SSLC Science Passing Package 2023 Part 4 | 10th Class Science Passing package 2023 Part 4

SSLC Science Passing Package 2023 Part 4 | 10th Class Science Passing package 2023 Part 4

ಜೀವಶಾಸ್ತ್ರ:

ಕಾರಣ ಕೊಡಿ ಪ್ರಶ್ನೆಗಳು



1) ಉಸಿರಾಟವನ್ನು ಬಹಿರುಷ್ಣ ಕ್ರಿಯೆ ಎಂದು ಏಕೆ ಪರಿಗಣಿಸಲಾಗಿದೆ?
ಉ: ಉಸಿರಾಟ ಕ್ರಿಯೆಯಲ್ಲಿ ಗ್ಲುಕೋಸ್ ನಮ್ಮ ದೇಹದ ಜೀವಕೋಶಗಳ ಮೈಟೋಕಾಂಡ್ರಿಯಾದಲ್ಲಿ ಆಕ್ಸಿಜನ್ ನೊಂದಿಗೆ ಉತ್ಕರ್ಷಣ ಕ್ರಿಯೆಗೆ ಒಳಗಾಗಿ ಮತ್ತು ಶಕ್ತಿಯನ್ನು ಒದಗಿಸುತ್ತದೆ. ಉಷ್ಣ ಬಿಡುಗಡೆಯಾಗುವುದರಿಮದ ಉಸಿರಾಟವನ್ನು ಬಹಿರುಷ್ಣಕ ಕ್ರಿಯೆ ಎನ್ನುವರು.

2) ಮೊಸರು ಮತ್ತು ಹುಳಿ ಪದಾರ್ಥಗಳನ್ನು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಏಕೆ ಸಂಗ್ರಹಿಸಿ ಇಡಬಾರದು?
ಉ: ಮೊಸರು ಮತ್ತು ಹುಳಿ ಪದಾರ್ಥಗಳಲ್ಲಿರುವ ಆಮ್ಲವು ಹಿತ್ತಾಳೆ ಮತ್ತು ತಾಮ್ರ ದೊಂದಿಗೆ ವರ್ತಿಸಿ ಹೈಡ್ರೋಜನ್ ಅನಿಲ ಮತ್ತು ವಿಷಕಾರಿ ವಸ್ತುಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ಮೊಸರು ಹುಳಿ ಪದಾರ್ಥ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಡಬಾರದು.

3) f-ಬ್ಲಾಕ್ ಧಾತುಗಳನ್ನು ಪ್ರತ್ಯೇಕವಾಗಿಡಲಾಗಿದೆ
ಉ: ಧಾತುಗಳ ಗುಣಗಳು ಕಂಬಸಾಲಿನ ಸಾಮ್ಯತೆಗಿಂತ ಅಡ್ಡಸಾಲಿನ ಸಾಮ್ಯತೆ ಅಧಿಕವಾಗಿದೆ.

4) ಹೀಲಿಯಂ ಅನ್ನು 18ನೇ ವರ್ಗಕ್ಕೆ ಸೇರಿಸಲಾಗಿದೆ
ಉ: ಹೀಲಿಯಂ ಒಂದು ಜಡ ಅನಿಲವಾಗಿದ್ದು, ವೇಲೆನ್ಸಿ ಸೊನ್ನೆ ಆಗಿದೆ.

5) ಪರಿಸರದಲ್ಲಿ ಶಕ್ತಿಯ ಹರಿವು ಏಕ ಮುಖವಾಗಿರಲು ಕಾರಣವೇನು?
ಉ: ಪರಿಸರದ ವಿವಿಧ ಪೋಷಣಾಸ್ತರಗಳ ನಡುವೆ ಶಕ್ತಿ ವರ್ಗಾವಣೆಯಾಗುವಾಗ ಮತ್ತು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತನೆಗೊಳ್ಳುವಾಗ ಸ್ವಲ್ಪ ಪ್ರಮಾಣದ ಶಕ್ತಿಯು ಮತ್ತೆ ಬಳಸಲಾಗದ ಸ್ವರೂಪಗಳಲ್ಲಿ ಪರಿಸರದಲ್ಲಿ ಕಳೆದುಹೋಗುತ್ತದೆ. ಆದ್ದರಿಂದ ಶಕ್ತಿಯ ಹರಿವು ಏಕ ಮುಖವಾಗಿರುತ್ತದೆ.

6) ವಾತಾವರಣದ ಮೇಲಿನ ಸ್ತರಗಳಲ್ಲಿ ಓಝೋನ್ ಪದರವು ಶಿಥಿಲಗೊಳ್ಳುತ್ತಿರಲು ಕಾರಣವೇನು?
ಉ: ಕ್ಲೋರೋಫ್ಲೋರೋ ಕಾರ್ಬನ್, ಹ್ಯಾಲೋಜನ್ ಗಳು, ಮೀಥೇನ್, ಕಾರ್ಬನ್ ಟೆಟ್ರಾ ಕ್ಲೋರೈಡ್ ಗಳಂಥ ರಾಸಾಯನಿಕ ಗಳ ಕಾರಣದಿಂದ ಓಝೋನ್ ಪದರವು ಶಿಥಿಲವಾಗುತ್ತಿದೆ.

7) ಆಹಾರ ಸರಪಳಿಗಳಲ್ಲಿ ಸಾಮಾನ್ಯವಾಗಿ ನಾಲ್ಕಕ್ಕಿಂತ ಹೆಚ್ಚು ಪೋಷಣಾಸ್ತರಗಳು ಇರುವುದಿಲ್ಲ ಏಕೆ?
ಉ: ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಹರಿವು ಏಕಮುಖವಾಗಿದ್ದು ಪ್ರತಿ ಪೋಷಣಾಸ್ತರದಲ್ಲಿ ಬಳಕೆಗೆ ಒದಗದ ಶಕ್ತಿಯು ಉಷ್ಣದ ರೂಪದಲ್ಲಿ ಪರಿಸರವನ್ನು ಸೇರುತ್ತದೆ. ಈ ಕಾರಣಕ್ಕಾಗಿಯೇ ಆಹಾರ ಸರಪಳಿಗಳಲ್ಲಿ ಸಾಮಾನ್ಯವಾಗಿ ನಾಲ್ಕಕ್ಕಿಂತ ಹೆಚ್ಚು ಪೋಷಣಾಸ್ತರಗಳು ಇರುವುದಿಲ್ಲ.

8) ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಗಳಿಸಿಕೊಂಡು ಗುಣಗಳು ಅನುವಂಶಿಯವಾಗುವುದಿಲ್ಲ ಏಕೆ?
ಉ: ಅಲೈಂಗಿಕ ಅಂಗಾಂಶಗಳಲ್ಲಾದ ಬದಲಾವಣೆಯು ಲಿಂಗಾಣು ಕೋಶದ ಡಿಎನ್ ಎ ಗೆ ವರ್ಗಾವಣೆಯಾಗುವುದಿಲ್ಲ. ಆದ್ದರಿಂದ ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಗಳಿಸಿಕೊಂಡ ಗುಣಗಳು ಅನುವಂಶಿಯವಾಗುವುದಿಲ್ಲ.

9) ಸಾಮಾನ್ಯವಾಗಿ ಮಾನವನ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಉತ್ಪತ್ತಿಯಾದರೆ ಜಠರದ ಗೋಡೆಗೆ ಹಾನಿಯಾಗುವುದಿಲ್ಲ.
ಉ: ಸಾಮಾನ್ಯ ಪರಿಸ್ಥಿತಿಯಗಳಲ್ಲಿ ಜಠರದ ಗ್ರಂಥಿಯು ಆಮ್ಲದ ಜೊತೆಗೆ ಲೋಳೆಯನ್ನು ಸ್ರವಿಸುತ್ತದೆ. ಇದು ಜಠರದ ಗೋಡೆಗಳನ್ನು ಆಮ್ಲದ ಕ್ರಿಯೆಯಿಂದ ರಕ್ಷಿಸುತ್ತದೆ.

10) ಮೀನಿನ ದೇಹದಲ್ಲಿ ರಕ್ತವು ಒಂದು ಬಾರಿ ಪರಿಚಲಿಸಲು ಕೇವಲ ಒಮ್ಮೆ ಮಾತ್ರ ಹೃದಯವನ್ನು ಹಾದು ಹೋಗುತ್ತದೆ.
ಉ: ಮೀನುಗಳು ಕೇವಲ 2 ಕೋಣೆಗಳ ಹೃದಯವನ್ನು ಹೊಂದಿದ್ದು ಕಿವಿರುಗಳಿಗೆ ಪಂಪ್ ಮಾಡಲ್ಪಡುವ ರಕ್ತವು ಆಕ್ಸಿಜನ್ ಯುಕ್ತವಾಗಿರುತ್ತದೆ ಮತ್ತು ದೇಹದ ಉಳಿದ ಭಾಗಗಳಿಗೆ ನೇರವಾಗಿ ಚಲಿಸುತ್ತದೆ.

11) ಮಾನವನ ಹೃದಯದಲ್ಲಿ ಹೃದಯದ ಬಲಭಾಗ ಮತ್ತು ಎಡಭಾಗ ಪ್ರತ್ಯೇಕವಾಗಿರುವುದು.
ಉ: ಆಕ್ಸಿಜನ್ ಯುಕ್ತ ರಕ್ತ ಮತ್ತು ಆಕ್ಸಿಜನ್ ರಿಕ್ತ ರಕ್ತ ಮಿಶ್ರವಾಗದಂತೆ ಇರಿಸಲು ಸಹಾಯಕವಾಗಿದೆ. ಈ ರೀತಿ ಪ್ರತ್ಯೇಕಿಸುವಿಕೆಯು ದೇಹಕ್ಕೆ ಆಕ್ಸಿಜನ್ ಪೂರೈಕೆಯು ಹೆಚ್ಚು ಸಮರ್ಥವಾಗಿ ಆಗುವಂತೆ ಮಾಡುತ್ತದೆ.

12) ಹಲ್ಲಿನ ಸವೆತ ತಡೆಗಟ್ಟಲು ಟೂತ್ ಪೇಸ್ಟನ್ನು ಬಳಸುತ್ತಾರೆ. ಏಕೆ?
ಉ: ಬಾಯಿಯಲ್ಲಿ PH ಮೌಲ್ಯ 5.5 ಕ್ಕಿಂತ ಕಡಿಮೆಯಾದಾಗ ಆಮ್ಲೀಯತೆ ಹೆಚ್ಚಾಗಿ ಹಲ್ಲಿನ ಎನಾಮೆಲ್ ಸವೆಯುತ್ತದೆ. ಟೂತ್ ಪೇಸ್ಟ್ ಪ್ರತ್ಯಾಮ್ಲೀಯವಾಗಿರುವುದರಿಂದ ಹೆಚ್ಚುವರಿ ಆಮ್ಲವನ್ನು ತಟಸ್ಥಗೊಳಿಸಬಹುದು. ಇದರಿಂದ ಹಲ್ಲಿನ ಸವೆತ ತಡೆಗಟ್ಟಬಹುದು.

13) ಮುಟ್ಟಿದರೆ ಮುನಿ ಸಸ್ಯದ ಎಲೆಗಳನ್ನು ಮುಟ್ಟಿದಾಗ ಮಡಚಿಕೊಳ್ಳುತ್ತದೆ.
ಉ: ಮುಟ್ಟಿದರೆ ಮುನಿ ಮುಳ್ಳಿನ ಗಿಡದ ಸಸ್ಯ ಜೀವಕೋಶಗಳು ತಮ್ಮೊಳಗಿನ ನೀರಿನ ಪ್ರಮಾಣವನ್ನು ಬದಲಾಯಿಸಿ ತಮ್ಮ ಆಕಾರವನ್ನು ಬದಲಿಸುತ್ತದೆ.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon