SSL Exam Passing Questions | SSLC Passing Package | 10th Passing Package | SSLC IMP Question | Social Science | Part 6

SSLC Scoring Package | SSLC Passing Package | part 6

2022ರ ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಸಿದ್ದಪಡಿಸಿ ಅವುಗಳಿಗೆ ಮಾದರಿ ಉತ್ತರಗಳನ್ನು ಸಹ ಇಲ್ಲಿ ಒದಗಿಸಲಾಗಿದೆ. ಸಮಾಜ ವಿಜ್ಞಾನದ ಈ ಎಲ್ಲಾ ಪ್ರಶ್ನೆಗಳು 2022ರ 10ನೇ ತರಗತಿ ಪರೀಕ್ಷೆಗಾಗಿ ಸಿದ್ದಪಡಿಸಿರುವ ಪ್ರಶ್ನೆಗಳಾಗಿದ್ದು. ಇಲ್ಲಿರುವ ಪ್ರಶ್ನೆಗಳನ್ನು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಸ್ಕೋರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಅಂಕದ ಪ್ರಶ್ನೆಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೋಡಿಕೊಳ್ಳಿ.

ಈ ಎಲ್ಲಾ ಪ್ರಶ್ನೆಗಳ ವಿಡಿಯೋ ಪಾಠಕ್ಕಾಗಿ ಇಲ್ಲಿ ಬೇಟಿ ನೀಡಿ.

ಭಾಗ-1, 2, 3, 4, 5 & 6 ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

41. ನಿಶಸ್ತ್ರಿ ಕರಣ ಒಪ್ಪಂದಗಳನ್ನು ತಿಳಿಸಿರಿ.
1. ನಿರ್ಣಯಾತ್ಮಕ ಶಸ್ತ್ರ ನಿಯಂತ್ರಣ ಒಪ್ಪಂದ
2. ಪಾಕ್ಷಿಕ ಪ್ರಯೋಗ ಒಪ್ಪಂದ
3. ಸಮಗ್ರ ಪರೀಕ್ಷಣಾ ಒಪ್ಪಂದ
4. ಫಲಿಕೆ ನಿಷೇಧ ಒಪ್ಪಂದ

42. ಗೋವಾ ವಿಮೋಚನೆಗೊಂಡ ಬಗೆಯನ್ನು ವಿವರಿಸಿ?
1. ಗೋವಾದಲ್ಲಿ ನಿರಂತರವಾದ ಚಳುವಳಿ ನಡೆಯಿತು.
2. ಪೋರ್ಚುಗೀಸರು ಯುರೋಪ್‌ & ಆಫ್ರಿಕಾದಿಂದ ಸೈನ್ಯ ತರಿಸಿದರು.
3.1955ರಲ್ಲಿ ಭಾರತದ ವಿವಿಧ ಭಾಗಗಳಿಂದ ಸತ್ಯಾಗ್ರಹಿಗಳ ಆಗಮನ.
4. ಗೋವಾ ವಿಮೋಚನಾ ಹೋರಾಟ ಆರಂಭ
5. ಭಾರತದ ಸೈನ್ಯ ಮಧ್ಯ ಪ್ರವೇಶಿಸಿ ಗೋವಾ ವಶ.

43. ಜುನಾಗಢ ಭಾರತದ ಒಕ್ಕೂಟದಲ್ಲಿ ಸೇರ್ಪಡೆಗೊಂಡ ಬಗೆಯನ್ನು ತಿಳಿಸಿರಿ?
1. ನವಾಬ ಪಾಕಿಸ್ಥಾನಕ್ಕೆ ಸೇರುವ ಇಂಗಿತ
2. ಪ್ರಜೆಗಳು ಆತನ ವಿರುದ್ಧ ಬೀದಿಗಿಳಿದರು
3. ನವಾಬ ಪಾಕಿಸ್ಥಾನಕ್ಕೆ ಪಲಾಯನ
4. ಅಲ್ಲಿನ ದಿವಾನ ಮನವಿ ಮೇರೆಗೆ ಭಾರತದ ಸೈನ್ಯ ರವಾನಿಸಿ ಶಾಂತಿ ಸ್ಥಾಪನೆ
5. 1949ರಲ್ಲಿ ಭಾರತದ ಒಕ್ಕೂಟಕ್ಕೆ ಸೇರ್ಪಡೆ

44. ಆರ್ಥಿಕಾಭಿವೃದ್ಧಿಯ ಗುರಿಗಳೇನು? (ಉದ್ದೇಶಗಳು)
1. ವರಮಾನದ ಹೆಚ್ಚಳ
2. ಪರಿಸರ ಸಂರಕ್ಷಣೆ
3. ಬಡತನ, ನಿರುದ್ಯೋಗ & ಅಸಮಾನತೆಗಳಲ್ಲಿ ಇಳಿಕೆ
4. ಜನರ ಕಲ್ಯಾಣವನ್ನು ಹೆಚ್ಚಿಸುವುದು.

45. ಅನಾಭಿವೃದ್ಧಿ ರಾಷ್ಟ್ರದ ಲಕ್ಷಣಗಳಾವುವು?
1. ಕಡಿಮೆ ತಲಾದಾಯ
2. ನಿರುದ್ಯೋಗ
3. ಬಡತನ
4. ಜನಸಂಖ್ಯೆಯಲ್ಲಿ ಹೆಚ್ಚಳ
5. ಅಸಮಾನತೆ
6. ಸಂಪನ್ಮೂಲಗಳ ಅಸಮರ್ಪಕ ಬಳಕೆ

46. ಸಾಮಾಜಿಕ ಸ್ಥರ ವಿನ್ಯಾಸದ ಲಕ್ಷಣಗಳನ್ನು ಪಟ್ಟಿಮಾಡಿ?
1. ಸಾಮಾಜಿಕವಾದದ್ದು
2. ಸರ್ವವ್ಯಾಪಕವಾದದ್ದು
3. ಪುರಾತನವಾದದ್ದು
4. ವಿವಿಧ ರೂಪದಲ್ಲಿದೆ
5. ಸಾಮಾಜಿಕವಾದದ್ದು 6. ವಿವಿಧ ಸ್ತರಗಳಾಗಿ ವರ್ಗೀಕರಿಸಬಹುದು.

47. ಬ್ಯಾಂಕ್‌ಗಳ ಪ್ರಮುಖ ವಿಧಗಳಾವುವು?
1. ಕೇಂದ್ರ ಬ್ಯಾಂಕ್‌ ಅಥವಾ ಭಾರತೀಯ ರಿಸರ್ವ್‌ ಬ್ಯಾಂಕ್‌
2. ವಾಣಿಜ್ಯ ಬ್ಯಾಂಕುಗಳು
3. ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳು
4. ಸ್ಥಳೀಯ ಬ್ಯಾಂಕುಗಳು
5. ಸಹಕಾರಿ ಬ್ಯಾಂಕುಗಳು
6. ಭೂ-ಅಭಿವೃದ್ಧಿ ಅಥವಾ ವ್ಯವಸಾಯ ಬ್ಯಾಂಕುಗಳು

48. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅನಿಬೆಸೆಂಟರ ಪಾತ್ರವನ್ನು ವಿವರಿಸಿ?/ ಅನಿಬೆಸೆಂಟ್‌ ರವರ ಸುಧಾರಣೆಗಳನ್ನು ತಿಳಿಸಿರಿ?
1. ಭಾರತೀಯ ಸಂಸ್ಕೃತಿಯ ಶ್ರೇಷ್ಟತೆ ಪ್ರತಿಪಾದನೆ.
2. ಭಗವದ್ಗೀತೆ ಇಂಗ್ಲೀಷ್‌ಗೆ ಭಾಷಾಂತರಿಸಿದರು.
3. ಎಲ್ಲಾ ವರ್ಗದವರಿಗೂ ಶಿಕ್ಷಣ ಸಿಗಬೇಕೆಂಬ ಆಶಯ.
4. ಬನಾರಸ್‌ನಲ್ಲಿ ಹಿಂದೂ ಕಾಲೇಜ್‌ ಸ್ಥಾಪಿಸಿದರು.
5. ನ್ಯೂ ಇಂಡಿಯಾ & ಕಾಮನ್‌ ವೀಲ್‌ ಪತ್ರಿಕೆ ಆರಂಭ
6. ಹೋಂ ರೂಲ್‌ ಚಳುವಳಿ ಆರಂಭಿಸಿದರು.

49. 4ನೇ ಆಂಗ್ಲೋ-ಮೈಸೂರು ಯುದ್ಧ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ?
ಕಾರಣಗಳು:
1. ಟಿಪ್ಪು ಬ್ರಿಟಿಷರ ವಿರುದ್ಧ ಫ್ರೆಂಚರ ಸಹಕಾರ ಪಡೆಯಲು ಪ್ರಯತ್ನ.
2. ಇದು ತಮ್ಮ ಅಧಿಪತ್ಯಕ್ಕೆ ಮುಳುವಾಗಬಹುದೆಂಬ ಭಾವನೆ ಬ್ರಿಟಿಷರಲ್ಲಿ ಮೂಡಿತು.
3. ಹೊಸ ಷರತ್ತುಗಳನ್ನು ಒಳಗೊಂಡ ಒಪ್ಪಂದ ಟಿಪ್ಪುವಿನ ಮೇಲೆ ಹೇರಲಾಯಿತು.
4. ಇದನ್ನು ಟಿಪ್ಪು ನಿರಾಕರಿಸಿದ್ದು ಯುದ್ಧಕ್ಕೆ ಕಾರಣ.
ಪರಿಣಾಮಗಳು:
1. ಟಿಪ್ಪು ಹೋರಾಡುತ್ತಲೇ 1799ರಲ್ಲಿ ಹತನಾದನು.
2. ಮೈಸೂರು ಬ್ರಿಟಿಷರ ವಶವಾಯಿತು.
3. ಟಿಪ್ಪುವಿನ ಪ್ರದೇಶವನ್ನು ಮರಾಠರು &  ನಿಜಾಮರೊಂದಿಗೆ ಬ್ರಿಟಿಷರು ಹಂಚಿಕೊಂಡರು.
4. ಚಿಕ್ಕ ಭೌಗೋಳಿಕ ಪ್ರದೇಶ ಒಡೆಯರ ರಾಜವಂಶ ಪ್ರತಿನಿಧಿಗೆ ವರ್ಗಾವಣೆ.

50. ಪಂಚಾಯತ್‌ ರಾಜ್‌ ವ್ಯವಸ್ಥೆಯ ಪ್ರಮುಖ ಲಕ್ಷಣಗಳು ಯಾವುವು?
1. ಗ್ರಾಮ ಪಂಚಾಯಿತಿ, ತಾಲ್ಲೋಕು ಪಂಚಾಯಿತಿ & ಜಿಲ್ಲಾ ಪಂಚಾಯತಿಗಳ ಮೂರು ಹಂತದ ಪಂಚಾಯಿತಿ ವ್ಯವಸ್ಥೆ.
2. ಗ್ರಾಮ ಸಭೆಯು ಅದರ ತಳಹದಿಯಾಗಿದೆ.
3. ನೇರ ಹಾಗೂ ನಿಯಮಿತ ಚುನಾವಣೆಗಳು
4. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗಾಗಿ ಸ್ಥಾನ ಮೀಸಲಾತಿ ನೀಡಿಕೆ.
5. ಹಣಕಾಸು, ಆಡಳಿತಾತ್ಮಕ, ಮುಂಗಡ ಪತ್ರ ಮಂಡಿಸುವ ಜವಾಬ್ದಾರಿ.
6. ಕಾರ್ಯ ನಿರ್ವಾಹಕ ಮತ್ತು ಇತರ ಸಿಬ್ಬಂದಿ ನೀಡಿಕೆ.
7. ಪಂಚಾಯತಿಯನ್ನು ವಿಸರ್ಜಿಸುವಾಗ ಅನುಸರಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳು.
8. ವಿಸರ್ಜನೆಗೊಂಡ ಆರು ತಿಂಗಳುಗಳ ಒಳಗೆ ಕಡ್ಡಾಯ ಚುನಾವಣೆ ನಡೆಸುವುದು.

51. 3ನೇ ಆಂಗ್ಲೋ-ಮೈಸೂರು ಯುದ್ಧದ ಪರಿಣಾಮಗಳನ್ನು ತಿಳಿಸಿ?/1792ರ ಶ್ರೀರಂಗಪಟ್ಟಣ ಒಪ್ಪಂದದ ನಿಬಂಧನೆಗಳನ್ನು ತಿಳಿಸಿ?
1. ಟಿಪ್ಪು ಅವಮಾನಕರ ಒಪ್ಪಂದಕ್ಕೆ ಸಹಿ ಹಾಕಿದ.
2. ಶ್ರೀರಂಗಪಟ್ಟಣ ಕೋಟೆ ಹಾಳಾಯಿತು.
3. ಟಿಪ್ಪು ಅರ್ಧ ರಾಜ್ಯ ಬಿಟ್ಟುಕೊಡಬೇಕಾಯಿತು.
4. ಟಿಪ್ಪು ರೂ. 3 ಕೋಟಿ ಯುದ್ಧ ನಷ್ಟ ನೀಡಬೇಕಾಯಿತು.
5. ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟನು.
6. ಸೆರೆ ಹಿಡಿದ ಸೈನಿಕರನ್ನು ಬಿಡುಗಡೆ ಮಾಡುವುದು.

52. ಸಹಾಯಕ ಸೈನ್ಯ ಪದ್ದತಿಯ ನಿಬಂಧನೆಗಳನ್ನು ತಿಳಿಸಿರಿ?
1. ಬ್ರಿಟಿಷ್‌ ಸೈನ್ಯದ ತುಕಡಿಯನ್ನು ತನ್ನ ಆಸ್ಥಾನದಲ್ಲಿ ಇರಿಸಿಕೊಳ್ಳಬೇಕು.
2. ಸೈನ್ಯದ ನಿರ್ವಹಣಾ ವೆಚ್ಚ ಭರಿಸಬೇಕು.
3. ರಾಜನ ಆಸ್ಥಾನದಲ್ಲಿ ರೆಸಿಡೆಂಟ್‌ ನೇಮಕ.
4. ಯಾವುದೇ ರಾಜ್ಯದೊಂದಿಗೆ ಯುದ್ಧ ಅಥವಾ ಸಂಧಾನ ಮಾಡಿಕೊಳ್ಳುವಂತಿಲ್ಲ.
5. ಕಂಪನಿ ಆ ರಾಜ್ಯಕ್ಕೆ ಬಾಹ್ಯ & ಆಂತರಿಕ ರಕ್ಷಣೆ ನೀಡುವುದು.

53. ಪಶ್ಚಿಮ ಘಟ್ಟಗಳು & ಪೂರ್ವಘಟ್ಟಗಳಿಗಿರುವ ವ್ಯತ್ಯಾಸಗಳೇನು?
ಪಶ್ಚಿಮ ಘಟ್ಟಗಳು:
1. ತಾಪಿ ನದಿಯಿಂದ ಕನ್ಯಾಕುಮಾರಿವರೆಗೆ ವಿಸ್ತರಿಸಿವೆ.
2. ಎತ್ತರ ಮತ್ತು ನಿರಂತರವಾಗಿವೆ.
3. ಅನೇಕ ನದಿಗಳು ಉಗಮವಾಗುತ್ತವೆ.
ಪೂರ್ವ ಘಟ್ಟಗಳು:
1. ಮಹಾನದಿ ಕಣಿವೆಯಿಂದ ನೀಲಗಿರಿ ಬೆಟ್ಟಗಳವರೆಗೆ ವಿಸ್ತರಿಸಿವೆ.
2. ಪಶ್ಚಿಮ ಘಟ್ಟಗಳಷ್ಟು ಎತ್ತರ ಮತ್ತು ನಿರಂತರವಾಗಿಲ್ಲ.
3. ನದಿ ಕಣಿವೆಗಳಿಂದ ಪ್ರತ್ಯೇಕಗೊಂಡಿವೆ.

54. ಗ್ರಾಹಕ ನ್ಯಾಯಾಲಯಕ್ಕೆ ದೂರಿನಲ್ಲಿರಬೇಕಾದ ಮಾಹಿತಿಗಳು ಯಾವುವು?
1. ದೂರು ಕೈ ಬರಹ/ಬೆರಳಚ್ಚಿನಲ್ಲಿ ಇರಬೇಕು.
2. ದೂರು ಕೊಡುವವನ ಪೂರ್ಣ ಮಾಹಿತಿ.
3. ದೂರು ಕೊಡಬೇಕಾದ ವ್ಯಾಪಾರಿ ಹೆಸರು.
4. ಯಾವ ವಸ್ತುವಿನಿಂದ ನಷ್ಟವಾಗಿದೆ ಎಂಬುದರ ಮಾಹಿತಿ.
5. ನಷ್ಟದ ಮೊತ್ತ.
6. ಸೂಕ್ತ ಪರಿಹಾರದ ಮೊಬಲಗು
7. ಸಂಬಂಧ ಪಟ್ಟ ರಶೀದಿ/ಬಿಲ್ಲು

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon