ಭಾರತಕ್ಕೆ ಯೋರೋಪಿಯನ್ನರ ಆಗಮನ | 10ನೇ ತರಗತಿ ಹೊಸ ಪಠ್ಯಪುಸ್ತಕದ ಅಧ್ಯಾಯ 1 | SSLC New Text Book Chapter 1 |

SSLC Social Science New text Book Chapter 1
ಅಧ್ಯಾಯ 1- ಭಾರತಕ್ಕೆ ಯೂರೋಪಿನ್ನರ ಆಗಮನ

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.

1. 1453ರಲ್ಲಿ ಆಟೋಮಾನ್ ಟರ್ಕರು _____ ನಗರವನ್ನು ವಶಪಡಿಸಿಕೊಂಡರು.

ಉತ್ತರ: ಕಾನಸ್ಟಾಂಟಿನೋಪಲ್

2. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು _____ ಕಂಡುಹಿಡಿದನು.

ಉತ್ತರ: ವಾಸ್ಕೋಡಗಾಮ

3. 1741ರಲ್ಲಿ ಡಚ್ಚರು ___ ಮೇಲೆ ಯುದ್ಧ ಸಾರಿದರು.

ಉತ್ತರ : ತಿರುವಾಂಕೂರು

4. ಭಾರತದಲ್ಲಿದ್ದ ಫ್ರೇಂಚರ ರಾಜಧಾನಿ ___

ಉತ್ತರ : ಪುದುಚೇರಿ (ಪಾಂಡಿಚೇರಿ)

5. ರಾಬರ್ಟ ಕ್ಲೈವನು1757ರಲ್ಲಿ ಸಿರಾಜ್-ಉದ್-ದೌಲನ ಮೇಲೆ ____ ಕದನ ಸಾರಿದನು.

ಉತ್ತರ: ಪ್ಲಾಸಿ

6. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದದಿವಾನಿಹಕ್ಕನ್ನು ____ ನೀಡಿದನು.

ಉತ್ತರ: 2ನೇ ಷಾ ಅಲಂ

7. ಬಂಗಾಳದಲ್ಲಿದ್ವಿ ಪ್ರಭುತ್ವವನ್ನು ಜಾರಿಗೆ ತಂದವನು _____

ಉತ್ತರ: ರಾಬರ್ಟ ಕ್ಲೈವ್

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ:

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ

1. ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?

ಉತ್ತರ: ಭಾರತ ಮತ್ತು ಯೂರೋಪ ಮಧ್ಯ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಸಂಬಂಧಗಳು ಏರ್ಪಟ್ಟಿದ್ದವು.

ಪ್ರಮುಖವಾಗಿ ಭಾರತದ ಸಾಂಬಾರು ಪಧಾರ್ಥಗಳಾದ- ಮೆಣಸು, ಜೀರಿಗೆ, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಮುಂತಾದ ಉತ್ಪನ್ನಗಳಿಗೆ ಯೂರೋಪಿನಲ್ಲಿ ಅಪಾರವಾದ ಬೇಡಿಕೆ ಇತ್ತು.

ಮಧ್ಯಕಾಲದಲ್ಲಿಯು ಯುರೋಪ್, ಭಾರತ ಮತ್ತು ಇತರ ಏಷ್ಯಾ ದೇಶಗಳ ಮಧ್ಯೆ ವ್ಯಾಪಾರ ಮುಂದುವರಿಯಿತು.

ಪ್ರಾರಂಭದಲ್ಲಿ ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಪೂರ್ವ ರೋಮನ್ (ಬೈಜಾಂಟಿಯಂ) ಸಾಮ್ರಾಜ್ಯದ ರಾಜಧಾನಿಯಾದಕಾನ್ ಸ್ಟಾಂಟಿ ನೋಪಲ್ನಗರಕ್ಕೆ ತಲುಪಿಸುತ್ತಿದ್ದರು.

ಅಲ್ಲಿಂದ ಇಟಲಿಯ (ರೋಮನ್ ಸಾಮ್ರಾಜ್ಯದ ಭಾಗ) ವರ್ತಕರು ಅವುಗಳನ್ನು ಕೊಂಡು ಯೂರೋಪಿನ ದೇಶಗಳಲ್ಲಿ ಮಾರುತ್ತಿದ್ದರು.

2. ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳನ್ನು ಚರ್ಚಿಸಿ.

ಉತ್ತರ: ಏಷ್ಯಾ ಮತ್ತು ಯುರೋಪ್ ವ್ಯಾಪಾರಗಳು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು.

1453ರಲ್ಲಿ ಅಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.

ಇದರಿಂದಾಗಿ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರನಕ್ಕೆ ಬಂದವು.

ಇಟಲಿಯ ವರ್ತಕರ ಏಕಸೌಮ್ಯವನ್ನು ಮುರಿಯಲು ಸ್ಪೇನ್, ಪೋರ್ಚುಗಲ್, ಮುಂತಾದ ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲಾರಂಭಿಸಿದರು.

ಇದಕ್ಕೆ ಪೂರಕವಾಗಿ ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್ (ನಕ್ಷತ್ರ ಉನ್ನತಿ ಮಾಪನ), ಸಿಡಿಮದ್ದು, ಭೂಪಟ, ನಕ್ಷೆಗಳು ನಾವಿಕರಿಗೆ ಸಹಾಯವಾದವು.

3. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರುಗಳನ್ನು ಪಟ್ಟಿ ಮಾಡಿ.

ಉತ್ತರ:

1. ಪೋರ್ಚುಗಿಸರು

2. ಡಚ್ಚರು

3. ಇಂಗ್ಲಿಷರು ಹಾಗೂ

4. ಫ್ರೆಂಚರು

4. ಮಾರ್ತಾಂಡ ವರ್ಮನು ಡಚ್ಚರನ್ನು ಹೇಗೆ ನಿಯಂತ್ರಿಸಿದನು ?

ಉತ್ತರ : ರಾಮವರ್ಮನ ನಂತರ ತನ್ನ 24ನೇ ವಯಸ್ಸಿನಲ್ಲಿ ಮಾರ್ತಾಂಡ ವರ್ಮ ಪಟ್ಟಕ್ಕೆ ಬಂದನು.

ಕರಿಮೆಣಸಿನ ವ್ಯಾಪಾರದಲ್ಲಿ ಹಿಡಿತ ಸಾಧಿಸುತ್ತಿದ್ದ ಡಚ್ಚರನ್ನು ಸದೆಬಡಿಯಲು ಅನೇಕ ರಣತಂತ್ರಗಳನ್ನು ಮಾರ್ತಾಂಡ ವರ್ಮನು ಹೆಣೆದನು.

ಸುತ್ತಮುತ್ತಲಿನ ಪಾಳೆಗಾರರು ಮತ್ತು ಸಂಸ್ಥಾನಿಕರನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಅವರನ್ನು ಡಚ್ಚರ ವಿರುದ್ಧ ನಿಲ್ಲಿಸಿದನು.

ಕಾಯಂಕುಳಂ, ಕೊಚ್ಚಿ, ಪುಕಾಡ್ ಮತ್ತು ವಡಕ್ಕುಂಕೂರ್ ಸಂಸ್ಥಾನಗಳ ಜೊತೆಗೂಡಿ ಡಚ್ಚ್ ಸೇನೆಯು ತಿರುವಾಂಕೂರಿನ ಮೇಲೆ ಆಕ್ರಮಣ ಮಾಡಿದಾಗ ಮಾರ್ತಾಂಡ ವರ್ಮನ ಪಡೆ ಡಚ್ಚ್ ಕೂಟವನ್ನು ಸೋಲಿಸಿ ನೆಡುಮಂಗಡ ಮತ್ತು ಕೊಟ್ಟಾರಕರ ಎಂಬ ವ್ಯಾಪಾರಿ ಕೇಂದ್ರವನ್ನು ವಶಪಡಿಸಿಕೊಂಡಿತು.

ಅಲ್ಲದೆ ಮಾರ್ತಾಂಡ ವರ್ಮನುನಾವೆಂದೂ ಮೆಣಸಿನ ವ್ಯಾಪಾರದ ಹಕ್ಕನ್ನು ಪರಕೀಯರಿಗೆ ಬಿಟ್ಟು ಕೊಡೆವುಎಂದು ಡಚ್ಚರಿಗೆ ಖಾರವಾಗಿ ಪತ್ರ ಬರೆದನು.

1741ರಲ್ಲಿ ಡಚ್ಚ್ ಈಸ್ಟ್ ಇಂಡಿಯಾ ಕಂಪನಿ ಕೊಟ್ಟರಕರ ಸಂಸ್ಥಾನವನ್ನು ಮುಂದಿಟ್ಟುಕೊಂಡು ತಿರುವಾಂಕೂರಿನ ಮೇಲೆ ಯುದ್ಧವನ್ನು ಸಾರಿತು.

ಡಚ್ಚರ ಜೊತೆಗೆ ಸ್ಥಳೀಯ ಸಂಸ್ಥಾನಗಳೂ ಸೇರಿಕೊಂಡಿದ್ದರು.

ಆದರೆ ಮಾರ್ತಾಂಡ ವರ್ಮನ ಸೈನ್ಯ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿತು.

ಡಚ್ಚ್ ಪಡೆಗಳು ಕೊಚ್ಚಿನ್ ಗೆ ಹಿಂತಿರುಗಿದವು.

ಆದರೆ ಡಚ್ಚರ ಸಿಲೋನಿನಿಂದ ಮತ್ತಷ್ಟು ಪಡೆಗಳನ್ನು ಕರೆಸಿಕೊಂಡು ಮಾರ್ತಾಂಡ ವರ್ಮನ ಮೇಲೆ ದಂಡೆತ್ತಿ ಬಂದರು.

1741 ಆಗಸ್ಟ್ 10 ರಂದು ಕೊಳಚ್ಚಲ್ ಎಂಬಲ್ಲಿ ಮಾರ್ತಾಂಡ ವರ್ಮ ಮತ್ತು ಡಚ್ಚರ ನಡುವೆ ನಾಲ್ಕು ದಿನಗಳ ಕಾಲ ಭೀಕರ ಕದನ ನಡೆಯಿತು.

ಅಂತಿಮವಾಗಿ ತಿರುವಾಂಕೂರು ಸೈನ್ಯ ಯುದ್ಧದಲ್ಲಿ ಮೇಲುಗೈ ಸಾಧಿಸಿತು.

ಇಡೀ ದಕ್ಷಿಣ ಭಾರತದಿಂದ ಡಚ್ಚರನ್ನು ಕಿತ್ತೊಗೆಯಬೇಕೆಂದು ಪಣತೊಟ್ಟ, ಕೇರಳ ಮತ್ತು ತಮಿಳುನಾಡಿನಲ್ಲಿ ಮೇಣಸಿನ ವ್ಯಾಪಾರದಲ್ಲಿ ಹಕ್ಕನ್ನು ಸ್ಥಾಪಿಸಿದ.

ಡಚ್ಚರ ಹಿಡಿತದಲ್ಲಿದ್ದ ಬಂದರುಗಳನ್ನು ಮರಳಿ ಪಡೆದನು.

ಅಂತಿಮವಾಗಿ 1753 ಆಗಸ್ಟ್ 15 ರಂದು ನಡೆದ ಒಪ್ಪಂದದಲ್ಲಿ ಡಚ್ಚ್ ಪಡಗಳು ತಮ್ಮ ಸಂಪೂರ್ಣ ಅಧಿಕಾರವನ್ನು ತಿರುವಾಂಕೂರಿಗೆ ಒಪ್ಪಸಿ ಶರಣಾದವು.

5. ಎರಡನೇ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ.

ಉತ್ತರ:

ಬದಲಾದ ಸನ್ನಿವೇಶದಲ್ಲಿ ಫ್ರೆಂಚರು ಅಸಫಜಾನ ಮತ್ತೋಬ್ಬ ಮಗನಾದ ಸಲಾಬತ್ ಜಂಗನನ್ನು ಹೈದರಾಬಾದಿನ ನಿಜಾಮನನ್ನಾಗಿ ಮಾಡಿದರು.

ಅವನ ರಕ್ಷಣೆಗಾಗಿ ಆಸ್ಥಾನದಲ್ಲಿ ಫ್ರೆಂಚರು ತಮ್ಮ ಸೈನ್ಯ ಸಹಿತವಾಗಿಬುಸ್ಸಿಎಂಬ ಅಧಿಕಾರಿಯನ್ನು ನೇಮಿಸಿದರು.

ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನು ಕಾರ್ನಾಟಿಕ್ ನವಾಬನಾಗಿದ್ದನು.

ಆದರೆ ಇಂಗ್ಲೀಷ್ ಈಸ್ಟ್ ಇಡಿಂಯಾ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವನು ಕಾರ್ನಾಟಿಕದ ರಾಜಧಾನಿ ಆರ್ಕಾಟಿನ ಮೇಲೆ ಆಕ್ರಮಣ ಮಾಡಿ ಫ್ರೆಂಚರು ಮತ್ತು ಚಂದಾಸಾಹೇಬನನ್ನು ಸೋಲಿಸಿದನು.

ಅಂತಿಮವಾಗಿ ಯುದ್ಧದಲ್ಲಿ ಚಂದಾಸಾಹೇಬನನ್ನು ಬಂಧಿಸಿ ಹತ್ಯೆ ಮಾಡಲಾಯಿತು.

ಅವನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ನವಾಬನನ್ನಾಗಿ ಮಾಡಿದರು.

ಕೊನೆಗೆ ಎರಡನೇಯ ಕಾರ್ನಾಟಿಕ್ ಯುದ್ಧವುಪಾಂಡಿಚೇರಿಒಪ್ಪಂದದೊಂದಿಗೆ ಮುಕ್ತಾಯವಾಯಿತು.

ಫ್ರೇಂಚರು ಡೂಪ್ಲೇಯನ್ನು ಹಿಂದಕ್ಕೆ ಕರೆಯಿಕೊಂಡರು.

ಯುದ್ಧವು ಫ್ರೇಂಚರಿಗೆ ರಾಜಕೀಯ ಹಿನ್ನಡೆಯನ್ನು ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದು ಕೊಟ್ಟಿತು.

6. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ

ಉತ್ತರ: ಕಾರಣಗಳು:- ದಸ್ತಕ್ಗಳ ದುರುಪಯೋಗ

ಅನುಮತಿ ಇಲ್ಲದೆ ಕೋಟೆಯ ದುರಸ್ಥಿ, ಕಪ್ಪುಕೋಣೆ ದುರಂತ

ಪರಿಣಾಮಗಳು:- ಯುದ್ಧವು ಭಾರತೀಯರಲ್ಲಿದ್ದ ಅನೈಕ್ಯತೆ, ಅಸಂಘಟನೆ ಮತ್ತು ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.

ಮೀರ್ ಜಾಫರ್ ಬಂಗಾಳದ ನವಾಬನಾದನು.

ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.

ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಪರಿಹಾರವಾಗಿ ಮೀರ್ ಜಾಫರನು ಕಂಪನಿಗೆ 17 ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನು.

7. ಬಕ್ಸಾರ್ ಕದನದ ಪರಿಣಾಮಗಳಾವುವು?

ಉತ್ತರ:

1. ಈಸ್ಟ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನದಿವಾನಿಹಕ್ಕನ್ನು ಎರಡನೇ ಷಾ ಆಲಂ ನೀಡಿದನು.

2. ಷಾ ಅಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೇಲ್ಲ ಬಿಟ್ಟುಕೊಡಬೇಕಾಯಿತು.

3. ‘ಔದ್ ನವಾಬನಾದ ಷುಜ್-ಉದ್-ದೌಲನು ಕಂಪನಿಗೆ ಯುದ್ಧ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.

4. ಮೀರ್ ಜಾಫರ್ ಮರಣ ಹೊಂದಿದ್ದರಿA ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.







10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon