8ನೇ ತರಗತಿ ಸಮಾಜ ವಿಜ್ಞಾನ ಇತಿಹಾಸ ಅಧ್ಯಾಯ-1 ಆಧಾರಗಳು | ಅಭ್ಯಾಸ ಪ್ರಶ್ನೋತ್ತರಗಳು

8ನೇ ತರಗತಿ ಸಮಾಜ ವಿಜ್ಞಾನ ಇತಿಹಾಸ ಅಧ್ಯಾಯ-1 ಆಧಾರಗಳು | ಅಭ್ಯಾಸ ಪ್ರಶ್ನೋತ್ತರಗಳು


I. ಕೆಳಗಿನ ಪ್ರಶ್ನೆಗಳಿಗೆ ಸಹಪಾಠಿಗಳೊಂದಿಗೆ ಚರ್ಚಿಸಿ ಉತ್ತರಿಸಿ.

1. ಇತಿಹಾಸಕಾರರು ಇತಿಹಾಸವನ್ನುಹೇಗೆ ರಚಿಸುತ್ತಾರೆ?

ಉತ್ತರ : ಇತಿಹಾಸಕಾರರು ಆಧಾರಗಳನ್ನು ಸಂಗ್ರಹಿಸಿ, ಅವುಗಳನ್ನು ವಿಮರ್ಶಿಸಿ, ವಿಶ್ಲೇಸಿ ಇತಿಹಾಸವನ್ನು ಬರೆಯುತ್ತಾರೆ.

ಕೆಲವೊಮ್ಮೆ ನಿಖರ ಆಧಾರಗಳು ದೊರಕದಿದ್ದಾಗ ಲಭ್ಯವಿರುವ ಆಧಾರಗಳ ಮೇಲೆ ಊಹೆಗಳನ್ನೂ ಮಾಡಬೇಕಾಗುತ್ತದೆ.

ಹೀಗಾಗಿ ಒಂದೇ ಘಟನೆಯನ್ನು ಬೇರೆ ಬೇರೆ ಇತಿಹಾಸಕಾರರು ಭಿನ್ನ ಭಿನ್ನ ದೃಷ್ಟಿಕೋನಗಳಲ್ಲಿ ಅರ್ಥೈಸುವುದುಂಟು.


2. ಆಧಾರ ಎಂದರೇನು? ಅವುಗಳಲ್ಲಿ ಎಷ್ಟು ವಿಧ?

ಉತ್ತರ : ಇತಿಹಾಸ ರಚನೆಗೆ ಬೇಕಾಗುವ ಮೂಲ ಸಾಮಾಗ್ರಿಗಳೇ ಆಧಾರ.

ಆಧಾರಗಳನ್ನು ಮುಖ್ಯವಾಗಿ 2 ವಿಧಗಳಾಗಿ ವಿಂಗಡಿಸಬಹುದು.

) ಸಾಹಿತ್ಯ ಆಧಾರಗಳು    ಬಿ) ಪುರಾತತ್ವ ಆಧಾರಗಳು

) ಸಾಹಿತ್ಯ ಆಧಾರಗಳು :- ಇದರಲ್ಲಿ 2 ವಿಧಗಳು

1. ಲಿಖಿತ ಸಾಹಿತ್ಯ   2. ಮೌಖಿಕ ಸಾಹಿತ್ಯ


3. ಯಾವುದಾದರು ಎರಡು ದೇಶಿಯ ಸಾಹಿತ್ಯ ಕೃತಿಗಳನ್ನು ಹೆಸರಿಸಿ.

ಉತ್ತರ : ದೇಶಿಯ ಸಾಹಿತ್ಯ ಕೃತಿಗಳು:

ಕೌಟಿಲ್ಯನಅರ್ಥಶಾಸ್ತ್ರ

ಹಾಲ ರಾಜನಗಾಥಾಸಪತ್ತಶತಿ

ವಿಶಾಖದತ್ತನಮುದ್ರಾರಾಕ್ಷಸ

ಕಲ್ಹಣನರಾಜತರಂಗಿಣಿ

ಬಾಣಭಟ್ಟನಹರ್ಷಚರಿತ


4. ಯಾರದಾರು ಇಬ್ಬರು ವಿದೇಶಿ ಸಾಹಿತ್ಯ ರಚನೆಕಾರರನ್ನು ಹೆಸರಿಸಿ.

ಉತ್ತರ : ವಿದೇಶಿಯ ಸಾಹಿತ್ಯ ರಚನೆಕಾರರು:

ಮೆಗಸ್ತನೀಸನಇಂಡಿಕಾ

ಫಾಹಿಯಾನನಘೋ-ಕೋ-ಕಿ

ಹ್ಯೂಯೆನ್ ತ್ಸಾಂಗನಸಿ-ಯು-ಕಿ

ಟಾಲೆಮಿಯಜಿಯೋಗ್ರಾಫಿ

ಬರೌನಿಯತಾರೀಖ್--ಫಿರೋಜ್ ಷಾಹಿ


5. ಇತಿಹಾಸ ರಚನೆಗಿರುವ ಹೆಚ್ಚು ವಿಶ್ವಾಸಾರ್ಹ ಆಧಾರ ಯಾವುದು?

ಉತ್ತರ : ಇತಿಹಾಸ ರಚನೆಗಿರುವ ಹೆಚ್ಚು ವಿಶ್ವಾಸರ್ಹ ಆಧಾರಗಳುಶಾಸನಗಳು

6. ಇತಿಹಾಸ ರಚನೆಯಲ್ಲಿ ನಾಣ್ಯಗಳ ಪ್ರಾಮುಖ್ಯತೆಯನ್ನು ತಿಳಿಸಿ.

ಉತ್ತರ : ನಾಣ್ಯಗಳು ಆಕಾರದಲ್ಲಿ ಚಿಕ್ಕದಾಗಿದ್ದರೂ ಹಲವು ಮಹತ್ವದ ಸಂಗತಿಗಳನ್ನು ಒಳಗೊಂಡಿರುತ್ತವೆ.

ಇವುಗಳನ್ನು ಹೊರಡಿಸಿದ ರಾಜನ ಅಧೀನದಲ್ಲಿರುವ ಪ್ರದೇಶದ ವ್ಯಾಪ್ತಿ, ಆಡಳಿತ ಭಾಷೆ, ರಾಜನ ಬಿರುದು ಮತ್ತು ಸಾಧನೆ, ರಾಜನ ಮತ-ಧರ್ಮ, ರಾಜ್ಯದ ಆರ್ಥಿಕ ಸ್ಥಿತಿ, ಲೋಹ ತಂತ್ರಜ್ಞಾನ ಮೊದಲಾದ ವಿಚಾರಗಳನ್ನು ಅರಿಯುವಲ್ಲಿ ನಾಣ್ಯಗಳ ಪಾತ್ರ ಮಹತ್ವವಾದುದು.


7. ಸ್ಮಾರಕಗಳು ಹಿಂದಿನ ಕಾಲದ ಯಾವ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ?

ಉತ್ತರ : ಸ್ಮಾರಕಗಳು ಅಂದಿನ ಕಾಲಘಟದ

ಧಾರ್ಮಿಕತೆ,

ತಾಂತ್ರಿಕತೆ,

ವೈಜ್ಞಾನಿಕತೆ,

ಸೃಜನಶೀಲತೆ

ಮೊದಲಾದ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತವೆ.


8. ಜೈವಿಕ ಪಳೆಯುಳಿಕೆಗಳ ಕಾಲವನ್ನು ಯಾವ ವಿಧಾನದ ಮೂಲಕ ನಿಷ್ಕರ್ಷೆ ಮಾಡಬಹುದು?

ಉತ್ತರ : ಉತ್ಖನನದಲ್ಲಿ ದೊರೆತ ಜೈವಿಕ ಸತ್ತಪ್ರಾಣಿ, ಪಕ್ಷಿ ಮತ್ತು ಮರಗಿಡಗಳ ಅವಶೇಷಗಳನ್ನು ಇಂಗಾಲ-14 ವಿಧಾನಕ್ಕೆ ಒಳಪಡಿಸುವ ಮೂಲಕ ಅವುಗಳ ಕಾಲವನ್ನು ನಿಷ್ಕರ್ಷೆ ಮಾಡುತ್ತಾರೆ.



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon