ಪ್ರಬಂಧ ಬರೆಯಿರಿ: “ಸ್ವಚ್ಛ ಭಾರತ ಅಭಿಯಾನ” | Swacha Bharata Abhiyana | Kannada Prabhanda |

ಪ್ರಬಂಧ ಬರೆಯಿರಿ : “ ಸ್ವಚ್ಛ ಭಾರತ ಅಭಿಯಾನ ” 1. ಪೀಠಿಕೆ 2. ವಿಷಯ ನಿರೂಪಣೆ 3. ಉಪಸಂಹಾರ ಸ್ವಚ್ಛ ಭಾರತ ಅಭಿಯಾನ : ಪೀಠಿಕೆ : ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ . ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು . ಇದು ನಮ್ಮ ಮನೆ ಪರಿಸರದಿಂದಲೇ ಪ್ರಾರಂಭಿಸಬೇಕು . ವಿಷಯ ನಿರೂಪಣೆ : “ ಆರೋಗ್ಯವೇ ಭಾಗ್ಯ ” ಎಂಬ ನಾಣ್ನುಡಿ ನಮ್ಮಲ್ಲಿದೆ ಉತ್ತಮ ಆರೋಗ್ಯಕ್ಕೆ ಉತ್ತಮ ಹಾಗೂ ಸ್ವಚ್ಛವಾದ ಪರಿಸರ ಅಗತ್ಯ . ಇದಕ್ಕಾಗಿಯೇ ನಮ್ಮ ಇಂದಿನ ಪ್ರಧಾನ ಮಂತ್ರಿಗಳು ಗಾಂಧೀಜಿಯವರ ಜನ್ಮದಿನವಾದ 02.10.2014 ರಂದು ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದರು . ಗಾಂಧೀಜಿಯವರು ಹುಟ್ಟಿ 150 ವರ್ಷ ಪೂರ್ಣಗೊಳ್ಳುವ 02.10.2019 ಕ್ಕೆ ಈ ಯೋಜನೆಯ ಗುರಿಯನ್ನು ಇಟ್ಟುಕೊಳ್ಳಲಾಗಿದೆ . ಈ ಅವಧಿಯಲ್ಲಿ ಸಂಪೂರ್ಣವಾಗಿ ಸ್ವಚ್ಛಭಾರತ ನಿರ್ಮಾಣವಾಗಬೇಕು . ಈ ದಿಸೆಯಲ್ಲಿ ಈಗಾಗಲೇ ಹಳ್ಳಿಗಳಲ್ಲಿ ನಗರಗಳಲ್ಲಿ ತಾವು ವಾಸಿಸುವ ಪ್ರದೇಶಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನವನ್ನು ಕೈಗೆತ್ತಿಕೊಳ್ಳಲಾಗಿದೆ . ಇದರಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತಿದೆ . ತ್ಯಾಜ್ಯ ವಸ್ತುಗಳ ಸಮರ...