SSL Exam Passing Questions | SSLC Passing Package | 10th Passing Package | SSLC IMP Question | Social Science | Part 4

SSLC Scoring Package | SSLC Passing Package | part 4

2022ರ ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಸಿದ್ದಪಡಿಸಿ ಅವುಗಳಿಗೆ ಮಾದರಿ ಉತ್ತರಗಳನ್ನು ಸಹ ಇಲ್ಲಿ ಒದಗಿಸಲಾಗಿದೆ. ಸಮಾಜ ವಿಜ್ಞಾನದ ಈ ಎಲ್ಲಾ ಪ್ರಶ್ನೆಗಳು 2022ರ 10ನೇ ತರಗತಿ ಪರೀಕ್ಷೆಗಾಗಿ ಸಿದ್ದಪಡಿಸಿರುವ ಪ್ರಶ್ನೆಗಳಾಗಿದ್ದು. ಇಲ್ಲಿರುವ ಪ್ರಶ್ನೆಗಳನ್ನು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಸ್ಕೋರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಅಂಕದ ಪ್ರಶ್ನೆಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೋಡಿಕೊಳ್ಳಿ.

ಈ ಎಲ್ಲಾ ಪ್ರಶ್ನೆಗಳ ವಿಡಿಯೋ ಪಾಠಕ್ಕಾಗಿ ಇಲ್ಲಿ ಬೇಟಿ ನೀಡಿ.

ಭಾಗ-1, 2, 3, 4, 5 & 6 ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

21. ಉದ್ಯಮಗಾರಿಕೆಯ ಗುಣಲಕ್ಷಣಗಳಾವುವು?
1. ಸೃಜನಾತ್ಮಕತೆ
2. ಕ್ರಿಯಾತ್ಮಕತೆ
3. ಸಮಸ್ಯೆಯ ಪರಿಹಾರ
4. ನಷ್ಟ ಭರಿತಕ್ಕೆ ಸಿದ್ದ
5. ವಚನಬದ್ಧತೆ
6. ನಾಯಕತ್ವ
7. ಗುರಿ ಮುಟ್ಟುವಿಕೆ
8. ಗುಂಪು ಕಟ್ಟುವುದು

22. ಉದ್ಯಮಿಯ ಕಾರ್ಯಗಳಾವುವು?
1. ವ್ಯಾಪಾರ ಚಟುವಟಿಕೆಗಳನ್ನು ಪ್ರಾರಂಭಿಸುವುದು
2. ಉತ್ಪಾದನಾಂಗಗಳನ್ನು ಸಂಯೋಜಿಸುವುದು
3. ನಿರ್ಧಾರಗಳನ್ನು ಕೈಗೊಳ್ಳುವುದು
4. ಹೊಸ ಹೊಸ ವಿಧಾನಗಳನ್ನು ರೂಢಿಗೆ ತರುವುದು
5. ಹಣಕಾಸಿನ ಆಯವ್ಯಯ ನಿರ್ವಹಿಸುವುದು
6. ಕಷ್ಟ ನಷ್ಟಗಳನ್ನು & ಅನಿಶ್ಚಿತೆಗಳನ್ನು ಎದುರಿಸುವುದು
7. ಸೂಕ್ತ  ಮಾರ್ಗದರ್ಶನ ನೀಡುವುದು.

23. ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಬೇಕಾಗಿರುವ ಹಣಕಾಸನ್ನು ಒದಗಿಸಲಿರುವ ಹಣಕಾಸಿನ ಸಂಸ್ಥೆಗಳಾವುವು?
1. ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು
2. ಕೃಷಿ & ಗ್ರಾಮೀಣ ಅಭಿವೃದ್ಧಿಯ ರಾಷ್ಟ್ರೀಯ ಬ್ಯಾಂಕು
3. ಆಮದು & ರಫ್ತು ಬ್ಯಾಂಕು
4. ಭಾರತೀಯ ಕೈಗಾರಿಕಾ ಹಣಕಾಸು ನಿಗಮ
5. ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು
6. ರಾಜ್ಯ ಹಣಕಾಸು ನಿಗಮ
7. ಭಾರತೀಯ ಜೀವ ವಿಮಾ ನಿಗಮ
 
24. ದ್ವಿತೀಯ ಮಹಾಯುದ್ದದ ಬಳಿಕ ಜಗತ್ತು ಎದುರಿಸಿದ ಸಮಸ್ಯೆಗಳು ಯಾವುವು?
1. ಮಾನವ ಹಕ್ಕುಗಳ ನಿರಾಕರಣೆ
2. ಶಸ್ತ್ರಾಸ್ತ್ರಗಳ ಪೈಪೋಟಿ
3. ಆರ್ಥಿಕ ಅಸಮಾನತೆ
4. ವರ್ಣಬೇಧ ನೀತಿ
5. ಭಯೋತ್ಪಾದಕತೆ

25. ನರ್ಮದಾ ಬಚಾವೋ ಆಂದೋಲನ ಪರಿಸರ ಚಳುವಳಿಯಲ್ಲಿ ಪ್ರಾಮುಖ್ಯವಾಗಿರಲು ಕಾರಣ ತಿಳಿಸಿರಿ?
1. ಮೇದಾ ಪಾಟ್ಕರ್‌ ನೇತೃತ್ವ
2. ಗುಜರಾತ್‌ ನಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಅಣೆಕಟ್ಟು
3.ಇದರಿಂದ ಅರಣ್ಯ ನಾಶ, ಬುಡಕಟ್ಟು ಜನರ ನಿರ್ಮೂಲನೆ
4. ಜೀವ ಸಂಕುಲಗಳಿಗೆ ಹಾನಿಯಾಗುತ್ತದೆ.

26. ಪರ್ಯಾಯ ಪ್ರಸ್ಥಭೂಮಿಯ ಪ್ರಾಮುಖ್ಯತೆ ಏನು?
1. ಸಮೃದ್ಧ ಖನಿಜ ಸಂಪತ್ತನ್ನು ಹೊಂದಿದೆ
2. ದಟ್ಟ ಕಾಡುಗಳು & ಜೈವಿಕ ವೈವಿಧ್ಯದಿಂದ ಕೂಡಿದೆ.
3. ನೈಋತ್ಯ ಮಾನ್ಸೂನ್‌ ಮಾರುತಗಳ ಮೇಲೆ ಪ್ರಭಾವ ಬೀರುತ್ತದೆ.
4. ಕಪ್ಪು ಮಣ್ಣಿನಿಂದ ಕೂಡಿದ್ದು ಕೃಷಿಗೆ ಪೂರಕವಾಗಿದೆ.
5. ನದಿಗಳ ಉಗಮ ಸ್ಥಾನ
6. ಜಲಶಕ್ತಿ ತಯಾರಿಕೆಗೆ ಉಪಯುಕ್ತ.

27. ಅರಣ್ಯ ನಾಶಕ್ಕೆ ಕಾರಣಗಳಾವುವು?/ಭಾರತದಲ್ಲಿ ಇತ್ತೀಚೆಗೆ ಅರಣ್ಯ ಕ್ಷೇತ್ರ ಕಡಿಮೆಯಾಗುತ್ತಿದೆ ಕಾರಣವೇನು?
1. ಕೃಷಿ ಕ್ಷೇತ್ರದ ವಿಸ್ತರಣೆ
2. ರಸ್ತೆ ಮತ್ತು ರೈಲು ಮಾರ್ಗಗಳು
3. ನೀರಾವರಿ ಯೋಜನೆಗಳ ನಿರ್ಮಾಣ
4. ಕೈಗಾರಿಕೀಕರಣ
5. ನಗರೀಕರಣ
6. ಅತಿಯಾಗಿ ಮೇಯಿಸುವಿಕೆ
7. ಕಾಡ್ಗಿಚ್ಚು.

28. ರಾಷ್ಟ್ರೀಯ ವರಮಾನದ ಮೂಲಕ ಅಭಿವೃದ್ಧಿಯನ್ನು ಅಳೆಯುವುದು ಸಮಂಜಸವಲ್ಲ ಏಕೆ?
1. ರಾಷ್ಟ್ರೀಯ ವರಮಾನದ ಜೊತೆಗೆ ಜನಸಂಖ್ಯೆಯ ಹೆಚ್ಚಳವೂ ಕಂಡುಬಂದರೆ ಆರ್ಥಿಕ ಪ್ರಗತಿಯ ವಾಸ್ತವ ಚಿತ್ರಣ ಇರುವುದಿಲ್ಲ.
2. ವಿಭಿನ್ನ ವರಮಾನ ಮತ್ತು ಜನಸಂಖ್ಯೆಗಳುಳ್ಳ ರಾಷ್ಟ್ರಗಳ ಅಭಿವೃದ್ಧಿಯ ಹೋಲಿಕೆ ಮಾಡುವುದಕ್ಕೆ ರಾಷ್ಟ್ರೀಯ ವರಮಾನ ಸೂಕ್ತವಾಗುವುದಿಲ್ಲ.

29. ತಲಾ ವರಮಾನದ ಮೂಲಕ ಅಭಿವೃದ್ಧಿಯನ್ನು ಅಳೆಯುವುದು ಸೂಕ್ತವಲ್ಲ ಸಮರ್ಥಿಸಿ?
1. ಇದು ಜನರ ನಡುವಿನ ಸಮಾನ ವರಮಾನ ಹಂಚಿಕೆ ತೋರಿಸುವುದಿಲ್ಲ.
2. ಆಹಾರ, ವಸತಿ, ಶಿಕ್ಷಣ ಮತ್ತು ಇತರೆ ಸಾಮಾಜಿಕ ಅಂಶಗಳ ಲಭ್ಯತೆಯನ್ನು ಪರಿಗಣಿಸುವುದಿಲ್ಲ.

30. ಗ್ರಾಹಕ ಸಂರಕ್ಷಣಾ ಕಾಯ್ದೆಯ ಮುಖ್ಯ ಉದ್ದೇಶಗಳನ್ನು ತಿಳಿಸಿರಿ?
1. ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಮೊದಲ ಪ್ರಾಶಸ್ತ್ಯ
2. ಅಪಾಯಕಾರಿ ವಸ್ತುಗಳ ತಯಾರಿಕೆ & ಮಾರಾಟ ತಪ್ಪಿಸುವುದು.
3. ಅನುಚಿತ ವ್ಯವಹಾರ ಪದ್ಧತಿಗಳನ್ನು ತಡೆಗಟ್ಟುವುದು.
4. ಗುಣಮಟ್ಟ, ಅಳತೆ, ತೂಕ, ಬೆಲೆ ಇತ್ಯಾದಿಗಳ ಮೇಲೆ ನಿಗಾವಹಿಸುವುದು.
5. ಬಳಕೆದಾರರು ತೊಂದರೆಗೆ ಒಳಗಾದಲ್ಲಿ ಅವರಿಗೆ ಸೂಕ್ತ ಪರಿಹಾರ ಕೊಡಿಸುವುದು.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon