10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-6 ವ್ಯಾಘ್ರಗೀತೆ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Vyagrageete |

karntakaeducations 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-6 ವ್ಯಾಘ್ರಗೀತೆ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Vyagrageete |

10ನೇ ತರಗತಿ ಪ್ರಥಮ ಭಾಷೆ ಕನ್ನಡ ಗದ್ಯ - 6 : ವ್ಯಾಘ್ರಗೀತೆ

SSLC Kannada Vyagrageete

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1) ಭಗವದ್ಗೀತೆಯನ್ನು ರಚಿಸಿದವರು ಯಾರು ?

ಉತ್ತರ :  ಮಹರ್ಷಿ ವೇದವ್ಯಾಸರು

2) ಹುಲಿಗೆ ಪರಮಾನಂದವಾಗಲು ಕಾರಣವೇನು ?

ಉತ್ತರ :  ಶಾನುಭೋಗರ ದುಂಡು ದುಂಡಾದ ಶರೀರ ನೋಡಿ

3) ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು ?

ಉತ್ತರ :  ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳುವ ದೊಂಬರಾಟದಲ್ಲಿ.

4) ಶಾನುಭೋಗರಿಗೆ ಬ್ರಹ್ಮಾಸ್ತ್ರ ಯಾವುದು ?

ಉತ್ತರ :  ಖಿರ್ದಿ ಪುಸ್ತಕ

5) ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು ?

ಉತ್ತರ :  ವಿಧಿಯು ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು

6) ಖಿರ್ದಿ ಪುಸ್ತಕ ಎಂದರೇನು ?

ಉತ್ತರ :  ಕಂದಾಯ ವಿವರಗಳನ್ನೊಳಗೊಂಡ ಪುಸ್ತಕ

7) ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಏಕೆ ಹೋಗಿದ್ದರು ?

ಉತ್ತರ :  ಇರಸಾಲಿಗಾಗಿ (ವಸೂಲಿ ಮಾಡಿದ ಕಂದಾಯ ಕಟ್ಟಲು)

8) ಶಾನುಭೋಗರು ಯಾವ ಕಣಿವೆ ದಾಟಿ ಅವರ ಹಳ್ಳಿಗೆ ಹೋಗಬೇಕಿತ್ತು ?

ಉತ್ತರ :  ಮದಲಿಂಗನ ಕಣಿವೆ

9) ಹುಲಿಗೆ ಭಗವದ್ಗೀತೆಯ ಯಾವ ಸಾಲುಗಳು ನೆನಪಿಗೆ ಬಂದವು ?

ಉತ್ತರ :  ಸ್ವಧರ್ಮೇ ನಿಧನಂ ಶ್ರೇಯಃ

10) ಬೈಬಲ್ ನೆನಪಿಗೆ ಬಂದು ಹುಲಿಯು ಮನದಲ್ಲಿ ಹೇಳಿಕೊಂಡಿದ್ದೇನು ?

ಉತ್ತರ :  ಸೈತಾನ ಹಿಂದಿರುಗು

11) ಚಿಕ್ಕನಾಯಕನಹಳ್ಳಿಗೆ ರೈತರು ಏನನ್ನು ತೆಗೆದುಕೊಂಡು ಹೋಗಿದ್ದರು ?

ಉತ್ತರ :  ತೆಂಗಿನ ಕಾಯಿ ತೆಗೆದುಕೊಂಡು ಹೋಗಿದ್ದರು

12) ರೈತರು ಹುಲಿಯ ಘರ್ಜನೆ ಕೇಳಿ ಏನು ಮಾಡಿದರು ?

ಉತ್ತರ :  ಕೋವಿಂದ ಒಂದೆರಡು ತೋಟಾ ಹಾರಿಸಿ ಗದ್ದಲ ಮಾಡುತ್ತ ಪಂಜು ಹೊತ್ತಿಸಿಕೊಂಡು ಬಂದರು.

13) ರೈತರು ಎಚ್ಚರಿಸಿದಾಗ ಶಾನುಭೋಗರು ಕೇಳಿದ ಪ್ರಶ್ನೆ ಯಾವುದು ?

ಉತ್ತರ :  ನಾನು ಮುಖ ಮೇಲಾಗಿ ಬಿದ್ದಿದ್ದೆನೆ ?

14) ಮನೆಯಲ್ಲಿ ರಸದೂಟ ಸವಿಯುವಾಗ ಶಾನುಭೋಗರು ಹುಲಿಯನ್ನು ನೆನಪಿಸಿಕೊಂಡು ಹೇಳಿದ ಮಾತು ಯಾವುದು?

ಉತ್ತರ :  ಹುಲಿ ಈಗ ಎಷ್ಟು ಹಸಿದಿರಬೇಕು ?

15) ‘ವ್ಯಾಘ್ರಗೀತೆ’ ಕಥೆಯು ಯಾರ ವಂಶದವರ ಅನುಭವದ ಕಥೆಯಾಗಿದೆ ?

ಉತ್ತರ :  ಕೃಷ್ಣಮೂರ್ತಿ

16) ಶಾನುಭೋಗರಿಗೆ ಅವರ ರಾಜಭಕ್ತಿಯ ಲಾಂಛನ ಯಾವುದಾಗಿತ್ತು ?

ಉತ್ತರ :  ಖಿರ್ದಿ ಪುಸ್ತಕ

17) ಕೊನೆಯಲ್ಲಿ ಶಾನುಭೋಗರು ಏನೆಂದು ಯೋಚಿಸಿದರು ?

ಉತ್ತರ : ಮಡಿಯಬೇಕಾದರೆ ಮಾಡಿಯೇ ಮಡಿಯುತ್ತೇನೆ.

18) ಶಾನುಭೋಗರಿಗೆ ಹುಲಿ ಬಂದದ್ದು ಹೇಗೆ ತಿಳಿಯಿತು ?

ಉತ್ತರ :  ಜಾಗೃತಗೊಂಡ ಆರನೆಯ ಇಂದ್ರಿಯದಿಂದ

19) ಹುಲಿಗಳಿಗೂ ಹಸುಗಳಿಗೂ ಆದರ್ಶವಾಗಿರುವ ಕಥೆ ಯಾವುದು ?

ಉತ್ತರ :  ಪುಣ್ಯಕೋಟಿ ಕಥೆ

20) ಪುಣ್ಯಕೋಟಿ ಕಥೆಯಲ್ಲಿ ಹಸು ಹುಲಿಗೆ ಏನೆಂದು ಆಹ್ವಾನ ಕೊಟ್ಟಿತು ?

ಉತ್ತರ :  ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿ ರಕ್ತವಿದೆಕೋ

21) ಹುಲಿಗೆ ಆಶ್ಚರ್ಯವಾಗಲು ಕಾರಣವೇನು ?

ಉತ್ತರ :  ಖಿರ್ದಿ ಪುಸ್ತಕ ಮುಖಕ್ಕೆ ಬಡಿದಿದ್ದರಿಂದ

22) ಹುಲಿಯನ್ನು ಓಡಿಸಲು ರೈತರು ಮಾಡಿದ್ದೇನು ?

ಉತ್ತರ :  ಕೋವಿಯಿಂದ ಗುಂಡು ಹಾರಿಸಿದರು, ತೆಂಗಿನಗರಿಗೆ ಪಂಜು ಹೊತ್ತಿಸಿ ಗಲಬೆ ಮಾಡುತ್ತ ಮುಂದುವರೆದರು.

23) ಶಾನುಭೋಗರು ಯಾವುದರಿಂದ ಉಳಿದರು ?

ಉತ್ತರ :  ಹುಲಿಯ ಧರ್ಮಶ್ರದ್ಧೆಯಿಂದ ಶಾನುಭೋಗರು ಉಳಿದರು

24) ‘ವ್ಯಾಘ್ರಗೀತೆ’ ಪಾಠದಲ್ಲಿ ಕವಿ ಏನನ್ನು ಹೊಗಳಿದ್ದಾರೆ ?

ಉತ್ತರ :  ಹುಲಿಯ ಧರ್ಮಶ್ರದ್ಧೆಯನ್ನು ಹಾಡಿ ಹೊಗಳಿದ್ದಾರೆ.

25) ಎ. ಎನ್. ಮೂರ್ತಿರಾವ ಅವರ ಬಂಧುವಿನ ಹೆಸರೇನು ?

ಉತ್ತರ :  ಕೃಷ್ಣಮೂರ್ತಿ

26) ಕೃಷ್ಣಮೂರ್ತಿಯವರ ಅಜ್ಜಂದಿರು ಯಾವ ಜಿಲ್ಲೆಯವರು ?

ಉತ್ತರ :  ತುಮಕೂರು ಜಿಲ್ಲೆಯವರು

27) ಶ್ರೀರಾಮ ಮತ್ತು ಭಗವದ್ಗೀತೆ ಜನಿಸಿದ ನಾಡು ಯಾವುದು ?

ಉತ್ತರ :  ಭಾರತ

28) ಕೃಷ್ಣಮೂರ್ತಿಯವರ ಅಜ್ಜಂದಿರು ಯಾವುದಕ್ಕಾಗಿ ಹೆಸರು ಪಡೆದಿದ್ದರು ?

ಉತ್ತರ :  ಸಣ್ಣ ಸಂಸ್ಥಾನದಲ್ಲಿ ಮಂತ್ರಿಯಾಗಿದ್ದು ತಮ್ಮ ರಾಜಭಕ್ತಿಗಾಗಿ ಹೆಸರು ಪಡೆದಿದ್ದರು.

29) ಶಾನುಭೋಗರು ಇರಸಾಲಿಗಾಗಿ ಯಾವ ಹಳ್ಳಿಗೆ ಹೋಗಿದ್ದರು ?

ಉತ್ತರ :  ಚಿಕ್ಕನಾಯಕನ ಹಳ್ಳಿಗೆ

30) ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು ?

ಉತ್ತರ :  ವಿಧಿ ಆಹಾರಕ್ಕಾಗಿ ಏನನ್ನು ಒದಗಿಸುವುದೋ ಎಂದು ಯೋಚಿಸಿತು

31) ಹುಲಿಯ ಬಡಬಂಧು ಯಾರು ?

ಉತ್ತರ :  ಬೆಕ್ಕು

32) ‚ಸೈತಾನ ಹಿಂದಿರುಗು ಎಂದು ಯಾ ಗ್ರಂಥದಲ್ಲಿದೆ ?

ಉತ್ತರ :  ಬೈಬಲ್ ನಲ್ಲಿ

33) ಹುಲಿಯ ಆನಂದಕ್ಕೆ ಕೊರತೆ ಕಂಡದ್ದು ಏಕೆ ?

ಉತ್ತರ :  ಶಾನುಭೋಗರು ಹುಲಿಗೆ ಅಭಿಮುಖವಾಗಿರದೆ ಅದರ ಕಡೆಗೆ ಬೆನ್ನು ತಿರುಗಿಸಿ ನಡೆಯುತ್ತಿದ್ದದ್ದು ಹುಲಿಯ ಆನಂದಕ್ಕೆ ಕೊರತೆಯಾಗಿ ಕಂಡಿತು.

34) ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು ?

ಉತ್ತರ :  ಹುಲಿಗೆ ಅಭಿಮುಖವಾಗಿರದೇ ಬೆನ್ನು ತೋರಿಸುತ್ತ ನಡೆಯುತ್ತ ಅದರಿಂದ ತಪ್ಪಿಸಿಕೊಳ್ಳಲು ಶಾನುಭೋಗರು ಕುಲಾಲಚಕ್ರದಂತೆ ತಿರುಗುತ್ತಿದ್ದರಿಂದ ತಲೆ ಸುತ್ತಲು ಪ್ರಾರಂಭಿಸಿತು.

35) ಶಾನುಭೋಗರ ಮನೆಯಲ್ಲಿ ಖಿರ್ದಿ ಪುಸ್ತಕ ಎಲ್ಲಿದೆ ?

ಉತ್ತರ :  ದೇವರ ಮನೆಯಲ್ಲಿದ್ದು ಪೂಜೆಗೊಳ್ಳುತ್ತಿದೆ.

36) ರಸದೂಟವನ್ನು ಮಾಡಿದ ಶಾನುಭೋಗರಿಗೆ ಬಂದ ಆಲೋಚನೆಯೇನು ?

ಉತ್ತರ :  ಹುಲಿ ಈಗ ಎಷ್ಟು ಹಸಿದಿರಬೇಕು

37) ಶಾನುಭೋಗರನ್ನು ಮೂರ್ಛೆಯಿಂದ ಎಚ್ಚರಿಸಿದವರು ಯಾರು ?

ಉತ್ತರ :  ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ಮಾರಲು ಹೋಗಿದ್ದ ರೈತರು ಶಾನುಭೋಗರನ್ನು ಎಚ್ಚರಿಸಿದರು.


*****

Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-6 ವ್ಯಾಘ್ರಗೀತೆ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Vyagrageete |


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium






Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon