SSLC Social Science MCQ Questions 326 to 350 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-14 (325 to 350)
326. ಭಾರತದ ವಾಯುವ್ಯ ಭಾಗದಲ್ಲಿ ವಿಸ್ತಾರವಾಗಿ ಹರಡಿದ ಮಣ್ಣು 
ಉ: ಮರಭೂಮಿ ಮಣ್ಣು
327. ಅತಿ ಹೆಚ್ಚು ಉಪ್ಪಿನಾಂಶ ಹೊಂದಿರುವ ಮಣ್ಣು 
ಉ: ಮರಭೂಮಿ ಮಣ್ಣು 
328. ಪರ್ವತ ಮಣ್ಣು ಉತ್ಪತ್ತ್ತಿಯಾಗುವುದು 
ಉ: ಜೈವಿಕ ವಸ್ತು ಕೊಳೆಯುವುದರಿಂದ 
329. ಪರ್ವತ ಮಣ್ಣು ಫಲವತ್ತಾಗಿರಲು ಕಾರಣ 
ಉ: ಸಸ್ಯಾಂಶ ಅಧಿಕವಿರುವುದು 
330. ನೆಡುತೊಟದ ಬೆಳೆಗಳಿಗೆ ಸೂಕ್ತವಾದ ಮಣ್ಣು 
ಉ: ಪರ್ವತ ಮಣ್ಣು
331. ಮಣ್ಣು ಎಂದರೆ 
ಉ: ಖನಿಜ ಜೈವಿಕಾಂಶಗಳ ಸಂಯೋಜನೆಯುಳ್ಳ ಭೂ ಮೇಲ್ಭಾಗದ ತೆಳು ಪದರು 
332. ಮಣ್ಣಿನ ಸವೆತ ಎಂದರೆ 
ಉ: ನೈಸರ್ಗಿಕ ಕರ್ತೃಗಳಿಂದ ಮಣ್ಣಿನÀ ಮೇಲ್ಭಾಗ ಕೊಚ್ಚಿ ಹೋಗುವುದು
333. ಇತ್ತೀಚಿಗೆ ಜಲಾಶಯಗಳಲ್ಲಿನ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುತ್ತಿದೆ ಏಕೆಂದರೆ 
ಉ: ನದಿಗಳಲ್ಲಿ ಹೂಳು ತುಂಬಿಕೊಳ್ಳುವುದು 
334. ಮಣ್ಣಿನ ಸಂರಕ್ಷಣೆ ಎಂದರೆ ಏನು?
ಉ: ಮಣ್ಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆ ಕಾಪಾಡುವುದು 
335. ಅರಣ್ಯ (ಕಾಡು) ಎಂದರೆ 
ಉ: ವೃಕ್ಷ ಮತ್ತು ಇತರೆ ಸಸ್ಯ ಸಂಕುಲಗಳಿಂದ ಆವರಿಸಿದ ವಿಶಾಲ ಭೂ ಭಾಗ 
336. ಎತ್ತರವಾದ, ದಟ್ಟವಾದ, ಸದಾ ಹಸಿರಾಗಿರುವ ಅರಣ್ಯಗಳು 
ಉ: ನಿತ್ಯ ಹರಿದ್ವರ್ಣ ಕಾಡುಗಳು 
337. ಉಷ್ಣವಲಯದ ಎಲೆಯುದುರಿಸುವ ಕಾಡುಗಳನ್ನು ಹೀಗೂ ಕರೆಯುವರು 
ಉ: ಮಾನ್ಸೂನ್ (ಪರ್ಣಪಾತಿ) ಕಾಡುಗಳು 
338. ಭಾರತದ ವಿಶಾಲ ಪ್ರದೇಶದಲ್ಲಿ ಹಂಚಿಕೆಯಾದ ಅರಣ್ಯಗಳು 
ಉ: ಪರ್ಣಪಾತಿ ಕಾಡು 
339. ಮಾನ್ಸೂನ್ ಅರಣ್ಯಗಳೆಂದರೆ 
ಉ: ವಸಂತ ಋತು ಮತ್ತು ಬೇಸಿಗೆಯ ಆರಂಭದಲ್ಲಿ ಎಲೆ ಉದುರಿಸುವ ಕಾಡುಗಳು
340. ಪರ್ವತ ಕಾಡುಗಳೆಂದರೆ 
ಉ: ಪರ್ವತಗಳ ಇಳಿಜಾರುಗಳಲ್ಲಿ ಬೆಳೆಯುವ ಸಸ್ಯವರ್ಗ
341. ಹಿಮಾಲಯ ಪರ್ವತಗಳಲ್ಲಿ ಕಂಡು ಬರುವ ಅರಣ್ಯ 
ಉ: ಪರ್ವತ ಕಾಡುಗಳು 
342. ನದಿ ಮುಖಜ ಭೂಮಿ ಪ್ರದೇಶದಲ್ಲಿ ಕಂಡು ಬರುವ ಅರಣ್ಯಗಳು 
ಉ: ಮ್ಯಾಂಗ್ರೋವ್ 
343. ಬಿಳಿಲುಗಳನ್ನು ಹೊಂದಿರುವ ಅರಣ್ಯಗಳು 
ಉ: ಮ್ಯಾಂಗ್ರೋವ್ 
344. ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯ 
ಉ: ಮಧ್ಯಪ್ರದೇಶ 
345. ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ 
ಉ: ಗೋವಾ 
346. 1952 ರ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಅರಣ್ಯದ ಶೇಕಡಾ ಪ್ರಮಾಣ ಎಷ್ಟು ಇರಬೇಕು?
ಉ: 33.3% 
347. ಅರಣ್ಯ ಸಂರಕ್ಷಣೆ ಎಂದರೆ ಏನು?
ಉ: ಅರಣ್ಯನಾಶ, ಮಿತಿಮೀರಿದ ಅರಣ್ಯ ಸಂಪತ್ತಿನ ಸಮಗ್ರ ನಿಯಂತ್ರಣ ಹಾಗೂ ಅರಣ್ಯ ನಿರ್ವಹಣೆ ಪ್ರಕ್ರಿಯೆ 
348. ವನ್ಯ ಜೀವಿಧಾಮಗಳೆಂದರ
ಉ: ವನ್ಯ ಜೀವಿಗಳಿಗೆ ರಕ್ಷಣೆ ನೀಡುವ ಸ್ಥಳ 
349. ಜೀವ ಸಂರಕ್ಷಣಾ ವಲಯವೆಂದರೆ 
ಉ: ಸಂರಕ್ಷ್ಷಿಸಲ್ಪಟ್ಟ ಭೂ ಪ್ರದೇಶಗಳ ವಿಶೇಷವಾದ ಒಂದು ಭಾಗ 
350. ಸಿಂಧೂ ನದಿ ಜನಿಸುವ ಸ್ಥಳ 
ಉ: ಕೈಲಾಸ ಪರ್ವತ 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon