SSL Exam Passing Questions | SSLC Passing Package | 10th Passing Package | SSLC IMP Question | Social Science | Part 2

SSLC Scoring Package | SSLC Passing Package | Part 2

2022ರ ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಸಿದ್ದಪಡಿಸಿ ಅವುಗಳಿಗೆ ಮಾದರಿ ಉತ್ತರಗಳನ್ನು ಸಹ ಇಲ್ಲಿ ಒದಗಿಸಲಾಗಿದೆ. ಸಮಾಜ ವಿಜ್ಞಾನದ ಈ ಎಲ್ಲಾ ಪ್ರಶ್ನೆಗಳು 2022ರ 10ನೇ ತರಗತಿ ಪರೀಕ್ಷೆಗಾಗಿ ಸಿದ್ದಪಡಿಸಿರುವ ಪ್ರಶ್ನೆಗಳಾಗಿದ್ದು. ಇಲ್ಲಿರುವ ಪ್ರಶ್ನೆಗಳನ್ನು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಸ್ಕೋರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಅಂಕದ ಪ್ರಶ್ನೆಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೋಡಿಕೊಳ್ಳಿ.

ಈ ಎಲ್ಲಾ ಪ್ರಶ್ನೆಗಳ ವಿಡಿಯೋ ಪಾಠಕ್ಕಾಗಿ ಇಲ್ಲಿ ಬೇಟಿ ನೀಡಿ.

ಭಾಗ-1, 2, 3, 4, 5 & 6 ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡು, ಮೂರು ಮತ್ತು ನಾಲ್ಕು ಅಂಕದ ಪ್ರಮುಖ ಪ್ರಶ್ನೆಗಳು :
01. ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿಯಲು ಪ್ರೇರಕವಾದ ಅಂಶಗಳು ಯಾವುವು? / “ಯುರೋಪಿಯನ್ನರು ಭಾರತಕ್ಕೆ ಜಲಮಾರ್ಗ ಕಂಡುಹಿಡಿಯುವುದು ಅನಿವಾರ್ಯವಾಯಿತು.” ಈ ಹೇಳಿಕೆಯನ್ನು ಸಮರ್ಥಿಸಿರಿ.
1. ಕಾನ್‌ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುವ ವ್ಯಾಪಾರಕ್ಕೆ ಟರ್ಕರು ವಿಧಿಸಿದ ತೆರಿಗೆ.
2. ವರ್ತಕರಿಗೆ ಈ ಮಾರ್ಗದ ವ್ಯಾಪಾರ ಲಾಭದಾಯಕವಾಗಲಿಲ್ಲ.
3. ಇಟಲಿಯ ಏಕಸ್ವಾಮ್ಯ ಮುರಿಯಲು ಇತರ ನಾವಿಕರಿಗೆ ಪ್ರೋತ್ಸಾಹ.
4. ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಸಿಡಿಮದ್ದು, ಆಸ್ಟ್ರೋಲೋಬ್‌ಗಳ ಶೋಧ
 
02. ದ್ವಿ ಪ್ರಭುತ್ವ ಪದ್ಧತಿಯನ್ನು ವಿವರಿಸಿ?
1. ಈ ಪದ್ಧತಿಯನ್ನು ರಾಬರ್ಟ್‌ ಕ್ಲೈವ್‌ ಜಾರಿಗೊಳಿಸಿದನು
2. ಕಂದಾಯ ವಸೂಲಿಯ ದಿವಾನಿ ಹಕ್ಕು ಬ್ರಿಟಿಷರಿಗೆ
3. ರಾಜ್ಯದ ಆಡಳಿತದ ಜವಾಬ್ದಾರಿ & ನ್ಯಾಯ ತೀರ್ಮಾನ ನವಾಬ ನಿರ್ವಹಿಸಿದನು.

03. ಬ್ರಿಟಿಷರು ಪಂಜಾಬನ್ನು ಹೇಗೆ ವಶಪಡಿಸಿಕೊಂಡರು?
1. ರಣಜಿತ್‌ ಸಿಂಗ್‌ ಮರಣ ನಂತರ ಬ್ರಿಟಿಷರು ಮೈತ್ರಿ ಮುರಿದು ಪಂಜಾಬ್‌ ಆಕ್ರಮಿಸಲು ಯತ್ನಿಸಿದರು
2. ಸಿಕ್ಕರು ದೇಶದ್ರೋಹಿ ನಾಯಕರಿಂದ ಸೋತರು
3. ಲಾಹೋರ್‌ ಒಪ್ಪಂದದ ಪ್ರಕಾರ ರೆಸಿಡೆಂಟ್‌ ನೇಮಿಸಿದರು
4. 1848ರಲ್ಲಿ ಡಾಲ್‌ ಹೌಸಿ ಪಂಜಾಬ್‌ ವಶಪಡಿಸಿಕೊಂಡನು.

04. ಭಾರತದ ವಿದೇಶಾಂಗ ನೀತಿಯ ಉದ್ದೇಶ/ಗುರಿಗಳು ಯಾವುವು?/ ವಿಶ್ವದ ಎಲ್ಲಾ ದೇಶಗಳಿಗೂ ವಿದೇಶಾಂಗ ನೀತಿ ಅವಶ್ಯ ಏಕೆ?
1. ರಾಷ್ಟ್ರದ ಭದ್ರತೆ
2. ಆರ್ಥಿಕ ಸಂವರ್ಧನೆ
3. ಸಾಂಸ್ಕೃತಿಕ ಮೌಲ್ಯ ಬಿತ್ತಾರ
4. ಮಿತ್ರ ರಾಷ್ಟ್ರಗಳ ಹೆಚ್ಚಳ
5. ವಿಶ್ವ ಶಾಂತಿ
 
5.ಭಾರತದಲ್ಲಿ ರೂಢಿಯಲ್ಲಿರುವ ಕೃಷಿಯ ವಿಧಗಳು ಯಾವುವು?
1. ಜೀವನಾಧಾರಿತ ಬೇಸಾಯ
2. ಸಾಂದ್ರ ಬೇಸಾಯ
3.ವಾಣಿಜ್ಯ ಬೇಸಾಯ
4.ಮಿಶ್ರ ಬೇಸಾಯ
5. ನೆಡುತೋಪು ಬೇಸಾಯ
6. ಒಣ ಬೇಸಾಯ
7. ಆರ್ದ್ರ ಬೇಸಾಯ
8. ನೀರಾವರಿ ಬೇಸಾಯ

6. ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಕೃಷಿ /ಕೈಗಾರಿಕೆ/ ಸಾರಿಗೆಯ ಪಾತ್ರವೇನು? (ಪ್ರಾಮುಖ್ಯತೆ)
1. ಕೃಷಿಯ ಅಭಿವೃದ್ಧಿಗೆ ಸಹಕಾರಿ
2. ಕೈಗಾರಿಕಾ ಪ್ರಗತಿಗೆ ಉತ್ತೇಜನ ಸಿಗುತ್ತದೆ.
3. ದೇಶೀಯ & ವಿದೇಶಿ ವ್ಯಾಪಾರದ ವೃದ್ಧಿ
4. ಉದ್ಯೋಗ ಸೃಷ್ಟಿ
5. ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ
6. ರಕ್ಷಣಾ ಪಡೆಗೆ ನೆರವಾಗುತ್ತದೆ.
7. ರಾಷ್ಟ್ರಾದಾಯ ಮತ್ತು ತಲಾದಾಯ ಹೆಚ್ಚಳ
8. ಕಡಿಮೆ ಆಮದು
9. ಜನರ ಜೀವನಮಟ್ಟದಲ್ಲಿ ಸುಧಾರಣೆ

7.ಆವರ್ತ ಮಾರುತಗಳು/ಭೂಕಂಪ/ಭೂಕುಸಿತದ ಪರಿಣಾಮಗಳನ್ನು ತಿಳಿಸಿರಿ ಪ್ರವಾಹ/ಭೂಕಂಪ/ಭೂಕುಸಿತಗಳಿಂದ ಮಾನವನ ಬದುಕು ಅಸ್ತವ್ಯಸ್ಥಗೊಳ್ಳುವುದು ಹೇಗೆ?
1. ಜೀವ ಹಾನಿ
2.ಆಸ್ತಿ ನಾಶ
3. ಕಟ್ಟಡಗಳಿಗೆ ಧಕ್ಕೆ
4. ಸಾರಿಗೆ ಮತ್ತು ಸಂಪರ್ಕ ಅಸ್ತವ್ಯಸ್ತ
5. ವಿದ್ಯುತ್‌ ಸರಬರಾಜಿಗೆ ಅಡಚಣೆ ಉಂಟಾಗುತ್ತದೆ.
6. ಬೆಳೆ ನಾಶ
7. ಮಣ್ಣಿನ ಸವೆತ
8. ಸ್ವಾಭಾವಿಕ ಸಸ್ಯವರ್ಗ ಪ್ರಾಣಿ ಸಂಕುಲಗಳಿಗೆ ಹಾನಿ
9. ಮೂಲಭೂತ ಸೌಲಭ್ಯಗಳ ವ್ಯತ್ಯಯ

8. ಬ್ರಹ್ಮ/ ಆರ್ಯ/ಪ್ರಾರ್ಥನ /ಸತ್ಯಶೋಧಕಸಮಾಜದ/ರಾಮಕೃಷ್ಣ ಮಿಷನ್‌ /ಅಲಿಘರ್‌ ಚಳುವಳಿಯ ಕೊಡುಗೆಗಳನ್ನು ತಿಳಿಸಿ? ಬ್ರಹ್ಮ/ ಆರ್ಯ/ಪ್ರಾರ್ಥನ /ಸತ್ಯಶೋಧಕಸಮಾಜದ/ರಾಮಕೃಷ್ಣಮಿಷನ್‌ ಬೋಧನೆಗಳು ತತ್ವಗಳು / ಉದ್ದೇಶಗಳು
1. ಸ್ತ್ರೀ ಶೋಷಣೆ ವಿರೋಧ
2. ಬಾಲ್ಯವಿವಾಹ
3.ಜಾತಿಪದ್ದತಿಗೆ ವಿರೋಧ
4.ಅರ್ಥಹೀನ ಆಚರಣೆಗಳ ಖಂಡನೆ
5. ಸಮಾನತೆಗೆ ಆದ್ಯತೆ
6. ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ
7. ಮೂರ್ತಿ ಪೂಜೆ ಖಂಡನೆ
8. ವಿಧವಾ ವಿವಾಹಕ್ಕೆ ಪ್ರೋತ್ಸಾಹ.

9. 1857ರ ದಂಗೆಯ ವಿಫಲತೆಗೆ ಕಾರಣಗಳನ್ನು ತಿಳಿಸಿರಿ?/ 1857ರಲ್ಲಿ ಭಾರತೀಯರು ಬ್ರಿಟಿಷರನ್ನು ಹೊರಹಾಕುವಲ್ಲಿ ವಿಫಲರಾದರು. ಈ ಹೇಳಿಕೆಯನ್ನು ಸಮರ್ಥಿಸಿರಿ.
1. ಸೂಕ್ತ ಸೇನಾ ನಾಯಕತ್ವದ ಕೊರತೆ
2. ಅನೇಕ ಕಡೆ ಲೂಟಿ, ದರೋಡೆ ಮಾಡಿ ಜನಸಾಮಾನ್ಯರ ವಿಶ್ವಾಸ ಕಳೆದುಕೊಂಡರು.
3. ಸೂಕ್ತ ಮಾರ್ಗದರ್ಶನ ಕೊರತೆ
4. ದೇಶೀಯ ರಾಜರುಗಳು ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ.
5. ಸಂಘಟನೆಯ ಕೊರತೆ
6. ನಿರ್ದಿಷ್ಟ ಗುರಿ ಇರಲಿಲ್ಲ
7. ಶಸ್ತ್ರಾಸ್ತ್ರದ ಕೊರತೆ
8. ಭಾರತೀಯರಲ್ಲಿ ಒಗ್ಗಟ್ಟಿನ ಕೊರತೆ

10. ಇಂಗ್ಲೀಷ್‌ ಶಿಕ್ಷಣದಿಂದ ಉಂಟಾದ ಪರಿಣಾಮಗಳನ್ನು ವಿವರಿಸಿ?
1. ವೈಜ್ಞಾನಿಕ ಆಲೋಚನೆ ಮತ್ತು ರಾಷ್ಟ್ರೀಯವಾದಿ ದೃಷ್ಟಿಕೋನದ ಬೆಳವಣಿಗೆ
2. ಸ್ಥಳೀಯ ಭಾಷೆ & ಸಾಹಿತ್ಯಕ್ಕೆ ಪ್ರೋತ್ಸಾಹ
3. ವೃತ್ತ ಪತ್ರಿಕೆಗಳು ಹುಟ್ಟಿಕೊಂಡವು
4. ಸಾಮಾಜಿಕ & ಧಾರ್ಮಿಕ ಚಳುವಳಿಗೆ ನಾಂದಿ
5. ಸ್ವಾತಂತ್ರ್ಯ ಚಳುವಳಿಗೆ ಪ್ರೋತ್ಸಾಹ
6. ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಳ್ಳಲು ಸಾಧ್ಯವಾಯಿತು.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon