ಅಭ್ಯಾಸ ಹಾಳೆ-5 | ಹತ್ತನೇ ತರಗತಿ ಸಮಾಜ ವಿಜ್ಞಾನ | ಸಮಾಜ ಶಾಸ್ತ್ರ | ಅಧ್ಯಾಯ-1 ಸಾಮಾಜಿಕ ಸ್ತರ ವಿನ್ಯಾಸ

ಅಭ್ಯಾಸ ಹಾಳೆ 5 | ಸಮಾಜಶಾಸ್ತ್ರ | ಅಧ್ಯಾಯ-1 | ಸಾಮಾಜಿಕ ಸ್ತರವಿನ್ಯಾಸ

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ:-

1) ಸಂವಿಧಾನದ ___ ವಿಧಿಯು ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ.
ಉತ್ತರ : 30 ನೇ ವಿಧಿ
2) ಅಸ್ಪೃಶ್ಯತೆಯ ಆಚರಣೆಯನ್ನು ಸಂವಿಧಾನದ __ ವಿಧಿಯು ನಿಷೇಧಿಸಿದೆ.
ಉತ್ತರ : 17ನೇ ವಿಧಿ
3) ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಯು ___ ರಲ್ಲಿ ಜಾರಿಗೆ ಬಂದಿತು.
ಉತ್ತರ : 1955
4) "ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರ ಅರ್ಹವಾದ ಅಭಿವ್ಯಕ್ತಿ, ಇದು ಹಿಂದೂಸಮಾಜದ ಶರೀರವನ್ನು ಕುಷ್ಟರೋಗದ ಹುಣ್ಣಿನಂತೆ ಪೀಡಿಸುತ್ತದೆ." ಎಂದು ಅಭಿಪ್ರಾಯ ಪಟ್ಟವರು ___
ಉತ್ತರ : ಮಹಾತ್ಮ ಗಾಂಧೀಜಿ
5) ಸಂವಿಧಾನದ ___ ವಿಧಿಯು ಜನರೆಲ್ಲರಿಗೂ ಸಾರ್ವಜನಿಕ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶಿಸುವ ಮುಕ್ತ ಅವಕಾಶ ಘೋಷಿಸಿದೆ.
ಉತ್ತರ : 25ನೇ ವಿಧಿ
6) ಮಾನವ ಸಮಾಜ ___ತತ್ವವನ್ನು ಆಧರಿಸಿದೆ.
ಉತ್ತರ : ಸ್ತರವಿನ್ಯಾಸ
7) ಸಂವಿಧಾನದ 29 ನೇ ವಿಧಿಯು ___ ಸೌಲಭ್ಯವನ್ನು ಘೋಷಿಸಿದೆ.
ಉತ್ತರ : ಶೈಕ್ಷಣಿಕ
8) ಅಸ್ಪೃಶ್ಯತಾ ಕಾಯ್ದೆಯು ಹೀಗೆ ತಿದ್ದುಪಡಿ ಮಾಡಲಾಗಿದೆ. ___
ಉತ್ತರ : ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ
9) ಅಸ್ಪೃಶ್ಯತೆ ನಮ್ಮ ಸಮಾಜದ __ ಆಚರಣೆ.
ಉತ್ತರ : ಕೆಟ್ಟ
10) "ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ" ಯನ್ನು ___ ಜಾರಿಗೆ ತರಲಾಯಿತು.
ಉತ್ತರ : 1976
11) ಅಮೆರಿಕದಲ್ಲಿ ಬಿಳಿಯ ಚರ್ಮದ ಜನರು ____ ಜನರನ್ನು ಗುಲಾಮರಂತೆ ನಡೆಸಿಕೊಂಡು ಮಾರಾಟ ಮಾಡುತ್ತಿದ್ದರು.
ಉತ್ತರ : ಕಪ್ಪು ಚರ್ಮದ
12) ಸಮಾಜದಲ್ಲಿ ವರ್ಗ ವ್ಯವಸ್ಥೆ ಉಂಟಾಗಲು ಕಾರಣ ____
ಉತ್ತರ : ಅಸಮಾನ ಸಾಮಾಜಿಕ ಅವಕಾಶಗಳು.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon