10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-1 ಯುದ್ಧ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು |

karntakaeducations

ಗದ್ಯ - 1 : ಯುದ್ಧ

ಒಂದು ಅಂಕದ ಪ್ರಶ್ನೆಗಳು : 

sslc kannada 1 mark imp questions


1) ರಾಹಿಲನು ಯಾರು ?

ಉತ್ತರ :  ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಒಬ್ಬ ಡಾಕ್ಟರ್

2) ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು ?

ಉತ್ತರ :  ಔಷಧ & ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ

3) ಗಡಿ ಪ್ರದೇಶದಲ್ಲಿ ಬ್ಲಾಕ್‍ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?

ಉತ್ತರ :  ಶತ್ರು ಸೈನಿಕರ ವೈಮಾನಿಕ ದಾಳಿಯಿಂದ ರಕ್ಷಿಸಿಕೊಳ್ಳಲು

4) ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯವುದು ?

ಉತ್ತರ :  ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ. ಸಂಕಷ್ಟಕೀಡಾದ ಮನುಷ್ಯರ ಕಡೆಯವನು

5) ಯುದ್ಧದ ಬಗ್ಗೆ ಮುದುಕಿಯ ಅಭಿಪ್ರಾಯವೇನು ?

ಉತ್ತರ :  ಎಲ್ಲರಿಗೂ ದೇಹಕ್ಕೂ ಮತ್ತು ಮನಸ್ಸಿಗೂ ಗಾಯ ಮಾಡುವುದೇ ಯುದ್ಧ

6) ಪೈಲಟ್‍ಗೆ ಯಾವುದರೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗಲಿಲ್ಲ ?

ಉತ್ತರ :  ಗ್ರೌಂಡಿನೊಡನೆ

7) ರಾಹಿಲನಿಗೆ ನದಿಯಲ್ಲಿ ಈಜಲು ಏಕೆ ಕಷ್ಟವಾಗುತ್ತಿತ್ತು ?

ಉತ್ತರ :  ಸೈನಿಕ ಉಡುಪಿನಲ್ಲಿ ಇದ್ದುದರಿಂದ

8) ರಾಹಿಲನಿಗೆ ನದಿಯ ತೀರ ಹೇಗೆ ಗೋಚರಿಸಿತು ?

ಉತ್ತರ :  ಮಿಂಚು ಮಿಂಚಿದ್ದರಿಂದ

9) ರಾಹಿಲನು ತೆವಳುತ್ತಿದ್ದಾಗ ಕಿವಿಗೆ ಏನು ಕೇಳಿಸಿತು ?

ಉತ್ತರ :  ಮಹಿಳೆಯೊಬ್ಬಳ ಆರ್ತನಾದ ಕೇಳಿಸಿತು

10) ಹೆಂಗಸೊಬ್ಬಳು ಮಗಳಿಗೆ ಏನೆಂದು ಸಾಂತ್ವನ ಮಾಡುತ್ತಿದ್ದಳು ?

ಉತ್ತರ :  ಏನು ಮಾಡಲಿ ಮಗಳೇ ? ಈ ಮಳೆಯಲ್ಲಿ ಈ ಕತ್ತಲೆಯಲ್ಲಿ ನಾನು ಯಾರನ್ನು ಕರೆಯಲಿ ? ಒಮ್ಮೆ ಬೆಳಗಾಗಿದ್ದರೆ ಸಾಕಾಗಿತ್ತು.

11) ಬಾಗಿಲ ಬಳಿ ನಿಂತು ರಾಹಿಲನು ಏನೆಂದು ಹೇಳಿದನು ?

ಉತ್ತರ :  ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ. ಪ್ಲೀಸ್ .......

12) ಮುದುಕಿಯು ದೀಪವನ್ನು ರಾಹಿಲನ ಬಳಿ ತಂದು ಏನೆಂದು ಪ್ರಶ್ನಿಸಿದಳು ?

ಉತ್ತರ :  ಯಾರಪ್ಪ ನೀನು ? ನಮ್ಮ ಕಡೆಯವನು ತಾನೇ ?

13) ರಾಹಿಲನು ಮಹಿಳೆಯನ್ನು ಪರೀಕ್ಷಿಸುವಾಗ ಬಾಂಬಿನ ಸದ್ದು ಕೇಳಿ ಮನದಲ್ಲಿ ಅಂದುಕೊಂಡಿದ್ದೇನು ?

ಉತ್ತರ :  ಜೀವಿಯೊಂದನ್ನು ಜೀವಸಹಿತ ಹೊರಹಾಕಲು ಈ ಹೆಣ್ಣು ಮಗಳು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾಳೆ. ಹೊರಗೆ ಯುದ್ಧದ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ

14) ರಾಹಿಲನ ಕಣ್ಣುಗಳನ್ನು ಕಂಡಾಗ ಮುದುಕಿಯು ಏನೆಂದುಕೊಂಡಳು ?

ಉತ್ತರ :  ಓ.... ಈ ಕಣ್ಣುಗಳು ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ ?

15) ಸೈನಿಕರ ಉಡುಪಿನಲ್ಲಿ ಬಂದವರು ಮುದುಕಿಗೆ ಏನೆಂದು ಪ್ರಶ್ನಿಸಿದರು ?

ಉತ್ತರ :  ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ ?

16) ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು ?

ಉತ್ತರ :  ಸೈನಿಕನಾಗಿದ್ದರಿಂದ ಯುದ್ಧಕ್ಕೆ ಹೋಗಿದ್ದನು

17) ಯುದ್ಧ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯನ ಹೆಸರು?

ಉತ್ತರ :  ರಾಹಿಲ

18) ಡಾಕ್ಟರ್ ರಾಹಿಲನು ಯಾವ ಉಡುಪು ಧರಿಸಿದ್ದನು ?

ಉತ್ತರ :  ಸೈನಿಕರ ಉಡುಪು

19) ರಾಹಿಲನನ್ನು ಮುದುಕಿಯು ಎಲ್ಲಿ ಅಡಗಿಸಿಟ್ಟಳು ?

ಉತ್ತರ :  ಸೋಸೆ ಮಲಗಿದ್ದ ಕೋಣೆಯ ಮಂಚದಡಿಯಲ್ಲಿ

20) ಯುದ್ಧ ವಿಮಾನ ಸ್ಪೋಟಿಸಿದಾಗ ಹೇಗೆ ಚದುರಿ ಬಿತ್ತು ?

ಉತ್ತರ :  ನೂರು ಹೋಳುಗಳಾಗಿ ಚದುರಿ ಬಿತ್ತು.

21) ಡಾಕ್ಟರ್ ರಾಹಿಲನಿಗೆ ಆದ ತೊಂದರೆ ಏನು ?

ಉತ್ತರ :  ಒಂದು ಕಾಲಿಗೆ ಪೆಟ್ಟಾಗಿತ್ತು ಮತ್ತು ಸೈನಿಕನ ಉಡುಪಿನಲ್ಲಿ ಇದ್ದುದರಿಂದ ಈಜಲು ಬಹಳ ತೊಂದರೆಯಾಗುತ್ತಿತ್ತು.

22) ರಾಹಿಲನಿಗೆ ಮಿಂಚಿನ ಬೆಳಕಿನಲ್ಲಿ ಕಣ್ಣಿಗೆ ಏನು ಕಾಣಿಸಿತು ?

ಉತ್ತರ :  ಸಮೀಪದಲ್ಲಿ ತೀರ, ಒಂಟಿ ಮನೆ ಕಾಣಿಸಿತು

23) ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯಾವುದು ?

ಉತ್ತರ :  ಯುದ್ಧ

24) ‘ಯುದ್ಧ’ ಪಾಠವು ಕನ್ನಡ ಸಾಹಿತ್ಯದ ಯಾವ ಪ್ರಕಾರದಲ್ಲಿದೆ ?

ಉತ್ತರ :  ಸಣ್ಣ ಕಥೆಗಳು

25) ಯುದ್ಧಕ್ಕೆ ಕಾರಣವಾದ ಅಂಶಗಳು ಯಾವುವು ?

ಉತ್ತರ :  ಸಾಮ್ರಾಜ್ಯ ವಿಸ್ತರಣೆ, ಲೋಭ, ಶಕ್ತಿಯ ಪ್ರದರ್ಶನ, ಕೌಟುಂಬಿಕ ಕಲಹಗಳು, ದ್ವೇಷ ಸಾಧನೆ


*****

karntakaeducations 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-1 ಯುದ್ಧ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು

SSLC 2021 Exam Questions

All Subjects MCQ : 

First Language Kannada ಪ್ರಥಮ ಭಾಷೆ ಕನ್ನಡ

ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ


ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ

ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು

Second Language English ದ್ವಿತೀಯ ಭಾಷೆ ಇಂಗ್ಲೀಷ

SSLC Second Language English MCQ



Prose -3 Gentleman of Rio en Medio 

Prose -4 Dr. B.R. Ambedkar

Prose -5 The Concert

Prose-7 Colours of Silence

Poem-7 The Blind Boy

English KSEEB Paper-1 With Ans

Third Language Hindi ತೃತೀಯ ಭಾಷೆ ಹಿಂದಿ

Science English Medium 

Science English Medium 

1 Mark Questions Effects of British Role In India 

Social Science ಸಮಾಜ ವಿಜ್ಞಾನ









Social Science English Medium Quiz 

International Institutions MCQ English Medium 


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon