SSLC Social Science MCQ Questions 376 to 400 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು |16 |

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-16 (376 to 400)
376. ಅಮೆರಿಕಾದ ಟೆನಿಸ್ಸಿ ನದಿ ಕಣಿವೆ ಯೋಜನೆ ಮಾದರಿ ಅನುಸರಿಸಿ ನಿರ್ಮಿಸಲಾದ ನದಿ ಕಣಿವೆ ಯೋಜನೆ ಯಾವುದು?
ಉ: ದಾಮೋದರ ನದಿ ಕಣಿವೆ ಯೋಜನೆ 
377. ದಾಮೋದರ ನದಿಯನ್ನು ಬಂಗಾಳದ ದುಃಖಕಾರಿ ನದಿ ಎಂದು ಕರೆಯಲು ಕಾರಣ 
ಉ: ಪ್ರವಾಹದಿಂದ ಬೆಳೆ ಹಾಗೂ ಜನ ವಸತಿಗೆ ಹಾನಿ ಉಂಟು ಮಾಡುತ್ತದೆ 
378. ಭಾಕ್ರಾನಂಗಲ್ ಆಣೆಕಟ್ಟು ಕಟ್ಟಿದ ನದಿ 
ಉ: ಸಟ್ಲೇಜ್ (ಹಿಮಾಚಲ ಪ್ರದೇಶ) 
379. ಭಾರತದಲ್ಲಿ ನೇರ ಗುರುತ್ವವುಳ್ಳ ಆಣೆಕಟ್ಟು 
ಉ: ಭಾಕ್ರಾ-ನಂಗಲ್ 
380. ಭಾಕ್ರಾ-ನಂಗಲ್ ಆಣೆಕಟ್ಟಿನ ಜಲಾಶಯದ ಹೆಸರು 
ಉ: ಗೋವಿಂದ ಸಾಗರ 
381. ಒಡಿಸ್ಸಾದ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆ 
ಉ: ಹಿರಾಕುಡ್ 
382. ಭಾರತದಲ್ಲಿ ಉದ್ಧವಾದ ಆಣೆಕಟ್ಟು 
ಉ: ಹಿರಾಕುಡ್ 
383. ತುಂಗಭದ್ರಾ ಆಣೆಕಟ್ಟು ಕಟ್ಟಿದ ಸ್ಥಳ 
ಉ: ಮಲ್ಲಾಪುರ 
384. ತುಂಗಭದ್ರಾ ಆಣೆಕಟ್ಟಿನ ಜಲಾಶಯದ ಹೆಸರು 
ಉ: ಪಂಪಸಾಗರ 
385. ಉತ್ತರ ಕರ್ನಾಟಕದ ಅತಿದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ 
ಉ: ಕೃಷ್ಣ ಮೇಲ್ದಂಡೆ ಯೋಜನೆ 
386. ಭಾರತ ಮತ್ತು ನೇಪಾಳ ದೇಶಗಳ ಸಂಯುಕ್ತ ನದಿ ಯೋಜನೆ 
ಉ: ಕೋಸಿ 
387. ಕೋಸಿ ನದಿಗೆ ಆಣೆಕಟ್ಟು ಕಟ್ಟಿದ ಸ್ಥಳ 
ಉ: ಹನುಮಾನ್ ನಗರ (ನೇಪಾಳ)
388. ಉತ್ತರ ಪ್ರದೇಶದ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?
ಉ: ರಿಹಾಂದ್ 
389. ರಿಹಾಂದ್ ನದಿ ಯೋಜನೆಯ ಈ ಜಲಾಶಯದ ಹೆಸರು 
ಉ: ಗೋವಿಂದವಲ್ಲಭ ಪಂತ್ 
390. ನಾಗಾರ್ಜುನ ಸಾಗರ ಯೋಜನೆ ಈ ರಾಜ್ಯದಲ್ಲಿದೆ 
ಉ: ತೆಲಂಗಾಣ 
391. ಕೃಷ್ಣ ನದಿಗೆ ತೆಲಂಗಾಣದ ಈ ಸ್ಥಳದಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ 
ಉ: ನಾಗಾರ್ಜುನಕೊಂಡ 
392. ನಾಗಾರ್ಜುನ ಸಾಗರ ಯೋಜನೆಯ ಮುಖ್ಯ ಉದ್ದೇಶ 
ಉ: ನೀರಾವರಿ ಪೂರೈಕೆ ಮತ್ತು ಜಲವಿದ್ಯುಚ್ಚಕ್ತಿ ಉತ್ಪಾದನೆ 
393. ಬಾವಿ ನೀರಾವರಿ, ಸಣ್ಣ ಹಿಡುವಳಿದಾರರಿಗೂ ಸೂಕ್ತ ಏಕೆಂದರೆ 
ಉ: ಬಾವಿ ಕಡಿಮೆ ವೆಚ್ಚದಲ್ಲಿ ನಿರ್ಮಾಣ, ತಂತ್ರಜ್ಞಾನದ ಅನಗತ್ಯ 
394. ಭೂ ಬಳಕೆ ಎಂದರೆ 
ಉ: ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದು 
395. ಸಾಗುವಳಿಗಾಗಿ ಬಳಕೆ ಮಾಡದ ಭೂಮಿ 
ಉ: ಪಾಳುಭೂಮಿ 
396. ವ್ಯವಸಾಯ (ಕೃಷಿ) ಎಂದರೆ 
ಉ: ಭೂಮಿಯನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದು 
397. ಜೀವನಾಧಾರಿತ ಬೇಸಾಯ ಎಂದರೆ ಏನು?
ಉ: ರೈತನು ಕುಟುಂಬದ ಬಳಕೆಗಾಗಿ ಬೆಳೆ ಬೆಳೆಯುವುದು 
398. ವರ್ಗಾವಣೆ ಬೇಸಾಯ ಎಂದರೆ ಏನು?
ಉ: ಕಾಡಿನ ಅಲ್ಪ ಭಾಗ ಕಡಿದು, ಕೃಷಿ ಮಾಡಿ, ಮಣ್ಣಿನ ಸಾರ ಕಡಿಮೆಯಾದಾಗ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಿ ಕೃಷಿ ಮಾಡುವುದು 
399. ಸ್ಥಿರ ಜೀವನಾಧಾರಿತ ಬೇಸಾಯ ಎಂದರೆ 
ಉ: ಶಾಶ್ವತವಾಗಿ ಒಂದೇ ಕಡೆ ನೆಲೆಸಿ ಸಾಗುವಳಿ ಮಾಡುವುದು (ಸ್ಥಾಯಿ ಬೇಸಾಯ) 
400. ಸಾಂದ್ರ ಬೇಸಾಯ ಎಂದರೆ 
ಉ: ಚಿಕ್ಕ ಭೂ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿ
SSLC Social Science MCQ Questions 351 to 375 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು |15 |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon