10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 1 ಸಂಕಲ್ಪಗೀತೆ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Sankalpa Geete |

karntakaeducations

10ನೇ ತರಗತಿ ಪ್ರಥಮ ಭಾಷೆ ಕನ್ನಡ ಪದ್ಯ-1 ಸಂಕಲ್ಪಗೀತೆ 
















ಪದ್ಯ - 1 : ಸಂಕಲ್ಪಗೀತೆ

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1) ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು ?

ಉತ್ತರ :  ಬಿರುಗಾಳಿಗೆ ಹೊಯ್ದಾಡುವ ಹಡಗನ್ನು

2) ನದಿ ಜಲಗಳು ಏನಾಗಿವೆ ?

ಉತ್ತರ :  ಕಲುಷಿತವಾಗಿವೆ

3) ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?

ಉತ್ತರ :  ಕಲುಷಿತವಾದ ನದಿ ಜಲಗಳಿಗೆ.

4) ಕಾಡು ಮೇಡುಗಳ ಸ್ಥಿತಿ ಹೇಗಿದೆ ?

ಉತ್ತರ :  ಬರಡಾಗಿವೆ

5) ಯಾವ ಎಚ್ಚರದೊಳು ಬದುಕಬೇಕಿದೆ ?

ಉತ್ತರ :  ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದಲ್ಲಿ.

6) ಸುತ್ತಲು ಕವಿಯುವ ಕತ್ತಲೆಯಲ್ಲಿ ಯಾವ ಹಣತೆ ಹಚ್ಚಬೇಕು ?

ಉತ್ತರ :  ಪ್ರೀತಿಯ ಹಣತೆ

7) ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಹೇಗೆ ಮುನ್ನೆಡಸಬೇಕು ?

ಉತ್ತರ :  ಎಚ್ಚರದಲ್ಲಿ

8) ಹೊಸ ಭರವಸೆಗಳನ್ನು ಹೇಗೆ ಕಟ್ಟಬೇಕಿದೆ ?

ಉತ್ತರ :  ಬಿದ್ದಿದ್ದನ್ನು ಮೇಲೆಬ್ಬಿಸಿ ನಿಲ್ಲಸಿ ಕಟ್ಟಬೇಕಿದೆ.

9) ಯಾವುದರ ನಡುವೆ ಸೇತುವೆಯಾಗಬೇಕಿದೆ ?

ಉತ್ತರ :  ಮನುಜರ ನಡುವಿನ ಅಡ್ಡಗೋಡೆಗಳನ್ನು ಕೆಡುವುತ್ತ

10) ಯಾವುದಕ್ಕೆ ನಾಳಿನ ಕನಸನ್ನು ಬಿತ್ತಬೇಕು ?

ಉತ್ತರ :  ಭಯ ಸಂಶಯದೊಳು ಕಂದಿದ ಕಣ್ಣೊಳು

11) ಕವಿಯು ಹಡಗನ್ನು ಯಾವುದಕ್ಕೆ ಹೋಲಿಸಿದ್ದಾರೆ ?

ಉತ್ತರ :  ಸಂಸಾರಕ್ಕೆ

12) ಸಂಕಲ್ಪ ಗೀತೆ - ಪದ್ಯದ ಕರ್ತೃ ಯಾರು ?

ಉತ್ತರ :  ಜಿ. ಎಸ್. ಶಿವರುದ್ರಪ್ಪ

13) ಜೀವನದಲ್ಲಿ ಎಂತಹ ಭಾವನೆಯನ್ನು ಹೊಂದಿರಬೇಕು ?

ಉತ್ತರ :  ಧನಾತ್ಮಕ ಭಾವನೆ

14) ಜೀವನದಲ್ಲಿ ಎಂತಹ ಸಂಕಲ್ಪ ಮಾಡಬೇಕು ?

ಉತ್ತರ :  ದೃಢ ಸಂಕಲ್ಪ

15) ಸಂಕಲ್ಪಗೀತೆ ಕವನದ ಆಶಯವೇನು ?

ಉತ್ತರ :  ಭಯ ಮತ್ತು ಅನುಮಾನ ಆವರಿಸಿರುವ ಸಮಾಜದಲ್ಲಿ ದೃಢ ನಿಷ್ಠೆಯಿಂದ ಸ್ವಾಸ್ಥ್ಯದ ನೆಲೆಯಾಗಿರುವ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ.

16) ನಮ್ಮ ಸುತ್ತಲೂ ಎಂತಹ ಕತ್ತಲೆ ತುಂಬಿದೆ ?

ಉತ್ತರ :  ದ್ವೇಷದ ಕತ್ತಲೆ ತುಂಬಿದೆ

17) ಸಂಕಲ್ಪ ಗೀತೆ - ಪದ್ಯದಲ್ಲಿ ಸಂಸಾರವನ್ನು ಯಾವುದಕ್ಕೆ ಹೋಲಿಸಲಾಗಿದೆ ?

ಉತ್ತರ :  ಬಿರುಗಾಳಿಗೆ ಸಿಕ್ಕು ಹೊಯ್ದಾಡುವ ಹಡಗಿಗೆ ಹೋಲಿಸಿದೆ

18) ಸಮಾಜ ಯಾವುದರಿಂದ ಅದಃ ಪತನಗೊಂಡಿದೆ ?

ಉತ್ತರ :  ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಅಸ್ಪೃಶ್ಯತೆ, ಅಸಮಾನತೆಗಳಿಂದ ಸಮಾಜ ಅದಃಪತನಗೊಂಡಿದೆ.

19) ಅಸಮಾನತೆಯ ಅಡ್ಡಗೋಡೆಗಳು ಯಾವುವು ?

ಉತ್ತರ :  ಭಾಷೆ, ಜಾತಿ, ಮತ, ಧರ್ಮಗಳ ಭೇದಭಾವಗಳು

20) ಸಂಸಾರವೆಂಬ ಹಡಗು ಹೊಯ್ದಾಡಲು ಕಾರಣವೇನು ?

ಉತ್ತರ :  ಸಮಾಜದಲ್ಲಿ ದ್ವೇಷ, ಅಸೂಯೆ, ಭಯ, ಸಂಶಯ, ಅಸಮಾನತೆ ಎಂಬ ಬಿರುಗಾಳಿಯಿಂದ ಹೊಯ್ದಾಡುತ್ತಿದೆ.

21) ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕು ?

ಉತ್ತರ :  ಪ್ರೀತಿಯೆಂಬ ಜ್ಞಾನದೀವಿಗೆಯ ಮೂಲಕ

22) ಎಲ್ಲಿ ನವಚೈತನ್ಯ ಮೂಡಿಸಬೇಕಾಗಿದೆ ?

ಉತ್ತರ :  ಕಾಡಿನಲ್ಲಿ.

23) ಮನುಜರ ನಡುವೆ ಉಂಟಾದ ಅಡ್ಡಗೋಡೆಗಳನ್ನು ಹೇಗೆ ಕೆಡವಬೇಕು ?

ಉತ್ತರ :  ಸ್ನೇಹ, ಪ್ರೀತಿ, ನಂಬಿಕೆಯ ಮೂಲಕ ಅಡ್ಡಗೋಡೆಗಳನ್ನು ಕೆಡವಬೇಕು.

24) ನಾವು ಎಂತಹ ಸೇತುವೆಯಾಗಬೇಕು ?

ಉತ್ತರ :  ಹೊಸ ಭರವಸೆ ಮೂಡಿಸುವ ಸೇತುವೆಯಾಗಬೇಕು.

25) ಯಶಸ್ಸನ್ನು ಹೇಗೆ ಪಡೆಯಬಹುದು ?

ಉತ್ತರ :  ಹೋಗಬೇಕಾದ ದಾರಿ, ತಲುಪಬೇಕಾದ ಗುರಿ ಸ್ಪಷ್ಟವಾಗಿದ್ದರೆ ಅರ್ಧ ಯಶಸ್ಸು ಪಡೆದಂತೆ.

26) ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಗೆ ಸ್ಪಷ್ಟಪಡಿಸುತ್ತೀರಿ ?

ಉತ್ತರ :  ಸಂಕಲ್ಪದತ್ತ ದೃಢನಿರ್ಧಾರದಿಂದ ಕಾರ್ಯಶೀಲರಾದರೆ.

27) ಕಣ್ಣುಗಳು ಯಾವುದರಿಂದ ಮಸುಕಾಗಿವೆ ?

ಉತ್ತರ :  ಭಯ ಮತ್ತು ಸಂಶಯದಲ್ಲಿ

28) ಮಾನವನ ಏಳಿಗೆಗೆ ಇರುವ ದಾರಿ ದೀವಿಗೆಗಳು ಯಾವುವು ?

ಉತ್ತರ :  ಎಲ್ಲ ಮತಧರ್ಮಗಳು

29) ಸಾಧನೆಯ ಪಥಗಳು ಯಾವುವು ?

ಉತ್ತರ :  ಎಲ್ಲ ಮತಧರ್ಮಗಳು.

30) ರಾಷ್ಟ್ರಕವಿ ಬಿರುದು ಪಡೆದ ಕನ್ನಡ ಕವಿಗಳು ಯಾರು ?

ಉತ್ತರ :  ಗೋವಿಂದ ಪೈ, ಕುವೆಂಪು, ಜಿ.ಎಸ್. ಶಿವರುದ್ರಪ್ಪ

31) ಬರಡಾಗಿರುವುದು ಯಾವುದು ?

ಉತ್ತರ :  ಕಾಡು ಮೇಡುಗಳು

32) ಕಂದಿದ ಕಣ್ಣುಗಳಲ್ಲಿ ಏನನ್ನು ಬಿತ್ತಬೇಕು ?

ಉತ್ತರ :  ಕಂದಿದ ಕಣ್ಣುಗಳಲ್ಲಿ ನಾಳಿನ ಕನಸನ್ನು ಬಿತ್ತಬೇಕು

33) ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು ?

ಉತ್ತರ :  ಎಲ್ಲ ಮತಧರ್ಮಗಳು ದಾರಿದೀವಿಗೆಗಳು ಎಂದು ತಿಳಿದು ಎಚ್ಚರದಲ್ಲಿ ಬದುಕಬೇಕು


*****
Karnataka Education | 10ನೇ ತರಗತಿ ಪ್ರಥಮ ಭಾಷೆ ಕನ್ನಡ |  ಪದ್ಯ - 1 ಸಂಕಲ್ಪಗೀತೆ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Sankalpa Geete |


KarnatakaEducation Search 


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium







Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon