10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ 4 ಕೌರವೇಂದ್ರನ ಕೊಂದೆ ನೀನು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Kouravendrana Konde ninu |

karntakaeducations

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ 4 ಕೌರವೇಂದ್ರನ ಕೊಂದೆ ನೀನು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Kouravendrana Konde ninu |









ಪದ್ಯ - 4 : ಕೌರವೇಂದ್ರನ ಕೊಂದೆ ನೀನು

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1) ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಏನೆಂದು ಕರೆದನು ?

ಉತ್ತರ :  ಮೈದುನ

2) ಕುಮಾರವ್ಯಾಸನ ಆರಾಧ್ಯ ದೈವ ಯಾರು ?

ಉತ್ತರ :  ಗದುಗಿನ ವೀರನಾರಾಯಣ

3) ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು ?

ಉತ್ತರ :  ನಕುಲ ಮತ್ತು ಸಹದೇವ.

4) ಕುಮಾರವ್ಯಾಸನಿಗಿರುವ ಬಿರುದು ಯಾವುದು ?

ಉತ್ತರ :  ರೂಪಕ ಸಾಮ್ರಾಜ್ಯ ಚಕ್ರವರ್ತಿ

5) ನಾರಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು ಏಕೆ ಬಂತು ?

ಉತ್ತರ :  ವ್ಯಾಸರ ಸಂಸ್ಕೃತ ಮಹಾಭಾರತ ಕೃತಿಯ ಮೊದಲ ಹತ್ತು ಪರ್ವಗಳನ್ನು ಕನ್ನಡದಲ್ಲಿ ರಚಿಸಿದ್ದರಿಂದ

6) ಜೀವನದಲ್ಲಿ ಸಂಘರ್ಷಕ್ಕೆ ಕಾರಣವಾದ ಅಂಶಗಳಾವುವು ?

ಉತ್ತರ :  ಛಲ, ಮತ್ಸರ

7) ಕರ್ಣಾಟ ಭಾರತ ಕಥಾಮಂಜರಿ - ಕೃತಿಯ ಇತರ ಹೆಸರುಗಳನ್ನು ಬರೆಯಿರಿ ?

ಉತ್ತರ :  ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ.

8) ಕೌರವೇಂದ್ರನ ಕೊಂದೆ ನೀನು ಪದ್ಯದ ಆಕರ ಗ್ರಂಥ ಯಾವುದು ?

ಉತ್ತರ :  ಕರ್ಣಾಟ ಭಾರತ ಕಥಾಮಂಜರಿ ಕಾವ್ಯದ ಉದ್ಯೋಗ ಪರ್ವ.

9) ಕುಮಾರವ್ಯಾಸ ಕವಿಯು ತನ್ನ ಕೃತಿಯಲ್ಲಿ ಯಾವ ಅಲಂಕಾರ ಬಳಸಿದ್ದಾನೆ ?

ಉತ್ತರ :  ರೂಪಕ ಅಲಂಕಾರ

10) ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು ?

ಉತ್ತರ :  ಮೈದುನತನದ ಸರಸ ಮಾಡಿ, ಕೈಹಿಡಿದು ಎಳೆದು ಪಕ್ಕದಲ್ಲಿ ಕುಳ್ಳಿರಿಸಿಕೊಂಡನು.

11) ಕುಮಾರವ್ಯಾಸನಿಗೆ ಇರುವ ಬಿರುದು ಯಾವುದು ?

ಉತ್ತರ :  ರೂಪಕ ಸಾಮ್ರಾಜ್ಯ ಚಕ್ರವರ್ತಿ

12) ಕುಮಾರವ್ಯಾಸನ ಮೂಲ ಹೆಸರೇನು ?

ಉತ್ತರ :  ಗದುಗಿನ ನಾರಾಣಪ್ಪ.

13) ಕೃಷ್ಣನು ಕರ್ಣನ ಮನದಲ್ಲಿ ಯಾವ ರೀತಿ ಭಯ ಬಿತ್ತಿದನು ?

ಉತ್ತರ :  ಪಾಂಡವರಿಗೂ, ಕೌರವರಿಗೂ, ಯಾದವರಿಗೂ ವಂಶ ಗೌರವದಲ್ಲಿ ಭೇದವಿಲ್ಲ. ನೀನು ನಿಜವಾಗಿಯೂ ಭೂಮಿಯ ಒಡೆಯ. ಅದರ ಅರಿವು ನಿನಗಿಲ್ಲ. ಕುಂತಿಯ ಮೊದಲೆಯ ಮಗ ನೀನು ಎಂದು ಜನ್ಮ ರಹಸ್ಯ ಹೇಳಿ ಕೃಷ್ಣನು ಕರ್ಣ ಮನದಲ್ಲಿ ಭಯ ಹುಟ್ಟಿಸಿದನು.

14) ಕರ್ಣನು ಯಾವ ಮಂತ್ರದಿಂದ ಜನಿಸಿದನು ?

ಉತ್ತರ :  ಸೂರ್ಯನ ಮಂತ್ರದಿಂದ

15) ಯಮಧರ್ಮನ ಮಂತ್ರದಿಂದ ಜನಿಸಿದ ಕುಂತಿ ಪುತ್ರನಾರು ?

ಉತ್ತರ :  ಧರ್ಮರಾಯ

16) ವಾಯು ದೇವನ ಅನುಗ್ರಹದಿಂದ ಕುಂತಿಗೆ ಹುಟ್ಟಿದ ಮಗನಾರು ?

ಉತ್ತರ :  ಭೀಮ

17) ಕುಂತಿಯು ಯಾವ ಮಂತ್ರದಿಂದ ಅರ್ಜುನನನ್ನು ಪಡೆದಳು ?

ಉತ್ತರ :  ಇಂದ್ರನ ಮಂತ್ರದಿಂದ

18) ಇನತನೂಜ ಎಂದರೆ ಯಾರು ?

ಉತ್ತರ :  ಕರ್ಣ

19) ಅಂತಕಾತ್ಮಜ ಎಂದರೆ ಯಾರು ?

ಉತ್ತರ :  ಧರ್ಮರಾಯ

20) ನಕುಲ ಸಹದೇವರ ತಾಯಿ ಯಾರು ?

ಉತ್ತರ :  ಮಾದ್ರಿ

21) ಕೃಷ್ಣನು ತನ್ನನ್ನು ಕೊಂದನು ಎಂದು ಕರ್ಣನು ನೊಂದುಕೊಳ್ಳಲು ಕಾರಣವೇನು ?

ಉತ್ತರ :  ಕೃಷ್ಣನು ತನ್ನ ಜನ್ಮ ರಹಸ್ಯ ತಿಳಿಸಿ ಕೊಂದನು ಎಂದು ಕರ್ಣನು ನೊಂದುಕೊಂಡನು.

22) ಜನ್ಮ ರಹಸ್ಯ ತಿಳಿದ ನಂತರ ಕರ್ಣನು ಕೃಷ್ಣನಿಗೆ ಯಾವ ಭರವಸೆ ನೀಡಿದನು ?

ಉತ್ತರ :  ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೇನು.

23) ಕೃಷ್ಣನು ಕರ್ಣನಿಗೆ ಯಾವ ರಾಜ್ಯದ ಆಸೆ ತೋರಿಸಿದನು ?

ಉತ್ತರ :  ಹಸ್ತಿನಾಪುರದ ರಾಜ್ಯ.

24) ಕೃಷ್ಣನು ಕರ್ಣನಿಗೆ ಯಾರ ಎಂಜಲಿಗೆ ಕೈಯೊಡ್ಡುವುದು ಕಷ್ಟ ಎಂದು ಹೇಳಿದನು ?

ಉತ್ತರ :  ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದು ಕಷ್ಟ ಎಂದನು.

25) ಕರ್ಣನು ರಾಜನಾದರೆ ಎಡಬಲದಲ್ಲಿ ಯಾರು ನಿಲ್ಲುವರು ಎಂದು ಕೃಷ್ಣ ಹೇಳುತ್ತಾನೆ ?

ಉತ್ತರ :  ಎಡದಲ್ಲಿ ಕೌರವರು, ಬಲದಲ್ಲಿ ಪಾಂಡವರು, ಮುಂದುಗಡೆ ಮಾದ್ರ ಮಾಗಧ ಯಾದವರು ನಿಲ್ಲುವರು.

26) ಕರ್ಣನು ತನ್ನ ಜನ್ಮರಹಸ್ಯ ತಿಳಿದು ದುಃಖಿತನಾಗಲು ಕಾರಣವೇನು ?

ಉತ್ತರ :  ಹರಿಯ ಹಗೆತನವು ಹೊಗೆ ತೋರದೆ ಸುಟ್ಟು ಹಾಕುವುದಲ್ಲದೆ ಸುಮ್ಮನೇ ಹೋಗುವುದೇ ಎಂದು ದುಃಖಿತನಾದನು

27) ಕರ್ಣನು ಯಾರ ಮನೆಯಲ್ಲಿ ಬೆಳೆದನು ?

ಉತ್ತರ :  ತಾಯಿಯಿಂದ ವಂಚಿತನಾದ ಕರ್ಣನು ಸೂತ ಪುತ್ರನಾಗಿ ಅಂಬಿಗನ ಮನೆಯಲ್ಲಿ ಬೆಳೆದನು

28) ಕರ್ಣನನ್ನು ಅಂಗರಾಜ್ಯದ ಅಧಿಪತಿಯನ್ನಾಗಿ ಮಾಡಿದವರು ಯಾರು ?

ಉತ್ತರ :  ದುರ್ಯೋಧನ

29) ಕರ್ಣನ ಕೊನೆಯ ನಿರ್ಧಾರವೇನು ?

ಉತ್ತರ :  ಸ್ಥಾನ, ಗೌರವ, ಕೀರ್ತಿ ದೊರಕಿಸಿಕೊಟ್ಟ ಗೆಳೆಯನಾದ ದುರ್ಯೋಧನನಿಗೆ ತನ್ನ ಪ್ರಾಣವನ್ನು ಸಮರ್ಪಿಸುವುದು ಧರ್ಮವಾಗಿದೆ ಎಂದು ನಿರ್ಧಾರ ಕೈಗೊಂಡನು.

30) ಕರ್ಣನ ಮನದಲ್ಲಿ ದ್ವಂದ್ವವನ್ನು ಬಿತ್ತಿದವರು ಯಾರು ?

ಉತ್ತರ :  ಶ್ರೀಕೃಷ್ಣ

31) ನಾಳಿನ ಯುದ್ಧದ ಬಗ್ಗೆ ಕುಮಾರವ್ಯಾಸನು ಬಳಸಿದ ರೂಪಕಾಲಂಕಾರದ ವಾಕ್ಯ ಯಾವುದು ?

ಉತ್ತರ :  ಮಾರಿಗೌತಣವಾಯ್ತು ನಾಳಿನ ಭಾರತವು

32) ರಾಜೀವಸಖ ಎಂದರೆ ಯಾರು ?

ಉತ್ತರ :  ಸೂರ್ಯ.

33) ಗದುಗಿನ ಆಬರತ ಕೃತಿಯು ಯಾವ ಷಟ್ಪದಿಯಲ್ಲಿ ರಚಿತಗೊಂಡಿದೆ ?

ಉತ್ತರ :  ಭಾಮಿನಿ ಷಟ್ಪದಿಯಲ್ಲಿ.

34) ‘ಉಪಮಾಲೋಲ’ ಎಂದು ಬಿರುದು ಪಡೆದ ಕವಿ ಯಾರು ?

ಉತ್ತರ :  ಲಕ್ಷ್ಮೀಶ.

35) ಲಲನೆ ಪಡೆದ ಐದು ಮಂತ್ರಗಳಲ್ಲಿ ಜನಿಸಿದವರಾರು ?

ಉತ್ತರ :  ಕರ್ಣ, ಧರ್ಮರಾಯ, ಭೀಮ, ಅರ್ಜುನ, ನಕುಲ-ಸಹದೇವ.

36) ಯಾರೊಳಗೆ ಬೇಧವಿಲ್ಲ ಎಂದು ಕೃಷ್ಣ ಹೇಳಿದನು ?

ಉತ್ತರ :  ಪಾಂಡವರು, ಕೌರವರು, ಯಾದವರಲ್ಲಿ ಬೇಧವಿಲ್ಲ.

37) ಯಾವ ಎರಡು ಸಂತತಿ ನಿನಗೆ ಕಿಂಕರರಾಗಿರುವರು ಎಂದು ಕೃಷ್ಣನು ಕರ್ಣನಿಗೆ ಹೇಳಿದನು ?

ಉತ್ತರ :  ಕೌರವರು ಮತ್ತು ಪಾಂಡವರು.

38) ತನ್ನನ್ನು ಕಾಪಾಡಿದ ಧಾತಾರನಿಗೆ ಏನನ್ನು ಒಪ್ಪಿಸುವ ಭರದಲ್ಲಿ ಕರ್ಣನಿದ್ದಾನೆ ?

ಉತ್ತರ :  ಯುದ್ಧದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನ್ನು ಕೊಂದು, ತನ್ನ ಒಡೆಯನಿಗಾಗಿ ಪ್ರಾಣವನ್ನು ಕೊಡುವೆನು.

39) ಧರ್ಮರಾಯನು ಕೌರವರೊಡನೆ ಸಂಧಿಗಾಗಿ ಯಾರನ್ನು ಕಳುಹಿಸಿದನು ?

ಉತ್ತರ :  ಕೃಷ್ಣ.

40) ದುರ್ಯೋಧನನ ಬಲವನ್ನು ಕುಗ್ಗಿಸಲು ಕೃಷ್ಣನು ಮೊದಲು ಯಾರ ಹತ್ತಿರ ಬರುತ್ತಾನೆ ?

ಉತ್ತರ :  ವಿಧುರನಲ್ಲಿಗೆ.

41) ವಿಧುರನು ಯುದ್ಧದಿಂದ ವಿಮುಖನಾಗಲು ಕಾರಣವೇನು ?

ಉತ್ತರ :  ದುರ್ಯೋಧನನು ವಿಧುರನನ್ನು ತುಂಬಿದ ಸಭೆಯಲ್ಲಿ ಅಪಮಾನ ಮಾಡಿದ್ದರಿಂದ ತನ್ನ ಅಪ್ರತಿಮ ಬಿಲ್ಲನ್ನು ಮುರಿದು ಯುದ್ಧದಿಂದ ವಿಮುಖನಾಗುತ್ತಾನೆ.

42) ಚತುರಂಗಬಲ ಎಂದರೇನು ?

ಉತ್ತರ :  ಆನೆ, ಕುದುರೆ, ರಥ, ಕಾಲಾಳುಗಳನ್ನೊಳಗೊಂಡ ಸೈನ್ಯ.

43) ನಕುಲ ಸಹದೇವ ಅವಳಿ ಮಕ್ಕಳನ್ನು ಪಡೆದ ಪಾಂಡುರಾಜದ ಪತ್ನಿ ಯಾರು ?

ಉತ್ತರ :  ಮಾದ್ರಿ.

44) ಕುಮಾರವ್ಯಾಸನ ಆರಾಧ್ಯ ದೈವ ಯಾರು ?

ಉತ್ತರ :  ಗದುಗಿನ ವೀರನಾರಾಯಣ.

45) ಕೃಷ್ಣನು ಯಾರ ಪಕ್ಷಪಾತಿಯಾಗಿದ್ದನು ?

ಉತ್ತರ :  ಪಾಂಡವರ ಪಕ್ಷಪಾತಿಯಾಗಿದ್ದನು

46) ಕರ್ಣನು ರಾಜನಾದರೆ ಅವನಿಗೆ ಯಾರು ಕಿಂಕರರಾಗುತ್ತಾರೆ ?

ಉತ್ತರ :  ಕೌರವರು ಮತ್ತು ಪಾಂಡವರು.

47) ಕುಂತಿ ಮಾದ್ರಿಯರು ಯಾವ ದೇವತೆಗಳ ಅನುಗ್ರಹದಿಂದ ಮಕ್ಕಳನ್ನು ಪಡೆದರು ?

ಉತ್ತರ :  ಸೂರ್ಯ, ಯಮ, ವಾಯು, ಇಂದ್ರ, ಅಶ್ವಿನಿ ದೇವತೆಗಳು.

48) ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು ?

ಉತ್ತರ :  ಯುದ್ಧದಲ್ಲಿ ಅನೇಕ ವೀರಯೋಧರನ್ನು ಕೊಂದು, ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೇನು.

*****

Karnataka Educationsn | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ 4 ಕೌರವೇಂದ್ರನ ಕೊಂದೆ ನೀನು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Kouravendrana Konde ninu |


KarnatakaEducation Search 


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium







Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon