Independence Day Speech In Kannada | ಸ್ವಾತಂತ್ರ್ಯ ದಿನಾಚರಣೆಯ ಭಾಷಣ

Independence Day Speech In Kannada
ಸ್ವಾತಂತ್ರ್ಯ ದಿನಾಚರಣೆಯ ಭಾಷಣ

Independence Day Speech In Kannada |  ಸ್ವಾತಂತ್ರ್ಯ ದಿನಾಚರಣೆಯ ಭಾಷಣ

ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು

ಭಾರತ ಮಾತೆಯ ಚರಣ ಕಮಲಗಳಲ್ಲಿ ನಮಸ್ಕರಿಸುತ್ತಾ ಮೊದಲಿಗೆ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಳನ್ನು ಹೇಳುತ್ತೇನೆ.

ವೇದಿಕೆಯ ಮೇಲೆ ಆಸಿನರಾಗಿರುವ ಅಧ್ಯಕ್ಷರೆ, ಅತಿತಿಗಳೆ, ಉರಿನ ಹಿರಿಯರೆ ನನ್ನ ನೆಚ್ಚಿನ ಶಿಕ್ಷಕರೆ ಹಾಗೂ ಎಲ್ಲಾ ಸಹಪಾಠಿಗಳೆ, ಇಂದು ನಮ್ಮ ರಾಷ್ಟ್ರ ಸ್ವಾತಂತ್ರ್ಯವನ್ನು ಸಂಪಾದನೆ ಮಾಡಿರುವ ದಿನ. ಈ ದಿನವನ್ನು ನಾವು ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ನನ್ನ ಎರಡು ಮಾತುಗಳನ್ನು ಆಡಲು ಬಯಸುತ್ತೇನೆ.

1947 ಆಗಸ್ಟ್ 15 ರಂದು ನಾವು ಸ್ವಾತಂತ್ರ್ಯವನ್ನು ಸಂಪಾದನೆ ಮಾಡಿಕೊಂಡಿದ್ದೇವೆ, ಇದಕ್ಕಿಂತಲೂ ಮುಂಚಿತವಾಗಿ ನಮ್ಮ ರಾಷ್ಟ್ರವು ಪರಕೀಯರ ಅಧಿನದಲ್ಲಿ ಇತ್ತು. ನಮ್ಮ ರಾಷ್ಟ್ರದ ಮಹಾನ ನಾಯಕರ ಹೋರಾಟ, ತ್ಯಾಗ, ಬಲಿದಾನದ ಪ್ರತಿಕವಾಗಿ ನಾವು ಸ್ವಾತಂತ್ರ್ಯವನ್ನು ಸಂಪಾದನೆ ಮಾಡಿಕೊಂಡು ಇಂದಿಗೆ 74 ( ) ವರ್ಷಗಳು ಕಳೆದು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಾ ಇದ್ದೇವೆ.

ಭಗತ್ ಸಿಂಗ್, ಲಾಲ್ ಬಹದ್ದುರ ಶಾಸ್ತ್ರಿ, ಲೋಕಮಾನ್ಯ ಬಾಲ್ ಗಂಗಾದರ ತಿಲಕ, ಮಹಾತ್ಮಾ ಗಾಂಧಿಜಿ, ಸುಭಾಷ ಚಂದ್ರ ಭೋಸ್, ಚಂದ್ರಶೇಖರ ಆಜಾದ ಮುಂತಾದ ಹಲವಾರು ನಾಯಕರ ಹೋರಾಟದ ಪ್ರತಿಕ ಈ ಸ್ವಾತಂತ್ರ್ಯ ದಿನಾಚರಣೆಯಾಗಿದೆ.

ಪ್ರಾಚೀನ ಕಾಲದಿಂದಲೂ ಭಾರತ ಮೇಲೆ ಹಲವಾರು ದಾಳಿಗಳು ಆಗಿ ಪರಕಿಯರ ಆಡಳಿತ ಇರುವುದು ಕಾಣುತ್ತೇವೆ. ಮುಂದೆ ಸಾ.ಶ. 1498 ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡು ಹಿಡಿದ ನಂತರ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮತ್ತು ಫ್ರೇಂಚರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದಿದ್ದರು. ಇವರು ತಮ್ಮ ವ್ಯಾಪಾರದಲ್ಲಿ ಲಾಭ ಸಂಪಾದಿಸುದಕ್ಕಾಗಿ, ಇಲ್ಲಿರುವ ರಾಜಕೀಯ ಪರೀಸ್ಥಿತಿಯನ್ನು ತಮಗೆ ಅನುಕೂಲಕರವಾಗುವ ರೀತಿಯಲ್ಲಿ ಬಳಸಿಕೊಂಡರು. ಬ್ರಿಟೀಷರು ಇದರಲ್ಲಿ ಹೆಚ್ಚು ಯಶಸ್ಸನ್ನು ಸಂಪಾದಿಸಿಕೊಂಡು 1757ರ ಪ್ಲಾಸಿ ಕದನದ ನಂತರದಿಂದಲೂ 1947ರ ವರೆಗೆ ಅಂದರೆ ಸುಮಾರು 190 ವರ್ಷಗಳ ಕಾಲ ಭಾರತದಲ್ಲಿ ತಮ್ಮ ಆಡಳಿತವನ್ನು ನಡೆಸಿದರು.

ಇವರಿಂದ ಬಿಡುಗಡೆಗೊಳಿಸಿರುವುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು.

ಈ ಸಂದರ್ಭದಲ್ಲಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪು ಮಾಡಿಕೊಳ್ಳುತ್ತಾ, ಇವರು ತಂದು ಕೊಟ್ಟಿರುವ ಸ್ವಾತಂತ್ರ್ಯವನ್ನು ನಾವೆಲ್ಲರೂ ಒಗ್ಗಟ್ಟಾಗಿ ಕಾಪಾಡಿಕೊಂಡು ಏಕತೆಯಿಂದ ಅಭಿವೃದ್ಧಿ ಸಾಧಿಸುವುದು ಅವಶಕವಾಗಿದೆ.

ಪಾಕಿಸ್ತಾನ ಮತ್ತು ಚೈನಾ ರಾಷ್ಟ್ರಗಳು ಗಡಿ ಪ್ರದೇಶದಲ್ಲಿ ನಿರಂತರವಾಗಿ ಸಂಗರ್ಷ ನಡೆಸುವ ಸಂದರ್ಭದಲ್ಲಿ ನಮ್ಮ ರಾಷ್ಟ್ರದ ಏಕತೆಗಾಗಿ ನಿರಂತರವಾಗಿ ಪ್ರಯತ್ನಿಸುವುದು ಅವಶಕವಾಗಿದೆ.

ಸ್ವಾತಂತ್ರ್ಯ ನಂತರ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಸ್ಮರಿಸಿಕೊಳ್ಳುವುದು, ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ನಮ್ಮ ರಾಷ್ಟ್ರದ ಹಿರಿಮೆಯನ್ನು ಎತ್ತಿ ತೋರಿಸುವುದು, ಐಕ್ಯತೆಯನ್ನು ಪ್ರದರ್ಶಿಸುವುದು, ನಮ್ಮ ಪರಂಪರೆಯನ್ನು ಎತ್ತಿ ಹಿಡಿಯುವುದ, ಮತ್ತು ಭದ್ರತಾ ಸಮಿತಿಯಲ್ಲಿ ಒಂದು ಖಾಯಂ ಸದಸ್ಯ ರಾಷ್ಟ್ರವಾಗಿ ಗುರುತಿಸಿಕೊಳ್ಳುವುದು ನಮ್ಮ ರಾಷ್ಟ್ರದ ಮುಂದಿರುವ ಗುರಿಗಳಾಗಿವೆ.

ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ರಾಷ್ಟ್ರದ ಪ್ರಗತಿಗೆ ನಾವೆಲ್ಲರೂ ಕಂಕಣ ಬದ್ದಾರಿಗಿರೋಣ ಎಂದು ನೆನಪಿಸಿಕೊಳ್ಳುತ್ತಾ ನನ್ನ ಎರಡು ಮಾಡತುಗಳನ್ನು ಮುಗಿಸುತ್ತೇನೆ.

ಜೈ ಹಿಂದ, 

ಜೈ ಭಾರತ, 

ಒಂದೇ ಮಾತರಂ.

Watch this Video



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon