10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 6 ಛಲಮನೆ ಮೆರೆವೆಂ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Chalamane Marevem

karntakaeducations

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 6 ಛಲಮನೆ ಮೆರೆವೆಂ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Chalamane Marevem

ಪದ್ಯ - 6 : ಛಲಮನೆ ಮೆರೆವೆಂ

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1) ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನ ಯಾರಿಗೆ ಹೇಳುವನು ?

ಉತ್ತರ :  ಭೀಷ್ಮ.

2) ದಿನಪಸುತ ಎಂದರೆ ಯಾರು ?

ಉತ್ತರ :  ಕರ್ಣ.

3) ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ ?

ಉತ್ತರ :  ಭೀಮ ಮತ್ತು ಅರ್ಜುನ

4) ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವರು ಯಾರು ?

ಉತ್ತರ :  ದುರ್ಯೋಧನ.

5) ಅಂತಕಾತ್ಮಜ ಎಂದರೆ ಯಾರು ?

ಉತ್ತರ :  ಧರ್ಮರಾಯ.

6) ಕರ್ಣ ದುಶ್ಯಾಸನರನ್ನು ಕೊಂದವರು ಯಾರು ?

ಉತ್ತರ :  ಕರ್ಣನನ್ನು ಅರ್ಜುನ ಮತ್ತು ದುಶ್ಯಾಸನನನ್ನು ಭೀಮನು ಕೊಂದನು.

7) ದುರ್ಯೋಧನನು ತಾನು ಯಾವುದಕ್ಕೋಸ್ಕರ ಯುದ್ಧ ಮಾಡುವುದಾಗಿ ಹೇಳಿದನು ?

ಉತ್ತರ :  ಛಲಕ್ಕಾಗಿ.

8) ಗದಾಯುದ್ಧ - ಕೃತಿಗೆ ಮತ್ತೊಂದು ಹೆಸರೇನು ?

ಉತ್ತರ :  ಸಾಹಸ ಭೀಮ ವಿಜಯಂ.

9) ದುರ್ಯೋಧನನು ಯುದ್ಧರಂಗಕ್ಕೆ ಯಾರನ್ನು ನೋಡಲು ಬಂದನು ?

ಉತ್ತರ :  ಭಿಷ್ಮಾಚಾರ್ಯರನ್ನು ನೋಡಲು.

10) ನೆಲಕ್ಕಾಗಿ ಯುದ್ಧ ಮಾಡುವುದಿಲ್ಲ ಛಲಕ್ಕಾಗಿ ಯುದ್ಧ ಮಾಡುವುದಾಗಿ ಭೀಷ್ಮರಿಗೆ ಯಾರು ಹೇಳಿದರು ?

ಉತ್ತರ :  ದುರ್ಯೋಧನ

11) ಪಾಂಡವರೊಡನೆ ಸಂಧಿ ಮಾಡಿಕೋ ಎಂದು ದುರ್ಯೋಧನನಿಗೆ ಯಾರು ಹೇಳಿದರು ?

ಉತ್ತರ :  ಭೀಷ್ಮರು.

12) ದುರ್ಯೋಧನನು ಈ ನೆಪಾಳು ನೆಲ’ ಎನ್ನಲು ಕಾರಣವೇನು ?

ಉತ್ತರ :  ಪಾಂಡವರು ಇರುವ ಈ ನೆಲ ನನಗೆ ಪಾಳುನೆಲಕ್ಕೆ ಸಮ ಎಂದು ದುರ್ಯೋಧನನು ಹೇಳಿದನು.

13) ದುರ್ಯೋಧನನು ಈ ನೆಲದೊಡನೆ ಬಾಳುವುದಿಲ್ಲ ಎನ್ನಲು ಕಾರಣವೇನು ?

ಉತ್ತರ :  ದಿನಪಸುತನಾದ ಕರ್ಣನನ್ನು ಕೊಲ್ಲಿಸಿದ ಈ ನೆಲದೊಡನೆ ಬಾಳುವುದಿಲ್ಲ ಎನ್ನುತ್ತಾನೆ.

14) ಯಾರೊಡನೆ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಭೀಷ್ಮರಿಗೆ ಹೇಳುತ್ತಾನೆ ?

ಉತ್ತರ :  ಅಂತಕಾತ್ಮಜ(ಧರ್ಮರಾಯ)ನೊಡನೆ.

15) ಯಾರೊಡನೆ ಛಲ ಮೆರೆಯುವುದಾಗಿ ದುರ್ಯೋಧನನು ಹೇಳುತ್ತಾನೆ ?

ಉತ್ತರ :  ಪಾಂಡವರೊಡನೆ.

16) ದುರ್ಯೋಧನನ ಅಜ್ಜ ಯಾರು ?

ಉತ್ತರ :  ಭೀಷ್ಮ.

17) ಕನ್ನಡ ರತ್ನತ್ರಯರು ಯಾರು ?

ಉತ್ತರ :  ಪಂಪ, ಪೊನ್ನ, ರನ್ನ.

18) ದುರ್ಯೋಧನನು ಭೀಷ್ಮರಲ್ಲಿಗೆ ಬರಲು ಕಾರಣವೇನು ?

ಉತ್ತರ :  ನಾಳಿನ ಯುದ್ಧದಲ್ಲಿ ತನಗೆ ಯವ ಕೆಲಸ ಎಂದು ಕೇಳಲು ದುರ್ಯೋಧನನು ಭೀಷ್ಮರಲ್ಲಿಗೆ ಬಂದನು.

19) ಇಂಬುಕೆಯ್ವೆ - ಪದದ ಅರ್ಥವೇನು ?

ಉತ್ತರ :  ಒಪ್ಪಿಕೊಳ್ಳಲು, ಸಮ್ಮತಿ ಸೂಚಿಸಲು.

20) ದುರ್ಯೋಧನನಿಗೆ ಅಹಿತರು ಯಾರು ?

ಉತ್ತರ :  ಪಾಂಡವರು.

21) ಪಂಪ ಕವಿಯ ನಂತರ ಬಂದ ‘ಶಕ್ತಿ ಕವಿ’ ಯಾರು ?

ಉತ್ತರ :  ರನ್ನ.

22) ಸಿಂಹಾವಲೋಕನ ಕ್ರಮದಲ್ಲಿರುವ ಶ್ರೇಷ್ಠ ಕಾವ್ಯ ಯಾವುದು ?

ಉತ್ತರ :  ರನ್ನ ಕವಿಯ ಸಾಹಸ ಭೀಮ ವಿಜಯಂ.

23) ದುರ್ಯೋಧನನ ಮುಖ್ಯ ಗುಣ ಯಾವುದು ?

ಉತ್ತರ :  ಹಠ (ಛಲ).

24) ಯುದ್ಧದ ಮುಖ್ಯ ಪರಿಣಾಮವೇನು ?

ಉತ್ತರ :  ಸರ್ವನಾಶ.

25) ‘ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ’ ಎಂದು ದುರ್ಯೋಧನನು ಯಾರಿಗೆ ಹೇಳಿದನು ?

ಉತ್ತರ :  ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮರಿಗೆ.

26) ದುರ್ಯೋಧನನು ತಾನು ಯಾವುದಕ್ಕಾಗಿ ಯುದ್ಧ ಮಾಡುವೆನೆಂದು ಭೀಷ್ಮರಿಗೆ ಹೇಳುತ್ತಾನೆ ?

ಉತ್ತರ :  ಛಲಕ್ಕಾಗಿ ಯುದ್ಧ ಮಾಡುವುದಾಗಿ ಹೇಳುತ್ತಾನೆ.

27) ದುರ್ಯೋಧನನ ಪ್ರೀತಿಯ ಬಂಟ ಯಾರು ?

ಉತ್ತರ :  ಕರ್ಣ.

28) ದುರ್ಯೋಧನನ ಪ್ರೀತಿಯ ತಮ್ಮನ ಹೆಸರೇನು ?

ಉತ್ತರ :  ದುಶ್ಯಾಸನ.

29) ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವರಾರು ?

ಉತ್ತರ :  ದುರ್ಯೋಧನ.

30) ದುರ್ಯೋಧನನು ತಾನು ಯಾರೊಡನೆ ಯುದ್ಧ ಮಾಡಿಯೇ ತೀರುವೆನೆಂದು ಹೇಳುತ್ತಾನೆ ?

ಉತ್ತರ :  ಭೀಮ ಮತ್ತು ಅರ್ಜುನನೊಡನೆ.

31) ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಏಕೆ ಹೇಳಿದನು ?

ಉತ್ತರ :  ಕರ್ಣ, ದುಶ್ಯಾಸನರನ್ನು ಕೊಲ್ಲಿಸಿದ ಈ ನೆಲ ನನಗೆ ಪಾಳುನೆಲಕ್ಕೆ ಸಮಾನ. ಇವರಿಲ್ಲದ ಈ ನೆಲನೊಡನೆ ನಾನು ಸಹಬಾಳ್ವೆ ಮಾಡುವುದಿಲ್ಲ.

*****

Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 6 ಛಲಮನೆ ಮೆರೆವೆಂ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Chalamane Marevem


KarnatakaEducation Search 


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium








Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon