SSL Exam Passing Questions | SSLC Passing Package | 10th Passing Package | SSLC IMP Question | Social Science | Part 3

SSLC Scoring Package | SSLC Passing Package | Part 3

2022ರ ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಸಿದ್ದಪಡಿಸಿ ಅವುಗಳಿಗೆ ಮಾದರಿ ಉತ್ತರಗಳನ್ನು ಸಹ ಇಲ್ಲಿ ಒದಗಿಸಲಾಗಿದೆ. ಸಮಾಜ ವಿಜ್ಞಾನದ ಈ ಎಲ್ಲಾ ಪ್ರಶ್ನೆಗಳು 2022ರ 10ನೇ ತರಗತಿ ಪರೀಕ್ಷೆಗಾಗಿ ಸಿದ್ದಪಡಿಸಿರುವ ಪ್ರಶ್ನೆಗಳಾಗಿದ್ದು. ಇಲ್ಲಿರುವ ಪ್ರಶ್ನೆಗಳನ್ನು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಸ್ಕೋರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಅಂಕದ ಪ್ರಶ್ನೆಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೋಡಿಕೊಳ್ಳಿ.

ಈ ಎಲ್ಲಾ ಪ್ರಶ್ನೆಗಳ ವಿಡಿಯೋ ಪಾಠಕ್ಕಾಗಿ ಇಲ್ಲಿ ಬೇಟಿ ನೀಡಿ.

ಭಾಗ-1, 2, 3, 4, 5 & 6 ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

11. ಸ್ವಾತಂತ್ರ್ಯ ಹೋರಾಟದಲ್ಲಿ ಮಂದಗಾಮಿಗಳ ಪಾತ್ರವನ್ನು ತಿಳಿಸಿ?
1. ಬ್ರಿಟಿಷರ ಆಡಳಿತದಲ್ಲಿ ನಂಬಿಕೆ
2. ಬ್ರಿಟಿಷರಿಗೆ ಮನವಿಗಳನ್ನು ಸಲ್ಲಿಸುವುದು.
3. ಜನರಲ್ಲಿ ರಾಜಕೀಯ ಜಾಗೃತಿ
4. ಭಾರತದಲ್ಲಿ ಕೈಗಾರಿಕಾಭಿವೃದ್ದಿ ಮಾಡುವುದು
5. ಸೈನಿಕವೆಚ್ಚ ಕಡಿಮೆ ಮಾಡುವುದು
6. ಭಾರತೀಯರಿಗೆ ಉತ್ತಮ ಶಿಕ್ಷಣ ನೀಡುವುದು
7. ಬಡತನ ಅದ್ಯಯನ ಮತ್ತು ಪರಿಹಾರ
8. ಸಂಪತ್ತಿನ ಸೋರಿಕೆ ಸಿದ್ದಾಂತ ಪ್ರತಿಪಾದನೆ

12. ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರಗಾಮಿಗಳ ಪಾತ್ರವನ್ನು ತಿಳಿಸಿ?/ಬಾಲಗಂಗಾಧರ ತಿಲಕ್‌ ರವರ ಪಾತ್ರವನ್ನು ತಿಳಿಸಿರಿ?
1. ಬಂಗಾಳ ವಿಭಜನೆಗೆ ವಿರೋಧ
2. ಸ್ವದೇಶಿ ಚಳುವಳಿ ಆರಂಭಿಸಿದರು
3. ತಿಲಕರು “ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ಪಡೆಯುತ್ತೇನೆ” ಎಂದು ಘೋಷಿಸಿದರು.
4. ಗಣೇಶ ಮತ್ತು ಶಿವಾಜಿ ಉತ್ಸವಗಳ ಆರಂಭ
5. ಕೇಸರಿ ಮತ್ತು ಮರಾಠ ಪತ್ರಿಕೆಗಳ ಆರಂಭ
6. ಸಾಮಾನ್ಯ ಜನರ ಹೋರಾಟಕ್ಕೆ ಪ್ರೇರಣೆ ನೀಡಿದರು.
7.ವಿದೇಶಿ ವಸ್ತುಗಳ ಬಹಿಷ್ಕಾರ
8. ಗೀತಾ ರಹಸ್ಯ ಗ್ರಂಥದ ರಚನೆ

13.ಮಹಿಳೆಯರ ಸ್ಥಾನಮಾನ ಉತ್ತಮಪಡಿಸಲು ಸರ್ಕಾರ ಕೈಗೊಂಡ ಕ್ರಮಗಳು ಯಾವುವು?
1. ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಸ್ಥಾಪನೆ
2. ಮಹಿಳಾ ಶಿಕ್ಷಣಕ್ಕೆ ಒತ್ತು.
3. ಬಾಲ್ಯ ವಿವಾಹ ನಿಷೇಧ ಕಾಯಿದೆ ಜಾರಿ
4. ಸ್ತ್ರೀ ಶಕ್ತಿ ಕಾರ್ಯಕ್ರಮ
5. ಸ್ವ-ಉದ್ಯೋಗಕ್ಕಾಗಿ ಸಾಲ ಸೌಲಭ್ಯ
6. ರಾಜಕೀಯದಲ್ಲಿ ಮೀಸಲಾತಿ
7. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ
8. ಮಹಿಳಾ ಆಯೋಗ ರಚನೆ
9. ಸ್ತ್ರೀಶಕ್ತಿ ಸಂಘಗಳ ರಚನೆ.

14. ಭಾರತ ಮತ್ತು ರಷ್ಯಾದ ನಡುವಿನ ಸಂಬಂಧ ವಿವರಿಸಿ?
1. ಕಾಶ್ಮೀರ ಸಮಸ್ಯೆಗೆ ಬೆಂಬಲ
2. ಚೀನಾ ದಾಳಿಯನ್ನು ಖಂಡಿಸಿತು.
3. 1971ರಲ್ಲಿ 20 ವರ್ಷಗಳ ಶಾಂತಿ ಒಪ್ಪಂದಕ್ಕೆ ಸಹಿ
4. ಬಿಲಾಯ್‌, ಬೊಕಾರೋ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ರಷ್ಯ ಆರ್ಥಿಕ ನೆರವು
5. ವ್ಯಾಪಾರ & ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಗೆ ನೆರವು
6. ಭದ್ರತಾ ಸಮಿತಿಯಲ್ಲಿನ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಪ್ರತಿಪಾದನೆ

15. ಅಸ್ಪೃಶ್ಯತೆ ನಿವಾರಣೆಗೆ ಸಂವಿಧಾನತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನು ಪಟ್ಟಿಮಾಡಿ?
1. ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆಯನ್ನು ತೊಡೆದು ಹಾಕಿದೆ.
2. 1955ರಲ್ಲಿ ಅಸ್ಪೃಶ್ಯತಾ ಅಪರಾಧ ಕಾಯ್ದೆ ಜಾರಿ
3. 1976ರಲ್ಲಿ ನಾಗರೀಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿ
4. ಸಾರ್ವತ್ರಿಕ ಮತದಾನದ ಹಕ್ಕು
5. ಸಮಾನತೆಯ ಹಕ್ಕನ್ನು ಎಲ್ಲಾ ನಾಗರೀಕರಿಗೂ ನೀಡಿದೆ.
6. ಹಿಂದುಳಿದ ಜಾತಿಯವರಿಗೆ ಶೈಕ್ಷಣಿಕ & ಉದ್ಯೋಗದಲ್ಲಿ ಮೀಸಲಾತಿ ನೀಡಿದೆ.
7. ವಿಶೇಷ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಲಾಗಿದೆ.
8. ರಾಜಕೀಯ ಮೀಸಲಾತಿ ನೀಡಿದೆ.

16. ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಪಾತ್ರವೇನು?/ ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್‌ ರಾಜ್‌ ಸಂಸ್ಥೆಗಳು ಹೇಗೆ ಸಹಾಯಕವಾಗಿದೆ?
1. ಗ್ರಾಮಗಳಿಗೆ ರಸ್ತೆ, ಚರಂಡಿ, ನೀರು ಮುಂತಾದ ಮೂಲ ಸೌಕರ್ಯ ಕಲ್ಪಿಸುವುದು
2.ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ಪ್ರೋತ್ಸಾಹ
3.ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳ ವಿಸ್ತರಣೆ
4. ಬಡತನ ಮತ್ತು ನಿರುದ್ಯೋಗವನ್ನು ನಿವಾರಿಸುವುದು.
5. ವಸತಿ ಹೀನರಿಗೆ ಮನೆಗಳನ್ನು ನಿರ್ಮಿಸಿಕೊಡುತ್ತವೆ.
6. ಸರ್ಕಾರದ ಸೌಲಭ್ಯಗಳನ್ನು ದೊರಕಿಸುವುದು.
7. ಸಾಮಾಜಿಕ ಕಲ್ಯಾಣ ಸೇವೆಗಳನ್ನು ಒದಗಿಸುವುದು.
8. ಕೃಷಿ, ಪಶುಪಾಲನೆ, ಮೀನುಗಾರಿಕೆ ಇತ್ಯಾದಿಗಳ ಅಭಿವೃದ್ಧಿ
9. ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳ ಅಭಿವೃದ್ಧಿ

17. ಬ್ಯಾಂಕ್‌ ನಿರ್ವಹಿಸುವ ಕಾರ್ಯಗಳಾವುವು? ಬ್ಯಾಂಕ್‌ ಸಲ್ಲಿಸುವ ಸೇವೆಗಳಾವುವು?/ ಬ್ಯಾಂಕ್‌ ಖಾತೆ ತೆರೆಯುವುದರಿಂದಾಗುವ ಅನುಕೂಲಗಳಾವುವು?/ಬ್ಯಾಂಕ್‌ ನ ಗುಣಲಕ್ಷಣಗಳಾವುವು?
1. ಠೇವಣಿಗಳ ಅಂಗೀಕಾರ
2. ಸಾಲಗಳನ್ನು ಕೊಡುವುದು.
3. ಸಾಲ ಪತ್ರಗಳನ್ನು & ಜವಾಬ್ದಾರಿ ಪತ್ರಗಳನ್ನು ನೀಡುವುದು
4. ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು
5. ಹಣದ ಭದ್ರತೆ ಕಾಪಾಡುತ್ತದೆ.
6. ಹಣದ ವಹಿವಾಟು ಮಾಡುವುದು.
7. ಕ್ರೆಡಿಟ್‌ ಕಾರ್ಡು & ಜಮಾ ಕಾರ್ಡುಗಳನ್ನು ಕೊಡುವುದು.
8. ಬ್ಯಾಂಕ್‌ ಒಂದು ಸಂಸ್ಥೆ/ಕಂಪನಿ(ಗುಣ ಲಕ್ಷಣಕ್ಕೆ ಮಾತ್ರ)

18. ಕೈಗಾರಿಕೆಗಳ ಸ್ಥಾನೀಕರಣವನ್ನು ನಿರ್ಧರಿಸುವ ಅಂಶಗಳಾವುವು?/ಕೈಗಾರಿಕೆಗಳ ಅಭಿವೃದ್ಧಿಯನ್ನು ನಿರ್ಧರಿಸುವ ಅಂಶಗಳು/ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಸ್ಥಾನೀಕರಣವನ್ನು ನಿರ್ಧರಿಸುವ ಅಂಶಗಳು/ ಸಕ್ಕರೆ ಕೈಗಾರಿಕೆಯ ಸ್ಥಾನೀಕರಣ ನಿರ್ಧರಿಸುವ ಪ್ರಮುಖ ಅಂಶಗಳು ಯಾವುವು?
1.ಕಚ್ಚಾ ವಸ್ತುಗಳ ಲಭ್ಯತೆ (ಆಯಾ ಕೈಗಾರಿಕೆಯ ಕಚ್ಚಾವಸ್ತು)
2. ಶಕ್ತಿ ಸಂಪನ್ಮೂಲಗಳ ಪೂರೈಕೆ
3. ಸಾರಿಗೆ ಮತ್ತು ಸಂಪರ್ಕದ ವ್ಯವಸ್ಥೆ
4. ಮಾರುಕಟ್ಟೆ ಸೌಲಭ್ಯ
5. ಬಂಡವಾಳ
6. ಕಾರ್ಮಿಕರು ಮತ್ತು ನೀರು ದೊರೆಯುವಿಕೆ
7. ಸೂಕ್ತ ವಾಯುಗುಣ
8. ಸರ್ಕಾರದ ನೀತಿ ನಿಯಮಗಳು

19. ಸ್ವಾತಂತ್ರ್ಯ ಚಳುವಳಿಯಲ್ಲಿ ಸುಭಾಷ್‌ ಚಂದ್ರಬೋಸ್‌ರವರ ಪಾತ್ರವನ್ನಿ ತಿಳಿಸಿರಿ?
1. ಉನ್ನತ ಹುದ್ದೆ ತ್ಯಜಿಸಿ ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸಿದರು.
2. ಸಮಾಜವಾದಿ ಪಕ್ಷ ಸ್ಥಾಪಿಸಿದರು
3. ಫಾರ್ವರ್ಡ್‌ ಬ್ಲಾಕ್‌ ಪಕ್ಷ ಕಟ್ಟಿದರು
4. ವಿದೇಶದಲ್ಲಿರುವ ಭಾರತೀಯರ ಸಹಕಾರ ಪಡೆದರು
5. ಹಿಟ್ಲರ್‌ & ಮುಸುಲೋನಿಯ ಸಹಾಯ ಪಡೆಯಲು ಪ್ರಯತ್ನ
6. ಅಜಾದ್‌ ಹಿಂದ್‌ ರೇಡಿಯೋದಲ್ಲಿ ಭಾಷಣ
7. ಭಾರತೀಯ ರಾಷ್ಟ್ರೀಯ ಸೇನೆ ಸ್ಥಾಪಿಸಿದರು
8. ದೆಹಲಿ ಚಲೋಗೆ ಕರೆ ನೀಡಿದರು
9. ನನಗೆ ರಕ್ತಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ
10. ವಿಮಾನ ಅಪಘಾತದಲ್ಲಿ ಮರಣ

20. ಸ್ವಾತಂತ್ರ್ಯ ಸಂಗ್ರಾಮದಲ್ಲಿ “ಬುಡಕಟ್ಟು ದಂಗೆ”ಗಳ ಪಾತ್ರ ತಿಳಿಸಿ?
1. ಬ್ರಿಟಿಷರ ಕಂದಾಯ & ಅರಣ್ಯ ನೀತಿಗಳು ದಂಗೆಗೆ ಕಾರಣವಾದವು.
2. ಕರ್ನಾಟಕದಲ್ಲಿ ಹಲಗಲಿಯ ಬೇಡರ ಬಂಡಾಯ ಮುಖ್ಯವಾದದ್ದು
3. ಸಂತಾಲರು ಬ್ರಿಟಿಷರು ಮತ್ತು ಲೇವಾದೇವಿದಾರರಿಂದ ಶೋಷಣೆಗೆ ಒಳಗಾದರು.
4. ಇವರ ನೀತಿಯಿಂದಾಗಿ ಸಂತಾಲರು ನಿರ್ಗತಿಕರಾದರು.
5. ಬುಡಕಟ್ಟು ಜನರು ಜಮೀನ್ದಾರರನ್ನು ಲೂಟಿ ಮಾಡಲು ನಿರ್ಧರಿಸಿದರು.
6. ಅನೇಕ ಕಡೆ ಜಮೀನ್ದಾರರನ್ನು ಹತ್ಯೆ ಮಾಡಲಾಯಿತು.
7. ಜಮೀನ್ದಾರರು, ಲೇವಾದೇವಿಗಾರರು ಫಲಾಯನ ಮಾಡಿದರು.
8. ದಂಗೆಗಳನ್ನು ಹತ್ತಿಕ್ಕಲು ಬ್ರಿಟಿಷರು ಸೈನ್ಯ ಬಳಸಿದರು.
9. ಮುಂದಿನ ಅನೇಕ ಹೋರಾಟಗಳಿಗೆ ಪ್ರೇರಣೆ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon