10th Social Science ಕರ್ನಾಟಕದಲ್ಲಿ ಬ್ರಿಟಿಷ ಆಳ್ವಿಕೆಗೆ ಪ್ರತಿರೋಧಗಳು ಬಹು ಆಯ್ಕೆ ಪ್ರಶ್ನೆಗಳು MCQ Questions 10

ಆತ್ಮಿಯರೆ 10ನೇ ತರಗತಿ ಸಮಾಜ ವಿಜ್ಞಾನದಲ್ಲಿ 6 ವಿಭಾಗಗಳು ಬರುತ್ತವೆ.

ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ  ಇದರಲ್ಲಿ ಇತಿಹಾಸ ವಿಭಾಗದಲ್ಲಿ ಬರುವ ಕರ್ನಾಟಕದಲ್ಲಿ ಬ್ರಿಟಿಷ  ಆಳ್ವಿಕೆಗೆ ಪ್ರತಿರೋಧಗಳು ಬಹು ಆಯ್ಕೆ ಪ್ರಶ್ನೆಗಳನ್ನು ನೋಡೋಣ.

I. ಕೊಟ್ಟಿರುವ ಹೇಳಿಕೆಯ ಕೆಳಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದೆ, ಸರಿಯಾದುದನ್ನು ಆರಿಸಿ ಬರೆಯಿರಿ.
1) ಮೊದಲನೇ ಆಂಗ್ಲೋ ಮೈಸೂರು ಯುದ್ಧವನ್ನು ಕೊನೆಗಾಣಿಸಿದ ಒಪ್ಪಂದ.
A) ಮಂಗಳೂರು
B) ಶ್ರೀರಂಗಪಟ್ಟಣ
C) ಮದ್ರಾಸ್
D) ಸಾಲ್ಬಾಯಿ

ಉತ್ತರ : C) ಮದ್ರಾಸ್

2) ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸಲು ಕಾರಣವಾದ ನೀತಿ.
A) ಸಹಾಯಕ ಸೈನ್ಯ ಪದ್ಧತಿ
B) ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
C) ವಿಭಜಿಸಿ ಆಳುವ ನೀತಿ
D) ಮಧ್ಯಸ್ತಿಕೆಯ ನೀತಿ

ಉತ್ತರ : B) ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

3) ಕಿತ್ತೂರನ್ನು ವಶಪಡಿಸಿಕೊಳ್ಳಲೆಬೇಕೆಂಬ ನಿರ್ಧಾರದಿಂದ ದಾಳಿನಡೆಸಿದ ಬ್ರಿಟಿಷರ ಲೆಫ್ಟಿನೆಂಟ್.
A) ಕರ್ನಲ್ ಡಿಕ್
B) ಕ್ಯಾಂಪ್ ಬೆಲ್
C) ಥಾಮಸ್ ಮನ್ರೋ
D) ಥ್ಯಾಕರೆ

ಉತ್ತರ : A) ಕರ್ನಲ್ ಡಿಕ್

4) ಎರಡನೇ ಆಂಗ್ಲೋ-ಮೈಸೂರು ಯುದ್ಧವು ____ ಒಪ್ಪಂದದೊಂದಿಗೆ ಕೊನೆಗೊಂಡಿತು.
A) ಮದ್ರಾಸ್
B) ಪೂನಾ
C) ಮಂಗಳೂರು
D) ಮೈಸೂರು

ಉತ್ತರ : ಮಂಗಳೂರು

5) ಕಿತ್ತೂರು ಚೆನ್ನಮ್ಮ __ ಎಂಬ ಹುಡುಗನನ್ನು ದತ್ತು ಪಡೆದಿದ್ದಳು.
A) ರುದ್ರಸರ್ಜನ
B) ಬಸವಲಿಂಗ
C) ರಾಯಣ್ಣ
D) ಶಿವಲಿಂಗಪ್ಪ

ಉತ್ತರ : ಶಿವಲಿಂಗಪ್ಪ

6) ಈಗಿನ ಬಾಗಲಕೋಟೆ ಜಿಲ್ಲೆಯ __ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದರು.
A) ಬಿಜಾಪುರ
B) ಹಲಗಲಿ
C) ಕಿತ್ತೂರು
D) ನಂದಗಡ

ಉತ್ತರ : ಹಲಗಲಿ

7) ಮೊದಲನೇ ಆಂಗ್ಲೋ-ಮೈಸೂರು ಯುದ್ಧವು _ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
A) ಮದ್ರಾಸ್
B) ಮಂಗಳೂರು
C) ಕಲ್ಕತ್ತಾ
D) ಬೆಂಗಳೂರು

ಉತ್ತರ : ಮದ್ರಾಸ್

8) ಹೈದರಾಲಿಯನ್ನು 1781 ರಲ್ಲಿ ಸೋಲಿಸಿದ ಬ್ರಿಟಿಷ್ ಸೇನಾನಾಯಕ ___
A) ಕರ್ನಲ್ ಡಿಕ್
B) ಕ್ಯಾಂಪ್ ಬೆಲ್
C) ಥಾಮಸ್ ಮನ್ರೋ
D) ಸರ್ ಐರ್ ಕೂಟ್

ಉತ್ತರ : ಸರ್ ಐರ್ ಕೂಟ್

9) ಹಲಗಲಿಯಲ್ಲಿ ಬೇಡರು ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಸಲು ಕಾರಣ ______
A) 1858ರ ಘೋಷಣೆ
B) ಅಧಿಕ ತೆರಿಗೆ
C) ಶಸ್ತ್ರಗಳ ಬಳಕೆಯ ನಿರ್ಬಂಧ ಕಾನೂನು
D) ಉಪ್ಪಿನ ತೆರಿಗೆ

ಉತ್ತರ: "ಶಸ್ತ್ರಗಳ ಬಳಕೆಯ ನಿರ್ಬಂಧ" ಕಾನೂನು

10) ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನಾಯಕ ಯಾರು?
A) ಸರ್ ಐರ್ ಕೂಟ್
B) ಕ್ಯಾಂಪ್ ಬೆಲ್
C) ಥಾಮಸ್ ಮನ್ರೋ
D) ಡೂಪ್ಲೆ

ಉತ್ತರ :  ಸರ್ ಐರ್ ಕೂಟ್

11) 1781 ರಲ್ಲಿ ಪೋರ್ಟೊ ನೋವೇ ಎಂಬಲ್ಲಿ ನಡೆದ ಕದನದಲ್ಲಿ ಯಾರು ಪರಾಭವಗೊಂಡರು?
A) ಟಿಪ್ಪು ಸುಲ್ತಾನ
B) ಹೈದರಾಲಿ
C) ಥಾಮಸ್ ಮನ್ರೋ
D) ಥ್ಯಾಕರೆ

ಉತ್ತರ : ಹೈದರಾಲಿ

12) ಎರಡನೆಯ ಆಂಗ್ಲೋ-ಮೈಸೂರು ಯುದ್ಧಕ್ಕೆ ಮುಖ್ಯ ಕಾರಣವೇನು?
A) ಬ್ರಿಟಿಷರು ಮಾಹೆ ವಶಪಡಿಸಿಕೊಂಡಿರುವುದು
B) ದತ್ತುಮಕ್ಕಳಿಗೆ ಹಕ್ಕಿಲ್ಲ ನೀತಿ
C) ಶಸ್ತ್ರಾಸ್ತ್ರ ನಿಷೇಧ ಕಾಯ್ದೆ
D) ಮೇಲಿನ ಯಾವುದು ಅಲ್ಲ

ಉತ್ತರ : ಬ್ರಿಟಿಷರು ಮಾಹೇ ಯನ್ನು ವಶಪಡಿಸಿಕೊಂಡಿದ್ದು.

13) ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?
A) ಝಾನ್ಸಿ
B) ಬೈಲುಹೊಂಗಲ
C) ನಾವಲಗಿ
D) ನಂದಗಡ

ಉತ್ತರ : ನಂದಗಡ

ಇವುಗಳು ಎಲ್ಲವು 10ನೇ ತರಗತಿ ಸಮಾಜ ವಿಜ್ಞಾನದ ಇತಿಹಾಸ ವಿಭಾಗದಲ್ಲಿ ಬರುವ ಕರ್ನಾಟಕದಲ್ಲಿ ಬ್ರಿಟಿಷ  ಆಳ್ವಿಕೆಗೆ ಪ್ರತಿರೋಧಗಳು ಬಹು ಆಯ್ಕೆ ಪ್ರಶ್ನೆಗಳು ಆಗಿವೆ. ಇತರ ಅಧ್ಯಾಯಗಳ ಪ್ರಶ್ನೋತ್ತರಗಳನ್ನು ಸಹ ವೀಕ್ಷಿಸಿ. 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon