10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 3 ಹಲಗಲಿ ಬೇಡರು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Halagali Bedaru |

karntakaeducations

ಪದ್ಯ - 3 : ಹಲಗಲಿ ಬೇಡರು

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1) ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು ?

ಉತ್ತರ :  ಸರಕಾರದ ಅನುಮತಿಯಿಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರಕಾರಕ್ಕೆ ಒಪ್ಪಿಸಬೇಕು.

2) ಹಲಗಲಿಯ ನಾಲ್ವರು ಪ್ರಮುಖರಾರು ?

ಉತ್ತರ :  ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ

3) ಹಲಗಲಿ ಗುರುತು ಉಳಿಯದಂತಾದುದು ಏಕೆ ?

ಉತ್ತರ :  ಬ್ರಿಟಿಷರ ದಂಡು ದಾಳಿ ಮಾಡಿ ಬೆಂಕಿ ಹಚ್ಚಿದ್ದರಿಂದ

4) ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಯಿತು ?

ಉತ್ತರ :  ಹಲಗಲಿ ಬೇಡರ ಹತಾರ ಕದನ (ನಿಶ್ಯಸ್ತ್ರೀಕರಣ ಕಾಯ್ದೆ)

5) ಹಲಗಲಿ ಗ್ರಾಮ ಎಲ್ಲಿದೆ ?

ಉತ್ತರ :  ಮುಧೋಳ ಸಂಸ್ಥಾನದಲ್ಲಿದ್ದು, ಈಗ ಬಾಗಲಕೋಟೆ ಜಿಲ್ಲೆಯಲ್ಲಿದೆ.

6) ಕಾರ ಸಾಹೇಬ ಎಂದರೆ ಯಾರು ?

ಉತ್ತರ :  ಅಲೆಗ್ಜಾಂಡರ್ ವಿಲಿಯಂ ಕೆರ್ರೆ ಎಂಬ ಬ್ರಿಟೀಷ ಅಧಿಕಾರಿ

7) ಕುಂಪಣಿ ಎಂದರೇನು ?

ಉತ್ತರ :  ಈಸ್ಟ್ ಇಂಡಿಯಾ ಕಂಪನಿ ಎಂಬ ಬ್ರಿಟೀಷ ಸರಕಾರ ರಚಿಸಿದ್ದ ಆಡಳಿತಾತ್ಮಕ ಸಂಸ್ಥೆ.

8) ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು ?

ಉತ್ತರ :  ಬ್ರಿಟೀಷ ಸಿಪಾಯಿಗಳು ಬಲವಂತವಾಗಿ ಆಯುಧಗಳನ್ನು ಕಸಿದುಕೊಳ್ಳಲು ಪ್ರಾರಂಭಿಸಿದ್ದರಿಂದ ಬೇಡರು ದಂಗೆ ಎದ್ದರು.

9) ಹಲಗಲಿಗೆ ದಂಡು ಬರಲು ಕಾರಣವೇನು ?

ಉತ್ತರ :  ದಂಗೆ ಹತ್ತಿಕ್ಕಲು ಬಂದ ಕಾರಕೂನನ ಕಪಾಳಕ್ಕೆ ಬೇಡರು ಹೊಡೆದರು ಮತ್ತು ಸಿಪಾಯಿಗಳನ್ನು ಹೊಡೆದು ಉರುಳಿಸಿದರು.

10) ದಂಡು ಹಲಗಲಿಯ ಮೇಲೆ ಹೇಗೆ ದಾಳಿ ಮಾಡಿತು ?

ಉತ್ತರ :  ದಂಗೆ ಎದ್ದ ಬೇಡರ ಬೆನ್ನು ಹತ್ತಿ ಕೊಂದರು, ಕರುಣೆ ಇಲ್ಲದೆ ಗುಂಡು ಹೊಡೆದು ಸಾಯಿಸಿದರು.

11) ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ ?

ಉತ್ತರ :  ಲಾವಣಿಗಳು ವೀರತನ ಮತ್ತು ಸಾಹಸವನ್ನು ವರ್ಣಿಸುವುದರಿಂದ ವೀರಗೀತೆಗಳು ಎನಿಸಿಕೊಂಡಿವೆ.

12) ಬ್ರಿಟೀಷರು ನಿಶ್ಯಸ್ತ್ರೀಕರಣ ಕಾಯ್ದೆಯನ್ನು ಯಾವಾಗ ಜಾರಿಗೆ ತಂದರು ?

ಉತ್ತರ :  1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ನಿಶ್ಯಸ್ತ್ರೀಕರಣ ಜಾರಿಗೆ ಬಂದಿತು.

13) ಬೇಡರ ಮನವೊಲಿಸಲು ಹಲಗಲಿಗೆ ಬಂದ ಬ್ರಿಟಿ ಅಧಿಕಾರಿ ಯಾರು ?

ಉತ್ತರ :  ಹೆಬಲಕ್ ಎಂಬ ಅಧಿಕಾರಿ.

14) ಹಲಗಲಿಯ ಬೇಡರು ಯಾವ ಬ್ರಿಟೀಷ ಅಧಿಕಾರಿಯನ್ನು ಕೊಂದರು ?

ಉತ್ತರ :  ಹೆಬಲಕ್

15) ಹಲಗಲಿಯ ದಂಗೆಯ ಕೊನೆಯ ಪರಿಣಾಮವೇನು ?

ಉತ್ತರ :  ಹಲಗಲಿಯನ್ನು ಲೂಟಿ ಮಾಡಿ, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರಿಂದ ಗುರುತು ಉಳಿಯದಂತಾಯಿತು.

16) ಎಲ್ಲ ಜನರಿಗೆ ಜೋರ ಮಾಡಿ ಕಸಿದುಕೊಳ್ಳಿರಿ ಹತಾರ - ಇಲ್ಲಿರುವ ಸ್ವಾರಸ್ಯವೇನು ?

ಉತ್ತರ :  ಭಾರತೀಯರ ಮೇಲಿನ ಬ್ರಿಟೀಷರ ದರ್ಪ ವ್ಯಕ್ತವಾಗಿದೆ.

17) ಆಯುಧಗಳನ್ನು ನೀಡಲು ಬೇಡರು ಏಕೆ ಒಪ್ಪಲಿಲ್ಲ ?

ಉತ್ತರ :  ಆಯುಧಗಳು ಅವರ ಜೀವನಕ್ಕೆ ಆಧಾರವಾಗಿದ್ದವು. ‘ಆಯುಧಗಳನ್ನು ನೀಡಿದರೆ ನಾವು ಸತ್ತಂತೆ’ ಎಂದು

ತಿಳಿದುಕೊಂಡಿದ್ದರಿಂದ ಕೊಡಲು ಒಪ್ಪಲಿಲ್ಲ.

18) ಆಯುಧಗಳ ಬಗ್ಗೆ ಬೇಡರಲ್ಲಿದ್ದ ಭಾವನೆ ಎಂತಹದು ?

ಉತ್ತರ :  ‚ಆಯುಧಗಳು ತಮ್ಮ ಪ್ರಾಣಕ್ಕಿಂತ ಮಿಗಿಲಾದವು ಎಂಬ ಭಾವನೆಯನ್ನು ಹಲಗಲಿ ಬೇಡರು ಹೊಂದಿದ್ದರು.

19) ಹಲಗಲಿ ಬೇಡರು - ಲಾವಣಿಯ ಆಕರ ಗ್ರಂಥ ಯಾವುದು ?

ಉತ್ತರ :  ಬಿ.ಎಸ್. ಗದ್ದಗಿಮಠ ಸಂಪಾದಿಸಿರುವ ‚ಕನ್ನಡ ಜನಪದ ಗೀತೆಗಳು.

20) ಹಲಗಲಿ ಬೇಡರ ಕದನವು ಪ್ರಧಾನವಾಗಿ ಒಳಗೊಂಡಿರುವ ಪ್ರಧಾನರಸ ಯಾವುದು ?

ಉತ್ತರ :  ವೀರರಸ

21) ಕುಂಪಣಿ ಸರಕಾರ ಜಾರಿಗೆ ತಂದ ಶಾಸನ ಯಾವುದು ?

ಉತ್ತರ :  ನಿಶ್ಯಸ್ತ್ರೀಕರಣ

22) ಹಲಗಲಿ ಬೇಡರು - ಬರೆದ ಲಾವಣಿಕಾರ ಅಂಕಿತಗೊಳಿಸಿರುವ ದೈವ ಯಾವುದು ?

ಉತ್ತರ :  ಕುರ್ತಕೋಟಿ ಕಲ್ಮೇಶ

23) ಯಾರು ದಡ ಮುಟ್ಟಲಿಲ್ಲ ಎಂದು ಲಾವಣಿಕಾರ ಹೇಳಿದನು ?

ಉತ್ತರ :  ಹಲಗಲಿ ಬಂಟರು.

24) ಯಾವ ಸರಕಾರ ಹುಕುಂ ಕಳಿಸಿತು ?

ಉತ್ತರ :  ವಿಲಾಯಿತಿಯಿಂದ ಕುಂಪಣಿ ಸರಕಾರ

25) ಕುಂಪಣಿ ಸರಕಾರ ಏನೆಂದು ಹುಕುಂ ಕಳಿಸಿತು ?

ಉತ್ತರ :  ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ

26) ಹಲಗಲಿಯಲ್ಲಿ ಯಾರು ಒಳಗಿಂದೊಳಗ ವಚನ ಕೊಟ್ಟರು ?

ಉತ್ತರ :  ಹಲಗಲಿಯ ಎಲ್ಲ ಬೇಡರು

27) ಯಾವ ಸಾಹೇಬನು ಬೇಡರಿಗೆ ಬುದ್ಧಿ ಮಾತು ಹೇಳಿದನು ?

ಉತ್ತರ :  ಹೆಬಲಕ ಸಾಹೇಬ (ಹೆನ್ರಿ ಹ್ಯಾವಲಾಕ್)

28) ಬ್ರಿಟಿಷರು ವಿಶ್ವಾಸ ಘಾತುಕರು ಎಂದು ಹೇಳಿದವರು ಯಾರು ?

ಉತ್ತರ :  ಜಡಗ

29) ಯಾವ ಸಾಹೇಬನನ್ನು ಹಲಗಲಿ ಬೇಡರು ಕೊಂದರು ?

ಉತ್ತರ :  ಹೆಬಲಕ್ ಅಧಿಕಾರಿ (ಹೆನ್ರಿ ಹ್ಯಾವಲಾಕ್)

30) ಬ್ರಿಟೀಷರು ಹಲಗಲಿಯಲ್ಲಿ ಏನೇನು ದೋಚಿದರು ?

ಉತ್ತರ :  ಕೊಡಲಿ, ಕೋರೆ, ಕುಡ, ಕಬ್ಬಿಣ, ಮೊಸರು, ಬೆಣ್ಣೆ, ಹಾಲು, ಉಪ್ಪು, ಎಣ್ಣೆ, ಅರಿಷಿಣ, ಜೀರಗಿ, ಅಕ್ಕಿ, ಸಕ್ಕರಿ, ಬೆಲ್ಲ, ಗಂಗಳ, ಚೆರಗಿ, ಮಂಗಳ ಸೂತ್ರ, ಬೀಸುಕಲ್ಲ

31) ಯಾರ ದಯದಿಂದ ಈ ಹಾಡು ಹಾಡಿದೆನೆಂದು ಲಾವಣಿಕಾರ ಹೇಳಿದ್ದಾನೆ ?

ಉತ್ತರ :  ಕುರ್ತಕೋಟಿ ಕಲ್ಮೇಶ.


Halagali Bedaru

















*****
Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ |  ಪದ್ಯ - 3 ಹಲಗಲಿ ಬೇಡರು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Halagali Bedaru |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon