪದ್ದತಿಯಿಂದಲೇ ಎನ್ನುವುದು ವಿಪರ್ಯಾಸ.


5. ಬ್ರಿಟಿಷರ ಕಂದಾಯ ನೀತಿಗಳಿಂದ ಉಂಟಾದ ಪರಿಣಾಮಗಳಾವುವು?

ಉತ್ತರ: 1. ನಿಜವಾದ ರೈತರನ್ನು ಶೋಷಿಸುವ ಹೊಸ ಸಾಮಾಜಿಕ ವರ್ಗವಾದ ಜಮೀನ್ದಾರಿ ಸಮುದಾಯ ಸೃಷ್ಟಿಯಾಯಿತು.

2. ಜಮೀನ್ದಾರರ ಶೋಷಣೆಗೆ ಒಳಗಾದ ರೈತರು ವಿವಿಧ ಬಗೆಯ ಸಂಕಷ್ಟಗಳಿಗೆ ಒಳದಾದರು. ಕ್ರಮೇಣ ನಿರ್ಗತಿಕರಾದರು.

3. ಭೂಮಿ ಮಾರಾಟದ ವಸ್ತುವಾಯಿತು. ಇದನ್ನು ಪರಭಾರೆ  ಮಾಡಿ ಹಣವನ್ನು ಸಾಲವಾಗಿ ಪಡೆಯಬಹುದಾಗಿತ್ತು.

4. ಅನೇಕ ಜಮೀನ್ದಾರರೂ ಕೂಡ ಕಂದಾಯವನ್ನು ಸಲ್ಲಿಸುವ ಸಲುವಾಗಿ ತಮ್ಮ ಜಮೀನನ್ನು ಪರಭಾರೆ ಮಾಡಿದರು..

5. ಕೃಷಿ ಕ್ಷೇತ್ರವು ವಾಣಿಜ್ಯೀಕರಣಗೊಂಡು, ಇಂಗ್ಲೇಂಡಿನಲ್ಲಾದ ಕೈಗಾರಿಕಾಕರಣದಿಂದ ಅಲ್ಲಿನ ಕೈಗಾರಿಕೆಗಳಿಗೆ ಬೇಡಿದ ಕಚ್ಚಾವಸ್ತುಗಳನ್ನೇ ಬೆಳೆಯಬೇಕಾಯಿತು.

6. ಹಣದ ಲೇವಾದೇವಿಗಾರರು ಬಲಿಷ್ಠರಾಗತೊಡಗಿದರು.


6. ಬ್ರಿಟಿಷ್ ಶಿಕ್ಷಣದಿಂದ ಉಂಟಾದ ಪರಿಣಾಮಗಳ ಪಟ್ಟಿ ಮಾಡಿ

ಉತ್ತರ: 1. ಭಾರತೀಯರು ಆಧುನಿಕತೆ, ಜಾತ್ಯತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾ ಕ್ರಮದ ಜೊತೆಗೆ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.

2. ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ದೊರೆಯಿತು. ಇದರಿಂದ ವಿದ್ಯಾವಂತ ವರ್ಗದ ಆಲೋಚನೆ ಕ್ರಮದಲ್ಲೂ ಏಕತೆಯ ಸ್ವರೂಪವನ್ನು ಕಾಣುತ್ತೇವೆ.

3. ವೃತ್ತ ಪತ್ರಿಕೆಗಳು ಹುಟ್ಟಿ ಬೆಳೆಯತೊಡಗಿದವು. ವಿಶೇಷವಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಮೂಲಕ ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮ ಅಭಿಪ್ರಾಯ ಬೆಳೆಯಲು ಸಾಧ್ಯವಾಯಿತು.

4. ಹೊಸ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಹುಟ್ಟಿಕೊಂಡವು.

5. ಜೆ.ಎಸ್.ಮಿಲ್. ರೂಸೋ, ಮಾಂಟೆಸ್ಕೋ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು.

6. ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು.

7. ಭಾರತೀಯರು ತಮ್ಮ ಸಮೃದ್ಧ ಪರಂಪರೆಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು.


7. ರೆಗ್ಯುಲೇಟಿಂಗ್ ಕಾಯ್ದೆ ಹೊಂದಿದ್ದ ನಿಬಂಧನೆಗಳಾವುವು?

ಉತ್ತರ: 1. ಈ ಕಾಯ್ದೆಯ ಪ್ರಕಾರ ಬಂಗಾಳದ ಪ್ರೆಸಿಡೆನ್ಸಿಯು ಉಳಿದ ಎರಡು ಪ್ರೆಸಿಡೆನ್ಸಿಗಳ ಮೇಲೆ ಅಧಿಕಾರವನ್ನು ಪಡೆಯಿತು.

2. ಬಂಗಾಳದ ಗವರ್ನರನ್ನು ಮೂರು ಪ್ರೆಸಿಡೆನ್ಸಿಗಳ ಗವರ್ನರ್ ಆದನು.

3. ಗವರ್ನರ್ ಜನರಲ್‌ನಿಗೆ ಬಾಂಬೆ ಮತ್ತು ಮದರಾಸು ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.

4. ಬಂಗಾಳ ಸರ್ಕಾರದ ಮತ್ತು ಇಂಗ್ಲೆಂಡಿನ ನಿರ್ದೇಶಕ ಮಂಡಳಿಯ  (Court of director ) ಪೂರ್ವಾನುಮತಿಯಿಲ್ಲದೆ ಬಾಂಬೆ ಮತ್ತು ಮದರಾಸು ಸರ್ಕಾರಗಳು ಯಾರ ಮೇಲೂ ಯುದ್ಧ ಘೋಷಿಸುವಂತಿಲ್ಲ ಅಥವಾ ಶಾಂತಿ ಸಂಧಾನವನ್ನು ನಡೆಸುವಂತಿಲ್ಲ. ತೀರ ತುರ್ತಾದ ಸಂಧರ್ಭಗಳಲ್ಲಿ ಮಾತ್ರ ಇಂತಹ ನಿಬಂಧನೆಗಳಿಂದ ವಿನಾಯತಿ ಇತ್ತು.

5. ಕಲ್ಕತ್ತಾದಲ್ಲಿ ಈ ಕಾಯ್ದೆಯ ಮೇರೆಗೆ "ಸುಪ್ರೀಂಕೋರ್ಟ್" ಅನ್ನು ಸ್ಥಾಪಿಸಲಾಯಿತು. ಈ ಕೇಂದ್ರ ನ್ಯಾಯಾಲಯದಲ್ಲಿ ಒಬ್ಬರು ಮುಖ್ಯ ನ್ಯಾಯಾಧೀಶರು ಮತ್ತು ಮೂರು ಜನ ಸಾಮಾನ್ಯ ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದರು.


8. 1858ರ ಭಾರತ ಸರ್ಕಾರದ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?

ಉತ್ತರ: 1. ಈಸ್ಟ್ ಇಂಡಿಯಾ ಕಂಪನಿಯ ಮಾನ್ಯತೆ ರದ್ದುಗೊಳಿಸಿ, ಭಾರತವನ್ನು ರಾಣಿಯವರ ಆಡಳಿತಕ್ಕೆ ವರ್ಗಾಯಿಸಲಾಯಿತು.

2. ಗವರ್ನರ್ ಜನರಲ್ ಹುದ್ದೆಯ ಪದನಾಮವನ್ನು ಬದಲಾಯಿಸಿ “ವೈಸರಾಯ್ ಎಂಬ ಪದನಾಮವನ್ನು ನೀಡಿದರು. ವೈಸರಾಯ್ ಆಗಿ “ಲಾರ್ಡ್ ಕ್ಯಾನಿಂಗ್ ನೇಮಕಗೊಂಡರು.

3. “ಸೆಕ್ರಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಸ್ಥಾನವನ್ನು ಬ್ರಿಟಿಷ್ ಸರ್ಕಾರ ಸೃಷ್ಟಿಸಿತು. ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ಇವರು ಭಾರತದ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದರು.

4. ಇವರಿಗೆ ಸಹಾಯ ಮಾಡಲು 15 ಸದಸ್ಯರನ್ನೊಳಗೊಂಡ ಭಾರತ ಮಂಡಳಿ (ಕೌನ್ಸಿಲ್ ಆಫ್ ಇಂಡಿಯಾ) ಅಸ್ತಿತ್ವಕ್ಕೆ ಬಂದಿತು.


9. 1935ರ ಭಾರತ ಸರ್ಕಾರದ ಕಾಯ್ದೆ ‘ಭಾರತ ಸಂವಿಧಾನದ ಬುನಾದಿ ಸಮರ್ಥಿಸಿ.

ಉತ್ತರ: ಸಂವಿಧಾನದ ಬಹುತೇಕ ಅಂಶಗಳು ಈ ಕಾಯ್ದೆಯನ್ನೆ ಆಧರಿಸಿ ರಚಿಸಲಾಗಿದೆ.

ಈ ಕಾಯ್ದೆಯು ಭಾರತಕ್ಕೆ ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚಿಸಲು ಅವಕಾಶ ನೀಡಿತು.

ಬ್ರಿಟಿಷ್ ಪ್ರಾಂತ್ಯಗಳ, ದೇಶಿಯ ಸಂಸ್ಥನಗಳು ಹಾಗೂ ಆಶ್ರಿತ ರಾಜರನ್ನೊಳಗೊಂಡ ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ ನೀಡಿತು.

ಕೇಂದ್ರದಲ್ಲಿ “ದ್ವಿ-ಸರಕಾರವನ್ನು ( Diarchy ) ನೀಡಿತು.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿತು.

ಪ್ರಾಂತ್ಯಗಳಲ್ಲಿ “ದ್ವಿ ಸರಕಾರ ಪದ್ದತಿಯನ್ನು ರದ್ದುಗೊಳಿಸಿ, ಪ್ರಾಂತ್ಯಗಳಿಗೆ ಸ್ವಾಯತ್ತತೆ ನೀಡಲಾಯಿತು.

ಭಾರತದಲ್ಲಿ “ಫೇಡರಲ್ ಕೋರ್ಟ್ ಸ್ಥಾಪನೆಗೆ ಅವಕಾಶ ನೀಡಲಾಯಿತು.


10. 1919ರ ಕಾಯ್ದೆಯ ಪ್ರಮುಖಾಂಶಗಳು ಯಾವುವು?

ಉತ್ತರ: 1. ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ (Bi-Cameral)  ರಚನೆಗೆ ಅವಕಾಶ ನೀಡಲಾಯಿತು. ಅವುಗಳೆಂದರೆ, ಶಾಸಕಾಂಗ ಸಭೆ (ಕೆಳಮನೆ) ಮತ್ತು ರಾಜ್ಯಗಳ ಪರಿಷತ್ತು (ಮೇಲ್ಮನೆ) ರಚಿಸಲಾಯಿತು.

2. ಪ್ರಾಂತ್ಯಗಳಲ್ಲಿ “ದ್ವಿಸರಕಾರ ( Diarchy )  ಪದ್ದತಿಗೆ ಅವಕಾಶ ನೀಡಲಾಯತು.

3. ಭಾರತಕ್ಕೆ ಒಬ್ಬ ಹೈಕಮಿಷನರ್‌ನ್ನು ನೇಮಕ ಮಾಡಲಾಯತು.

4. ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭರವಸೆ ನೀಡಲಾಯಿತು.

5. ಕೇಂದ್ರದ ಬಜೆಟ್‌ನಿಂದ ಪ್ರಾಂತ್ಯಗಳ ಬಜೆಟನ್ನು ಬೇರ್ಪಡಿಸಲಾಯಿತು.

6. “ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಮುಸ್ಲಿಂ, ಸಿಖ್, ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್‌ರಿಗೆ ವಿಸ್ತರಿಸಲಾಯಿತು.






10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon