2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ
ದ್ವಿತೀಯ ಪಿ.ಯು.ಸಿ
ಅಧ್ಯಾಯ-1
ಭಾರತೀಯ ಸಮಾಜದ ನಿರ್ಮಾಣ ಮತ್ತು
ಜನಸಂಖ್ಯಾ ಶಾಸ್ತ್ರ
I.ಒಂದು ಅಂಕದ ಪ್ರಶ್ನೆಗಳಿಗೆ
ತಲಾ ಒಂದು ವಾಕ್ಯದಲ್ಲಿ ಉತ್ತರಿಸಿ:-
1.ಡೆಮೊಗ್ರಫಿ ಎಂಬ ಪದವು ಹೇಗೆ
ಉತ್ಪತ್ತಿಯಾಗಿದೆ?
ಉ: ಡೆಮೊಗ್ರಫಿ ಎಂಬ ಪದವು
ಡೆಮೊಸ್ ಮತ್ತು ಗ್ರಾಫೆಸ್ ಎಂಬ ಎರಡು ಗ್ರೀಕ್ ಪದಗಳಿಂದ ಉತ್ಪತ್ತಿಯಾಗಿದೆ.
2.2011ರ ಜನಗಣತಿಯಲ್ಲಿ ದಾಖಲಾದ
ಲಿಂಗಾನುಪಾತ ಪ್ರಮಾಣವನ್ನು ತಿಳಿಸಿ?
ಉ: 1000 ಪುರುಷರಿಗೆ 940
ಸ್ತ್ರೀಯರು.
3.ಭಾರತ ಸರ್ಕಾರ ಕರ್ನಾಟಕದ
ಯಾವ ಜಿಲ್ಲೆಯನ್ನು ಬೇಟಿ ಪಡಾವೋ, ಬೇಟಿ ಬಚಾವೋ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದೆ?
ಉ: ಬಿಜಾಪುರ ಅಥವಾ ವಿಜಯಪುರ.
4.ಭಾರತದ ಜನಾಂಗೀಯ ಸಮೂಹಗಳಲ್ಲಿ
ಒಂದನ್ನು ಹೆಸರಿಸಿ?
ಉ: ನಿಗ್ರಿಟೊ, ಮಂಗೋಲಾಯ್ಡ್.
5.ಭಾರತಕ್ಕೆ ಕ್ರೈಸ್ತ ಧರ್ಮವನ್ನು
ಪರಿಚಯಿಸಿದವರು ಯಾರು?
ಉ: ಕ್ರಿ.ಶ.50ರಲ್ಲಿ ಸಂತಥಾಮಸ್
ಮತ್ತು ಸಂತ ಬಾರ್ಥೊಲೊಮ್ಯು.
6.ಭಾರತದ ಪ್ರಾಚೀನ ಹೆಸರುಗಳಲ್ಲಿ
ಒಂದನ್ನು ಹೆಸರಿಸಿ?
ಉ: ಭರತವರ್ಷ/ಭರತಖಂಡ/ಜಂಬೂದ್ವೀಪ.
7.ಯಾವ ವರ್ಷವನ್ನು ಜನಸಂಖ್ಯಾಶಾಸ್ತ್ರೀಯ
ವಿಭಜಕ ವರ್ಷ ಎಂದು ಕರೆಯುತ್ತೇವೆ?
ಉ: 1921
8.ಲಿಂಗಾನುಪಾತ ಎಂದರೇನು?
ಉ: 1000 ಪರುಷರಿಗೆ ಸರಾಸರಿ
ಮಹಿಳೆಯರ ಪ್ರಮಾಣ.
9.ಭಾರತದ ಯಾವುದಾದರೂ ಒಂದು
ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯವನ್ನು ಹೆಸರಿಸಿ?
ಉ: ಮುಸ್ಲಿಂ/ಸಿಖ್/ಕ್ರೈಸ್ತ/ಜೈನ/ಬೌದ್ಧ.
10.ರಾಷ್ಟ್ರೀಯ ಭಾವೈಕ್ಯತೆಗೆ
ಸವಾಲಾಗಿರುವ ಒಂದು ಅಂಶವನ್ನು ತಿಳಿಸಿ?
ಉ: ಭಾಷಾವಾದ/ಕೋಮುವಾದ/ಉಗ್ರವಾದ/ಪ್ರಾಂತೀಯವಾದ.
11.ಪ್ರಪಂಚದ ಅತ್ಯಂತ ಹಳೆಯ
ಜಲವಿವಾದ ಯಾವುದು?
ಉ: ಕಾವೇರಿ ಜಲವಿವಾದ.
II.ಎರಡು ಅಂಕದ ಪ್ರಶ್ನೆಗಳಿಗೆ
ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ:-
12.ಮಕ್ಕಳ ಲಿಂಗಾನುಪಾತ ಕುಸಿಯಲು
ಕಾರಣವಾದ ಯಾವುದಾದರು 2 ಅಂಶಗಳನ್ನು ತಿಳಿಸಿ?
ಉ: 1)ಹೆಣ್ಣು ಶಿಶುಗಳ ಹತ್ಯೆ
2)ಬಾಲ್ಯದಲ್ಲಿ ಹೆಣ್ಣುಮಕ್ಕಳ ಪೋಷಣೆಯ ನಿರ್ಲಕ್ಷ್ಯ.
13.ಡಿಮಾರು (DEMARU) ಎಂಬುದು
ಏನನ್ನು ಸೂಚಿಸುತ್ತದೆ?
ಉ: ಆಂಗ್ಲಭಾಷೆಯ “ಡಿ” ಎಂಬ
ಅಕ್ಷರವು ಮಗಳು ಎಂಬ ಅರ್ಥ “ಇ” ಎಂಬ ಅಕ್ಷರವು ನಾಶಮಾಡು (ಕೊಂದುಹಾಕುವ) ಎಂಬ ಅರ್ಥ ಸೂಚಿಸುತ್ತದೆ.
14.ಅರ್ಯನೀಕರಣದ ಪ್ರಕ್ರಿಯೆಗೆ
ಅಡ್ಡಿಯಾದ / ತೊಡಕಾದ ಎರಡು ಅಂಶಗಳನ್ನು ತಿಳಿಸಿ?
ಉ: 1)ವಿಲೀನಕ್ಕೆ ಬುಡಕಟ್ಟು ವರ್ಗಗಳ ವಿರೋಧ.
2)ವಿಲೀನಕ್ಕೆ ಪ್ರಬಲ ಸಮೂಹಗಳ ವಿರೋಧ.
3)ನಂತರ ವಲಸೆ ಬಂದವರ ವಿಲೀನದ ಸಮಸ್ಯೆ.
15.ರಾಷ್ಟ್ರೀಯ ಭಾವೈಕ್ಯತೆಯನ್ನು
ವ್ಯಾಖ್ಯಾನಿಸಿ?
ಉ: ಬೆಂಜಮಿನ್ ಪ್ರಕಾರ “ರಾಷ್ಟ್ರೀಯ
ಭಾವೈಕ್ಯತೆಯು ದೇಶವೊಂದರ ಸಮಸ್ತಜನರು ಒಂದು ಸಾಮಾನ್ಯ ಅನನ್ಯತೆಯೊಂದಿಗೆ ಸ್ವಾಂಗೀಕರಣಗೊಳ್ಳುವಿಕೆಯಾಗಿದೆ”.
16.ಕೋಮುವಾದ ಎಂದರೇನು?
ಉ: ಒಂದು ಕೋಮು/ಧರ್ಮಕ್ಕೆ
ಸೇರಿದ ಜನರು ಇನ್ನೊಂದು ಕೋಮು ಅಥವಾ ಧರ್ಮಕ್ಕೆ ಸೇರಿದ ಜನರ ವಿರುದ್ಧ ಹೊಂದಿರುವ ದ್ವೇಷಪೂರಿತ ಭಾವನೆಗಳೇ
ಕೋಮುವಾದ.
17.ಜನಸಂಖ್ಯಾ ಲಾಭಾಂಶ ಎಂದರೇನು?
ಉ: ಒಟ್ಟು ಜನಸಂಖ್ಯೆಯಲ್ಲಿ
ಯುವಕರ ಸಂಖ್ಯೆ ಹೆಚ್ಚಾಗಿರುವುದರಿಂದ ದೊರೆಯಬಹುದಾದ ಅನುಕೂಲವನ್ನು ಜನಸಂಖ್ಯಾ ಲಾಭಾಂಶ ಎನ್ನುತ್ತೇವೆ.
III.ಐದು ಅಂಕಗಳ ಪ್ರಶ್ನೆಗಳು:-
18.ಡಾ.ಬಿ.ಎಸ್.ಗುಹಾರವರು
ವರ್ಗೀಕರಿಸಿರುವ ಜನಾಂಗೀಯ ಸಮೂಹಗಳನ್ನು ವಿವರಿಸಿ?
ಉ: ಡಾ.ಬಿ.ಎಸ್.ಗುಹಾರವರು
ಆರು ಜನಾಂಗೀಯ ಸಮೂಹಗಳನ್ನು ಗುರ್ತಿಸಿದ್ದಾರೆ.
1)ನಿಗ್ರಿಟೊ
2)ಪ್ರೊಟೊ-ಆಸ್ಟ್ರಲಾಮ್ಡ್
3)ಮಂಗೋಲಾಯ್ಡ್
4)ಮೆಡಿಟರನಿಯನ್ರು
5)ಪಶ್ಚಿಮಬ್ರಾಕಿಸೆಫಾಲಯ
6)ನಾರ್ಡಿಕ್
19.ಭಾರತದ ಏಕತೆಯ ಸ್ವರೂಪವನ್ನು
ವಿವರಿಸಿ?
ಉ: ಭಾರತದಲ್ಲಿ ವಿವಿಧತೆಯ
ಜೊತೆಗೆ ಏಕತೆಯ ಅಂಶಗಳು ಕಂಡುಬರುತ್ತವೆ ಅವುಗಳೆಂದರೆ
1)ಪ್ರಾಂತೀಯ ಏಕತೆ
2)ಧಾರ್ಮಿಕ ಏಕತೆ
3)ಭಾಷಾ ಏಕತೆ
4)ಸಾಂಸ್ಕೃತಿಕ ಏಕತೆ
20.ರಾಷ್ಟ್ರೀಯ ಭಾವೈಕ್ಯತೆಯನ್ನು
ಬಲಪಡಿಸಲು ಡಾ.ಸಂಪೂರ್ಣಾನಂದ ಸಮಿತಿಯು ನೀಡಿದ ಸಲಹೆಗಳನ್ನು ತಿಳಿಸಿ?
ಉ: 1)ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಮತ್ತು ವಿಶ್ವವಿದ್ಯಾಲಯದ
ಹಂತಗಳಲ್ಲಿ ಪಠ್ಯಕ್ರಮವನ್ನು ಧರ್ಮ ನಿರಪೇಕ್ಷವಾಗಿ ಪುನರ್ರಚಿಸುವುದು.
2)ಔಪಚಾರಿಕ ಶಿಕ್ಷಣದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯನ್ನು
ಪ್ರೇರೇಪಿಸುವ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು.
3)ಪಠ್ಯಪುಸ್ತಕಗಳು ಪರಿಷ್ಕರಣೆ ವಿದ್ಯಾರ್ಥಿಗಳಲ್ಲಿ
ಸಾಂಸ್ಕೃತಿಕ ಪರಂಪರೆಯ ಅರಿವು ಮೂಡಿಸುವ ರೀತಿಯಲ್ಲಿ ರಚಿಸುವುದು. ಇದರಿಂದ ತಮ್ಮ ದೇಶದ ಬಗ್ಗೆ ವಿದ್ಯಾರ್ಥಿಗಳಲ್ಲಿ
ಹೆಮ್ಮೆ ಮೂಡುತ್ತದೆ.
4)ಸಾಮೂಹಿಕ ಪ್ರಾರ್ಥನೆ, ಸಭೆಗಳು, ಗೌರವಾನ್ವಿತ ನಾಯಕರಿಂದ
ಉಪನ್ಯಾಸ ಮುಂತಾದ ಕಾರ್ಯಕ್ರಮಗಳ ಮೂಲಕ ಜನರನ್ನು ಹತ್ತಿರ ತರುವುದು.
21.ರಾಷ್ಟ್ರೀಯ ಭಾವೈಕ್ಯತೆಯ
ಸವಾಲುಗಳನ್ನು ಸಂಕ್ಷಿಪ್ತವಾಗಿ ವಿವರಿಸಿ?
ಉ: ರಾಷ್ಟ್ರೀಯ ಭಾವೈಕ್ಯತೆಗೆ
ಹಲವಾರು ಅಂಶಗಳು ಸವಾಲಾಗಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ-
1)ಪ್ರಾಂತೀಯವಾದ 3)ಭಾಷಾವಾದ
2)ಕೋಮುವಾದ 4)ಉಗ್ರವಾದ ಮತ್ತು ಭಯೋತ್ಪಾದನೆ.
ಈ ಅಂಶವನ್ನು ವಿವರಿಸಬೇಕು.
IV.ಹತ್ತು ಅಂಕಗಳ ಪ್ರಶ್ನೆಗಳು:-
22.ಜನಸಂಖ್ಯಾ ಶಾಸ್ತ್ರವನ್ನು
ವ್ಯಾಖ್ಯಾನಿಸಿ? ಭಾರತದ ಜನಸಂಖ್ಯಾ ಶಾಸ್ತ್ರೀಯ ಚಿತ್ರಣದ ಪ್ರಮುಖ ಲಕ್ಷಣಗಳನ್ನು ವಿವರಿಸಿ?
ಉ: ಜನಸಂಖ್ಯಾ ಗಾತ್ರ, ಜನನ,
ಮರಣ ಮತ್ತು ವಲಸೆಯ ಪ್ರಕಾರಗಳು, ಸ್ತ್ರೀ-ಪುರುಷರ ಸಾಪೇಕ್ಷ ಪ್ರಮಾಣಗಳನ್ನೊಳಗೊಂಡಂತೆ ವಿವಿಧ ವಯೋಮಾನಗಳಿಗೆ
ಸಂಬಂಧಿಸಿದ ಜನಸಮೂಹದ ರಚನೆ ಮತ್ತು ಸಂಯೋಜನೆ ಮುಂತಾದ ಅಂಶಗಳನ್ನು ಅಧ್ಯಯನ ಮಾಡುತ್ತದೆ.
ಲಕ್ಷಣಗಳು:-
1)ಭಾರತೀಯ ಜನಸಂಖ್ಯೆಯ ಗಾತ್ರ ಮತ್ತು ಬೆಳವಣಿಗೆ.
2)ಭಾರತೀಯ ಜನಸಂಖ್ಯೆಯ ವಯೋರಚನೆ.
3)ಇಳಿಮುಖವಾಗುತ್ತಿರುವ ಲಿಂಗಾನುಪಾತ.
4)ಜನನ ಮತ್ತು ಮರಣ ಪ್ರಮಾಣ.
5)ಹೆಚ್ಚುತ್ತಿರುವ ಸಾಕ್ಷರತೆಯ ಪ್ರಮಾಣ.
6)ಹೆಚ್ಚುತ್ತಿರುವ ಗ್ರಾಮೀಣ-ನಗರ ವ್ಯತ್ಯಾಸಗಳು-ಇವುಗಳನ್ನು
ವಿವರಿಸಬೇಕು.
23.ವೈವಿಧ್ಯತೆ ಎಂದರೇನು?
ಭಾರತದಲ್ಲಿಯ ವೈವಿಧ್ಯತೆಯ ಲಕ್ಷಣಗಳನ್ನು ವಿವರಿಸಿ?
ಉ: ವೈವಿಧ್ಯತೆ ಎಂದರೆ ಒಂದು
ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಭೌಗೋಳಿಕ ಮುಂತಾದ ಅಂಶಗಳಲ್ಲಿ ಕಂಡುಬರುವ ಸಾಮೂಹಿಕ ವ್ಯತ್ಯಾಸಗಳನ್ನು
ವೈವಿದ್ಯತೆ ಎನ್ನುವರು.
ಭಾರತದಲ್ಲಿ ವೈವಿಧ್ಯತೆಯ ಲಕ್ಷಣಗಳು
1)ಪ್ರಾಂತೀಯ ವೈವಿಧ್ಯತೆಗಳು.
2)ಭಾಷಾ ವೈವಿಧ್ಯತೆ.
3)ಧಾರ್ಮಿಕ ವೈವಿಧ್ಯತೆ.
4)ಜನಾಂಗೀಯ ವೈವಿಧ್ಯತೆ.
5)ಸಾಂಸ್ಕೃತಿಕ ವೈವಿಧ್ಯತೆಗಳು.
ಈ ಮೇಲಿನವುಗಳನ್ನು ವಿವರಿಸಬೇಕು.
*****
Comments
Post a Comment
If any doubt Comment me