SSLC Science Passing Package 2023 Part 4 | 10th Class Science Passing package 2023 Part 4
SSLC Science Passing Package 2023 Part 4 | 10th Class Science Passing package 2023 Part 4 ಜೀವಶಾಸ್ತ್ರ: ಕಾರಣ ಕೊಡಿ ಪ್ರಶ್ನೆಗಳು 1) ಉಸಿರಾಟವನ್ನು ಬಹಿರುಷ್ಣ ಕ್ರಿಯೆ ಎಂದು ಏಕೆ ಪರಿಗಣಿಸಲಾಗಿದೆ? ಉ: ಉಸಿರಾಟ ಕ್ರಿಯೆಯಲ್ಲಿ ಗ್ಲುಕೋಸ್ ನಮ್ಮ ದೇಹದ ಜೀವಕೋಶಗಳ ಮೈಟೋಕಾಂಡ್ರಿಯಾದಲ್ಲಿ ಆಕ್ಸಿಜನ್ ನೊಂದಿಗೆ ಉತ್ಕರ್ಷಣ ಕ್ರಿಯೆಗೆ ಒಳಗಾಗಿ ಮತ್ತು ಶಕ್ತಿಯನ್ನು ಒದಗಿಸುತ್ತದೆ. ಉಷ್ಣ ಬಿಡುಗಡೆಯಾಗುವುದರಿಮದ ಉಸಿರಾಟವನ್ನು ಬಹಿರುಷ್ಣಕ ಕ್ರಿಯೆ ಎನ್ನುವರು. 2) ಮೊಸರು ಮತ್ತು ಹುಳಿ ಪದಾರ್ಥಗಳನ್ನು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಏಕೆ ಸಂಗ್ರಹಿಸಿ ಇಡಬಾರದು? ಉ: ಮೊಸರು ಮತ್ತು ಹುಳಿ ಪದಾರ್ಥಗಳಲ್ಲಿರುವ ಆಮ್ಲವು ಹಿತ್ತಾಳೆ ಮತ್ತು ತಾಮ್ರ ದೊಂದಿಗೆ ವರ್ತಿಸಿ ಹೈಡ್ರೋಜನ್ ಅನಿಲ ಮತ್ತು ವಿಷಕಾರಿ ವಸ್ತುಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ಮೊಸರು ಹುಳಿ ಪದಾರ್ಥ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಡಬಾರದು. 3) f-ಬ್ಲಾಕ್ ಧಾತುಗಳನ್ನು ಪ್ರತ್ಯೇಕವಾಗಿಡಲಾಗಿದೆ ಉ: ಧಾತುಗಳ ಗುಣಗಳು ಕಂಬಸಾಲಿನ ಸಾಮ್ಯತೆಗಿಂತ ಅಡ್ಡಸಾಲಿನ ಸಾಮ್ಯತೆ ಅಧಿಕವಾಗಿದೆ. 4) ಹೀಲಿಯಂ ಅನ್ನು 18ನೇ ವರ್ಗಕ್ಕೆ ಸೇರಿಸಲಾಗಿದೆ ಉ: ಹೀಲಿಯಂ ಒಂದು ಜಡ ಅನಿಲವಾಗಿದ್ದು, ವೇಲೆನ್ಸಿ ಸೊನ್ನೆ ಆಗಿದೆ. 5) ಪರಿಸರದಲ್ಲಿ ಶಕ್ತಿಯ ಹರಿವು ಏಕ ಮುಖವಾಗಿರಲು ಕಾರಣವೇನು? ಉ: ಪರಿಸರದ ವಿವಿಧ ಪೋಷಣಾಸ್ತರಗಳ ನಡುವೆ ಶಕ್ತಿ ವರ್ಗಾವಣೆಯ...