SSLC Social Science One Mark Questions 226 to 250 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-10 (226 to 250)
226. ತೃತೀಯ ಆಧಾರ ಸ್ಥಂಭ ಎಂದು ಕರೆಯಲ್ಪಡುವ ಸಂಸ್ಥೆ ಯಾವುದು ?
ಉ: ವಿಶ್ವ ವ್ಯಾಪಾರ ಸಂಘ 
227. ದ್ವಿತೀಯ ಮಹಾಯುದ್ಧದ ಬಳಿಕ ಆರ್ಥಿಕ ಪುನಃಶ್ಚೇತನಕ್ಕಾಗಿ ಸ್ಥಾಪಿಸಿದ ಸಂಸ್ಥೆ ಯಾವುದು 
ಉ: IBRD (ವಿಶ್ವ ಬ್ಯಾಂಕ್) 
228. IBRD ಕೇಂದ್ರ ಕಛೇರಿ ಇರುವ ಸ್ಥಳ ಯಾವುದು? 
ಉ: ವಾಷಿಂಗ್‍ಟನ್ 
229. ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?
ಉ: ಜಿನೇವಾ 
230. ವಿಶ್ವವ್ಯಾಪಾರ ಸಂಘ ಪ್ರಾರಂಭವಾದ ವರ್ಷ ಯಾವುದು? 
ಉ: 1995 ಜನವರಿ 1 
231. ಸಾರ್ಕ ಸ್ಥಾಪನೆಯಾದ ವರ್ಷ ಯಾವುದು? 
ಉ: 1985 
232. ಸಾರ್ಕ ಪ್ರಗತಿಗೆ ತೊಡಕಾಗಿರುವುದು ಏನು?
ಉ: ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು ಎನ್ನುವುದು.
233. ಸಾರ್ಕನ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು? 
ಉ: ಕಠ್ಮಂಡು 
234. ಆಫ್ರಿಕನ್ ಯೂನಿಯನ್ ಒಕ್ಕೂಟದ ಸದಸ್ಯರು ಬದ್ದರಾಗಿರುವುದು ಯಾವುದಕ್ಕೆ?
ಉ: ನೂತನ ವಸಾಹತುಶಾಹಿತ್ವದ ವಿರುದ್ಧ ಧ್ವನಿಯೆತ್ತಲು
235. ಶಿಕ್ಷಣ ಮೂಲಭೂತ ಹಕ್ಕು ಎಂದು ತಿಳಿಸುವ ಸಂವಿಧಾನದ ವಿಧಿ ಯಾವುದು?
ಉ: 21ಎ ವಿಧಿ
236. ಅಸ್ಪøಶ್ಯತೆ ವಿರೋಧಿಸುವ ಸಂವಿಧಾನದ ವಿಧಿ ಯಾವುದು? 
ಉ: 17 ನೇ ವಿಧಿ
237. ಅಸ್ಪøಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?
ಉ: 1955 
238. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಾಗಿ ತಿದ್ದುಪಡಿಯಾದ ವರ್ಷ ಯಾವುದು?
ಉ: 1976 
239. ಅಂಬೇಡ್ಕರ್‍ರವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲು ಕಾರಣವೇನು?
ಉ: ಸಂವಿಧಾನ ಕರಡು ರಚನೆಯಲ್ಲಿ ನಿರ್ಣಾಯಕ ಮತ್ತು ಮಹತ್ವದ ಪಾತ್ರ ನಿರ್ವಹಿಸಿದ್ದರಿಂದ 
240. ಬಾಲಕಾರ್ಮಿಕತನ ಎಂದರೆ ಏನು?
ಉ: ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆ 
241. ಬಾಲ ಕಾರ್ಮಿಕರು ಎಂದರೆ ಯಾರು?
ಉ: ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ ಮಕ್ಕಳು 
242. ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ ಯಾವುದು? 
ಉ: 24 ನೇ 
243. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ 
ಉ: 1986 
244. ಕಾಣದ ಹಸಿವು ಎಂದರೆ ಏನು?
ಉ: ಪೋಷಕಾಂಶಗಳ ಅಭಾವದಿಂದ ಉಂಟಾಗುವ ಹಸಿವು 
245. ಪೋಕ್ಸೋ ಕಾಯ್ದೆ ಜಾರಿಗೆ ಬಂದ ವರ್ಷ 
ಉ: 2012 
246. ಪೋಕ್ಸೋ ಕಾಯಿದೆಯ ಉದ್ದೇಶ 
ಉ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು 
247. ಹೆಣ್ಣು ಭ್ರೂಣ ಹತ್ಯೆ ಎಂದರೆ ಏನು?
ಉ: ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವುದು 
248. ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
ಉ: 1994 
249. ಭಾರತದಲ್ಲಿ ಹೆಣ್ಣು ಮಕ್ಕಳ ಮರಣ ದರವು ಗಂಡು ಮಕ್ಕಳ ಮರಣ ದರಕ್ಕಿಂತ ಹೆಚ್ಚಾಗಿದೆ ಏಕೆ?
ಉ: ಆರೋಗ್ಯ ಸೌಲಭ್ಯ, ಪೌಷ್ಠಿಕ ಆಹಾರ ಕೊರತೆ
250. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಬಳಸುವ ಸಹಾಯವಾಣಿ ಸಂಖ್ಯೆ ಯಾವುದು? 
ಉ: 1098 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon