ಅಭ್ಯಾಸ ಹಾಳೆ -17 | Rural Development | Economics Imp Questions | ಅರ್ಥಶಾಸ್ತ್ರ | ಗ್ರಾಮೀಣಾಭಿವೃದ್ಧಿ 10ನೇ ತರಗತಿ ಅಧ್ಯಾಯದ ಪ್ರಮುಖವಾಗಿರುವ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ |
karntakaeducations ಅರ್ಥಶಾಸ್ತ್ರ ಅಧ್ಯಯ 2 ಗ್ರಾಮೀಣಾಭಿವೃದ್ಧಿ I. ಈ ಕೆಳಗಿನ ಖಾಲಿ ಬಿಟ್ಟಿರುವ ಸ್ಥಳಗಳಲ್ಲಿ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ . 1) ದೇಶದಾದ್ಯಂತ ಏಕರೂಪ ಪಂಚಾಯತ್ ರಾಜ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದ ಸಂವಿಧಾನದ ತಿದ್ದುಪಡಿ . A) 73 ನೇ ತಿದ್ದುಪಡಿ B) 93 ನೇ ತಿದ್ದುಪಡಿ C) 42 ನೇ ತಿದ್ದುಪಡಿ D) 70 ನೇ ತಿದ್ದುಪಡಿ ಉತ್ತರ : A) 73 ನೇ ತಿದ್ದುಪಡಿ 2) ಗ್ರಾಮೀಣ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಇರುವ ಮಹತ್ವದ ಯೋಜನೆ . A) ಯಶಸ್ವಿನಿ ಯೋಜನೆ B) ಭಾಗ್ಯಲಕ್ಷ್ಮಿ ಯೋಜನೆ C) ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ D) ಸಂಧ್ಯಾ ಸುರಕ್ಷಾ ಯೋಜನೆ ಉತ್ತರ : C) ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 3) ' ಗ್ರಾಮ ಸ್ವರಾಜ್ಯ ' ದ ಕನಸನ್ನು ಕಂಡವರು . A) ಅಂಬೇಡ್ಕರ್ B) ಮಹಾತ್ಮ ಗಾಂಧೀಜಿ C) ಜವರಲಾಲ್ ನೆಹರು D) ವಿನೋಬಾ ಭಾವೆ ಉತ್ತರ : B) ಮಹಾತ್ಮ ಗಾಂಧೀಜಿ 4) ಗ್ರಾಮದ ಎಲ್ಲಾ ಮತದಾರರು ಸದಸ್ಯರಾಗಿರುವ ಪಂಚಾಯತ್ ಸಂಸ್ಥೆ . A) ಗ್ರಾಮ ಸಭೆ B) ತಾಲೂಕು ಪಂಚಾಯತ್ C) ಜಿಲ್ಲಾ ಪಂಚಾಯತ್ D) ಗ್ರಾಮ ಪಂಚಾಯತ್ ಉತ್ತರ : A) ಗ್ರಾಮ ಸಭೆ II. ಕೆಳಗಿನ ಪ್ರಶ್ನೆಗಳಿಗೆ ಒಂದು ...