Posts

ಕರ್ನಾಟಕದ ಕೈಗಾರಿಕೆಗಳು | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ 8. ಕರ್ನಾಟಕದ ಕೈಗಾರಿಕೆಗಳು I ಬಿಟ್ಟಿರುವ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ . 1. ಕರ್ನಾಟಕದ ಮೊಟ್ಟಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪನೆಗೊಂಡ ಸ್ಥಳ _____ ಉತ್ತರ : ಭದ್ರಾವತಿ 2. ಕರ್ನಾಟಕದ ಮ್ಯಾಂಚೆಸ್ಟರ್ _____ ಉತ್ತರ : ದಾವಣಗೆರೆ 3. ಕಬ್ಬಿನಿಂದ _____ ನ್ನು ಉತ್ಪಾದಿಸುತ್ತಾರೆ . ಉತ್ತರ : ಸಕ್ಕರೆ , ಕಾಗದ ಹಾಗೂ ಇಂಧನ 4. ಅಮ್ಮಸಂದ್ರದಲ್ಲಿ   _____ ಕೈಗಾರಿಕೆಯಿದೆ . ಉತ್ತರ : ಸಿಮೆಂಟ್ 5. ‘ ಸಿಲಿಕಾನ್ ಕಣಿವೆ ’ ಎಂದು _____ ನಗರವನ್ನು ಕರೆಯುತ್ತಾರೆ . ಉತ್ತರ : ಬೆಂಗಳೂರು II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ . 1. ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಯನ್ನು ಕುರಿತು ಬರೆಯಿರಿ . ಉತ್ತರ : ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸರ್ ಎಂ . ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ . ‘ ಕೈಗಾರಿಕೀಕರಣ ಇಲ್ಲವೆ ವಿನಾಶ ’ ಎಂಬ ತತ್ವವನ್ನು ಹೊಂದಿದ್ದ ಅವರು ರಾಜ್ಯದ ಅನೇಕ ಕೈಗಾರಿಕೆಗಳಿಗೆ ಬುನಾದಿಯನ್ನು ಹಾಕಿದರು . 1902 ರಂದು ಶಿವನಸಮುದ್ರದಲ್ಲಿ ಜಲ ವಿದ್ಯುಚ್ಛಕ್ತಿ ಉತ್ಪಾದನೆ ಪ್ರಾರಂಭಗೊಂಡ ಮೇಲೆ ವಿವಿಧ ಮೂಲ ಸಾಮಾಗ್ರಿ , ದಿನೋಪಯೋಗಿ ವಸ್ತುಗಳನ್ನು ತಯಾರಿಸುವ ಉದ್ಯಮಗಳು ಅಸ್ತಿತ್ವಕ್ಕೆ ಬಂದವು . ಅಕ್ಕಿ ಗಿರಣಿ ,

Middle Adds

amezon