10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-2 ಶಬರಿ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Chapter 2 Shabari |

karntakaeducations

ಗಧ್ಯ- 2 : ಶಬರಿ

class 10 kannada lesson imp questions
SSLC First Language Kannada Lesson 2 Shabari

I. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ: 
1) ಶ್ರೀರಾಮನ ತಂದೆಯ ಹೆಸರೇನು ?

ಉತ್ತರ :  ದಶರಥ

2) ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು ?

ಉತ್ತರ :  ಪರಿಮಳದ ಹೂವು, ಮಧುಪರ್ಕ, ರುಚಿಕರವಾದ ಹಣ್ಣು ಹಂಪಲಗಳು


3) ಮತಂಗಾಶ್ರಮದಲ್ಲಿ ವಾಸವಾಗಿದ್ದ ತಪಸ್ವಿನಿ ಯಾರು ?

ಉತ್ತರ :  ಶಬರಿ

4) ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ?

ಉತ್ತರ :  ಧನು (ಕಬಂಧ)


5) ಶಬರಿ ಗೀತನಾಟಕದ ಕರ್ತೃ ಯಾರು ?

ಉತ್ತರ :  ಪು. ತಿ. ನರಸಿಂಹಾಚಾರ್ಯ

6) ಶಬರಿಯ ರೂಪ ಹೇಗಿತ್ತು ?

ಉತ್ತರ :  ವೃದ್ಧೆ, ಮರುಳೆ, ಶ್ರಮಣಿಯಂತೆ ರೂಪ, ಬುದ್ಧಿಹೀನ


7) ಶಬರಿಯು ರಾಮನಿಗಾಗಿ ನಿಂತಲ್ಲಿಯೇ ನಾ ನಿಂತಿರುವೆ ಎಂದು ಹಾಡಿದ ಪರಿ ಹೇಗೆ ?

ಉತ್ತರ :  ಬಯಕೆಯ ಹುಚ್ಚಿನಲ್ಲಿ ಹಾಡಿದಳು

8) ಭೂಮಿಜಾತೆ, ಆತ್ಮ ಕಾಮಕಲ್ಪಲತೆ ಯಾರೆಂದು ರಾಮ ಹೇಳಿದ್ದಾನೆ ?

ಉತ್ತರ :  ಸೀತೆ


9) ಸೀತೆಯು ಕಣ್ಮರೆಯಾಗಿದ್ದು ಎಲ್ಲಿ ?

ಉತ್ತರ :  ಚಿತ್ರಕೂಟದಲ್ಲಿ

10) ಮಧುಪರ್ಕ ಎಂದರೇನು ?

ಉತ್ತರ :  ಅತಿಥಿಗಳಿಗೆ ನೀಡುವ ಮೊಸರು, ತುಪ್ಪ, ಹಾಲು, ಜೇನುತುಪ್ಪ, ಸಕ್ಕರೆ ಮಿಶ್ರಿತ ಪಾನೀಯ


11) ದನುವಿಗಿದ್ದ ಇನ್ನಿತರ ಹೆಸರುಗಳು ಯಾವುವು ?

ಉತ್ತರ :  ಕಬಂಧ, ಉದರಮುಖ

12) ನಾನು ಹೇಗೆ ಸುಖಿಯಾಗಿಹೆನು ಎಂದು ಶಬರಿ ಹಾಡಿದಳು ?

ಉತ್ತರ :  ನನ್ನ ಆಸೆಯೆಲ್ಲ ತೀರಿಹೋಯಿತು, ನನ್ನ ಹಂಬಲ ಅಳಿದು ಸಂತೋಷ ತುಂಬಿದೆ. ಸುಖಿ ನಾನು ಸುಖಿ ನಾನು


13) ಶಬರಿಯು ಯಾವ ಹರಕೆ ಮಾಡೆಂದು ರಾಮನಿಗೆ ಹೇಳಿದಳು ?

ಉತ್ತರ :  ತನಗೆ ಪುಣ್ಯಲೋಕ ದೊರೆಯಲೆಂದು

14) ವೇದಿಯಲ್ಲಿ ಶಬರಿಯು ಏನೆಂದು ಹಾಡುತ್ತಾ ಪ್ರವೇಶಿಸಿದಳು ?

ಉತ್ತರ :  ನಮೋ ನಮೋ ನಿಮಗೆ ನಮೋ, ಬನಕೆ ನಮೋ, ಬೆಟ್ಟಕ್ಕೆ ನಮೋ, ಎಲ್ಲರಿಗೂ ಎಲ್ಲಕ್ಕೂ ಶರಣು ಎಂದು ಪ್ರಾರ್ಥಿಸುತ್ತಾಳೆ.


15) ಶಬರಿ ಗದ್ಯ ಪಾಠದ ಆಕರ ಗ್ರಂಥ ಯಾವುದು ?

ಉತ್ತರ :  ಶಬರಿ ಗೀತನಾಟಕ (ಏಕಾಂಕ ನಾಟಕಗಳು)

16) ಶಬರಿಯ ತಂದೆಯ ಹೆಸರೇನು ?

ಉತ್ತರ :  ಶಬರಿಯ ತಂದೆ ಶಬರ


17) ಲಕ್ಷ್ಮಣನಿಗೆ ಸೌಮಿತ್ರಿ ಎಂದು ಹೆಸರು ಬರಲು ಕಾರಣವೇನು ?

ಉತ್ತರ :  ಸುಮಿತ್ರೆಯ ಮಗನಾಗಿದ್ದರಿಂದ

18) ಜಟಿಲ ಕಬರಿ ಎಂದು ಯಾರನ್ನು ಕರೆಯಲಾಗಿದೆ ?

ಉತ್ತರ :  ಶಬರಿಯನ್ನು


19) ಉದರಮುಖ ಎಂದರೆ ಯಾರು ?

ಉತ್ತರ :  ದಂಡಕಾರಣ್ಯದಲ್ಲಿ ವಾಸವಾಗಿದ್ದ ಕಬಂದ ಹೆಸರಿನ ರಾಕ್ಷಸ. ಇವನಿಗೆ ದನು ಎಂಬ ಹೆಸರೂ ಇದೆ.

20) ಶಬರಿಯು ಯಾರಿಗಾಗಿ ಹಂಬಲಗೊಂಡಿದ್ದಾಳೆ ?

ಉತ್ತರ :  ರಾಮನಿಗಾಗಿ


21) ಶಬರಿಯು ಎಲ್ಲಿ ಹಂಬಲಗೊಂಡಿದ್ದಾಳೆ ?

ಉತ್ತರ :  ಮತಂಗಾಶ್ರಮದಲ್ಲಿ ಪರ್ಣಶಾಲೆಯ ಮುಂದಿರುವ ವನದಲ್ಲಿ ಶಬರಿಯು ಹಂಬಲಗೊಂಡಿದ್ದಾಳೆ

22) ತೇಜಕ್ಕೆ ಎಡೆ ಯಾರು ?

ಉತ್ತರ :  ಸೂರ್ಯ


23) ಧೈರ್ಯಕ್ಕೆ ಎಡೆ ಯಾರು ?

ಉತ್ತರ :  ರಾಮ

24) ರಾಮನು ಪ್ರೇಮಶುದ್ಧೆ ಎಂದು ಯಾರನ್ನು ಕರೆದಿದ್ದಾನೆ ?

ಉತ್ತರ :  ಶಬರಿಯನ್ನು


25) ಶಬರಿಯು ರಾಮನಲ್ಲಿ ಏನನ್ನು ಬೇಡುತ್ತಾಳೆ ?

ಉತ್ತರ :  ಮುಕ್ತಿಯನ್ನು

26) ಅಂಜಿಸುವವರು ಅಂಜುವಂತೆ ಮಾಡಿದವನು ಯಾರು ?

ಉತ್ತರ :  ರಾಮ


27) ರಾಮನು ಗಿರಿವನಗಳನ್ನು ಏನೆಂದು ಪ್ರಾರ್ಥಿಸಿದನು ?

ಉತ್ತರ :  ಸೀತೆ ದೊರೆಯುವಳೇ? ದೊರೆಯಳೇ ? ಅವಳ ನೆಲೆ ಯಾರೂ ಅರಿಯಿರೇ ?

28) ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು ?

ಉತ್ತರ :  ತಾಳಿಕೋ ಅಣ್ಣ, ಸೂರ್ಯನೇ ಧೈರ್ಯಗೆಟ್ಟರೆ ಕಾಂತಿ ನೀಡುವವರು ಯಾರು? ರಾಮನೇ ಧೈರ್ಯಗೆಟ್ಟರೆ ಲೋಕಕ್ಕೆ ಸ್ಥೈರ್ಯ ನೀಡುವವರು ಯಾರು ? ಎಂದು ಸಂತೈಸಿದನು


29) ಶಬರಿಯ ತಾಳ್ಮೆಯ ಪ್ರತಿಫಲವೇನು ?

ಉತ್ತರ : ರಾಮನ ದರ್ಶನ ಮತ್ತು ಮುಕ್ತಿ ದೊರೆಯಿತು.

30) ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು ?

ಉತ್ತರ : ನಿನ್ನ ಪ್ರೀತಿಯಿಂದ ಸಂತಸ, ಸುಖ, ಆನಂದ ಅನುಭವಿಸುವ ಪುಣ್ಯ ನಮ್ಮದಾಯಿತು. ನಿನ್ನನ್ನು ತಾಯಿಯಂತೆ ಕಂಡೆವು. ನಾವು ನಿನಗೆ ಎಂದೆಂದಿಗೂ ಋಣಿಗಳು ಎಂದರು



*****
karnataka educations 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-2 ಶಬರಿ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon