ಬ್ರಿಟಿಷ ಆಳ್ವಿಕೆಯ ವಿಸ್ತರಣೆ ಪ್ರಶ್ನೋತ್ತರಗಳು | 10ನೇ ತರಗತಿ ಇತಿಹಾಸ ಅಧ್ಯಾಯ 2 ಪ್ರಶ್ನೋತ್ತರಗಳು | ಹತ್ತನೇಯ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯದ ಪ್ರಶ್ನೋತ್ತರಳು |

10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯ ಪುಸ್ತಕದ ಪ್ರಶ್ನೋತ್ತರಗಳು
ಅಧ್ಯಾಯ-2
ಬ್ರಿಟಿಷ ಆಳ್ವಿಕೆಯ ವಿಸ್ತರಣೆ

Video Lesson


I.
ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.

1. ಮೊದಲನೇ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ _____ ಒಪ್ಪಂದ ಆಯಿತು.

ಉತ್ತರ: ಸಾಲ್‌ಬಾಯ್

2. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು _____

ಉತ್ತರ: ಲಾರ್ಡ್ ವೆಲ್ಲೆಸ್ಲಿ

3. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು___ರಲ್ಲಿ ಜಾರಿಗೆ ತರಲಾಯಿತು

ಉತ್ತರ: 1848

4. ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು ಜಾರಿಗೆ ತಂದವನು ____

ಉತ್ತರ: ಡಾಲ್‌ಹೌಸಿ

ವಿದ್ಯಾರ್ಥಿವೇತನ ಮಂಜೂರಾತಿ ಪರೀಕ್ಷಿಸಿ

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ

1. ಮೊದಲನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣಗಳನ್ನು ವಿವರಿಸಿ.

ಉತ್ತರ: 
ಮರಾಠರ ಬಲಿಷ್ಠ ಪೇಶ್ವೆ ಮಾಧವರಾವ್ ತೀರಿಕೊಂಡದ್ದು ಮರಾಠರಿಗೆ ತುಂಬಲಾರದ ನಷ್ಟವಾಯಿತು.
ಪೇಶ್ವೆ ಸ್ಥಾನಕ್ಕೆ ಅವನ ತಮ್ಮ ನಾರಾಯಣರಾಯನು ಬಂದನಾದರೂ ಅವನನ್ನು ಚಿಕ್ಕಪ್ಪ ರಘೋಬ (ರಘುನಾಥರಾವ್)ನು ಕೊಲೆ ಮಾಡಿದನು.
ಇದರಿಂದ ಪೇಶ್ವೆಯ  ಸ್ಥಾನಕ್ಕೆ ಕಲಹ ಏರ್ಪಟ್ಟಿತು.
ನಾನಾ ಫಡ್ನವೀಸ್ ನೇತೃತ್ವದಲ್ಲಿ ಪೇಶ್ವೆ ಸ್ಥಾನಾಕಾಂಕ್ಷಿಯಾದ ರಘೋಬನ ಬದಲು ನಾರಾಯಣರಾಯನ ಮಗ ಎರಡನೇ ಮಾಧವರಾವ್‌ಗೆ ಮರಾಠ ಒಕ್ಕೂಟವು ಪಟ್ಟಕಟ್ಟಿತು.
ಮರಾಠ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗದೆ ರಘೋಬನು ಬ್ರಿಟಿಷರ ಬೆಂಬಲ ಕೋರಿದನು.
ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು.
ಬ್ರಿಟಿಷರು ಮತ್ತು ಮರಾಠ ಒಕ್ಕೂಟಗಳ ನಡುವೆ 1775-1782ರವರೆಗೆ ನಡೆದ ದೀರ್ಘ ಯುದ್ಧದಲ್ಲಿ ಮರಾಠರು ಪ್ರಾರಂಭಿಕ ಯಶಸ್ಸನ್ನು ಸಾಧಿಸಿದರೂ, ಅಂತಿಮವಾಗಿ ಅಹಮದಾಬಾದ್ ಅನ್ನು ಕಳೆದುಕೊಂಡರು.
ಮರಾಠ ಒಕ್ಕೂಟವು ಯುದ್ಧ ಮುಂದುವರಿಸಲಾಗದೆ ಬ್ರಿಟಿಷರೊಂದಿಗೆ "ಸಾಲ್‌ಬಾಯಿ" ಒಪ್ಪಂದ ಮಾಡಿಕೊಂಡಿತು.
ಎರಡನೇ ಮಾಧವರಾವನನ್ನು ಪೇಶ್ವೆಯಾಗಿ ನೇಮಿಸಲಾಯಿತು.

2. ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳಾವುವು? ವಿವರಿಸಿ

ಉತ್ತರ: 
ಭಾರತೀಯ ರಾಜನು ಬ್ರಿಟಿಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು.
ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು. ಇಲ್ಲವೇ ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟುಕೊಡಬೇಕು.
ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕು.
ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯೂರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.
ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ ಅಥವಾ ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್‌ನ ಸಮ್ಮತಿ ಬೇಕು.
ಇದಕ್ಕೆ ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.

3. ಮೂರನೇ ಆಂಗ್ಲೋ ಮರಾಠ ಯುದ್ಧವನ್ನು ವಿವರಿಸಿ

ಉತ್ತರ: 
ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು.
ಪೇಶ್ವೆ ಕೂಡ ಬ್ರಿಟಿಷರ ನಿಯಂತ್ರಣದಿಂದ ಮುಕ್ತಗೊಳ್ಳಲು ಹವಣಿಸುತ್ತಿದ್ದನು.
1817ರಲ್ಲಿ ಪೇಶ್ವೆಯು ಪೂನಾದ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.
ನಾಗಪೂರದ ಅಪ್ಪಾ ಸಾಹೇಬ ಮತ್ತು ಮಲ್ಲಾರಾವ್ ಹೋಳ್ಕರ್ ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು.
ಅಂತಿಮವಾಗಿ ಪೇಶ್ವೆ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧ 1818ರಲ್ಲಿ ಕೋರೇಗಾವ್ ಮತ್ತು ಅಷ್ಟಿ ಯುದ್ಧಗಳಲ್ಲಿ ಸೋತು ಶರಣಾದನು
ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಬಾಜಿರಾಯನಿಗೆ ವಿಶ್ರಾಂತಿ ವೇತನ ನೀಡಿದರು.
ಬದಲಿಗೆ ಶಿವಾಜಿಯ ವಂಶಸ್ಥ ಪ್ರತಾಪಸಿಂಹನನ್ನು ಸಣ್ಣ ರಾಜ್ಯ ಸತಾರಾದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಾಂಪ್ರದಾಯಿಕ ಮುಖಂಡನನ್ನಾಗಿಸುವ ಮೂಲಕ ಮರಾಠರ ಪ್ರತಿರೋಧವನ್ನು ನಿಗ್ರಹಿಸಿದರು.

4. ಬ್ರಿಟಿಷರ ಅಧಿಕಾರ ವಿಸ್ತರಣೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯು ಹೇಗೆ ಸಹಕಾರಿಯಾಯಿತು?

ಉತ್ತರ: 

1848ರಲ್ಲಿ ಭಾರತಕ್ಕೆ ಗವರ್ನರ್ ಜನರಲ್ ಆಗಿ ಬಂದ ಡಾಲ್ ಹೌಸಿಯು ಭಾರತದ ಎಲ್ಲ ದೇಶಿಯ ಸಂಸ್ಥಾನಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸುವ ಅಂತಿಮ ಪ್ರಯತ್ನವನ್ನು ನಡೆಸಿದರು.
ಡಾಲ್ ಹೌಸಿಯು ತನ್ನ ವಿಸ್ತರಣಾ ನೀತಿಯನ್ನು "ದತ್ತು ಮಕ್ಕಳಿಗೆ ಹಕ್ಕಿಲ್ಲ" ಎಂಬ ನೀತಿಯ ಮೂಲಕ ಸಾಧಿಸಿದನು.
ಈ ನೀತಿಯ ಪ್ರಕಾರ- "ಯಾವನೇ ಒಬ್ಬ ಬಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರದ ಹಕ್ಕಿರಲಿಲ್ಲ.
ಅಂತಹ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿ ಕೊಳ್ಳಲಾಗುತ್ತಿತು.
ಈ ನೀತಿಗೆ ಒಳಪಟ್ಟ ರಾಜ್ಯಗಳಲ್ಲಿ ಸತಾರ, ಜೈಪುರ್, ಸಂಬಲ್‌ಪುರ್, ಉದಯಪುರ್, ಝಾನ್ಸಿ, ನಾಗಪುರ, ಮೊದಲಾದವುಗಳು ಪ್ರಮುಖವಾದವುಗಳಾಗಿವೆ.
ಈ ರಾಜ್ಯಗಳ ರಾಜರಿಗೆ ಮಕ್ಕಳಿಲ್ಲದಿರುವುದನ್ನು ಮೊದಲೇ ಅರಿತಿದ್ದ ಬ್ರಿಟಿಷ್ ಗವರ್ನರ ಜನರಲ್‌ನು ಈ ನೀತಿಯನ್ನು ರಾಜಕೀಯ ಅಸ್ತ್ರವಾಗಿ ಜಾರಿಗೊಳಿಸದನು.

5. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾವುವು?

ಉತ್ತರ: 
ಸತಾರ,
ಜೈಪುರ್,
ಸಂಬಲ್ಪುರ್,
ಉದಯಪುರ್,
ಝಾನ್ಸಿ,
ನಾಗಪುರ್ ಮೊದಲಾದವುಗಳು







10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon