10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 5 : ಹಸುರು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Hasuru |

karntakaeducations

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 5 : ಹಸುರು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Hasuru |








ಪದ್ಯ - 5 : ಹಸುರು

1) ಅಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತಿದೆ ?

ಉತ್ತರ :  ಗಿಳಿ ಹಸುರು

2) ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ ?

ಉತ್ತರ :  ಬನದ ಅಂಚಿನಲ್ಲಿದೆ (ಕೊನೆಯಲ್ಲಿದೆ)

3) ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ?

ಉತ್ತರ :  ಮಕಮಲ್ಲಿನ ಹೊಸ ಪಚ್ಚೆಯ ಜಮಖಾನದಂತೆ

4) ‘ಹಸುರು’ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ ?

ಉತ್ತರ :  ಪ್ರಕೃತಿಯ ಹಚ್ಚ ಹಸುರು

5) ಕವಿಯ ನೆತ್ತರಯ ಯಾವ ಬಣ್ಣದಿಂದ ಕೂಡಿದೆ ?

ಉತ್ತರ :  ಹಸುರು ಬಣ್ಣದಿಂದ ಕೂಡಿದೆ

6) ಕವಿ ಕುವೆಂಪು ಅವರು ಎಲ್ಲ ಕಡೆಗೂ ಹಸುರಿದೆ ಎಂದು ಹೇಗೆ ಹೇಳಿದ್ದಾರೆ ?

ಉತ್ತರ :  ಹಸುರತ್ತಲ್ ! ಹಸುರಿತ್ತಲ್ ! ಹಸುರೆತ್ತಲ್ ಎಂದಿದ್ದಾರೆ.

7) ಶಾಲಿವನ ಪದದ ಅರ್ಥವೇನು ?

ಉತ್ತರ :  ಬತ್ತದ ಗದ್ದೆ.

8) ಕುವೆಂಪು ಅವರಿಗೆ ಎಲ್ಲೆಲ್ಲಿ ಹಸುರು ಕಂಡಿದೆ ?

ಉತ್ತರ :  ಆಗಸ, ಮುಗಿಲು, ಗದ್ದೆ, ಬಯಲು, ಮಲೆ (ಬೆಟ್ಟ), ಕಣಿವೆ, ಸಂಜೆಯ ಬಿಸಿಲು, ಹೂವಿನ ಕಂಪು, ಗಾಳಿಯ ತಂಪಿನಲ್ಲಿ, ಹಕ್ಕಿಯ ಕೊರಳಿಂಪು, ಭೂಮಿಯ ಉಸಿರಿನಲ್ಲಿ.

9) ಕುವೆಂಪು ಅವರು ಗಿಳಿ ಹಸುರು ಬಣ್ಣವನ್ನು ಎಲ್ಲಿ ಕಂಡರು ?

ಉತ್ತರ :  ಅಶ್ವಯುಜ ಮಾಸದ ಬತ್ತದ ಗದ್ದೆಯಲ್ಲಿ.


*****

Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 5 : ಹಸುರು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Hasuru |


KarnatakaEducation Search 


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium







Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon