SSLC Old Question Paper Questions part 2 | 10th Exam Question Paper Questions With Ans | 10th Social Science

ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

2015 ರಿಂದ 2022 ರವರೆಗೆ ವಾರ್ಷಿಕ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳು

1. ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದ ಗವರ್ನರ್ ಜನರಲ್ (ಎಪ್ರಿಲ್ 2015, ಜೂನ 2018, ಜೂನ 2022)

ಲಾರ್ಡ ವೆಲ್ಲಸ್ಲಿ

2. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದ ಗವರ್ನರ್ ಜನರಲ್ (ಜೂನ 2019)

ಲಾರ್ಡ ಡಾಲ್ಹೌಸಿ

3. ಸಾಲಬಾಯ್ ಒಪ್ಪಂದದೊಂದಿಗೆ ಮುಕ್ತಾಯವಾದ ಯುದ್ಧ (ಸೆಪ್ಟೆಂಬರ್ 2020)

ಮೊದಲನೇ ಆಂಗ್ಲೋ ಮರಾಠಾ ಯುದ್ಧ

4. 1798 ನಂತರ ಹೈದರಾಬಾದ ಸಂಸ್ಥಾನವು ತನ್ನ ಪ್ರಾಂತ್ಯದಲ್ಲಿ ಬ್ರಿಟಿಷರ ಒಂದು ಸೈನಿಕ ತುಕ್ಕಡಿಯನ್ನು ಇರಿಸಿಕೊಳ್ಳಬೇಕಾಗಿತ್ತು. ಏಕೆ? (ಸೆಪ್ಟೆಂಬರ್ 2020)

ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟಿದ್ದರಿಂದ

5. ಮೊದಲನೇ ಆಂಗ್ಲೋ ಮರಾಠಾ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ (ಜುಲೈ 2021)

ಸಾಲ್ಬಾಯ್ ಒಪ್ಪಂದ

6. ಬ್ರಿಟಿಷ್ ಮತ್ತು ಸಿಖ್ರ ನಡುವೆ ಸಹಿ ಹಾಕಲ್ಪಟ್ಟ ಒಪ್ಪಂದ (ಸೆಪ್ಟೆಂಬರ್ 2021)

ಲಾಹೋರ ಒಪ್ಪಂದ

7. ಮೊದಲನೇ ಆಂಗ್ಲೋ ಮರಾಠಾ ಯುದ್ಧದ ನಂತರ ಪೇಶ್ವೆಯಾದವನು (ಜೂನ 2022)

ಎರಡನೇ ಮಾಧವರಾಯ್

8. ವೆಲ್ಲಸ್ಲಿ ಏಕೆ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಇಂಗ್ಲೆಂಡಿಗೆ ಮರಳಿದನು. (ಜೂನ 2022)

ಯುದ್ಧಪ್ರಿಯ ನೀತಿ ಉಳ್ಳವನಾಗಿದ್ದರಿಂದ ಕಂಪನಿಯು ನಷ್ಠ ಅನುಭವಿಸಿ ತಾಯ್ನಾಡಿಗೆ ಕರೆಸಿಕೊಂಡಿದ್ದರಿಂದ ವೆಲ್ಲಸ್ಲಿ ಇಂಗ್ಲೆಂಡಿಗೆ ಮರಳಿದನು.

9. ಸಹಾಯಕ ಸೈನ್ಯ ಪದ್ಧತಿ ಭಾರತೀಯ ಸಂಸ್ಥಾನಗಳನ್ನು ಹೇಗೆ ನಿಯಂತ್ರಿಸಿತು. (ಎಪ್ರಿಲ 2019)

ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳಾವವು? (ಎಪ್ರಿಲ್ 2018)

ವೆಲ್ಲಸ್ಲಿ ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪನೆ ಹೇಗಾಯಿತು? (ಜೂನ 2019)

ಭಾರತೀಯ ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಬ್ರಿಟಿಷರಿಗೆ ಸಹಾಯಕ ಸೈನ್ಯ ಪದ್ಧತಿಯು ಹೇಗೆ ನೆರವಾಯಿತು. (ಜೂನ 2020)

: ಭಾರತೀಯ ರಾಜನು ಬ್ರಿಟಿಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು.

ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು. ಇಲ್ಲವೇ ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟುಕೊಡಬೇಕು.

ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕು.

 ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯೂರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.

 ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ ಅಥವಾ ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್ ಸಮ್ಮತಿ ಬೇಕು.

 ಇದಕ್ಕೆ ಪ್ರತಿಯಾಗಿ ಕಂಪನಿಯು ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.


Click Here For PDF Download

Chapter 1 Click Here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon