10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-4 ಭಾಗ್ಯಶಿಲ್ಪಿಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagyashilpigalu |

karntakaeducations

ಗದ್ಯ - 4 : ಭಾಗ್ಯಶಿಲ್ಪಿಗಳು

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-4 ಭಾಗ್ಯಶಿಲ್ಪಿಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagyashilpigalu |
Bhagyashilpigalu

1) ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು ?

ಉತ್ತರ :  ಕ್ರಿ.ಶ. 1895

2) ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾಗಿದ್ದರು ?

ಉತ್ತರ :  ತಮ್ಮ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ


3) ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು ?

ಉತ್ತರ :  ಕಾವೇರಿ ನದಿಗೆ ಸ್ಥಾಪಿಸಿದ ಶಿವನ ಸಮುದ್ರ (1900)

4) ಬ್ರಿಟಿಷ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿ ನೀಡಿ ಗೌರವಿಸಿತು ?

ಉತ್ತರ :  ಸರ್ ಪದವಿ


5) ವಿಶ್ವೇಶ್ವರಯ್ಯರವರನ್ನು ದಿವಾನರಾಗಿ ನೇಮಿಸಿದವರು ಯಾರು ?

ಉತ್ತರ :  ನಾಲ್ವಡಿ ಕೃಷ್ಣರಾಜ ಒಡೆಯರು

6) ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ನೆನಪಿಗಾಗಿ ಆಚರಿಸುವ ದಿನಾಚರಣೆ ಯಾವುದು ?

ಉತ್ತರ :  ಎಂಜಿನಿಯರ್ಸ್ ದಿನ


7) ನಾಲ್ವಡಿ ಕೃಷ್ಣರಾಜ ಒಡೆಯರು ಒಡೆಯರ ರಾಜ ಸಂತತಿಯ ಎಷ್ಟನೇ ರಾಜರಾಗಿದ್ದರು ?

ಉತ್ತರ :  24 ನೆಯ ರಾಜ

8) ನಾಲ್ವಡಿ ಕೃಷ್ಣರಾಜ ಒಡೆಯರಿಗೆ ರೀಜೆಂಟರಾಗಿ ಆಡಳಿತ ನಿರ್ವಹಿಸಿದವರು ಯಾರು ?

ಉತ್ತರ :  ಮಹಾರಾಣಿ ವಾಣಿವಿಲಾಸ


9) ಮೈಸೂರು ಯಾವಾಗ ನಾಲ್ವಡಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು ?

ಉತ್ತರ :  8 ಅಗಷ್ಟ 1902

10) ಪ್ರಜಾ ಪ್ರತಿನಿಧಿ ಸಭೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಶಾಸನಬದ್ಧ ಸಂಸ್ಥೆಯನ್ನಾಗಿ ಮಾಡಿದರು ?

ಉತ್ತರ :  1923


11) ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ನ್ಯಾಯ ವಿಧೇಯಕ ಸಭೆಯನ್ನು ಸ್ಥಾಪಿಸಿದರು ?

ಉತ್ತರ :  1907

12) ನ್ಯಾಯ ವಿಧೇಯಕ ಸಭೆಯು ಯಾವ ಯಾವ ತಿಂಗಳುಗಳಲ್ಲಿ ಎಲ್ಲಿ ಸಮಾವೇಶಗೊಳ್ಳುತ್ತಿತ್ತು ?

ಉತ್ತರ :  ಜೂನ ಮತ್ತು ಡಿಸೆಂಬರ - ಬೆಂಗಳೂರಿನಲ್ಲಿ ಸೇರುತ್ತಿತ್ತು


13) ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಯಾರನ್ನು ಕರೆಯಲಾಗಿದೆ ?

ಉತ್ತರ :  ನಾಲ್ವಡಿ ಕೃಷ್ಣರಾಜ ಒಡೆಯರು

14) ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾನಿಲಯ ಯಾವುದು ?

ಉತ್ತರ :  ಮೈಸೂರು ವಿಶ್ವವಿದ್ಯಾಲಯ (ಮಾನಸ ಗಂಗೋತ್ರಿ)


15) ವಿಶ್ವೇಶ್ವರಯ್ಯನವರ ತಂದೆ-ತಾಯಿ ಯಾರು ?

ಉತ್ತರ :  ತಂದೆ - ಶ್ರೀನಿವಾಸ ಶಾಸ್ತ್ರಿ, ತಾಯಿ - ವೆಂಕಟಲಕ್ಷ್ಮಮ್ಮ

16) ವಿಶ್ವೇಶ್ವರಯ್ಯನವರು ಯಾವಾಗ ಎಲ್ಲಿ ಜನಿಸಿದರು ?

ಉತ್ತರ :  ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 15 ಸೆಪ್ಟೆಂಬರ 1860 ರಂದು ವಿಶ್ವೇಶ್ವರಯ್ಯ ಜನಿಸಿದರು


17) ವಿಶ್ವೇಶ್ವರಯ್ಯನವರ ಕುಟುಂಬ ಕರ್ನಾಟಕಕ್ಕೆ ವಲಸೆ ಬಂದು ಎಲ್ಲಿ ನೆಲಸಿದರು ?

ಉತ್ತರ :  ಚಿಕ್ಕಾಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ

18) ವಿಶ್ವೇಶ್ವರಯ್ಯನವರಿಗೆ ಮಾರ್ಗದರ್ಶನ ನೀಡಿದ ಸೋದರ ಮಾವ ಯಾರು ?

ಉತ್ತರ :  ಎಚ್. ರಾಮಯ್ಯ


19) ವಿಶ್ವೇಶ್ವರಯ್ಯನವರು ಪ್ರೌಢ ಶಿಕ್ಷಣ ಎಲ್ಲಿ ಪಡೆದರು ?

ಉತ್ತರ :  ಬೆಂಗಳೂರಿನ ವೆಸ್ಲಿಯನ್ ಪ್ರೌಢ ಶಾಲೆಯಲ್ಲಿ

20) ವಿಶ್ವೇಶ್ವರಯ್ಯನವರು ಪೂನಾದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾವ ಬಹುಮಾನ ಪಡೆದರು ?

ಉತ್ತರ :  ಜೇಮ್ಸ್ ಬಕ್ರ್ಲಿ ಬಹುಮಾನ


21) ವಿಶ್ವೇಶ್ವರಯ್ಯನವರು ಪ್ರಪ್ರಥಮವಾಗಿ ಯಾವ ಜಲಾಶಯಕ್ಕೆ ಸ್ವಯಂ ಚಾಲಿತ ಬಾಗಿಲು ಅಳವಡಿಸಿದರು ?

ಉತ್ತರ :  ಪೀಪ್ ಜಲಾಶಯಕ್ಕೆ

22) ವಿಶ್ವೇಶ್ವರಯ್ಯನವರು ಯಾವ ಯಾವ ಜಲಾಶಯಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಿದರು ?

ಉತ್ತರ :  ಪೀಪ್ ಜಲಾಶಯ (ಪೂನಾ), ತಿಗ್ರಾ ಜಲಾಶಯ (ಗ್ವಾಲಿಯರ್) , ಕೃಷ್ಣರಾಜ ಸಾಗರ (ಮಂಡ್ಯ)


23) ಕೈಗಾರಿಕೆಗಳ ಬಗ್ಗೆ ವಿಶ್ವೇಶ್ವರಯ್ಯನವರು ಮಾಡಿದ ಘೋಷಣೆ ಏನು ?

ಉತ್ತರ :  ಕೈಗಾರಿಕೀರಣ ಇಲ್ಲವೇ ಅವನತಿ

24) ಸಿಂದ್ ಪ್ರಾಂತದ ಯಾವ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ವಿಶ್ವೇಶ್ವರಯ್ಯನವರು ರೂಪಿಸಿದರು ?

ಉತ್ತರ :  ಸುಕ್ಕೂರು ಪಟ್ಟಣಕ್ಕೆ


25) ಹೈದರಾಬಾದ್‍ನಲ್ಲಿ ಪ್ರವಾಹ ಉಂಟು ಮಾಡುತ್ತಿದ್ದ ನದಿಗಳು ಯಾವುವು ?

ಉತ್ತರ :  ಈಸಿ ಮತ್ತು ಮೂಸಿ

26) ಕನ್ನಡ ಸಾಹಿತ್ಯ ಪರಿಷತ್‍ನ ಸ್ಥಾಪಕರು ಯರು ?

ಉತ್ತರ :  ವಿಶ್ವೇಶ್ವರಯ್ಯನವರು


27) ಮೈಸೂರು ಬ್ಯಾಂಕ್‍ನ್ನು ಯಾವಾಗ ಸ್ಥಾಪಿಸಲಾಯಿತು ?

ಉತ್ತರ :  1913

28) ವಿಶ್ವೇಶ್ವರಯ್ಯನವರ ಆತ್ಮ ಚರಿತೆ ಯಾವುದು ?

ಉತ್ತರ :  ಮೆಮೋರೀಸ್ ಆಫ್ ಮೈ ವರ್ಕಿಂಗ್ ಲೈಫ್


29) ವಿಶ್ವೇಶ್ವರಯ್ಯನವರ ಶತಮಾನೋತ್ಸವ ದಿನದಂದು ಯಾವ ಗ್ರಂಥವನ್ನು ಪ್ರಕಟಿಸಲಾಯಿತು ?

ಉತ್ತರ :  ಸರ್. ಎಂ.ವಿ.

30) ವಿಶ್ವೇಶ್ವರಯ್ಯನವರು ಎಷ್ಟು ವರ್ಷಗಳವರೆಗೆ ಬದುಕಿದ್ದರು ?

ಉತ್ತರ :  102 ವರ್ಷಗಳು


31) ವಿಶ್ವೇಶ್ವರಯ್ಯನವರು ಯಾವ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆ ನಿರ್ಮಿಸಿದರು ?

ಉತ್ತರ :  ಪಂಜ್ರಾ

32) ವಿಶ್ವೇಶ್ವರಯ್ಯನವರ ಕಾರ್ಯವೈಖರಿಯನ್ನು ಹಾಡಿ ಹೊಗಳಿದ ಮುಂಬೈ ಪ್ರಾಂತ್ಯದ ಗವರ್ನರ್ ಯಾರು ?

ಉತ್ತರ :  ಲಾರ್ಡ್ ಸಂಡ್ ಹರ್ಸ್ಟ್


33) ಯಾವ ವರ್ಷದಲ್ಲಿ “ದೇವದಾಸಿ ಪದ್ದತಿ ನಿಷೇಧ” ಜಾರಿಗೆ ಬಂದಿತು ?

ಉತ್ತರ :  1909

34) ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ ಜಾರಿಗೆ ಬಂದ ವರ್ಷ ಯಾವುದು ?

ಉತ್ತರ :  1914


35) ಪ್ರಜಾ ಪ್ರತಿನಿಧಿ ಸಭೆಯು ಯಾವಾಗ ಸಭೆ ಸೇರುತ್ತಿತ್ತು ?

ಉತ್ತರ :  ಜೂನ-1 : ಮಹಾರಾಜರ ವರ್ಧಂತಿ, ಅಕ್ಟೋಬರ-2: ದಸರಾ ಮಹೋತ್ಸವ

36) ಪ್ರಜಾ ಪ್ರತಿನಿಧಿ ಸಭೆಯಲ್ಲಿದ್ದ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ?

ಉತ್ತರ :  275


37) ಒಡೆಯರ ಕಾಲದಲ್ಲಿ ಮೇಲ್ಮನೆಯಂತೆ ಕಾರ್ಯ ನಿರ್ವಹಿಸುತ್ತಿದ್ದ ಸಭೆ ಯಾವುದು ?

ಉತ್ತರ :  ನ್ಯಾಯ ವಿಧಾಯಕ ಸಭೆ

38) ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಾಗ ದಿವಾನರಾಗಿದ್ದವರು ಯಾರು ?

ಉತ್ತರ :  ಕೆ. ಶೇಷಾದ್ರಿ ಅಯ್ಯರ್


39) ನ್ಯಾಯ ವಿಧಾಯಕ ಸಭೆಯು ಯಾವ ರೀತಿ ಕಾರ್ಯ ನಿರ್ವಹಿಸುತ್ತಿತ್ತು ?

ಉತ್ತರ :  ಮೇಲ್ಮನೆಯಂತೆ

40) ಮೈಸೂರನ್ನು ಮಾದರಿ ಸಂಸ್ಥಾನವನ್ನಾಗಿಸಿದ ನಾಲ್ವಡಿ ಕೃಷ್ಣರಾಜ ಒಡೆಯರು ಏನೆಂದು ಹೆಸರಾದರು ?

ಉತ್ತರ :  ಸಾಮಾಜಿಕ ಕಾನೂನುಗಳ ಹರಿಕಾರ


41) ವಿಶ್ವೇಶ್ವರಯ್ಯನವರ ಪೂರ್ವಜರು ಎಲ್ಲಿಯವರು ?

ಉತ್ತರ :  ಆಂದ್ರಪ್ರದೇಶದ ಕರ್ನೂಲ ಜಿಲ್ಲೆಯ ಗಿಡ್ಡಲೂರು ತಾಲೂಕಿನ ಮೋಕ್ಷಗುಂಡಂ ಎಂಬ ಅಗ್ರಹಾರಕ್ಕೆ ಸೇರಿದವರು.

42) ವಿಶ್ವೇಶ್ವರಯ್ಯನವರ ಮನೆತನ ಹೆಸರೇನು ?

ಉತ್ತರ :  ಮೋಕ್ಷಗುಂಡಂ


43) ವಿಶ್ವೇಶ್ವರಯ್ಯನವರ ತಾಯಿಯು ತನ್ನ ಸಂಸಾರವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದು ಏಕೆ ?

ಉತ್ತರ :  ಮಕ್ಕಳ ವಿದ್ಯಾಭ್ಯಾಸಕ್ಕಾಗಿ

44) ವಿಶ್ವೇಶ್ವರಯ್ಯನವರು ಯಾವುದು ಎಲ್ಲಾ ಸಮಸ್ಯೆಗಳಿಗೆ ಪರಮೋಚ್ಛ ಪರಿಹಾರವೆಂದು ನಂಬಿದ್ದರು ?

ಉತ್ತರ :  ಆಧುನಿಕ ಶಿಕ್ಷಣ


45) ವಿಶ್ವೇಶ್ವರಯ್ಯನವರು ಯಾವ ಕ್ಷೇತ್ರಕ್ಕೆ ಅಗ್ರ ಪ್ರಾಶಸ್ತ್ಯವನ್ನು ನೀಡಿದರು ?

ಉತ್ತರ :  ಕೈಗಾರಿಕೆ

46) ವಿಶ್ವೇಶ್ವರಯ್ಯನವರಿಗೆ ಭಾರತ ಸರಕಾರ ನೀಡಿದ ಪ್ರಶಸ್ತಿ ಯಾವುದು ?

ಉತ್ತರ :  ಭಾರತ ರತ್ನ


47) ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು ?

ಉತ್ತರ :  ಗ್ರಾಮ ನೈರ್ಮಲ್ಯೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ

48) ನಾಲ್ವಡಿ ಕೃಷ್ಣರಾಜ ಒಡೆಯರು ಜಾರಿ ಮಾಡಿದ ಸಾಮಾಜಿಕ ಕಾನೂನುಗಳು ಯಾವುವು ?

ಉತ್ತರ :  ದೇವದಾಸಿ ಪದ್ಧತಿ ನಿರ್ಮೂಲನೆ, ವಿಧವಾ ಮರುವಿವಾಹ ಕಾಯ್ದೆ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ, ಸ್ತ್ರೀಯರಿಗೆ ಮತದಾನದ ಹಕ್ಕು, ಗ್ರಾಮ ಪಂಚಾಯತ ಕಾಯ್ದೆ,


49) ಶಿಕ್ಷಣ ಕುರಿತು ವಿಶ್ವೇಶ್ವರಯ್ಯನವರ ಹೇಳಿಕೆ ಏನು ?

ಉತ್ತರ :  ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು, ಅದು ಕೆಲವೇ ಜನರ ಸ್ವತ್ತಾಗದೇ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು

50) ಕೈಗಾರಿಕೀಕರಣ ಇಲ್ಲವೇ ಅವನತಿ – ಎಂದು ಘೋಷಣೆ ಮಾಡಿದವರು ಯಾರು ?

ಉತ್ತರ :  ದಿವಾನ ಸರ್. ಎಂ. ವಿಶ್ವೇಶ್ವರಯ್ಯ


*****

Karnataka Educations 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-4 ಭಾಗ್ಯಶಿಲ್ಪಿಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagyashilpigalu 


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon