10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 8 : ಕೆಮ್ಮನೆ ಮೀಸೆವೊತ್ತೆನೇ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Kemmane Meesevottene |

karntakaeducations

ಪದ್ಯ - 8 : ಕೆಮ್ಮನೆ ಮೀಸೆವೊತ್ತೆನೇ

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1) ದ್ರೋಣರು ಪರಶುರಾಮರಲ್ಲಿಗೆ ಏಕೆ ಬಂದರು ?

ಉತ್ತರ :  ದ್ರವ್ಯಾರ್ಥಿಯಾಗಿ

2) ದ್ರೋಣರು ಯಾರೊಡನೆ ಪರಶುರಾಮನ ಬಳಿ ಬಂದರು ?

ಉತ್ತರ :  ಅಶ್ವತ್ಥಾಮನೊಡನೆ.

3) ಪರಶುರಾಮನು ದ್ರೋಣರಿಗೆ ಕೊಟ್ಟ ಪ್ರಧಾನ ಅಸ್ತ್ರಗಳಾವುವು ?

ಉತ್ತರ :  ವಾರುಣ, ವಾಯುವ್ಯ, ಆಗ್ನೇಯ, ಐಂದ್ರಾ (ಇಂದ್ರ)

4) ದ್ರುಪದನು ಪಡಿಯರನಿಗೆ ಏನೆಂದು ಹೇಳಿ ಕಳುಹಿಸಿದನು ?

ಉತ್ತರ :  ದ್ರೋಣನು ಯಾರೆಂದು ನಾನು ತಿಳಿಯೆನು, ಅವನನ್ನು ಹೊರಗೆ ತಳ್ಳು.

5) ಪರಶುರಾಮನು ಅರ್ಘಯ್ಯವನ್ನು ಯಾವುದರಲ್ಲಿ ನೀಡಿದನು ?

ಉತ್ತರ :  ಮಣ್ಣಿನ ಪಾತ್ರೆಯಲ್ಲಿ

6) ದ್ರೋಣರಿಗೆ ಪರಶುರಾಮನು ಅಘ್ರ್ಯವನ್ನು ಮಣ್ಣಿನ ಪಾತ್ರೆಯಲ್ಲಿ ನೀಡಲು ಕಾರಣವೇನು ?

ಉತ್ತರ :  ತನ್ನಲ್ಲಿದ್ದ ಎಲ್ಲ ಸಂಪತ್ತನ್ನು ಬೇಡಿದವರಿಗೆ ಮತ್ತು ಭೂಮಿಯನ್ನು ತನ್ನ ಗುರುವಿಗೆ ನೀಡಿದ್ದು, ತನ್ನ ಹತ್ತಿರ ಚಿನ್ನದ ಪಾತ್ರೆಗಳು ಇಲ್ಲದ ಕಾರಣ.

7) ದ್ರೋಣನು ದಿವ್ಯಾಸ್ತ್ರಗಳನ್ನೇ ನೀಡು ಎಂದು ಪರಶುರಾಮರಿಗೆ ಹೇಳಲು ಕಾರಣವೇನು ?

ಉತ್ತರ :  ನಿಮಗೆ ನೀಡಲು ತನ್ನ ಹತ್ತಿರ ಯಾವುದೇ ಬೇರೆ ಆಸ್ತಿಯಿಲ್ಲ. ಕೇವಲ ಬಿಲ್ಲು ಮತ್ತು ದಿವ್ಯಾಸ್ತ್ರಗಳು ಮಾತ್ರ ಇರುವುದಾಗಿ ಪರಶುರಾಮರು ಹೇಳಿದ್ದರಿಂದ, ದ್ರೋಣನು ವಿದ್ಯಾಧನವೇ ತನಗೆ ಧನ ಎಂದು ಹೇಳಿ ದಿವ್ಯಾಸ್ತ್ರಗಳನ್ನು ಪಡೆಯುತ್ತಾರೆ.

8) ದ್ರೋಣನಿಗೆ ಯಾವುದು ಧನವಾಗಿತ್ತು ?

ಉತ್ತರ :  ವಿದ್ಯೆಯೇ ಧನವಾಗಿತ್ತು.

9) ದ್ರುಪದನು ಎಲ್ಲಿ ಅರಸನಾಗಿದ್ದನು ?

ಉತ್ತರ :  ಛತ್ರಾವತಿಯಲ್ಲಿ

10) ದ್ರುಪದನು ಯಾವುದರಿಂದ ಮದೋನ್ಮತ್ತನಾಗಿದ್ದನು ?

ಉತ್ತರ :  ರಾಜ್ಯದ ಅಧಿಕಾರ ಮದದಿಂದ

11) ದ್ರೋಣನು ಏನೆಂದು ಶಪಥ ಮಾಡಿದನು ?

ಉತ್ತರ :  ಸಭೆಯಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನೀನು ಬೆರಗಾಗುವಂತೆ ಕಟ್ಟಿಸದೇ ಹೋದರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೇ ?

12) ನೊಣಕ್ಕೆ ಯಾವುದು ಶ್ರೇಷ್ಠ ಎಂದು ದ್ರೋಣನು ಹೇಳಿದನು ?

ಉತ್ತರ :  ನೊಣಕ್ಕೆ ಕಸದ ಕುಪ್ಪೆ (ತಿಪ್ಪೆ)ಯೇ ಶ್ರೇಷ್ಠ.

13) ಭಾರ್ಗವನಲ್ಲಿಗೆ ದ್ರವ್ಯಾರ್ಥಿಯಾಗಿ ಬಂದವರು ಯಾರು ?

ಉತ್ತರ :  ದ್ರೋಣ ಮತ್ತು ಅವನ ಮಗ ಅಶ್ವತ್ಥಾಮ.

14) ದ್ರೋಣನು ಹಣ ಬೇಡಲು ಪರಶುರಾಮನಲ್ಲಿಗೆ ಹೋಗಲು ಕಾರಣವೇನು ?

ಉತ್ತರ :  ದ್ರೋಣನಿಗೆ ಬಡತನ ಬರಲು.

15) ಪಂಪನ ವಿಕ್ರಮಾರ್ಜುನ ವಿಜಯ ಕೃತಿಗೆ ಇರುವ ಇನ್ನೊಂದು ಹೆಸರೇನು ?

ಉತ್ತರ :  ಪಂಪ ಭಾರತ.

16) ದ್ರೋಣನು ದ್ರುಪದನನ್ನು ಕೊಲ್ಲದೇ ಬಿಡಲು ಕಾರಣವೇನು ?

ಉತ್ತರ :  ದ್ರೋಣ ಮತ್ತು ದ್ರುಪದನು ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ.

17) ಚಟ್ಟರು - ಪದದ ಅರ್ಥವೇನು ?

ಉತ್ತರ :  ಶಿಷ್ಯರು.

18) ಸಿರಿಯೊಡನೆ ಏನು ಹುಟ್ಟಿತು ?

ಉತ್ತರ :  ಸಿರಿನೊಡನೆ ಕಳ್ಳು (ಮದ್ಯ) ಹುಟ್ಟಿತು (ಸಮುದ್ರ ಮಥನದಲ್ಲಿ ಲಕ್ಷ್ಮೀಯೊಡನೆ ಮದಿರೆ ಹುಟ್ಟಿತು)

19) ದ್ವಿಜವಂಶಜಂ - ಪದದ ಅರ್ಥವೇನು ?

ಉತ್ತರ :  ಬ್ರಾಹ್ಮಣ.

20) ಪಡಿಯರ್ (¾)  - ಪದದ ಅರ್ಥವೇನು ?

ಉತ್ತರ :  ದ್ವಾರಪಾಲಕ, ಸೇವಕ.

21) ದ್ರೋಣನ ಸಹಪಾಠಿ ಯಾರು ?

ಉತ್ತರ :  ಛತ್ರಾವತಿಯ ರಾಜನಾದ ದ್ರುಪದ.

22) ದ್ರೋಣ ಮತ್ತು ದ್ರುಪದನಿಗೆ ವಿದ್ಯಾಭ್ಯಾಸ ಕಲಿಸಿದ ಗುರು ಯಾರು ?

ಉತ್ತರ :  ಯಜ್ಞಸೇನ ಗುರುಗಳು.

23) ದ್ರುಪದನು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ದ್ರೋಣನಿಗೆ ಯಾವ ಭರವಸೆ ನೀಡಿದನು ?

ಉತ್ತರ :  ತಾನು ದೊರೆಯಾದಾಗ ತನ್ನ ಬಳಿ ಬಂದರೆ ಸಹಾಯ ಮಾಡುವುದಾಗಿ ದ್ರೋಣನಿಗೆ ದ್ರುಪದನು ಭರವಸೆ ನೀಡಿದನು.

24) ಜಟಾಸಮೂಹದಿಂದ ಕೂಡಿದವನು ಯಾರು ?

ಉತ್ತರ :  ಪರಶುರಾಮ.

25) ಅಘ್ರ್ಯ ಎಂದರೇನು ?

ಉತ್ತರ :  ಪೂಜ್ಯರಿಗೆ ಕೈ ತೊಳೆದುಕೊಳ್ಳಲು ನೀಡುವ ನೀರು.

26) ನಾರುಮುಡಿಯಿಂದ ಕೂಡಿದ ನಡುವುಳ್ಳವನು ಯಾರು ?

ಉತ್ತರ :  ಪರಶುರಾಮ.

27) ‘ಕುಂಭಸಂಭವ’ ಎಂದರೆ ಯಾರು ?

ಉತ್ತರ :  ದ್ರೋಣ.

28) ಐಶ್ವರ್ಯವು ಯಾವುದರೊಡನೆ ಹುಟ್ಟಿತು ಎಂದು ದ್ರೋಣನು ಹೇಳುತ್ತಾನೆ ?

ಉತ್ತರ :  ಐಶ್ವರ್ಯವು ಕಳ್ಳಿ(ಮದ್ಯ)ನೊಡನೆ ಹುಟ್ಟಿತು.

*****

Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 8 : ಕೆಮ್ಮನೆ ಮೀಸೆವೊತ್ತೆನೇ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Kemmane Meesevottene |


KarnatakaEducation Search 


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium







Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon