10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-7 ವೃಕ್ಷ ಸಾಕ್ಷಿ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Vruksha Sakshi |

karntakaeducations

10ನೇ ತರಗತಿ ಪ್ರಥಮ ಭಾಷೆ ಕನ್ನಡ ಗದ್ಯ - 7 : ವೃಕ್ಷ ಸಾಕ್ಷಿ

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-7 ವೃಕ್ಷ ಸಾಕ್ಷಿ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Vruksha Sakshi |

ಈ ಎಲ್ಲಾ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1) ವೃಕ್ಷಸಾಕ್ಷಿ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?

ಉತ್ತರ : ದುರ್ಗಸಿಂಹನ ‘ಕರ್ನಾಟಕ ಪಂಚತಂತ್ರ’

2) ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಸಿದನು ?

ಉತ್ತರ : ಹೊನ್ನಿನ ಕಳ್ಳತನದ ಆರೋಪ

3) ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು ?

ಉತ್ತರ : ಆಲದ ಮರವೇ ಸಾಕ್ಷಿ ಎಂದದಕ್ಕೆ

4) ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು ?

ಉತ್ತರ : ದೇವರು, ಗುರುಗಳು, ವೇದಾಧ್ಯಯನ ನಿರತರನ್ನು ಪೂಜೆ ಮಾಡುತ್ತ

5) ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು ?

ತ್ತರ : ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯ ನಡುವಿನ ವ್ಯಾಜ್ಯವನ್ನು ಪರಿಹರಿಸಲು ವಟವೃಕ್ಷದ ಸಾಕ್ಷಿ ಕೇಳಲು

6) ಧರ್ಮಬುದ್ಧಿಯು ಹೊನ್ನನ್ನು ಹಂಚಿಕೊಳ್ಳೋಣ ಎಂದಾಗ ದುಷ್ಟಬುದ್ಧಿ ಹೇಳಿದ ಮಾತುಗಳೇನು ?

ಉತ್ತರ : ಖರ್ಚಿಗೆ ಬೇಕಾದಷ್ಟು ಹಣ ತೆಗೆದುಕೊಂಡು ಉಳಿದ ಹಣ ಇಲ್ಲಿಯೇ ಬಚ್ಚಿಡೋಣ.

7) ದುಷ್ಟಬುದ್ಧಿಯು ತಂದೆಯನ್ನು ಹೇಗೆ ಪೊಟರೆಗೆ ಕಳುಹಿಸಿದನು ?

ಉತ್ತರ : ಮಾರಿಯ ಮನೆಗೆ ಹರಕೆಯ ಕುರಿಯನ್ನು ಹೊಗಿಸುವಂತೆ

8) ಪೊಠರೆಯಲ್ಲಿರುವ ಎಲ್ಲ ಹೊನ್ನನ್ನು ತೆಗೆದುಕೊಂಡು ಹೋದವರು ಯಾರು ?

ಉತ್ತರ :  ದುಷ್ಟಬುದ್ಧಿ

9) ಧರ್ಮಾಧಿಕರಣರಿಗೆ ದುಷ್ಟಬುದ್ಧಿಯು ಯಾವ ಸಾಕ್ಷಿ ನುಡಿಸುವುದಾಗಿ ಹೇಳಿದನು ?

ಉತ್ತರ : ವಟವೃಕ್ಷದ ಸಾಕ್ಷಿ ನುಡಿಸುವುದಾಗಿ ಹೇಳಿದನು

10) ದುಷ್ಟಬುದ್ಧಿಯ ತಂದೆಯ ಹೆಸರೇನು ?

ಉತ್ತರ : ಪ್ರೇಮಮತಿ


11) ‘ವೃಕ್ಷ ಸಾಕ್ಷಿ’ ಪಾಠದ ನೀತಿ ಏನು ?

ಉತ್ತರ : ಮಾಡಿದ್ದುಣ್ಣೊ ಮಾರಾಯ, ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.

12) ‘ವೃಕ್ಷ ಸಾಕ್ಷಿ’ ಪಾಠದ ಆಯವೇನು ?

ಉತ್ತರ : ಹಣಕ್ಕಿಂತ ಗುಣ ಮೇಲು

13) ‘ಕರ್ನಾಟಕ ಪಂಚತಂತ್ರ’ ದಲ್ಲಿರುವ 5 ತಂತ್ರಗಳಾವುವು ?

ಉತ್ತರ :  ಭೇದ, ಪರೀಕ್ಷೆ, ವಿಶ್ವಾಸ, ವಂಚನೆ, ಮಿತ್ರಕಾರ್ಯ.

14) ‘ಕರ್ನಾಟಕ ಪಂಚತಂತ್ರ’ ಕೃತಿಯ ಸಾಹಿತ್ಯದ ಪ್ರಕಾರ ಯಾವುದು ?

ಉತ್ತರ :  ಚಂಪೂಕಾವ್ಯ.

15) ಧರ್ಮಬುದ್ಧಿಯು ಧರ್ಮಾಧಿಕರಣರಿಗೆ ಹೇಳಿದ ಸುಳ್ಳು ಯಾವುದು ?

ಉತ್ತರ :  ಸೂರ್ಯೋದಯವಾಗಿದ್ದರಿಂದ ಕದ್ದ ಹಣವನ್ನು ಪೊಟರೆಯಲ್ಲಿಟ್ಟಿದ್ದರಿಂದ ಅದನ್ನು ಒಂದು ಹಾವು ಸುತ್ತಿಕೊಂಡಿದೆ. ಅದಕ್ಕೆ ಹೊಗೆಯನ್ನು ಹಾಕಿ ಹೊರಗೋಡಿಸಿ ಹೊನ್ನನ್ನು ತಂದುಕೊಡುವೆ ಎಂದು ಸುಳ್ಳು ಹೇಳಿದನು.

16) ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದು ಏನು ಮಾಡಿದರು ?

ಉತ್ತರ :  ಎಂಟು ವಿಧದಲ್ಲಿ ವಟವೃಕ್ಷವನ್ನು ಪೂಜಿಸಿದರು.

17) ದುರ್ಗಸಿಂಹನು ಬರೆದ ಪ್ರಸಿದ್ಧ ಕೃತಿ ಯಾವುದು ?

ಉತ್ತರ :  ಕರ್ನಾಟಕ ಪಂಚತಂತ್ರ

18) ವೃಕ್ಷಸಾಕ್ಷಿ ಕಥೆಯಲ್ಲಿ ಹರಕೆಯ ಕುರಿ ಯಾರು ?

ಉತ್ತರ :  ದುಷ್ಟಬುದ್ಧಿಯ ತಂದೆ ಪ್ರೇಮಮತಿಯು ಹರಕೆಯ ಕುರಿ.

19) ಧರ್ಮಬುದ್ಧಿಯು ದುಷ್ಟಬುದ್ಧಿಗೆ ಏನು ಹೇಳಿದನು ?

ಉತ್ತರ : ಹಣವನ್ನು ಹಂಚಿಕೊಳ್ಳೋಣ ಎಂದನು

20) ದುಷ್ಟಬುದ್ಧಿಯು ಧರ್ಮಾಧಿಕರಣರಲ್ಲಿಗೆ ಹೇಗೆ ಬಂದನು ?

ಉತ್ತರ :  ಮುಂಜಾನೆ ಮುಖವನ್ನು ತೊಳೆಯದೇ ಬಂದನು.


21) ಧರ್ಮಾಧಿಕರಣರು ವಟವೃಕ್ಷವನ್ನು ಸಾಕ್ಷಿ ಕೇಳುವ ಮೊದಲು ಏನು ಮಾಡಿದರು ?

ಉತ್ತರ : ಎಂಟು ವಿಧದಲ್ಲಿ ವಟವೃಕ್ಷವನ್ನು ಪೂಜಿಸಿದರು.

22) ವಟವೃಕ್ಷವು ಯಾವುದರ ವಾಸಸ್ಥಾನವಾಗಿದೆ ?

ಉತ್ತರ : ಯಕ್ಷಾದಿ ದಿವ್ಯ ದೇವತೆಗಳ ವಾಸಸ್ಥಾನವಾಗಿದೆ.

23) ಧರ್ಮಬುದ್ಧಿಯು ವಟವೃಕ್ಷವನ್ನು ಪ್ರದಕ್ಷಿಣೆಗೆ ಬಂದಾಗ ಕಂಡಿದ್ದೇನು ?

ಉತ್ತರ :  ವಟವೃಕ್ಷದ ಬಳಿ ಮನುಷ್ಯ ಸಂಚಾರವಾಗಿರುವುದನ್ನು ಧರ್ಮಬುದ್ಧಿಯು ಕಂಡನು.

24) ಧರ್ಮಬುದ್ಧಿಯು ವ್ಯಾಪಾರಿಗಳ ವೃತ್ತಿಧರ್ಮದ ಕುರಿತು ಹೇಳಿದ ಮಾತು ಯಾವುದು ?

ಉತ್ತರ :  ಹುಸಿಯದ ಬೇಹಾರಿಯೇ ಇಲ್ಲ (ಸುಳ್ಳು ಹೇಳದ ವ್ಯಾಪಾರಿಯೇ ಇಲ್ಲ)


****

Karnataka Eductions 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-7 ವೃಕ್ಷ ಸಾಕ್ಷಿ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Vruksha Sakshi |

KarnatakaEducation Search 


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium





Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon