ಪ್ರಬಂಧ ಬರೆಯಿರಿ : “ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು” | Varadakshine Samajika Pidugu | Prabhanda Bareyiri |

ಪ್ರಬಂಧ ಬರೆಯಿರಿ: “ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು

 

1. ಪೀಠಿಕೆ

2. ವಿಷಯ ನಿರೂಪಣೆ

3. ಉಪಸಂಹಾರ

 


ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು :

ಪೀಠಿಕೆ: ವಿವಾಹದ ಸಂದರ್ಭದಲ್ಲಿ ಅಥವಾ ಮುಂಚಿತವಾಗಿ ವಧುವಿನ ಕಡೆಯವರು ವರನಿಗೆ ನೀಡುವ ಹಣ, ಬಂಗಾರ, ವಸ್ತುಗಳು, ನಿವೇಶನ, ವಾಹನ, ಉದ್ಯೋಗ ಕೊಡಿಸುವ ಭರವಸೆ ಮುಂತಾದ ಉಡುಗೊರೆಗಳನ್ನು ವರದಕ್ಷಿಣೆ ಎನ್ನುವರು.

ಈಗಿನ ಸಮಾಜದಲ್ಲಿ ಇದೊಂದು ಫ್ಯಾಶನ್ ಪಿಡುಗು ಎಂದೇ ಹೇಳಬಹುದು. ಇದೊಂದು ಸಾಮಾಜಿಕ ಪಿಡುಗಾಗಿದ್ದು, ಸಮಾಜದಲ್ಲಿ ಹೆಣ್ಣು ಹೆತ್ತ ಬಡವರು ತಮ್ಮ ಮಗಳ ಮದುವೆ ಮಾಡಲು ಕಣ್ಣೀರು ಸುರಿಸುವುದರೊಂದಿಗೆ ಯಮಪಾಶವಾಗಿದೆ.

ವಿಷಯ ನಿರೂಪಣೆ: ಮಾನವನ ಭೋಗ ಲಾಲಸೆಗೆ ಎಷ್ಟಿದ್ದರೂ ಸಾಲದು. ಅದು ಮದುವೆಯಾಗುವಾಗ ವಧುವಿನ ಕಡೆಯವರನ್ನು ವರದಕ್ಷಿಣೆಗಾಗಿ ಪೀಡಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

ಪೋಷಕರು ಮಗಳು ಸುಖವಾಗಿರಲೆಂದು ವರದಕ್ಷಿನೆ ನೀಡುವುದು ಸಹ ಅಷ್ಟೆ ಸಾಮಾನ್ಯವಾಗಿದೆ. ಇದರಿಂದ ಹೆಣ್ಣು ಮಕ್ಕಳು ಹುಟ್ಟುವುದೇ ಬೇಡವೆಂಬ ಮನೋಭಾವ ಬಡವರಲ್ಲಿ ಮೂಡುವಂತೆ ಮಾಡಿದೆ. ಕಾನೂನಿನ ಪ್ರಕಾರ ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಅಪರಾದ.

1961ರಲ್ಲಿಯೇ ವರದಕ್ಷಿಣೆ ವಿರೋಧಿ ಕಾನೂನನ್ನು ಜಾರಿಗೆ ತಂದಿದ್ದರೂ ಅದನ್ನು ಸರಿಯಾಗಿ ಬಳಸಲು ಕನ್ಯಾಪಿತೃಗಳು ಮುಂದೆ ಬರುತ್ತಿಲ್ಲ.

ಏಕೆಂದರೆ ತಮ್ಮ ಮಗಳ ಮುಂದಿನ ಜೀವನ ನಡೆಯುವುದು ಕಷ್ಟವಾಗುತ್ತದೆ ಎಂದು ಹೆದರುತ್ತಾರೆ. ದಿನನಿತ್ಯ ಸಮೂಹ ಮಾಧ್ಯಮಗಳಲ್ಲಿ ವರದಕ್ಷಿಣೆಯ ಕಿರುಕುಳದ ಆರೋಪಗಳು ಬರುತ್ತಿರುತ್ತವೆ. ಕೆಲವರಿಗೆ ಶಿಕ್ಷೆಯಾದ ಬಗ್ಗೆ ಪ್ರಕರಣಗಳಿವೆ.

ಆದರೂ ಪಿಡುಗನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದು ಸಾಧ್ಯವಾಗುತ್ತಿಲ್ಲ. ಇದನ್ನು ನಿವಾರಿಸಬೇಕಾದರೆ ಇಂದಿನ ಹೆಣ್ಣು ಮಕ್ಕಳು ಸ್ವಾವಲಂಬನೆ ಹಾದಿಯನ್ನು ತುಳಿಯಲು ಸಿದ್ಧರಾಗಬೇಕು.

ಸಮಾನತೆಗಾಗಿ ಹೋರಾಡವು ಸ್ತ್ರೀ ಸಂಘಗಳು ವರದಕ್ಷಣೆ ಕೊಡುವ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಡಿ ಹೋಗಲಾಡಸಬೇಕು. ಹೆಣ್ಣು ಅಬಲೆಯಲ್ಲ ಸಬಲೆ ಎಂಬ ಧೈರ್ಯ ಹೆಣ್ಣು ಮಕ್ಕಳಲ್ಲಿ ಮೂಡುವುದು ಅನಿವಾರ್ಯವಾಗಿದೆ.

ಒಟ್ಟಿನಲ್ಲಿ ಹೆಣ್ಣು ಮಕ್ಕಳು ವಿದ್ಯಾವಂತಾರಿ, ತಾವು ದುಡಿಮೆ ಮಾಡಲು ಕಲಿತರೆ ಯಾವುದೇ ಸ್ವಾಯತ್ತ ಜೀವನ ನಡೆಸಬಹುದಾಗಿದೆ. ಹೆಣ್ಣು ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುವಷ್ಟು ಆರ್ಥಿಕ ಸ್ವಾವಲಂಬನೆ ಪಡೆದರೆ ವರದಕ್ಷಿಣೆ ಪಿಡುಗು ತನ್ನಿಂತಾನೇ ನಿರ್ಮೂಲನೆ ಹೊಂದುತ್ತದೆ.

ಅದಕ್ಕಿಂತ ಹೆಚ್ಚಿನದಾಗಿ ವಿದ್ಯಾವಂತ ಯುವಕರು ವರದಕ್ಷಿಣೆ ಪಡೆಯುವುದನ್ನು ತ್ಯೇಜಿಸಿ ಸಮಾಜಕ್ಕೆ ಮಾದರಿಯಾಗಬೇಕು. ಮತ್ತು ಸರ್ಕಾರಗಳು ಪ್ರಬಲ ಕಾನೂನು ಜಾರಿಗೊಳಸಿಬೇಕು.

ಉಪಸಂಹಾರ: ಒಟ್ಟಿನಲ್ಲಿ ಸಮಾಜಕ್ಕೆ ಅಂಟಿಕೊಂಡಿರುವ ವರದಕ್ಷಿಣೆ ಪಿಡುಗನ್ನು ಸಮಾಜದಿಂದ ಕಿತ್ತು ಹಾಕಬೇಕು. ಪರಿವರ್ತನೆಯೇ ಜಗದ ನಿಯಮ ಎನ್ನುವಂತೆ ಸುಸಂಸ್ಕೃತ ಭಾರತದ ನಾಗರೀಕರಾದ ನಾವು ನಮ್ಮ ಮನಸ್ಸನ್ನು ಬದಲಾಯಿಸಿಕೊಂಡು ವರದಕ್ಷಿಣೆ ಪಡೆಯುವುದು ಮತ್ತು ಕೊಡುವುದುನ್ನು ತಿರಸ್ಕರಿಸಿ ಪ್ರಜ್ಞಾವಂತರಾಗಿ ಬಾಳಬೇಕು. ಕಾನೂನಿನ ಅರಿವು ಮೂಡಿಸಿ ಸಮಾಜದ ಜನರನ್ನು ಎಚ್ಚರಗೊಳಿಸಿ, ಸ್ತ್ರೀ-ಪುರುಷರಲ್ಲಿ ಅಭೇಧತೆಯನ್ನು ಮೂಡಿಸಿ ಸತಿಪತಿಗಳೊಂದಾಗಿ ಬಾಳುವಂತೆ, ಸಂಸಾರಗಳು ಗಟ್ಟಿಗೊಳ್ಳುವಂತೆ ಮಾಡಬೇಕು ಎನ್ನುವುದು ಎಲ್ಲರ ಆಶಯವಾಗಬೇಕು.

*****



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon