ಅಭ್ಯಾಸ ಹಾಳೆ -17 | Rural Development | Economics Imp Questions | ಅರ್ಥಶಾಸ್ತ್ರ | ಗ್ರಾಮೀಣಾಭಿವೃದ್ಧಿ 10ನೇ ತರಗತಿ ಅಧ್ಯಾಯದ ಪ್ರಮುಖವಾಗಿರುವ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ |

karntakaeducations

ಅರ್ಥಶಾಸ್ತ್ರ ಅಧ್ಯಯ 2 ಗ್ರಾಮೀಣಾಭಿವೃದ್ಧಿ

I. ಕೆಳಗಿನ ಖಾಲಿ ಬಿಟ್ಟಿರುವ ಸ್ಥಳಗಳಲ್ಲಿ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) ದೇಶದಾದ್ಯಂತ ಏಕರೂಪ ಪಂಚಾಯತ್ ರಾಜ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದ ಸಂವಿಧಾನದ ತಿದ್ದುಪಡಿ.

A) 73ನೇ ತಿದ್ದುಪಡಿ

B) 93ನೇ ತಿದ್ದುಪಡಿ

C) 42ನೇ ತಿದ್ದುಪಡಿ

D) 70ನೇ ತಿದ್ದುಪಡಿ

ಉತ್ತರ : A) 73ನೇ ತಿದ್ದುಪಡಿ

2) ಗ್ರಾಮೀಣ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಇರುವ ಮಹತ್ವದ ಯೋಜನೆ.

A) ಯಶಸ್ವಿನಿ ಯೋಜನೆ

B) ಭಾಗ್ಯಲಕ್ಷ್ಮಿ ಯೋಜನೆ

C) ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ

D) ಸಂಧ್ಯಾ ಸುರಕ್ಷಾ ಯೋಜನೆ

ಉತ್ತರ : C) ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ

3) 'ಗ್ರಾಮ ಸ್ವರಾಜ್ಯ' ಕನಸನ್ನು ಕಂಡವರು.

A) ಅಂಬೇಡ್ಕರ್

B) ಮಹಾತ್ಮ ಗಾಂಧೀಜಿ

C) ಜವರಲಾಲ್ ನೆಹರು

D) ವಿನೋಬಾ ಭಾವೆ

ಉತ್ತರ : B) ಮಹಾತ್ಮ ಗಾಂಧೀಜಿ

4) ಗ್ರಾಮದ ಎಲ್ಲಾ ಮತದಾರರು ಸದಸ್ಯರಾಗಿರುವ ಪಂಚಾಯತ್ ಸಂಸ್ಥೆ.

A) ಗ್ರಾಮ ಸಭೆ

B) ತಾಲೂಕು ಪಂಚಾಯತ್

C) ಜಿಲ್ಲಾ ಪಂಚಾಯತ್

D) ಗ್ರಾಮ ಪಂಚಾಯತ್

ಉತ್ತರ : A) ಗ್ರಾಮ ಸಭೆ

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1) ಗ್ರಾಮೀಣ ಹಿಂದುಳಿಯುವಿಕೆ ಮತ್ತು ಗ್ರಾಮೀಣ ಬಡತನಕ್ಕೆ ಪ್ರಮುಖ ಕಾರಣವೇನು ?

ಉತ್ತರ : ಕೃಷಿಯ ಸ್ಥಗಿತತೆ ಮತ್ತು ನಿಧಾನಗತಿಯ ಬೆಳವಣಿಗೆಯು ಗ್ರಾಮೀಣ ಹಿಂದುಳಿಯುವಿಕೆ ಮತ್ತು ಗ್ರಾಮೀಣ ಬಡತನಕ್ಕೆ ಅತ್ಯಂತ ಪ್ರಮುಖ ಕಾರಣವಾಗಿದೆ.


2) ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಾತ್ಮಕವಾದ ಸ್ಥಾನಮಾನ ಯಾವಾಗ ದೊರೆಯಿತು.

ಉತ್ತರ : 1993 ರಲ್ಲಿ 73 ನೇ ಸಂವಿಧಾನ ತಿದ್ದುಪಡಿ ಮೂಲಕ.


3) ಗ್ರಾಮೀಣ ಭಾಗಗಳಲ್ಲಿ 'ಮಹಿಳಾ ಸ್ವಸಹಾಯ ಸಂಘ'ಗಳನ್ನು ಏಕೆ ಸ್ಥಾಪಿಸಲಾಗಿದೆ.

ಉತ್ತರ : ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು.


4) ಗಾಂಧೀಜಿಯವರ 'ಗ್ರಾಮ ಸ್ವರಾಜ್ಯ' ಕಲ್ಪನೆಯನ್ನು ಅರ್ಥೈಸಿ.

ಉತ್ತರ : ಪ್ರತಿಯೊಂದು ಗ್ರಾಮದ ಆಡಳಿತ ಅಧಿಕಾರ ಹಾಗೂ ಅದರ ಅಭಿವೃದ್ಧಿಯ ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ವಹಿಸಿ ಕೊಡುವುದನ್ನು ವಿಕೇಂದ್ರೀಕರಣ ಎನ್ನುತ್ತೇವೆ.

ಇದು ಅಧಿಕಾರ ಹಂಚಿಕೆಯ ಒಂದು ಪ್ರಕ್ರಿಯೆಯಾಗಿದ್ದು ನಿರ್ಧಾರ ಕೈಗೊಳ್ಳುವಲ್ಲಿ ಜನರ ಪಾಲುದಾರಿಕೆಯು ಹೆಚ್ಚಳವಾಗುತ್ತದೆ.

ತಳಮಟ್ಟದಿಂದ ಯೋಜನೆ ನಿರೂಪಿಸುವಿಕೆ ಮತ್ತು ಅಭಿವೃದ್ಧಿ ಸಾಧನೆಯ ಪ್ರಕ್ರಿಯೆಯು ಇದಾಗಿದೆ.

ಇದನ್ನೇ ಗಾಂಧೀಜಿಯವರು 'ಗ್ರಾಮಸ್ವರಾಜ್ಯ' ಎಂದು ಕರೆದಿದ್ದರು.


5) ಪಂಚಾಯತ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದರಿಂದ ಆಗುವ ಪ್ರಯೋಜನವೇನು ?

ಉತ್ತರ : ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದರಿಂದ ಸಾಮಾನ್ಯ ಗ್ರಾಮೀಣ ಮಹಿಳೆಯು ಅಧಿಕಾರದ ಚುಕ್ಕಾಣಿ ಹಿಡಿದು ಗ್ರಾಮಗಳ ಅಭಿವೃದ್ಧಿಯಲ್ಲಿ ದುಡಿಯಲು ಅವಕಾಶವಾಗಿದೆ.


III. ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯಗಳಲ್ಲಿ ಉತ್ತರಿಸಿ.

1) ಗ್ರಾಮೀಣಾಭಿವೃದ್ಧಿಯ ಮಹತ್ವವನ್ನು ತಿಳಿಸಿ.

ಉತ್ತರ : ಗ್ರಾಮೀಣಾಭಿವೃದ್ಧಿಯು ಕೃಷಿ ಹಾಗೂ ಕೃಷಿಯೇತರ ವಲಯಗಳ ಅಭಿವೃದ್ಧಿಯನ್ನು ಒಳಗೊಂಡಿರುವುದರಿಂದ, ಅದರಿಂದಾಗಿ ಒಟ್ಟಾರೆ ರಾಷ್ಟ್ರೀಯ ಅಭಿವೃದ್ಧಿಯಾಗುತ್ತದೆ.

ಅಧಿಕ ಕೃಷಿ ವರಮಾನದ ಪರಿಣಾಮವಾಗಿ ಔದ್ಯಮಿಕ ಸರಕು ಸೇವೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.

ತನ್ಮೂಲಕ ಅಧಿಕ ಉದ್ಯೋಗ ಸೃಷ್ಟಿಯಾಗಿ ಚವಟಿಕೆಗಳು ಸಹ ವಿಸ್ತಾರ ಹೊಂದುತ್ತವೆ.

ಅಧಿಕ ಶಿಕ್ಷಣ ಮತ್ತು ಕೌಶಲ್ಯ ಗಳಿಂದಾಗಿ ಹೆಚ್ಚಿನ ಉತ್ಪಾದನೆಯನ್ನು ಸಾಧಿಸಬಹುದು.

ಉತ್ತಮ ಆರೋಗ್ಯದಿಂದ ಜನರ ಕೆಲಸದ ಸಹಭಾಗಿತ್ವದ ಪ್ರಮಾಣ ಹೆಚ್ಚಾಗಿ, ರಾಷ್ಟ್ರೀಯ ಉತ್ಪನ್ನ ಹೆಚ್ಚಾಗುತ್ತದೆ.

ಕೃಷಿ ಸಂಸ್ಕರಣೆ, ಸಣ್ಣ ಕೈಗಾರಿಕೆಗಳು ಅಭಿವೃದ್ಧಿ ಹೊಂದಿ ಒಟ್ಟಾರೆ ಗ್ರಾಮೀಣ ಪರಿವರ್ತನೆಗೆ ನಾಂದಿಯಾಗುತ್ತದೆ.


2) ಭಾರತದ ಪಂಚಾಯತ್ ರಾಜ್ ಸಂಸ್ಥೆಯ ಪ್ರಮುಖ ಲಕ್ಷಣಗಳೇನು ?

ಉತ್ತರ : ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಮುಖ ಲಕ್ಷಣಗಳು :

1)ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿಗಳುಳ್ಳ ಮೂರು ಹಂತದ ಪಂಚಾಯಿತಿ ವ್ಯವಸ್ಥೆಯಿದ್ದು ಗ್ರಾಮಸಭೆಯು ಅದರ ತಳಹದಿಯಾಗಿದೆ.

2) ನೇರ ಹಾಗೂ ನಿಯಮಿತ ಚುನಾವಣೆಗಳು.

3) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗಾಗಿ ಸ್ಥಾನ ಮೀಸಲಾತಿ.

4) ಹಣಕಾಸು, ಆಡಳಿತಾತ್ಮಕ, ಮುಂಗಡಪತ್ರ ಮಂಡಿಸುವ ಮತ್ತು ಲೆಕ್ಕ ಪರಿಶೋಧಿಸುವ ಜವಾಬ್ದಾರಿಗಳ ನೀಡಿಕೆ.

5) ಕಾರ್ಯ ನಿರ್ವಾಹಕ ಮತ್ತು ಇತರ ಸಿಬ್ಬಂದಿ ನೀಡಿಕೆ; ಮತ್ತು

6) ಪಂಚಾಯಿತಿಯನ್ನು ವಿಸರ್ಜಿಸುವಾಗ ಅನುಸರಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳು ಮತ್ತು ವಿಸರ್ಜನೆ ಗೊಂಡ ಆರು ತಿಂಗಳುಗಳ ಒಳಗೆ ಕಡ್ಡಾಯ ಚುನಾವಣೆ ನಡೆಸುವುದು.


3) ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪಾತ್ರವನ್ನು ವಿವರಿಸಿ.

ಉತ್ತರ : ಗ್ರಾಮೀಣ ಭಾಗದ ಎಲ್ಲಾ ಹಳ್ಳಿಗಳಲ್ಲಿ 'ಮಹಿಳಾ ಸ್ವಸಹಾಯ ಸಂಘ'ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

ಇವುಗಳು ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸುವಲ್ಲಿ ಮತ್ತು ಅವರನ್ನು ಆರ್ಥಿಕ ಸ್ವಾರ್ಥಿಗಳಾಗಿ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ.

ಸಂಘಗಳ ಸದಸ್ಯರಾಗಿರುವ ಮಹಿಳೆಯರು ಇವುಗಳ ಮೂಲಕ ಸುಲಭವಾಗಿ ಸಾಲ ಪಡೆದು ಉತ್ಪಾದಕ  ಚಟುವಟಿಕೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ.

ಮಹಿಳೆಯರು ಸಂಘಟಿತ ಪ್ರಯತ್ನದ ಮೂಲಕ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಬಹುದಾಗಿದೆ.

ಹೀಗೆ ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಪಾತ್ರವನ್ನು ನಿರ್ವಹಿಸುತ್ತಿವೆ.



*****

KarnatakaEducations
ಅಭ್ಯಾಸ ಹಾಳೆ -17 | Rural Development | Economics Imp Questions | ಅರ್ಥಶಾಸ್ತ್ರ | ಗ್ರಾಮೀಣಾಭಿವೃದ್ಧಿ 10ನೇ ತರಗತಿ ಅಧ್ಯಾಯದ ಪ್ರಮುಖವಾಗಿರುವ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon